Search
  • Follow NativePlanet
Share
» »ಬೆಟ್ ದ್ವಾರಕಕ್ಕೆ ತೆರಳಿದರೆ ದ್ವಾಪರ ಯುಗಕ್ಕೆ ಪ್ರಯಾಣಿಸಿದ ಹಾಗೆ....

ಬೆಟ್ ದ್ವಾರಕಕ್ಕೆ ತೆರಳಿದರೆ ದ್ವಾಪರ ಯುಗಕ್ಕೆ ಪ್ರಯಾಣಿಸಿದ ಹಾಗೆ....

ದ್ವಾಪರಯುಗ ಪುರಾಣ ಇತಿಹಾಸದಲ್ಲಿ ಅತ್ಯಂತ ಮಹತ್ವ ಉಳ್ಳದ್ದು. ದ್ವಾರಕಾ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಶ್ರೀ ಕೃಷ್ಣ ಒಮ್ಮೆ ದ್ವಾಪರಯುಗಕ್ಕೆ ತೆರಳಿ ಶ್ರೀಕೃಷ್ಣನನ್ನು ಕಾಣಬೇಕು ಎಂಬ ಆಸೆ ಮೂಡುವುದು ಸಹಜ. ದ್ವಾರಕಾನಗರ ನಕಲು ಎಂದು ಬೆಟ್ ದ್ವಾರಕ ವನ್ನು ಕರೆಯುತ್ತಾರೆ. ಶ್ರೀಕೃಷ್ಣನ ಮರಣಾನಂತರ ದ್ವಾರಕೆಯೂ ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಿಹೋಯಿತು. ಆದರೆ ಇಲ್ಲಿರುವ ದೇವಾಲಯಗಳನ್ನು ಕಾಣಲು ಬೆಟ್ ದ್ವಾರಕ. ಈ ಬೆಟ್ ದ್ವಾರಕಾ ಧಾರ್ಮಿಕ ಸ್ಥಳವಾಗಿದೆ ಅಲ್ಲದೆ ಚಾರಿತ್ರಾತ್ಮಕವಾಗಿ ಕೂಡ ಅತ್ಯಂತ ಪ್ರಖ್ಯಾತಿಯನ್ನು ಪಡೆದಿದೆ.

ಅಲ್ಲಿ ಪುರಾತತ್ವ ಶಾಖೆಯ ಪರಿಶೋಧನೆಯಲ್ಲಿ ಬೆಳಕಿಗೆ ಬಂದ ಅನೇಕ ವಸ್ತುಗಳು ನಮಗೆ ದ್ವಾಪರಯುಗದ ಪರಿಸ್ಥಿತಿಗಳನ್ನು ಕಣ್ಣಿಗೆ ಕಟ್ಟುತ್ತವೆ. ಗುಜರಾತ್ ನಲ್ಲಿ ನ ಪ್ರಮುಖ ಪ್ರವಾಸಿ ಪ್ರದೇಶವಾದ ಗೋಪಿತಾಲಾಭ್ , ನಾಗೇಶ್ವರ್ ಗೆ ಭೇಟಿ ನೀಡಿದ ನಂತರ ಬೆಟ್ ದ್ವಾರಕಾಗೆ ಸಮುದ್ರದ ಪ್ರಯಾಣದ ಮೂಲಕ ಸೇರಿಕೊಳ್ಳಬಹುದು. ಸಮುದ್ರ ಪ್ರಯಾಣವು ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಆಹ್ಲಾದಕರವಾದ ಅನುಭೂತಿಯನ್ನು ಉಂಟು ಮಾಡುತ್ತದೆ.

ಇಷ್ಟು ವಿಶಿಷ್ಟತೆಗಳನ್ನು ಹೊಂದಿರುವ ಬೆಟ್ ದ್ವಾರಕದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೇಟಿವ್ ಪ್ಲಾನೆಟ್‍ನ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

 1. ಎಲ್ಲಿದೆ?

1. ಎಲ್ಲಿದೆ?

