Search
  • Follow NativePlanet
Share
» »ದಕ್ಷಿಣ ಭಾರತದ ಆಸ್ತಿ ಕೃಷ್ಣಾ ಅಭಯಾರಣ್ಯ

ದಕ್ಷಿಣ ಭಾರತದ ಆಸ್ತಿ ಕೃಷ್ಣಾ ಅಭಯಾರಣ್ಯ

ನಮ್ಮ ದಕ್ಷಿಣ ಭಾರತದಲ್ಲಿ ಅಭಯಾರಣ್ಯಕ್ಕೆನೂ ಕಡಿಮೆ ಇಲ್ಲ. ಇಲ್ಲಿಯೂ ಕೂಡ ಅಳಿವಿನ ಅಂಚಿನಲ್ಲಿರುವ ಅದೆಷ್ಟೂ ಪ್ರಾಣಿ, ಪಕ್ಷಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಕೃಷ್ಣಾ ಅಭಯಾರಣ್ಯವು ಆನೇಕ ಪರಿಸರ ಸಂರಕ್ಷಾಣಾವಾದಿಗಳ ಪ್ರಕಾರ, ದಕ್ಷಿಣ ಭಾರತದಲ್ಲಿಯೇ ದಟ್ಟನೆಯ ಮ್ಯಾಂಗ್ರೋವ್ ಕಾಡುಗಳನ್ನು ಹೊಂದಿರುವ ಏಕೈಕ ಅಭಯಾರಣ್ಯ ಇದಾಗಿದೆ. ಅಷ್ಟೆ ಅಲ್ಲದೇ ಇದೊಂದು ಅಪರೂಪದ ಜೈವಿಕ ಪರಿಸರದ ತಾಣವೂ ಸಹ ಆಗಿದೆ.

ಸಾವಿರ ವರ್ಷದ ಆ ದೇವಾಲಯದಲ್ಲಿ ಬಗೆಹರಿಸಲಾಗದ ರಹಸ್ಯಗಳು!

ಈ ಅದ್ಭುತವಾದ ಅಭಯಾರಣ್ಯವು ಆಂಧ್ರ ಪ್ರದೇಶ ರಾಜ್ಯದ ಕೃಷ್ಣಾ ನದಿ ಮುಖಜ ಭೂಮಿಯಲ್ಲಿದೆ. ಆಂಧ್ರ ಪ್ರದೇಶದ ಮಚಲಿಪಟ್ಟಣ ನಗರಕ್ಕೆ ಸಮೀಪದಲ್ಲಿದೆ. ಪ್ರಸ್ತುತ ಲೇಖನದಲ್ಲಿ ಕೃಷ್ಣಾ ಅಭಯಾರಣ್ಯದ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಕೃಷ್ಣಾ ಅಭಯಾರಣ್ಯ

ಕೃಷ್ಣಾ ಅಭಯಾರಣ್ಯ

ಈ ಕೃಷ್ಣ ಅಭಯಾರಣ್ಯವು ಸೊರ್ಲಗೊಂಡಿ ಎಂಬ ಮೀಸಲು ಅರಣ್ಯ ಪ್ರದೇಶದಲ್ಲಿದೆ. ಈ ಮೀಸಲು ಕಾಡುಗಳು ಕೃಷ್ಣಾ ನದಿ ಮುಖಜ ಭೂಮಿಯ ಸಣ್ಣ ಪುಟ್ಟ ನಡುಗಡ್ಡೆಗಳಲ್ಲಿ ಅವ್ಯಾಹತವಾಗಿ ಹರಡಿವೆ. ಈ ಪ್ರದೇಶದ ನದಿಗಳ ದಂಡೆಯ ಮೇಲೆ ನಿಂತು ಮ್ಯಾಂಗ್ರೋವ್ ಕಾಡುಗಳನ್ನು ಕಾಣಬಹುದಾಗಿದೆ.

