Search
 • Follow NativePlanet
Share
ಮುಖಪುಟ » ಸ್ಥಳಗಳು» ಹರ್ಯಾಣ

ಮಹಾ"ಭಾರತ" ಸೃಷ್ಟಿಸಿದ ನಾಡು ಹರ್ಯಾಣ

ನವ್ಹೆಂಬರ 1, ಕನ್ನಡತಾಯಿ ಹುಟ್ಟಿದ ದಿನ ಅಂತ ನಮಗೆಲ್ಲ ಗೊತ್ತು. ನಮ್ಮಮ್ಮ ಹುಟ್ಟಿದ ದಿನವೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಭಾರತಾಂಬೆಯ ಇನ್ನೊಬ್ಬ ಮಗಳು, ಹರಿಯಾಣ. ಭಾಷಾವಾರು ವಿಂಗಡನೆಯ ಫಲವಾಗಿ, 1966 ರಲ್ಲಿ ಪಂಜಾಬಿನಿಂದ ಬೇರ್ಪಡೆಯಾದ ಹರಿಯಾಣ ಭಾರತಮಾತೆಯ ಹದಿನೇಳನೇ ಮಗಳು.

ಉತ್ತರಕ್ಕೆ ಪಂಜಾಬ್ ಮತ್ತು ಹಿಮಾಚಲಪ್ರದೇಶ ರಾಜ್ಯಗಳು ಹಾಗು ಪಶ್ಚಿಮ ಮತ್ತು ದಕ್ಷಿಣಕ್ಕೆ ರಾಜಸ್ಥಾನ ರಾಜ್ಯಗಳಿದ್ದು, ರಾಜ್ಯದ ಪೂರ್ವದಲ್ಲಿ ಹರಿಯುವ ಯಮುನಾನದಿಯು ಉತ್ತರಾಖಂಡ ಮತ್ತು ಉತ್ತರಪ್ರದೇಶಗಳನ್ನು ಹರ್ಯಾಣದಿಂದ ಬೇರ್ಪಡಿಸಿದೆ.

ಹರ್ಯಾಣ ಎಂಬ ಹೆಸರು ಸಂಸೃತ ಮೂಲದ್ದಗಿದ್ದು, ಆಸ್ತಿಕರ ಪ್ರಕಾರ, ಹರಿ ಎಅಂದರೆ ವಿಷ್ಣು, ಅಯಾಣ ಎಂದರೆ ಮನೆ, ಆದ್ದರಿಂದ ಹರ್ಯಾಣ ಎಂದರೆ "ವಿಷ್ಣುವಿನ ಮನೆ" . ಬುದ್ಧಿಜೀವಿಗಳ ಪ್ರಕಾರ, ಸಂಸೃತದಲ್ಲಿ ಹರಿತ್ ಎಂದರೆ ಹಸಿರು, ಅರಣ್ಯ ಎಂದರೆ ವನ ಆದ್ದರಿಂದ ಹರ್ಯಾಣ " ಹಸಿರಿನಿಂದ ತುಂಬಿದ ವನಗಳಿರುವ ನಾಡು ಎಂಬ ಅರ್ಥವನ್ನು ನೀಡುತ್ತದೆ. ಇನ್ನು ಇತಿಹಾಸಗಾರರ ಪ್ರಕಾರ, ತನ್ನ ಜನಾಂಗದೊಂದಿಗೆ ಇಲ್ಲಿ ಬಂದು ನೆಲೆಸಿದ ಪೃಥ್ವಿರಾಜ್ ಚೌಹಾಣನ ಸೇನಾಧಿಪತಿಯಾದ "ರಾಣಾ ಹರ್ ರೈ" (ರಾಣಾ ಹರ್ರ) ನಿಂದಾಗಿ ಈ ರಾಜ್ಯ ಹರ್ಯಾಣ ಎಂಬ ಹೆಸರನ್ನು ಪಡೆದಿದೆ. ಆದರೆ ಈ ರಾಜ್ಯದ ನಾಮಾರ್ಥಕ್ಕಿರುವ ಈ ಮೂರೂ ಸಂಗತಿಗಳೂ ಹರ್ಯಾಣ ಹೆಸರಿಗೆ ಅನ್ವರ್ಥಕವಾಗಿವೆ.  