PC:YOUTUBE

ಬೆಟ್ ದ್ವಾರಕಾವನ್ನು "ಶಂಕುಧಾರ್" ಎಂದು ಕೂಡ ಕರೆಯುತ್ತಾರೆ. ಇಲ್ಲಿ ಸಮುದ್ರ ಶಂಖಗಳು ಹೆಚ್ಚಾಗಿ ದೊರೆಯುವುದರಿಂದ ಇದಕ್ಕೆ ಶಂಕು ಧಾರ್ ಎಂದು ಹೆಸರು ಬಂದಿತು. ಗುಜರಾತ್ ನಲ್ಲಿನ ಓಖಾ ಪಟ್ಟಣದಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುತ್ತದೆ. ಬೆಟ್ ದ್ವಾರಕ 13 ಕಿಲೋ ಮೀಟರ್ ಉದ್ದ ನಾಲ್ಕು ಕಿಲೋಮೀಟರ್ ಅಗಲವಿರುತ್ತದೆ. ಇದು ಪ್ರಸ್ತುತ ದ್ವಾರಕ ಪಟ್ಟಣದಿಂದ 30 ಕಿಲೋಮೀಟರ್ ದೂರದಲ್ಲಿರುತ್ತದೆ.

2. ಶ್ರೀಕೃಷ್ಣ ಕುಟುಂಬ ಸಮೇತನಾಗಿ

2. ಶ್ರೀಕೃಷ್ಣ ಕುಟುಂಬ ಸಮೇತನಾಗಿ

PC:YOUTUBE

ಪುರಾಣಗಳ ಪ್ರಕಾರ ಶ್ರೀಕೃಷ್ಣನು ತನ್ನ ಕುಟುಂಬ ಸಮೇತರಾಗಿ ಉಳಿದ್ದಿದ್ದ ಪ್ರದೇಶವೇ ದ್ವಾರಕ. ಶ್ರೀಕೃಷ್ಣನ ಸ್ನೇಹಿತನಾದ ಸುಧಾಮನು ಈ ಬೆಟ್ ದ್ವಾರಕಾದಲ್ಲಿ ಶ್ರೀಕೃಷ್ಣನ ಪಾದವನ್ನು ತೊಳೆದನು ಎಂದು ಪುರಾಣಗಳ ಮೂಲಕ ತಿಳಿಯಬಹುದು. ಬೆಟ್ ದ್ವಾರಕಾದಲ್ಲಿ ಶ್ರೀಕೃಷ್ಣನು ಗದೆಯನ್ನು ಹಿಡಿದಿರುವ ವಿಗ್ರಹವನ್ನು ಕಾಣಬಹುದು. ದ್ವಾರಕೆಯಲ್ಲಿರುವ ಶ್ರೀ ಕೃಷ್ಣನ ವಿಗ್ರಹ ಹಾಗೂ ಬೆಟ್ಟ ದ್ವಾರಕಾದಲ್ಲಿರುವ ಶ್ರೀ ಕೃಷ್ಣನ ವಿಗ್ರಹ ಅತ್ಯಂತ ವಿಭಿನ್ನವಾಗಿವೆ. ಇಲ್ಲಿ ಶ್ರೀಕೃಷ್ಣನ ದೇವಾಲಯದ ಜೊತೆಜೊತೆಗೆ ರುಕ್ಮಿಣಿಯ ದೇವಾಲಯ ರಾಧಾ ದೇವಿಯ ದೇವಾಲಯ, ದೇವಕಿಯ ದೇವಾಲಯಗಳಿವೆ.

 3. ಗೋಧೀಹಿಟ್ಟಿನಿಂದ ತಯಾರಿಸಿದ ಪದಾರ್ಥ

3. ಗೋಧೀಹಿಟ್ಟಿನಿಂದ ತಯಾರಿಸಿದ ಪದಾರ್ಥ

PC:YOUTUBE

ಈ ದೇವಾಲಯಕ್ಕೆ ಭೇಟಿ ನೀಡುವ ಅನೇಕ ಮಂದಿ ಭಕ್ತರು ಗೋಧಿಹಿಟ್ಟಿನಿಂದ ಸಿಹಿ ಪದಾರ್ಥಗಳನ್ನು ತಯಾರಿಸಿ ದೇವರಿಗೆ ನೈವೇದ್ಯವಾಗಿ ಸಮರ್ಪಿಸುತ್ತಾರೆ. ಬೆಟ್ ದ್ವಾರಕಾದಲ್ಲಿನ ಪ್ರಧಾನ ದೇವಾಲಯದಲ್ಲಿ ಒಂದು ಗಂಟೆಗೆ ಸರಿಯಾಗಿ ಉಚಿತವಾಗಿ ಭೋಜನವನ್ನು ನೀಡುತ್ತಾರೆ. ವಿಶೇಷವೇನೆಂದರೆ ಈ ದೇವಾಲಯದಲ್ಲಿ ಅಕ್ಕಿಯ ಮೂಟೆಗಳು ಇರುತ್ತವೆ. ಆ ಅಕ್ಕಿ ಮೂಟೆಗಳ ಮೇಲೆ ಒಂದಿಷ್ಟು ದಕ್ಷಿಣೆಯನ್ನು ಇಟ್ಟರೆ ಸ್ವಲ್ಪ ಅಕ್ಕಿಯನ್ನು ನೀಡುತ್ತಾರೆ. ಅಕ್ಕಿಯನ್ನು ಮನೆಯಲ್ಲಿನ ಅಕ್ಕಿಯೊಂದಿಗೆ ವಿಲೀನಗೊಳಿಸಿದರೆ ಶುಭವಾಗುತ್ತದೆ ಎಂದು ನಂಬಲಾಗಿದೆ.

