Search
  • Follow NativePlanet
Share
» »ಇಲ್ಲಿ ನೀವು ಸ್ನಾನವನ್ನು ಮಾಡುವುದಕ್ಕೆ ಆಗುವುದಿಲ್ಲ...ಒಂದು ವೇಳೆ ಮಾಡಿದರೆ ನಿತ್ಯವು ಯವ್ವನ...

ಇಲ್ಲಿ ನೀವು ಸ್ನಾನವನ್ನು ಮಾಡುವುದಕ್ಕೆ ಆಗುವುದಿಲ್ಲ...ಒಂದು ವೇಳೆ ಮಾಡಿದರೆ ನಿತ್ಯವು ಯವ್ವನ...

ಪುಷ್ಪಗಿರಿ.. ಶಿವಕೇಶರ ಮಧ್ಯೆ ಅಭೇದಕ್ಕೆ ಪ್ರತೀಕ. ಈ ಕ್ಷೇತ್ರದಲ್ಲಿ ಶಿವನು ಕ್ಷೇತ್ರಾಧಿಪತಿಯಾಗಿದ್ದರೆ, ವಿಷ್ಣುವು ಕ್ಷೇತ್ರ ಪಾಲಕನಾಗಿದ್ದಾನೆ. ಇನ್ನು ಪುಷ್ಪಗಿರಿಯ ಸಮೀಪದಲ್ಲಿನ ಕೊಳದಲ್ಲಿ ಅಕ್ಷಯ ತೃತಿಯ ದಿನದಂದು ಸೂರ್ಯ ಗ್ರಹಣದ ಸಮಯದಲ್ಲಿ ಸ್ನಾನವನ್ನು ಆಚರಿ ಈ ಶಿವಕೇಶವರನ್ನು ದರ್ಶನ ಮಾಡಿದರೆ ನೂರು ಅಶ್ವಮೇಧಯಾಗವನ್ನು ಮಾಡಿದ ಫಲ ಲಭಿಸುತ್ತದೆ ಎಂದು ಪುರಾಣಗಳು ಹೇಳುತ್ತವೆ. ಜಗದ್ಗುರು ಆದಿ ಶಂಕರಾಚಾರ್ಯರ ಕೈಯಲ್ಲಿ ದಕ್ಷಿಣಾದಿಯಲ್ಲಿ ಸ್ಥಾಪನೆಯಾದ ಏಕೈಕ ಅದ್ವೈತ ಪೀಠವೇ ಈ ಪುಷ್ಪಗಿರಿ. ಇದು ವೈಎಸ್‍ಆರ್ ಕಡಪ ಜಿಲ್ಲಾ ಕೇಂದ್ರವಾದ ಕಡಪ ಪಟ್ಟಣದಿಂದ ಕೇವಲ 18 ಕಿ.ಮೀ ದೂರದಲ್ಲಿ ಪುಷ್ಪಗಿರಿ ಇದೆ. ಈ ಪುಷ್ಪಗಿರಿಯಲ್ಲಿನ ನದಿಗಳಿಗೆ ಹಾಗು ಸ್ನಾನ ಮಾಡಿದರೆ ಯವ್ವನ ಬರುತ್ತದೆ ಎಂಬ ವಿಷಯದ ಬಗ್ಗೆ ಪೂರ್ತಿಯಾದ ವಿವರವನ್ನು ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