ಹರ್ಯಾಣದ ಪ್ರವಾಸೀ ತಾಣಗಳು

ಭಾರತದಲ್ಲಿ ಉತ್ಕೃಷ್ಟ ಅರಣ್ಯವಿರುವ ರಾಜ್ಯಗಳಲ್ಲಿ ಇದೂ ಒಂದು. ದೆಹೆಲಿಯಿಂದ ಕೆಲವೇ ನಿಮಿಷಗಳ ಪ್ರಯಾಣದಲ್ಲೇ ಹರ್ಯಾಣದ ಹರಿಯಾಲಿ ಗೋಚರಿಸುವದು. ವೈದಿಕ ನಾಗರೀಕತೆ ಮತ್ತು ಸಿಂಧು ಕಣಿವೆ ನಾಗರೀಕತೆಗಳ ಅನೇಕ ಕುರುಹುಗಳನ್ನು ತನ್ನಲ್ಲಿಟ್ಟುಕೊಂಡಿದೆ ಈ ರಾಜ್ಯ.

ಇಲ್ಲಿನ ಹಿಸ್ಸಾರ್ ಜಿಲ್ಲೆಯಲ್ಲಿರುವ ಬನವಳ್ಳಿ ಮತ್ತು ರಖಿಗರ್ಹಿ ಗ್ರಾಮಗಳು ಸಿಂಧೂನಾಗರೀಕತೆಯ ಪುರಾವೆಗಳಾದರೆ, ಅನೇಕ ಯುದ್ಧಗಳಿಗೆ ಸಾಕ್ಷಿಯಾಗಿರುವ ಸರಸ್ವತಿ ನದಿ ಪಾತ್ರದನೆಲ ವೈದಿಕ ನಾಗರೀಕತೆಯ ಕುರುಹಾಗಿದೆ. ಮೂರು ಪಾಣೀಪತ್ ಯುದ್ಧಗಳು ಸೇರಿದಂತೆ,  ಭಾರತದ ಮಹಾಗ್ರಂಥಗಳಲ್ಲೊಂದಾದ ಮಹಾಭಾರತದ ಯುದ್ದ ಕುರುಕ್ಷೇತ್ರವೂ, ಶ್ರೀ ಕೃಷ್ಣನಿಂದ ಗೀತೋಪದೇಶವೂ ನಡೆದ ಪೌರಾಣಿಕ ಕ್ಷೇತ್ರ ಈ ಹರಿಯಾಣ.

ಫರೀದಾಬಾದಿನ ಬದ್ಖಾಲ್ ಸರೋವರ, ಭಿವಾನಿ ಬಳಿ ಇರುವ ತಾರಾ-ಸ್ಮಾರಕಗಳು  ಹರ್ಯಾಣದ ಬೇಟಿನೀಡಬೇಕಾದ ಇತರ ತಾಣಗಳಾಗಿವೆ. ಉಳಿದಂತೆ ಹರಿಯಾಣ, ದೇಗುಲಗಳು,ಕೋಟೆ-ಕೊತ್ತಲಗಳು, ಸರೋವರಗಳು ಮತ್ತು ಉದ್ಯಾನವನಗಳಿಂದ ತುಂಬಿದ್ದು ಹರಿಯಾಣ ಪ್ರವಾಸವನ್ನು ಯಶಸ್ವಿಗೊಳಿಸುತ್ತವೆ.

ಹರ್ಯಾಣದ ಜನ-ಮನ ಹಾಗು ಅವರ ಸಂಸೃತಿ

ಹರ್ಯಾಣವು ಅತಿ ಉತ್ಕೃಷ್ಟ ಸಾಂಸೃತಿಕ ಪಾರಂಪರೆಯನ್ನು ಹೊಂದಿದ ರಾಜ್ಯ. ವೈದಿಕ ಇತಿಹಾಸವನ್ನು ಹೊಂದಿರುವ ಈ ರಾಜ್ಯದ ಹೆಸರು ಹಿಂದೂ ಪುರಾಣಗಳಲ್ಲಿಯೂ ಉಲ್ಲೇಖವಾಗಿದೆ. ಭಗವಾನ್ ಬ್ರಹ್ಮನು ಈ ಜಗತ್ತನ್ನು ಸೃಷ್ಟಿಸುವ ಮೊದಲು ಇದೇ ಸ್ಥಳದಲ್ಲಿ ಬಲಿದಾನ ಕಾರ್ಯವನ್ನು ನೆರವೇರಿಸಿದ್ದನೆಂಬ ನಂಬಿಕೆ ಇದೆ.

