Search
  • Follow NativePlanet
Share
» »ರಜೀಯಾ ಸುಲ್ತಾನ ಹೆಸರು ಕೇಳಿದ್ದೀರಾ? ಆಕೆಗೂ ಕೈತಾಲ್‌ಗೂ ಸಂಬಂಧವೇನು?

ರಜೀಯಾ ಸುಲ್ತಾನ ಹೆಸರು ಕೇಳಿದ್ದೀರಾ? ಆಕೆಗೂ ಕೈತಾಲ್‌ಗೂ ಸಂಬಂಧವೇನು?

ಹರಿಯಾಣದಲ್ಲಿರುವ ಕೈತಾಲ್‌ ಉತ್ತರ ಭಾರತದ ಒಂದು ಪ್ರಾಚೀನ ನಗರಗಳಲ್ಲೊಂದಾಗಿದೆ. ತನ್ನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವಕ್ಕಾಗಿ ಪ್ರಸಿದ್ಧವಾಗಿದೆ. ಈ ಸ್ಥಳವು ಹನುಮಂತನಿಗೂ ಸಂಬಂಧಿಸಿದೆ ಎನ್ನಲಾಗುತ್ತದೆ. ಈ ಸ್ಥಳವು ಮೊದಲು ಕಪಿಸ್ಥಳ ಎಂದು ಕರೆಯಲಾಗುತ್ತಿತ್ತು. ಹಳೆಯ ಇತಿಹಾಸದತ್ತ ಕಣ್ಣಾಡಿಸಿದರೆ ಈ ಸ್ಥಳವು ಮೊದಲ ಮಹಿಳಾ ಸಾಮ್ರಾಟನಿ ರಜೀಯಾ ಸುಲ್ತಾನರಿಗೆ ಸಂಬಂಧಿಸಿದೆ.

ಬಾಯಿ ಕಿ ಭವಲಿ

ಬಾಯಿ ಕಿ ಭವಲಿ

PC:Anupamg

ಇಂದು ಆ ಸ್ಥಳವು ಅಕ್ಕಿ ಬೆಳೆಗೆ ಪ್ರಸಿದ್ಧವಾಗಿದೆ. ಪ್ರವಾಸಿಗರ ದೃಷ್ಠಿಯಿಂದ ಈ ಸ್ಥಳವು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ.
ಕೈತಾಲ್‌ ಸುತ್ತಾಡೋದಾದರೆ ನೀವು ಮೊದಲಿಗೆ ಇಲ್ಲಿನ ಹಳೆಯ ಬಾಯಿ ಕಿ ಭವಲಿಯಿಂದ ಪ್ರಾರಂಭಿಸಬೇಕು. ಇದು ಇಲ್ಲಿನ ಪ್ರಮುಖ ಪ್ರವಾಸಿ ತಾಣವಾಗಿದೆ. ಇಟ್ಟಿಗೆಗಳಿಂದ ನಿರ್ಮಿಸಲಾದ ಮೆಟ್ಟಿಲು ನೇರವಾಗಿ ಬಾವಿಯ ಕಡೆಗೆ ಹೋಗುತ್ತದೆ. ಸ್ಥಳೀಯರು ಇದನ್ನು ಬಾಯೀ ಕೀ ಭವಲಿ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಇದರ ಮುಖಾಂತರ ನೀವು ಪ್ರಾಚೀನ
ವಾಸ್ತುಕಲೆಯನ್ನು ಬಹಳ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಕಾಳಿಯನ್ನು ಸಮಾಧಾನಿಸಲು ಶಿವ ಭರತನಾಟ್ಯ ಮಾಡಿದ ಸ್ಥಳವಿದುಕಾಳಿಯನ್ನು ಸಮಾಧಾನಿಸಲು ಶಿವ ಭರತನಾಟ್ಯ ಮಾಡಿದ ಸ್ಥಳವಿದು