1.ದಕ್ಷಿಣ ಕಾಶಿ

1.ದಕ್ಷಿಣ ಕಾಶಿ

PC:YOUTUBE

ಪುಷ್ಪಗಿರಿ ಗ್ರಾಮದ ಬೆಟ್ಟಗಳ ಮಧ್ಯೆ ಪ್ರವಹಿಸುತ್ತಿರುವ ಪೆನ್ನಾನದಿ ಕಾಶಿಯಲ್ಲಿನ ಗಂಗಾನದಿಯ ಹಾಗೆ ದಕ್ಷಿಣ ದಿಕ್ಕಿಗೆ ಪ್ರವಹಿಸುತ್ತಾ ಪೂರ್ವ ದಿಕ್ಕಿಗೆ ಅರ್ಧಚಂದ್ರಾಕಾರದಲ್ಲಿ ಸಾಗಿ ಹೋಗುತ್ತದೆ. ಇದರಿಂದಾಗಿಯೇ ಈ ಕ್ಷೇತ್ರಕ್ಕೆ ದಕ್ಷಿಣ ಕಾಶಿ ಎಂದು ಹೆಸರು. ಕಾಶಿಯಲ್ಲಿ ಅದ್ವೈತ ಅವಲಂಬನೆಕಾರರು, ಗಯದಲ್ಲಿನ ವಿಶಿಷ್ಟಾದ್ವೈತ ಅವಲಂಬನೆಕಾರರು ಪಿಂಡ ಪ್ರಧಾನ ಮಾಡುವುದು ಸಾಮಾನ್ಯವಾದುದು. ಆದರೆ ಆ ಎರಡು ಧರ್ಮಗಳನ್ನು ಅವಲಂಬಿಸುವವರು ಪುಷ್ಪಗಿರಿಯಲ್ಲಿ ಪಿಂಡ ಪ್ರಧಾನ ಮಾಡುವುದು ವಿಶೇಷ.

2.ಪುರಾಣ

2.ಪುರಾಣ

PC:YOUTUBE

ಕಶ್ಯಪ ಪ್ರಜಾಪತಿಗೆ ಕದ್ರುವ, ವಿನತ ಎಂಬ ಪತ್ನಿಯರಿದ್ದರು. ನೋವಿನ ಕಾರಣವಾಗಿ ಬಳಲುತ್ತಿದ್ದ ಕದ್ರುಳಿಗೆ ವಿನತ ದಾಸ್ಯ ಮಾಡಬೇಕಾಗುತ್ತದೆ. ತಾಯಿ ಪಡುತ್ತಿರುವ ಬಾಧೆಯನ್ನು ಕಂಡ ಗುರುತ್ಮಾತ್ಮನು, ಆಕೆಯ ದಾಸ್ಯವನ್ನು ಹೇಗಾದರು ಮಾಡಿ ವಿಮುಕ್ತಿಗೊಳಿಸಬೇಕು ಎಂದು ಅಮೃತವನ್ನು ತೆಗೆದುಕೊಂಡು ಬರುತ್ತಿರುತ್ತಾನೆ. ಆ ಸಮಯದಲ್ಲಿ ಒಂದು ಚುಕ್ಕೆ ಅಮೃತ ಬಿಂದುವು ಭೂಲೋಕದಲ್ಲಿನ ಒಂದು ನದಿಯಲ್ಲಿ ಬೀಳುತ್ತದೆ.

3.ವೃದ್ಧ ದಂಪತಿಗಳು

3.ವೃದ್ಧ ದಂಪತಿಗಳು

PC:YOUTUBE

ಒಂದು ದಿನ ವೃದ್ಧ ದಂಪತಿಗಳು ಆ ನದಿಯಲ್ಲಿನ ನೀರನ್ನು ಕುಡಿಯಲು ಹೋಗುತ್ತಾರಂತೆ. ಆ ನೀರನ್ನು ಮುಟ್ಟಿದ ತಕ್ಷಣವೇ ಅವರಿಗೆ ಯವ್ವನ ದಂಪತಿಗಳಾಗಿ ಮಾರ್ಪಾಟಾಗುತ್ತಾರೆ. ಈ ವಿಷಯ ತಿಳಿದುಕೊಂಡ ಅನೇಕ ಮಂದಿ ಅಲ್ಲಿಗೆ ಬಂದು ಆ ನದಿಯ ನೀರನ್ನು ಕುಡಿದು ಯವ್ವನವನ್ನು ಪಡೆದರಂತೆ. ಅಷ್ಟೇ ಅಲ್ಲದೇ, ಅವರಿಗೆ ಮರಣ ಕೂಡ ಇರುವುದಿಲ್ಲವಂತೆ. ಇದರಿಂದಾಗಿ ಸೃಷ್ಟಿ ಧರ್ಮದ ಗತಿ ತಪ್ಪುತ್ತದೆ ಎಂದು ಭಾವಿಸಿದ ಯಮಧರ್ಮ ರಾಜನು ನಾರದನ ಮೂಲಕ ತ್ರಿಮೂರ್ತಿಗಳಿಗೆ ಈ ಕುರಿತು ವಿಷಯವನ್ನು ತಿಳಿಸುತ್ತಾರೆ.