ಅಷ್ಟೇ ಅಲ್ಲದೆ, ವೇದವ್ಯಾಸರು ತಮ್ಮ ಮಹಾಗ್ರಂಥವಾದ ಮಹಾಭಾರತವನ್ನು ರಚಿಸಲು ಈ ತಾಣವನ್ನೇ ಆಯ್ಕೆಮಾಡಿಕೊಂಡಿದ್ದರು.  ಯೋಗ, ಧ್ಯಾನ, ಮಂತ್ರ ಪಠಣಗಳಂತಹ ಪುರಾತನ ಆಚರಣೆಗಳನ್ನು ಇಲ್ಲಿನ ಜನತೆ ಇಂದಿಗೂ ಪಾಲಿಸುತ್ತಾರೆ.  

ಉತ್ತರ ಭಾರತದ ದ್ವಾರವಾಗಿರುವ ಹರ್ಯಾಣ, ಹಲವಾರು ಯುದ್ಧಗಳನ್ನು ಕಂಡ ನಾಡು. ಸ್ವಭಾವತಃ ಧೈರ್ಯಶಾಲಿಗಳಾಗಿದ್ದು, ಮೊದಲಿನಿಂದಲೂ ತಮ್ಮ ಹಕ್ಕುಗಳಿಗಾಗಿ ಹೊರಾಡಿಕೊಂಡೇ ಬಂದಿದ್ದಾರೆ.

ಹರ್ಯಾಣದ ಹಬ್ಬ-ಹರಿದಿನಗಳು

ವಿಭಜನೆಯ ಪೂರ್ವದಲ್ಲಿ ಹರ್ಯಾಣವು ಪಂಜಾಬಿನ ಭಾಗವಾಗಿದ್ದರಿಂದ ಈ ಎರಡು ರಾಜ್ಯಗಳ ಸಂಸೃತಿಯಲ್ಲಿ ಸಾಮ್ಯತೆ ಕಂಡುಬರುತ್ತದೆ. ಹರ್ಯಾನ್ವಿ, ಹಿಂದಿ, ಪಂಜಾಬಿ, ಉರ್ದು ಮತ್ತು ಇಂಗ್ಲೀಷ ಭಾಷೆಗಳು ಇಲ್ಲಿ ಬಹುವಾಗಿ ಬಳಕೆಯಲ್ಲಿವೆ.  ರಾಜ್ಯದಲ್ಲಿ ಎಲ್ಲಾ ರಾಷ್ಟ್ರೀಯಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.

ರಾಷ್ಟ್ರೀಯಹಬ್ಬಗಳನ್ನು ಹೊರತು ಪಡಿಸಿ ಹರ್ಯಾಣದಲ್ಲಿ ಸಂಭ್ರಮದಿಂದ ಆಚರಿಸುವ ಮತ್ತೋಂದು ಹಬ್ಬ ಲೊಹ್ರಿ. ಚಳಿಗಾಲದ ಅಂತ್ಯ ಹಾಗು ಮಕರ ಸಂಕ್ರಾಂತಿಯ ಆರಂಭದ ಮದ್ಯದ ದಿನಗಳಲ್ಲಿ ಆಚರಿಸುವ ಈ ಹಬ್ಬವು ಹರಿಯಾಣಿಗರಿಗೆ ಫಲವತ್ತತೆಯನ್ನು ಆಹ್ವಾನಿಸುವ ಹಬ್ಬವಾಗಿದೆ. ಈ ಹಬ್ಬವು ಮೂಲತಃ ಪಂಜಾಬಿನದ್ದಾಗಿದ್ದರೂ  ಹರ್ಯಾಣದಾದ್ಯಂತ ಇದನ್ನು ಸಂಭ್ರಮದಿಂದ ಆಚರಿಸುವರು.

ಗಂಗೊರ್, ಬೈಸಾಖಿ, ಗುಗ್ಗ ನೌಮಿ, ಸುರಜ್ ಕುಂಡ ಮತ್ತು ಕಾರ್ತಿಕ ಉತ್ಸವಗಳು ಹರಿಯಾಣದ ಇತರ ಉತ್ಸವಗಳಾಗಿವೆ. ಹರಿಯಾಣ ಪ್ರವಾಸೋದ್ಯಮ ಮಂಡಳಿಯ ಸ್ಥಾಪನಾ ದಿನವಾದ ಸೆಪ್ಟಂಬರ 1ನ್ನು ಪ್ರತಿ ವರ್ಷ " ಹರಿಯಾಣ ದಿನ" ವನ್ನಾಗಿ ಆಚರಿಸಲಾಗುವದು.

