India
Search
  • Follow NativePlanet
Share
» »ರೆಡ್ಡಿ ರಾಜರು ಆಳ್ವಿಕೆ ನಡೆಸಿದ ಕೊಂಡವೀಡು ಕೋಟೆ....

ರೆಡ್ಡಿ ರಾಜರು ಆಳ್ವಿಕೆ ನಡೆಸಿದ ಕೊಂಡವೀಡು ಕೋಟೆ....

By Sowmyabhai

ಚರಿತ್ರೆಗೆ ಮೌನ ಸಾಕ್ಷ್ಯಿಗಳೇ ಪೂರ್ವದಲ್ಲಿ ನಿರ್ಮಾಣ ಮಾಡಿದ ಗಿರಿ ದುರ್ಗಗಳು. ಈ ಕೋಟೆಯಲ್ಲಿನ ಪ್ರತಿ ಕಲ್ಲು ಅಂದು ನಡೆದ ಎಷ್ಟೊ ವಿಚಾರಗಳನ್ನು ಮೌನವಾಗಿಯೇ ತಿಳಿಸುತ್ತವೆ. ಅದ್ದರಿಂದಲೇ ಚರಿತ್ರೆಯ ಒಳಗೆ ಹೋಗಿ ಅಂದಿನ ಅನೇಕ ವಿಶೇಷವಾದ ವಿಷಯಗಳನ್ನು ತನ್ನಲ್ಲಿಯೇ ಅಡಗಿಸಿಕೊಂಡಿರುತ್ತವೆ. ಅಂತಹ ಅನೇಕ ಕೋಟೆಗಳನ್ನು ನಮ್ಮ ಭಾರತ ದೇಶದಲ್ಲಿ ಇವೆ. ಒಂದೊಂದು ಕೋಟೆಯು ಒಂದು ರೋಚಕವಾದ ಕಥೆಗಳನ್ನು ಹೊಂದಿದೆ. ನಮ್ಮ ಕರ್ನಾಟಕದಲ್ಲಿಯೂ ಅನೇಕ ಮಹತ್ವವುಳ್ಳ ದುರ್ಗಾಗಳಿದ್ದು, ಪ್ರಸಿದ್ಧಿಯನ್ನು ಹೊಂದಿದೆ. ಹಾಗೆಯೇ ನಮ್ಮ ಪಕ್ಕದ ರಾಜ್ಯವಾದ ಆಂಧ್ರ ಪ್ರದೇಶದಲ್ಲಿಯೂ ಒಂದು ಅದ್ಭುತವಾದ ಕೋಟೆ ಇದೆ. ಅದೇ ಕೊಂಡವೀಡು ಕೋಟೆ.

ಆ ಕೋಟೆಯನ್ನು ರೆಡ್ಡಿ ರಾಜರು ಆಳ್ವಿಕೆ ನಡೆಸಿದ್ದಾರೆ. ಲೇಖನದ ಮೂಲಕ ಆ ಕೋಟೆಯ ಬಗ್ಗೆ ಸಂಕ್ಷೀಪ್ತವಾದ ಮಾಹಿತಿಯನ್ನು ಪಡೆದು ಒಮ್ಮೆ ಕೋಟೆಗೆ ಭೇಟಿ ನೀಡಿ ಬರೋಣ.

1.ಕೊಂಡವೀಡು ಕೋಟೆ, ಗುಂಟೂರು

1.ಕೊಂಡವೀಡು ಕೋಟೆ, ಗುಂಟೂರು

PC:YOUTUBE

ಆಂಧ್ರ ಪ್ರದೇಶದಲ್ಲಿನ ಗಿರಿ ದುರ್ಗಾದಲ್ಲಿ ಅತ್ಯಂತ ಪ್ರಮುಖ್ಯತೆಯನ್ನು ಹೊಂದಿರುವುದು ಕೊಂಡವೀಡು ಕೋಟೆ. ರೆಡ್ಡಿ ರಾಜರ ಪೌರಷಕ್ಕೆ ನಿದರ್ಶನಕ್ಕೆ ಸಾಕ್ಷಿಯಾದ ಈ ಕೋಟೆಯು ಗುಂಟೂರು ಜಿಲ್ಲೆಯಲ್ಲಿನ ಯಡಪಾಡು ಎಂಬ ಸ್ಥಳಕ್ಕೆ ಸಮೀಪದಲ್ಲಿಯೇ ಇದೆ. ಚಿಲಕೂರಿ ಪೇಟ ಗುಂಟೂರು ಮಧ್ಯೆ ಹೋಗುವ ರಹದಾರಿಯಲ್ಲಿ ತೆರಳಿದರೆ ಸುಲಭವಾಗಿ ಸೇರಿಕೊಳ್ಳಬಹುದು.