4.ಹನುಮಂತ

4.ಹನುಮಂತ

PC:YOUTUBE

ವಿಷಯವನ್ನು ತಿಳಿದುಕೊಂಡ ತ್ರಿಮೂರ್ತಿಗಳ ಆಜ್ಞೆಯ ಮೇರೆಗೆ ಹನುಮಂತನು ಒಂದು ದೊಡ್ಡ ಬೆಟ್ಟವನ್ನು ತಂದು ನದಿಯಲ್ಲಿ ಹಾಕುತ್ತಾನೆ. ಆದರೆ ಆ ಬೆಟ್ಟವು ನೀರಿನಲ್ಲಿ ಪುಷ್ಪದ ರೀತಿ ತೇಲುತ್ತಿತ್ತು. ಇದರಿಂದಾಗಿ ತ್ರಿಮೂರ್ತಿಗಳು ತಮ್ಮ ಪಾದಗಳಿಂದ ಆ ಬೆಟ್ಟವನ್ನು ಒತ್ತುತ್ತಾರೆ. ಅದರ ಗುರುತಿಗಾಗಿ ಇಂದಿಗೂ ಬೆಟ್ಟದ ಮೇಲೆ ಪಶ್ಚಿಮ ಭಾಗದಲ್ಲಿ ರುದ್ರ ಪಾದವೆಂದೂ, ಪೂರ್ವಕ್ಕೆ ವಿಷ್ಣುವು ಪಾದವೆಂದೂ, ಉತ್ತರ ದಿಕ್ಕಿಗೆ ಬ್ರಹ್ಮಪಾದ ಎಂದು ಕರೆಯುತ್ತಾರೆ. ಅದ್ದರಿಂದಲೇ ಈ ಪವಿತ್ರವಾದ ಸ್ಥಳವು ಪುಷ್ಪಗಿರಿಯಾಗಿ ಹೆಸರುವಾಸಿ ಪಡೆಯಿತು.

5.ಅಮರತ್ವ ಪಡೆಯುತ್ತಾರೆ

5.ಅಮರತ್ವ ಪಡೆಯುತ್ತಾರೆ

PC:YOUTUBE

ಇಂದಿಗೂ ಆ ನದಿಯಿಂದಾಗಿ ಅಮರತ್ವವನ್ನು ಪಡೆಯುವ ಅಂದರೆ ಸಾವನ್ನು ಗೆದ್ದವರು ಆ ಬೆಟ್ಟದ ಕೆಳಗೆ ಇರುವ ನದಿ ತೀರದಲ್ಲಿ ವಾಸವಿದ್ದಾರೆ ಎಂದು ಹೇಳುತ್ತಾರೆ. ಪ್ರಸ್ತುತ ಆ ಬೆಟ್ಟದ ಕೆಳಗೆ ಇರುವ ನದಿಯಲ್ಲಿ ಸ್ನಾನವನ್ನು ಆಚರಿಲು ಅಸಾಧ್ಯವಾದ ಕೆಲಸ. ಒಂದು ವೇಳೆ ಆಚರಿಸಿದರೆ ಮಾತ್ರ ಅವರು ಅಮರತ್ವದ ಜೊತೆಗೆ ಯವ್ವನವನ್ನು ಕೂಡ ಪಡೆಯಬಹುದಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X