» »ಕಾಕತೀಯ ಸಾಮ್ರಾಜ್ಯದ ಅರಸ ನಿರ್ಮಿಸಿದ ಈ ಸಾವಿರ ಸ್ತಂಭಗಳ ಮಹೋನ್ನತ ದೇವಾಲಯ

ಕಾಕತೀಯ ಸಾಮ್ರಾಜ್ಯದ ಅರಸ ನಿರ್ಮಿಸಿದ ಈ ಸಾವಿರ ಸ್ತಂಭಗಳ ಮಹೋನ್ನತ ದೇವಾಲಯ

Posted By:

ದೇವಾಲಯದ ಸ್ತಂಭಗಳೆಂದರೆ ಏನು ಒಂದು ರೀತಿ ವಿಸ್ಮಯ. ಅವುಗಳ ಸುಂದರವಾದ ಕೆತ್ತನೆಗಳಿಂದ ಪ್ರವಾಸಿಗರನ್ನು ಸೆಳೆಯುವ ಮನಮೋಹಕವಾದ ಆಕರ್ಷಣೆ ಎಂದೇ ಹೇಳಬಹುದು. ಈ ದೇವಾಲಯದಲ್ಲಿ ಮಹಾ ಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಗರಿಷ್ಟ ಎಂದರೆ 100 ಸ್ತಂಭಗಳನ್ನು ಕಾಣಬಹುದು. ಆದರೆ ತೆಲಂಗಾಣದ ವಿಶೇಷವಾದ ಈ ದೇವಾಲಯದಲ್ಲಿ ಸುಮಾರು ಸಾವಿರ ಸುಂದರ ಸ್ತಂಭಗಳಿವೆ. ಈ ಸ್ತಂಭಗಳ ನಡುವೆ ಒಮ್ಮೆ ಪ್ರವಾಸ ಮಾಡಿದರೆ ಎಷ್ಟು ರಮಣೀವಾಗಿರುತ್ತದೆ ಅಲ್ಲವೇ? ಪ್ರಸ್ತುತ ಲೇಖನದಲ್ಲಿ ಸಾವಿರ ಸ್ತಂಭಗಳನ್ನು ಹೊಂದಿರುವ ಸುಂದರವಾದ ಸ್ಥಳದ ಬಗ್ಗೆ ತಿಳಿಯೋಣ.

1.ಸಾವಿರ ಸ್ತಂಭ ಹೊಂದಿರುವ ದೇವಾಲಯ ಎಲ್ಲಿದೆ?

1.ಸಾವಿರ ಸ್ತಂಭ ಹೊಂದಿರುವ ದೇವಾಲಯ ಎಲ್ಲಿದೆ?

ಸಾವಿರ ಸ್ತಂಭವನ್ನು ಹೊಂದಿರುವ ಶಿವ ಲಿಂಗ ದೇವಾಲಯವು ಒಂದು ಪವಿತ್ರವಾದ ಹಿಂದೂ ದೇವಾಲಯವಾಗಿದೆ. ತೆಲಂಗಾಣ ರಾಜ್ಯದ ಹನುಮಕುಂಡ ಎಂಬಲ್ಲಿ ಸಾವಿರ ಸ್ತಂಭಗಳ ದೇವಾಲಯವನ್ನು ಕಾಣಬಹುದಾಗಿದೆ.
PC:Devadaskrishnan

2.ವಿಶ್ವ ಪರಂಪರೆಯ ಪಟ್ಟಿ

2.ವಿಶ್ವ ಪರಂಪರೆಯ ಪಟ್ಟಿ

ಈ ಸುಂದರವಾದ ಸಾವಿರ ಸ್ತಂಭಗಳ ದೇವಾಲಯವು ಯುನೆಸ್ಕುದ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಯಾಗಿದೆ. ತೆಲುಗಿನ ಭಾಷೆಯಲ್ಲಿ ವೆಯ್ಯ ಸ್ತಂಭಾಲ ಗುಡಿ ಎಂದೇ ಖ್ಯಾತವಾಗಿದೆ.
PC:Achyuta t