2.ಕೊಂಡವೀಡು ಕೋಟೆ, ಗುಂಟೂರು

2.ಕೊಂಡವೀಡು ಕೋಟೆ, ಗುಂಟೂರು

PC:YOUTUBE

ಜಾತಿಯ ರಹದಾರಿ 9 ಕಿಲೋಮೀಟರ್ ದೂರದಲ್ಲಿ ಈ ಕೊಂಡವೀಡು ಕೋಟೆ ಇದೆ. ಅದೇ ವಿಧವಾಗಿ ಗುಂಟೂರು ನರಸರಾವು ಪೇಟ ಮಾರ್ಗದಲ್ಲಿ ಫಿರಂಗಿಪುರಂದ ಮೂಖಾಂತರವು ಕೂಡ ಕೊಂಡವೀಡು ದುರ್ಗಾಕ್ಕೆ ಸೇರಿಕೊಳ್ಳಬಹುದು. ಒಟ್ಟಾಗಿ ಗುಂಟೂರಿನಿಂದ ಕೊಂಡವೀಡಕ್ಕೆ 12 ಕಿ.ಮೀ ದೂರದಲ್ಲಿ ಈ ಅದ್ಭುತವಾದ ಕೋಟೆ ಇದೆ.

3.ಕೊಂಡವೀಡು ಕೋಟೆ, ಗುಂಟೂರು

3.ಕೊಂಡವೀಡು ಕೋಟೆ, ಗುಂಟೂರು

PC:YOUTUBE

ಚರಿತ್ರೆಗೆ ಸಾಕ್ಷಿಯಾಗಿ ನಿಂತಿರುವ ಈ ಕೋಟೆಯು ಪ್ರಸ್ತುತ ಯುವಕರಿಗೆ ಟ್ರೆಕ್ಕಿಂಗ್ ವಿಷಯವಾಗಿ ಸ್ವರ್ಗ ಧಾಮವಾಗಿದೆ. ಅದ್ದರಿಂದಲೇ ವಾರಾಂತ್ಯದ ಸಮಯದಲ್ಲಿ ಇಲ್ಲಿಗೆ ಅನೇಕ ಮಂದಿ ಯುವಕರು ಹೆಚ್ಚಾಗಿ ಟ್ರೆಕ್ಕಿಂಗ್ ಮಾಡಲು ಭೇಟಿ ನೀಡುತ್ತಿರುತ್ತಾರೆ. ಅಷ್ಟೇ ಅಲ್ಲದೇ, ರಾಕ್ ಕ್ಲೈಬಿಂಗ್‍ಗೆ ಕೂಡ ಇಲ್ಲಿ ಅವಕಾಶವಿದೆ.

4.ಕೊಂಡವೀಡು ಕೋಟೆ, ಗುಂಟೂರು

4.ಕೊಂಡವೀಡು ಕೋಟೆ, ಗುಂಟೂರು

PC:YOUTUBE

ಶತ್ರುಗಳು ಒಳ ಹೊಕ್ಕದಂತೆ ನಿರ್ಮಾಣ ಮಾಡಿರುವ ಈ ಗಿರಿದುರ್ಗಾವನ್ನು ರಾಜಧಾನಿಯಾಗಿ ಮಾಡಿಕೊಂಡು ಕ್ರಿ.ಶ 1325 ನಿಂದು 1420 ವರೆಗೆ ರೆಡ್ಡಿರಾಜರು ಆಳ್ವಿಕೆ ನಡೆಸಿದ್ದಾರೆ. ಈ ಕೋಟೆಯನ್ನು 32 ಮೈಲಿ ಪ್ರಾಕಾರಗಳಾಗಿ ಹಾಗು 2 ಧಾನ್ಯ ಕೊಠಡಿಗಳು ಇವೆ. ಅದೇ ವಿಧವಾಗಿ ಕೋಟೆಯ ಒಳ ಭಾಗದಲ್ಲಿರುವ 3 ಬಾವಿಗಳು ಕೂಡ ಇವೆ. ಇದು ಸೈನಿಕರ ನೀರಿನ ಅವಶ್ಯಕತೆಯನ್ನು ತೀರಿಸುತ್ತಿತ್ತು.

5.ಕೊಂಡವೀಡು ಕೋಟೆ, ಗುಂಟೂರು

5.ಕೊಂಡವೀಡು ಕೋಟೆ, ಗುಂಟೂರು

PC:YOUTUBE

ಇನ್ನು ಈ ಕೋಟೆಯ ಒಳಗೆ ಅನೇಕ ದೇವಾಲಯಗಳು ಕೂಡ ಇವೆ. ಮುಖ್ಯವಾಗಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ, ವೆಂಕಟೇಶ್ವರ ಸ್ವಾಮಿ ದೇವಾಲಯ, ವೀರಭದ್ರ ಸ್ವಾಮಿ ದೇವಾಲಯ, ರಾಮಲಿಂಗೇಶ್ವರ ಸ್ವಾಮಿ ದೇವಾಲಯಗಳಿವೆ. ಈ ಪ್ರದೇಶದಲ್ಲಿ ಅಪಾರವಾದ ಶಿಲ್ಪ ಸಂಪತ್ತನಿಂದ ಕೂಡಿದ ಅನೇಕ ಕಟ್ಟಡಗಳು ಕೂಡ ಇವೆ. ಎಲ್ಲಿ ನೋಡಿದರು ಕಲ್ಲಿನ ಅದ್ಭುತವಾದ ಶಿಲ್ಪಗಳನ್ನು ಕಣ್ಣುತುಂಬಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X