Search
  • Follow NativePlanet
Share
» »ವಿಶಾಲಘಡ್ ಕೋಟೆ ಸೌಂದರ್ಯ ಕಂಡು ಬೆರಗಾಗೋದಂತೂ ಗ್ಯಾರಂಟಿ

ವಿಶಾಲಘಡ್ ಕೋಟೆ ಸೌಂದರ್ಯ ಕಂಡು ಬೆರಗಾಗೋದಂತೂ ಗ್ಯಾರಂಟಿ

ಭಾರತದಲ್ಲಿ ಹಲವಾರು ಕೋಟೆಗಳಿವೆ, ಮಹಾರಾಷ್ಟ್ರವೂ ಸಾಕಷ್ಟು ಕೋಟೆಗಳನ್ನು ತನ್ನ ಮಡಿಲಲ್ಲಿ ಹೊಂದಿದೆ, ಅದು ನಿಮ್ಮನ್ನು ಇತಿಹಾಸ ಕಾಲಕ್ಕೆ ಕೊಂಡೊಯ್ಯುತ್ತದೆ. ಅಂತಹ ಹಲವಾರು ಕೋಟೆಗಳಲ್ಲಿ ವಿಶಾಲಘಡ್ ಕೋಟೆಯೂ ಒಂದು. ಇದು ಮರಾಠಾ ಸಾಮ್ರಾಜ್ಯದ ಪ್ರಮುಖ ಕೋಟೆಗಳಲ್ಲಿ ಒಂದಾಗಿದೆ.

ವಿಶಾಲ್‌ಘಡ್

ವಿಶಾಲ್‌ಘಡ್

PC: Pmohite

ವಿಶಾಲ್‌ಘಡ್ ಕೋಟೆ ಸಹ್ಯಾದ್ರಿ ಶ್ರೇಣಿಗಳು ಮತ್ತು ಕೊಂಕಣ ಪ್ರದೇಶವನ್ನು ಆಧರಿಸಿದೆ. ಈ ಕೋಟೆಯನ್ನು ಕಾವಲು ಗೋಪುರವೆಂದು ಪರಿಗಣಿಸಲಾಗಿದ್ದು, ಪ್ರಾಚೀನ ಕಾಲದಲ್ಲಿ ಈ ಬೆಟ್ಟದ ಕೋಟೆಗೆ ಅಪಾರ ಮಹತ್ವವಿತ್ತು. ಈ ಕೋಟೆ ಶಿವಾಜಿಯ ಆಳ್ವಿಕೆಯಲ್ಲಿ ಅಸ್ತಿತ್ವದಲ್ಲಿದ್ದ ಅತ್ಯಂತ ಪ್ರಸಿದ್ಧ ಕೋಟೆಗಳಲ್ಲಿ ಒಂದಾಗಿದೆ. ಚಕ್ರವರ್ತಿ ಶಿವಾಜಿ ಅದನ್ನು ವಶಪಡಿಸಿಕೊಂಡ ನಂತರ, ಅದಕ್ಕೆ ವಿಶಾಲ್‌ಘಡ್ ಎಂದು ಹೆಸರಿಟ್ಟರು. ಇದನ್ನು "ಭವ್ಯ ಕೋಟೆ" ಎಂದು ಅರ್ಥೈಸಲಾಗುತ್ತದೆ. ಮೂಲತಃ ಬಿಜಾಪುರದ ಆದಿಲ್ ಶಾಹಿ ರಾಜವಂಶಕ್ಕೆ ಸೇರಿದ ಈ ಕೋಟೆಯನ್ನು ಅಂತಿಮವಾಗಿ ವಶಪಡಿಸಿಕೊಳ್ಳುವ ಮೊದಲು ಹಲವಾರು ಬಾರಿ ದಾಳಿಗೆ ಒಳಗಾಗಿದೆ.