ಕೃಷ್ಣಾ ಅಭಯಾರಣ್ಯ

ಕೃಷ್ಣಾ ಅಭಯಾರಣ್ಯ

ಈ ಸ್ಥಳವು ಅತ್ಯಂತ ಮನೋಮೋಹಕವಾಗಿದ್ದು, ಹಲವಾರು ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಒಂದು ನಿರ್ದಿಷ್ಟವಾದ ಭಾಗದಲ್ಲಿ ಅಪಾರವಾದ ಸಂಖ್ಯೆಯಲ್ಲಿ ಮೀನು ಹಿಡಿಯುವ ಬೆಕ್ಕುಗಳನ್ನು ಕಾಣಬಹುದು ಎಂದು ಹೇಳುತ್ತಾರೆ. ಆದರೆ ಇದಕ್ಕೆ ನಿರ್ದಿಷ್ಟವಾದ ಪುರಾವೆಗಳು ಇಲ್ಲ. ಏಕೆಂದರೆ ಈ ರೀತಿಯ ಬೆಕ್ಕುಗಳು ಕಂಡುಬರುವುದು ಬಲು ಅಪರೂಪ.

ಕೃಷ್ಣಾ ಅಭಯಾರಣ್ಯ

ಕೃಷ್ಣಾ ಅಭಯಾರಣ್ಯ

ಈ ಅಭಯಾರಣ್ಯದ ತುಂಬ ವಿವಿಧ ಬಗೆಯ ಸಸ್ಯಗಳು ಹಾಗು ಪಕ್ಷಿಗಳನ್ನು ಕಾಣಬಹುದಾಗಿದೆ. ಅಷ್ಟೆ ಅಲ್ಲ, ಇಲ್ಲಿ ನರಿ, ಕರಡಿ ಇನ್ನೂ ಹಲವಾರು ಪ್ರಾಣಿ ಸಂಕುಲವನ್ನು ಕಂಡು ಆನಂದಿಸಬಹುದಾಗಿದೆ. ಇದು ಆಂಧ್ರ ಪ್ರದೇಶದ ಕೃಷ್ಣಾ ಹಾಗು ಗುಂಟುರು ಪ್ರದೇಶದಲ್ಲಿ ಅವರಿಸಿದೆ. ವಿಜಯವಾಡದಿಂದ ಸುಮಾರು 80 ಕಿ.ಮೀ ಗಳಷ್ಟು ದೂರದಲ್ಲಿ ಈ ಅಭಯಾರಣ್ಯವಿದೆ.

J.M.Garg


ಕೃಷ್ಣಾ ಅಭಯಾರಣ್ಯ

ಕೃಷ್ಣಾ ಅಭಯಾರಣ್ಯ

ಈ ಸುಂದರವಾದ ಅಭಯಾರಣ್ಯಕ್ಕೆ ತಲುಪಲು ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ವಿಜಯವಾಡ. ವಿಜಯವಾಡ ದೇಶದ ಪ್ರಮುಖ ನಗರಗಳೊಂದಿಗೆ ಉತ್ತಮವಾದ ರೈಲು ಸಂಪರ್ಕ ಹೊಂದಿದೆ. ಹಾಗಾಗಿ ಈ ಅಭಯಾರಣ್ಯಕ್ಕೆ ಭೇಟಿ ನೀಡುವುದು ಅಷ್ಟೊಂದು ಕಷ್ಟಕರವಲ್ಲ. ಇಲ್ಲಿ ತಂಗಲು ಅರಣ್ಯ ಇಲಾಖೆಯ ಅತಿಥಿ ಗೃಹ ಕೂಡ ಇದೆ.

ಕೃಷ್ಣಾ ಅಭಯಾರಣ್ಯ

ಕೃಷ್ಣಾ ಅಭಯಾರಣ್ಯ

ಈ ಅಭಯಾರಣ್ಯಕ್ಕೆ ತೆರಳು ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವೆರೆಗೆ ಉತ್ತಮವಾದ ಕಾಲಾವಧಿಯಾಗಿದೆ. ನಮಗೆ ಅಪರೂಪ ಎನ್ನಬಹುದಾದ ಮ್ಯಾಗ್ರೋವ್ ಕಾಡುಗಳು ಹಾಗು ಅತಿ ಅಪರೂಪ ಮತ್ತು ಅಳಿವಿನಂಚಿನಲ್ಲಿರುವ ಮೀನು ಹಿಡಿಯುವ ಬೆಕ್ಕುಗಳನ್ನು ಕೂಡ ಈ ಅಭಯಾರಣ್ಯದಲ್ಲಿ ಕಾಣಬಹುದಾಗಿದೆ.

J.M.Garg

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more