4. ಚರಿತ್ರಾತ್ಮಕವಾಗಿ ಬೆಟ್ ದ್ವಾರಕಾ

4. ಚರಿತ್ರಾತ್ಮಕವಾಗಿ ಬೆಟ್ ದ್ವಾರಕಾ

PC:YOUTUBE

ಪುರಾಣ ಪ್ರಕಾರವಾಗಿಯೇ ಅಲ್ಲದೆ ಚರಿತ್ರಾತ್ಮಕವಾಗಿ ಕೂಡ ಬೆಟ್ ದ್ವಾರಕಾ ಅತ್ಯಂತ ಪ್ರಸಿದ್ಧವಾದದ್ದು. ಇಲ್ಲಿ ಅನೇಕ ವರ್ಷಗಳಿಂದ ಪುರವಸ್ತು ಶಾಖೆಯವರು ಅನೇಕ ಪರಿಶೋಧನೆಗಳನ್ನು ಮಾಡುತ್ತಿದ್ದಾರೆ. ಇಂದಿನವರೆಗೆ ದೊರೆತ ಅನೇಕ ಆಧಾರಗಳ ಪ್ರಕಾರ, ಇಲ್ಲಿ ಸಮುದ್ರ ವ್ಯಾಪಾರ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದವು. ಇಲ್ಲಿ ಮುಖ್ಯವಾಗಿ ಮಣ್ಣಿನಿಂದ ತಯಾರಿಸಿದ ಪಾತ್ರೆಗಳು ಲೋಹದಿಂದ ತಯಾರಿಸಿದ ನಾಣ್ಯಗಳು ಇನ್ನು ಹಲವಾರು ವಸ್ತುಗಳು ದೊರೆತಿವೆ. ಆಶ್ಚರ್ಯವೆಂದರೆ ಆ ವಸ್ತುಗಳೆಲ್ಲ ಈಜಿಪ್ಟ್ ಹಾಗೂ ರೋಮ್ ದೇಶಗಳಿಗೆ ಸೇರಿದ್ದು. ಇದರ ಅರ್ಥ ಪೂರ್ವದಲ್ಲಿಯೇ ಇತರ ದೇಶಗಳೊಂದಿಗೆ ಬೆಟ್ ದ್ವಾರಕ ಸಂಪರ್ಕ ಹೊಂದಿತ್ತು.

5. ಹೋಲಿಕೆಗಳಿವೆ

5. ಹೋಲಿಕೆಗಳಿವೆ

PC:YOUTUBE

ಇಲ್ಲಿರುವ ದೇವಾಲಯಗಳ ನಿರ್ಮಾಣ ಹಾಗೂ ಸಮುದ್ರ ಗರ್ಭದಲ್ಲಿ ಮುಳುಗಿರುವ ದೇವಾಲಯಗಳು, ಮನೆ, ಪಟ್ಟಣ ಒಂದೇ ರೀತಿಯಲ್ಲಿದೆ. ಅಷ್ಟೇ ಅಲ್ಲ ಮಹಾಭಾರತದಲ್ಲಿರುವ ಸಭಾಪರ್ವ ಬೆಟ್ ದ್ವಾರಕ ಎಂದು ಕೂಡ ಹೇಳುವವರು ಇದ್ದಾರೆ. ಪುರಾ ಶಾಖೆಯ ಪರಿಶೋಧನೆಯಲ್ಲಿ ದೊರೆತ ಅನೇಕ ವಸ್ತುಗಳು ಹಾಗೂ ಮಹಾಭಾರತದಲ್ಲಿ ಇದ್ದ ಅನೇಕ ವಸ್ತುಗಳಿಗೆ ಹೋಲಿಕೆಗಳಿವೆ. ಇಲ್ಲಿ ದೊರೆತ ಅನೇಕ ವಸ್ತುಗಳು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಕಂಡರೆ ದ್ವಾರಕಾದಲ್ಲಿ ಇದ್ದೇವೆ ಎಂಬ ಅನುಭೂತಿಯನ್ನು ಉಂಟು ಮಾಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X