ಕಲಾಯತ್ ಮಂದಿರ

ಕಲಾಯತ್ ಮಂದಿರ

PC: Anamdas

ಬಾಯಿ ಕೆ ಭಾವಲಿಯ ನಂತರ ನೀವು ಇಲ್ಲಿನ ಪ್ರಸಿದ್ಧ ಸ್ಥಳವಾದ ಕಲಾಯತ್ ಮಂದಿರದ ದರ್ಶನ ಮಾಡಬಹುದು. ಈ ಸ್ಥಳದ ಹೆಸರು ಕಪಿಲಾಯತನ್‌ ಜೊತೆ ಸೇರಿದೆ. ಅಂದರೆ ಕಪಿಲ ಋಷಿಯ ಮನೆ. ಕಪಿಲ ಋಷಿಯು ಈ ಸ್ಥಳದಲ್ಲಿ ಬಹಳ ಸಮಯಗಳ ವರೆಗೆ ನೆಲೆಸಿದ್ದರು ಎನ್ನಲಾಗುತ್ತದೆ. ಹಿಂದಿನ ಕಾಲದಲ್ಲಿ ಇಲ್ಲಿ ಐದು ಮಂದಿರಗಳಿದ್ದವು, ಆದರೆ ಈಗ ಕೇವಲ ಎರಡು ಮಾತ್ರ ಕಾನಿಸುತ್ತಿವೆ. ಈ ದೇವಸ್ಥಾನವನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿದ್ದು ಭಾರತೀಯ ವಾಸ್ತುಕಲೆಯನ್ನು ಇಲ್ಲಿ ಕಾಣಬಹುದು.

ಥೆ ಪೋಲಾರ್

ಥೆ ಪೋಲಾರ್

PC:Ranveig

ಇಲ್ಲಿನ ಐತಿಹಾಸಿಕ ಸ್ಥಳಗಳಲ್ಲಿ ನೀವು ಥೆ ಪೋಲಾರ್‌ನ್ನು ಭೇಟಿ ನೀಡಬಹುದು. ಇದೊಂದು ಪುರಾತನ ಹಳ್ಳಿಯಾಗಿದೆ. ಮಹಾಭಾರತದ ಕಾಲದಲ್ಲಿ ಈ ಹಳ್ಳಿಯು ನೆಲಸಮವಾಗಿತ್ತು. ಈ ಸ್ಥಳವು ಮುಖ್ಯ ನಗರದಿಂದ ಕೇವಲ 10 ಕಿ.ಮೀ ದೂರದಲ್ಲಿದೆ.

ಇದೇ ಕಾರಣಕ್ಕೆ ಭಾರತವು ಇತರ ದೇಶಗಳಿಗಿಂತ ಭಿನ್ನವಾಗಿರುವುದು ಇದೇ ಕಾರಣಕ್ಕೆ ಭಾರತವು ಇತರ ದೇಶಗಳಿಗಿಂತ ಭಿನ್ನವಾಗಿರುವುದು

ಮಹಲ್ ಕೋಟೆ

ಮಹಲ್ ಕೋಟೆ

PC: Flickr upload bot

ಕೈತಾಲ್‌ನಲ್ಲಿ ನೀವು ಬಾಯಿ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾದ ಅರಮನೆ ಹಾಗೂ ಕೋಟೆಗಳನ್ನು ನೋಡಬಹುದು. ಸಿಖ್‌ ರಾಜರುಗಳು ಇಲ್ಲಿ ಸಾಕಷ್ಟು ಸ್ಮಾರಕಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಅರಮನೆಗಳನ್ನು ಇಂಡೋ ಯುರೋಪಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸಾಮ್ರಾಜ್ಯದ ಕೊನೆಯ ರಾಜನು ಇಲ್ಲಿ ಉದ್ಯಾನವನದ ಮನೆಯನ್ನು ನಿರ್ಮಾಣ ಮಾಡಿದ್ದಾನೆ.

ರಜೀಯಾ ಸುಲ್ತಾನಳ ಸಮಾಧಿ

ರಜೀಯಾ ಸುಲ್ತಾನಳ ಸಮಾಧಿ

PC:Chandni27

ಕೈತಾಲ್‌ನಲ್ಲಿ ಇವಿಷ್ಟೇ ಅಲ್ಲ ರಜಿಯ ಸುಲ್ತಾನಳ ಸಮಾಧಿಯನ್ನೂ ಕಾಣಬಹುದಾಗಿದೆ. ರಜಿಯಾ ಸುಲ್ತಾನ ಕೆಲವು ಸಮಯದ ವರೆಗೆ ದೆಹಲಿಯನ್ನು ಆಳಿದ ಮೊದಲ ಮಹಿಳಾ ಸಾಮ್ರಾಜ್ಞಿಯಾಗಿದ್ದಳು. ಮಾಹಿತಿಯ ಪ್ರಕಾರ ಈ ಸಮಾಧಿಯನ್ನು 16ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಗೋರಿಯ ಬಳಿ ಒಂದು ಮಸೀದಿ ಕೂಡಾ ಇದೆ. ಇದು ಐತಿಹಾಸಿಕ ರೂಪದಲ್ಲಿ ಕೈತಾಲ್‌ಗೆ ಬಹಳ ಪ್ರಮುಖವಾದುದು ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X