ರೊಟ್ಟಿಗಳ ನಾಡು ಈ ಹರ್ಯಾಣ

ಹರ್ಯಾಣ  ಪಾಕಪದ್ಧತಿಯು ತುಂಬಾ ಸರಳವಾಗಿದ್ದು,  ಇಲ್ಲಿನ  ಜನರು  ಪೌಷ್ಟಿಕವಾದ ಮತ್ತು ರುಚಿಕಟ್ಟಾದ  ಬಿಸಿ ರೋಟ್ಟಿ ಪ್ರೀಯರು. ಇಲ್ಲಿ ಹೈನುಗಾರಿಕೆ ಪ್ರಮುಖವಾಗಿರುವ ಕಾರಣ ಇವರ ಅಡಿಗೆಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ  ಬಳಕೆಯೇ ಹೆಚ್ಚು.

ಮೆಟ್ ನಗರಗಳಲ್ಲಿ ತುಂಬಿರುವ ಜಂಕ್ ಫುಡ್ ನೆನೆಸಿಕೊಂಡರೆ ಇಲ್ಲಿನ ಜನರ  ಸರಳ ಮತ್ತು ಪೌಷ್ಠಿಕ ಆಹಾರ ಹೊಟ್ಟೆ ತುಂಬಿಸುವದರೊಂದಿಗೆ ಮನಸ್ಸನ್ನೂ ತುಂಬಿಸುತ್ತವೆ. ರೋಟಿಯೊಂದಿಗೆ ಹರ್ಯಾಣದ ವೈಶಿಷ್ಯಗಳಾದ ಲಸ್ಸಿ, ಕಚ್ರಿ ಯ ಪಲ್ಯ, ಮಿಕ್ಸ್ಡ್ ದಾಲ್ ಹಾಗು ಮೇಥಿ ಗಾಜರ್ ಗಳನ್ನು ಸವಿದರೆ.....ಆಹಾ!   

ಸಂಪರ್ಕ ಸಾಧನಗಳು

ಹರ್ಯಾಣವು ವಾಯು, ರೈಲು ಮತ್ತು ರಸ್ತೆಯ ಮೂಲಕ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕಹೊಂದಿದೆ. ಇದು ರಾಜಧಾನಿ ದೆಹಲಿಗೆ ಸಾಕಷ್ಟು ಸಮೀಪದಲ್ಲಿರುವದರಿಂದ  ಹರ್ಯಾಣ ಪ್ರವಾಸಿಗರಿಗೆ ಸಹಕಾರಿಯಾಗಿದೆ. 

ಹರ್ಯಾಣವು  ಅತ್ಯಂತ ಬಿಸಿಯಾದ ಬೇಸಿಗೆ ಮತ್ತು ಕೊರೆಯುವ ಚಳಿಗಾಲವನ್ನು ಹೊಂದಿದೆ. ಆದರೆ ಮಳೆಗಾಲದಲ್ಲಿ  ಕರ್ನಾಲ್ ಮತ್ತು ಅಂಬಾಲ ಜಿಲ್ಲೆಗಳನ್ನು ಹೊರತುಪಡಿಸಿದರೆ, ಹರ್ಯಾಣದಲ್ಲಿ ಅಷ್ಟೇನು ಹೆಚ್ಚು ಮಳೆಯಾಗುವುದಿಲ್ಲ. ಕನಿಷ್ಠ ಮಳೆರಾಜ್ಯದ  ಮಹೇಂದ್ರಗಢ್ ಮತ್ತು ಹಿಸ್ಸಾರ್ ಜಿಲ್ಲೆಗಳು ಅತಿ ಕಡಿಮೆ ಮಳೆಯ ಪ್ರಮಾಣವನ್ನು ದಾಖಲಿಸಿವೆ.

ಆದ್ದರಿಂದ ಮುನ್ನೆಚ್ಚರಿಕೆಗಳೊಡನೆ ಹರ್ಯಾಣಕ್ಕೆ ಪ್ರಯಾಣ ಬೆಳೆಸಿ. ಹಾಗಾದರೆ ಯಾವಾಗ ನಿಮ್ ಪ್ರಯಾಣ ?!

ಹರ್ಯಾಣ ಸ್ಥಳಗಳು

 • ಯಮುನಾ ನಗರ 6
 • ಗುರ್ಗಾಂವ್ 131
 • ಝಜ್ಜರ್ 14
 • ಕುರುಕ್ಷೇತ್ರ 50
 • ಅಂಬಾಲ 10
One Way
Return
From (Departure City)
To (Destination City)
Depart On
14 Jun,Mon
Return On
15 Jun,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Jun,Mon
Check Out
15 Jun,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Jun,Mon
Return On
15 Jun,Tue