3.ಇತಿಹಾಸ

3.ಇತಿಹಾಸ

ಸಾವಿರ ಸ್ತಂಭಗಳ ದೇವಾಲಯವನ್ನು 1175 ರಿಂದ 1324ರ ಮಧ್ಯೆಯಲ್ಲಿ ಆಗಿನ ರಾಜ ಮನೆತನದ ಅರಸ ರುದ್ರ ದೇವ ನಿರ್ಮಿಸಿರುವುದಾಗಿದೆ. ಈತ ಕಾಕತೀಯ ಸಾಮ್ರಾಜ್ಯ ದೊರೆಯಾಗಿದ್ದನು.
PC:babi krishna

4.ರುದ್ರಮ್ಮ ದೇವಿ

4.ರುದ್ರಮ್ಮ ದೇವಿ

ರುದ್ರಮ್ಮ ದೇವಿಯು ಕಾಕತೀಯ ಸಾಮ್ರಾಜ್ಯದ ರಾಣಿಯಾಗಿದ್ದಳು. ರುದ್ರಮ್ಮ ದೇವಿ, ಗಣಪತಿ ದೇವ, ಪ್ರತಾಪ ರುದ್ರ ಇವರಲ್ಲರೂ ಕೂಡ ಹಲವು ಹಿಂದೂ ದೇವಾಲಯಗಳನ್ನು ನಿರ್ಮಿಸಿದ್ದಾರೆ.
PC::Kamal Venkit

5.ದಾಳಿ

5.ದಾಳಿ

ಈ ಸಾವಿರ ಸ್ತಂಭದ ದೇವಾಲಯದ ವಾಸ್ತು ಶಿಲ್ಪವು ಅತ್ಯಂತ ಸುಂದರವಾಗಿದ್ದು, ಸೂಕ್ಷ್ಮವಾದ ಕೆತ್ತನೆಗಳಿಂದ ಕೆತ್ತಲಾಗಿದೆ. ಎತ್ತರವಾದ ಸ್ತಂಭಗಳಿದ್ದು ಇದನ್ನು ಕಾಕತೀಯ ವಿಶ್ವಕರ್ಮನ ಕೈಚಳಕದಿಂದ ಸ್ಥಾಪಿತವಾದ ಸ್ತಂಭಗಳಾಗಿವೆ. ಆದರೆ ಇಂತಹ ದೇವಾಲಯವನ್ನು ತೋಘಲಕ್ ಸಾಮ್ರಾಜ್ಯದವರು ಆಕ್ರಮಣದ ಸಮಯದಲ್ಲಿ ಅಪವಿತ್ರಗೊಳಿಸಿದರು ಎನ್ನಲಾಗಿದೆ.
PC:Kamal Venkit

6.ವಾಸ್ತುಶಿಲ್ಪ

6.ವಾಸ್ತುಶಿಲ್ಪ

ಈ ದೇವಾಲಯವು ನಕ್ಷತ್ರಕಾರದಂತೆ ಇದ್ದು, ಸಾವಿರ ಸ್ತಂಭಗಳ ಮಧ್ಯೆ ಭಾಗದಲ್ಲಿ ಸುಂದರವಾದ ಶಿವ ಲಿಂಗವನ್ನು ಕಾಣಬಹುದಾಗಿದೆ. ಈ ಸ್ತಂಭಗಳು ಶಿವಲಿಂಗ ದರ್ಶನಕ್ಕೆ ನಿಮಗೆ ಯಾವುದೇ ರೀತಿಯಲ್ಲೂ ಅಡ್ಡವಾಗುವುದಿಲ್ಲ. ಅಂದರೆ ಯಾವುದೇ ಸ್ತಂಭದಿಂದ ನೋಡಿದರು ಲಿಂಗದ ದರ್ಶನ ಪಡೆಯಬಹುದಾಗಿದೆ.
PC:Kamal Venkit