1130 ಮೀಟರ್ ವಿಸ್ತೀರ್ಣದಲ್ಲಿದೆ

1130 ಮೀಟರ್ ವಿಸ್ತೀರ್ಣದಲ್ಲಿದೆ

Ankur P

ಈ ಕೋಟೆಯು ಸುಮಾರು 1130 ಮೀಟರ್ ವಿಸ್ತೀರ್ಣವನ್ನು ಹೊಂದಿದೆ, ಮತ್ತು ಸಹ್ಯಾದ್ರಿ ಶ್ರೇಣಿಗಳಲ್ಲಿ ಬೆಟ್ಟದ ತುದಿಯಲ್ಲಿ ನಿರ್ಮಿಸಲಾಗಿದೆ. ಐತಿಹಾಸಿಕ ಕಾಲದಲ್ಲಿ, ಕೋಟೆಯನ್ನು ವಾಚ್ ಟವರ್ ಎಂದೂ ಪರಿಗಣಿಸಲಾಗಿತ್ತು. ಆದರೆ ಇಂದು ಕೋಟೆ ದುಸ್ಥಿತಿಯಲ್ಲಿದೆ.

ಅಮೃತೇಶ್ವರ ದೇವಸ್ಥಾನ

ಅಮೃತೇಶ್ವರ ದೇವಸ್ಥಾನ ಕೋಟೆಗೆ ಸಮೀಪದಲ್ಲಿರುವ ರತನ್ವಾಡಿ ಗ್ರಾಮದಲ್ಲಿದೆ. 1200 ವರ್ಷಗಳಷ್ಟು ಹಳೆಯದಾದ ಈ ದೇವಾಲಯವು ಶಿವನಿಗೆ ಅರ್ಪಿತವಾಗಿದೆ. ಹೇಮದ್‌ಪಂತಿ ವಾಸ್ತುಶಿಲ್ಪ ಶೈಲಿಯನ್ನು ಬಳಸಿ ನಿರ್ಮಿಸಲಾಗಿರುವ ಈ ದೇವಾಲಯವು ಶಿಲಾ ಕೆತ್ತನೆಗಳಿಂದ ಸಮೃದ್ಧವಾಗಿದೆ. ಪ್ರವಾಸಿಗರು ಆರ್ಥರ್ ಸರೋವರದಿಂದ ದೇವಾಲಯವನ್ನು ತಲುಪಲು ದೋಣಿಗಳನ್ನು ಪಡೆಯಬಹುದು, ಏಕೆಂದರೆ ಇಲ್ಲಿ ರಸ್ತೆ ಮೂಲಕ ಪ್ರಯಾಣಿಸುವುದು ಸುಲಭವಲ್ಲ. ರತಂಗಡ್ ಕೋಟೆ ಕೂಡ ದೇವಾಲಯದಿಂದ ತುಂಬಾ ದೂರದಲ್ಲಿಲ್ಲ.

ಶ್ರೀ ನರಸಿಂಹ ದೇವಾಲಯ

ಶ್ರೀ ನರಸಿಂಹ ಸರಸ್ವತಿ ಸ್ವಾಮಿ ದತ್ತದೇವ ದೇವಸ್ಥಾನ ಎಂದೂ ಕರೆಯಲ್ಪಡುವ ನರಸಿಂಹ ದೇವಾಲಯವನ್ನು ಬಡವರ ಉನ್ನತಿ ಮತ್ತು ಸುಧಾರಣೆಗಾಗಿ ಶ್ರಮಿಸಿದ ಶ್ರೀ ನರಸಿಂಹ ಸರಸ್ವತಿಗೆ ಅರ್ಪಿಸಲಾಗಿದೆ. ಸಂತನ ಪವಿತ್ರ ಪಾದರಕ್ಷೆಯನ್ನು ಇಲ್ಲಿ ಬಿಟ್ಟಿದ್ದರು ಎಂದು ನಂಬಲಾಗಿದೆ.