7.ದೇವತ ಮೂರ್ತಿಗಳು

7.ದೇವತ ಮೂರ್ತಿಗಳು

ಸಾವಿರ ಸ್ತಂಭದ ದೇವಾಲಯದಲ್ಲಿ ತ್ರಿಲೋಕ್ಯಂ ಎಂದು ಕರೆಯಲಾಗುವ ಮಾಹಾ ಶಿವನ ಲಿಂಗ, ವಿಷ್ಣು ಹಾಗೂ ಸೂರ್ಯನ ಮೂರ್ತಿಗಳನ್ನು ಕಾಣಬಹುದಾಗಿದೆ. ಈ ದೇವಾಲಯದ ಸುತ್ತಲು ಹೂ ತೋಟವಿದ್ದು ಅಲ್ಲಲ್ಲಿ ಹಲವಾರು ಚಿಕ್ಕ ಚಿಕ್ಕದಾದ ಶಿವ ಲಿಂಗವನ್ನು ಕಾಣಬಹುದಾಗಿದೆ.
PC::Nagarjun Kandukuru

8.ನಂದಿ

8.ನಂದಿ

ಶಿವ ಲಿಂಗ ಇದ್ದ ಮೇಲೆ ನಂದಿ ಇರಲೇಬೇಕು ಅಲ್ಲವೇ ಇಲ್ಲೂ ಕೂಡ ನಂದಿಯನ್ನು ಶಿವಲಿಂಗದ ಮುಂಭಾಗದಲ್ಲಿ ನಂದಿಯನ್ನು ಸ್ಥಾಪಿಸಲಾಗಿದೆ. ಸಾವಿರ ಸ್ತಂಭಗಳ್ಳುಳ್ಳ ದೇವಾಲಯವನ್ನು ಒಂದು ವೇದಿಕೆಯ ಮೇಲೆ ನಿರ್ಮಿಸಲಾಗಿದೆ.
PC:Bssasidhar

9.ನವೀನ ವಿಧಾನ

9.ನವೀನ ವಿಧಾನ

ಸಾವಿರ ಸ್ತಂಭಗಳ ದೇವಾಲಯವನ್ನು 2004ರಲ್ಲಿ ಕೇಂದ್ರ ಸರ್ಕಾರವು ಪುರಾತತ್ವ ಇಲಾಖೆಯವರು ವತಿಯಿಂದ ಪುನರ್ ನವೀಕರಣವನ್ನು ಮಾಡುತ್ತಿದ್ದಾರೆ.
PC:Kamal Venkit

10.ಸಮೀಪದಲ್ಲಿರುವ ದೇವಾಲಯಗಳು

10.ಸಮೀಪದಲ್ಲಿರುವ ದೇವಾಲಯಗಳು

ತೆಲಂಗಾಣದಲ್ಲಿ ಹಲವಾರು ಪ್ರಸಿದ್ದವಾದ ದೇವಾಲಯಗಳಿವೆ ಅವುಗಳಲ್ಲಿ ಗಂಗ ಸರಸ್ವತಿನ ದೇವಾಲಯ, ಅಷ್ಟಲಕ್ಷ್ಮಿ ದೇವಾಲಯ, ಶ್ರೀ ರಾಜ ರಾಜೇಶ್ವರಿ ದೇವಾಲಯ, ಭಧ್ರಾವಲ ದೇವಾಲಯ, ಯದಗಿರಿಗುಟ್ಟ ದೇವಾಲಯ.
PC:Achyuta

11.ಹೋಗುವುದು ಹೇಗೆ?

11.ಹೋಗುವುದು ಹೇಗೆ?

ಹನುಮಕುಂಡದಲ್ಲಿರುವ ಈ ಸುಂದರ ದೇವಾಲಯಕ್ಕೆ ಹೋಗಲು ಹೈದ್ರಾಬಾದ್‍ನಿಂದ ಸುಮಾರು 150 ಕಿ,ಮೀಯಷ್ಟು ಅಂತರದಲ್ಲಿದೆ. ಹತ್ತಿರದ ರೈಲ್ವೆ ನಿಲ್ದಾಣವೆಂದರೆ ವರಂಗಲ್ ರೈಲ್ವೆ ನಿಲ್ದಾಣವಾಗಿದೆ.
PC::Bssasidhar

Please Wait while comments are loading...