ತಕ್ಮಾಕ್ ಟೋಕ್

ತಕ್ಮಾಕ್ ಟೋಕ್

ತಕ್ಮಾಕ್ ಟೋಕ್ ಹಿಂದೆ ಅಪರಾಧಿಗಳನ್ನು ಎಸೆಯುವ ಸ್ಥಳವಾಗಿತ್ತು. ಶಿವಾಜಿಯ ಹನ್ನೆರಡು ಕೋಟೆಗಳನ್ನು ಇಲ್ಲಿಂದ ಸ್ಪಷ್ಟವಾಗಿ ನೋಡಬಹುದು. ವಿಶಾಲಘಡ್ ಕೋಟೆ ಕೊಲ್ಹಾಪುರದ ಪಶ್ಚಿಮಕ್ಕೆ 76 ಕಿ.ಮೀ ದೂರದಲ್ಲಿದೆ. ಕೊಲ್ಹಾಪುರವನ್ನು ತಲುಪಿದ ನಂತರ ನೀವು ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:Ankur P

ಬೇಸಿಗೆಯಲ್ಲಿ ಅಥವಾ ಚಳಿಗಾಲದಲ್ಲಿ ಕೋಟೆಯನ್ನು ಉತ್ತಮವಾಗಿ ಭೇಟಿ ಮಾಡಲಾಗುತ್ತದೆ, ಚಳಿಗಾಲವು ಈ ಸ್ಥಳಕ್ಕೆ ಭೇಟಿ ನೀಡಲು ಹೆಚ್ಚು ಅನುಕೂಲಕರ ಸಮಯವಾಗಿರುತ್ತದೆ. ಇತರ ಸಾಮಾನ್ಯ ಶೈಕ್ಷಣಿಕ ರಜಾದಿನಗಳು ಮತ್ತು ಪ್ರದೇಶದ ಹಬ್ಬಗಳ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Pmohite

ಪುಣೆಯಿಂದ ಕೊಲ್ಹಾಪುರಕ್ಕೆ ರಾಜ್ಯ ಸಾರಿಗೆ ಬಸ್‌ಗಳಿವೆ, ಪುಣೆ ನಿಲ್ದಾಣದಿಂದ ಕೊಲ್ಹಾಪುರಕ್ಕೆ, ಪುಣೆ ಕೊಲ್ಹಾಪುರದಿಂದ ಸುಮಾರು 239 ಕಿಲೋಮೀಟರ್ ದೂರದಲ್ಲಿದೆ, ಕೊಲ್ಹಾಪುರ ರಾಜ್ಯ ಸಾರಿಗೆ ಬಸ್‌ಗಳು ಮತ್ತು ಸ್ಥಳೀಯ ಸಾರಿಗೆ ವಿಶಾಲ್‌ಘಡ್‌ಗೆ ಲಭ್ಯವಿದೆ, ಇದು ಕೊಲ್ಹಾಪುರದಿಂದ 80 ಕಿಲೋಮೀಟರ್ ದೂರದಲ್ಲಿದೆ.

ರೈಲಿನ ಮೂಲಕ: ಪುಣೆ ಜಂಕ್ಷನ್‌ನಿಂದ ಕೊಲ್ಹಾಪುರಕ್ಕೆ ರೈಲುಗಳು ಲಭ್ಯವಿವೆ, ಪುಣೆ ಜಂಕ್ಷನ್‌ನಿಂದ ಕೊಲ್ಹಾಪುರಕ್ಕೆ ಸುಮಾರು 280 ಕಿಲೋಮೀಟರ್ ದೂರವಿದೆ.

ರಸ್ತೆ ಮೂಲಕ: ವಿಶಾಲಘಡ್ ಕೋಟೆಗೆ ಪುಣೆಯ ಮಾರ್ಗ. ಪುಣೆ - ನಾರಾಯಣಪುರ ಫಾಟಾ - ಶಿರ್ವಾಲ್ - ಖಂಡಲಾ - ಭುಂಜ್ - ವಾಧೆ - ಸತಾರಾ - ಕಾಶಿಲ್ - ಉಮರಾಜ್ - ಕರಡ್ - ಇಸ್ಲಾಂಪುರ್ - ಯೆಲೂರ್ - ಕೊಲ್ಹಾಪುರ - ರಜಪೂತ್ವಾಡಿ - ಪನ್ಹಾಲಾ - ಅಂಬಾ - ವಿಶಾಲಘಡ್ - ವಿಶಾಲಘಡ್ ಕೋಟೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more