Search
  • Follow NativePlanet
Share
» »ಬರೀ 12 ಸಾವಿರ ರೂ.ಗೆ ಇಡೀ ದ್ವೀಪವೇ ನಿಮ್ಮದಾಗುತ್ತದೆ

ಬರೀ 12 ಸಾವಿರ ರೂ.ಗೆ ಇಡೀ ದ್ವೀಪವೇ ನಿಮ್ಮದಾಗುತ್ತದೆ

ದೇಶದಲ್ಲಿ ಎಷ್ಟೆಲ್ಲಾ ಐಲ್ಯಾಂಡ್‌ಗಳಿವೆ ಆದರೆ ನೀವು ಯಾವತ್ತಾದರೂ ಪ್ರೈವೆಟ್ ಐಲ್ಯಾಂಡ್ ಬಗ್ಗೆ ಕೇಳಿದ್ದೀರಾ. ಕೇರಳದಲ್ಲಿ ಒಂದು ಪ್ರೈವೆಟ್ ದ್ವೀಪವಿದೆ. ಇಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಕಾಲ ಕಳೆಯಬಹುದು. ಇದರ ಬೆಲೆ ಕೂಡಾ ತುಂಬಾ ಕಡಿಮೆ ಇದೆ. ನೀರಿನ ಮಧ್ಯೆ ನಮ್ಮದೊಂದು ಪುಟ್ಟ ಮನೆ ಇರಬೇಕೆಂಬ ಆಸೆ ಬಹುತೇಕರಿಗೆ ಇರುತ್ತದೆ. ಆದರೆ ಅದು ನಿಜಜೀವನದಲ್ಲಿ ಸಾಧ್ಯವಾಗೋದಿಲ್ಲ. ನಿಮ್ಮ ಈ ಕನಸನ್ನು ನದಿ ದ್ವೀಪಗಳ ಮೂಲಕ ಪೂರ್ಣಗೊಳಿಸಬಹುದು. ಕೇರಳದಲ್ಲಿ ಒಂದು ಖಾಸಗಿ ದ್ವೀಪವಿದೆ. ಒಂದು ದಿನಕ್ಕೆ ಆ ದ್ವೀಪ ಪೂರ್ಣ ರೀತಿಯಲ್ಲಿ ನಿಮಗೆ ಬಾಡಿಗೆಗೆ ಸಿಗುತ್ತದೆ.

 ಈ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡ್ತಾರೆ ಚಿನ್ನ! ಈ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡ್ತಾರೆ ಚಿನ್ನ!

12 ಸಾವಿರ ರೂ.

12 ಸಾವಿರ ರೂ.


ಈ ಖಾಸಗಿ ದ್ವೀಪದ ಒಂದು ದಿನದ ಬೆಲೆ ಕೇವಲ 12ಸಾವಿರ ರೂ. ಮಾತ್ರ. ನೀವು ನಿಮ್ಮ ಪ್ರೀತಿ ಪಾತ್ರರ ಜೊತೆ ಏಕಾಂತವಾಗಿ ಕಾಲ ಕಳೆಯಬೇಕೆಂದಿದ್ದಲ್ಲಿ ಈ ನದಿ ದ್ವೀಪಕ್ಕೆ ತೆರಳಬಹುದು. ಪ್ರಕೃತಿ ಸೌಂದರ್ಯದ ನಡುವೆ ಇಲ್ಲಿನ ವಿಹಂಗಮ ನೋಟವನ್ನು ಸವಿಯುವುದೇ ಒಂದು ಮಜಾ,

ಎಲ್ಲಿದೆ ಈ ದ್ವೀಪ ?

ಎಲ್ಲಿದೆ ಈ ದ್ವೀಪ ?

PC:Arunsunilkollam
ಈ ಅದ್ಭುತ ದ್ವೀಪವನ್ನು ವಿನಿಸ್ ಫಾರ್ಮ್ ಎನ್ನುತ್ತಾರೆ. ಇದು ಕೇರಳದ ಕೊಲ್ಲಂನಲ್ಲಿನ ಮುನ್ನೋರ್ ಐಸ್‌ಲ್ಯಾಂಡ್‌ನಲ್ಲಿದೆ. ಇಲ್ಲಿ ನಾಲ್ಕಕ್ಕಿಂತ ಅಧಿಕ ಮಂದಿ ಹೋಗುವಂತಿಲ್ಲ. ಈ ಇಡೀ ದ್ವೀಪ ಒಂದು ದಿನದ ಮಟ್ಟಿಗೆ ನಿಮ್ಮದಾಗಲಿದೆಯೆಂದರೆ ಯಾರು ತಾನೇ ಇರಲು ಬಯಸೋದಿಲ್ಲ ಹೇಳಿ.

ಈ ಐಡಿಯಾ ಬಂದಿದ್ದು ಹೇಗೆ?

ಈ ಐಡಿಯಾ ಬಂದಿದ್ದು ಹೇಗೆ?

ಈ ವಿನಿಸ್ ಫಾರ್ಮ್ ಎನ್ನುವುದು ಅರಮ್ ಪೌಲ್ ಅವರ ಪತ್ನಿ ವಿನಿತಾರ ಬರ್ತ್‌ಡೇಗೆ ನೀಡಿರುವ ಸಪ್ರೈಸ್ ಗಿಫ್ಟ್ . ಇದನ್ನು ನಿರ್ಮಿಸಲು ಸಾಕಷ್ಟು ಜನರು ಸಹಕರಿಸಿದ್ದಾರೆ ಎಂದಿದ್ದಾರೆ ಅವರು. ನಂತರ ಇದನ್ನು ಬ್ಯುಸಿನೆಸ್ ಆಗಿ ಬಳಸಿದರೆ ಒಳ್ಳೆದು ಎಂದು ಯೋಚಿಸಿ ಇದನ್ನು ಬ್ಯುಸಿನೆಸ್ ಮಾಡಿಕೊಂಡಿದ್ದಾರೆ.

ಏನೇನಿದೆ ಇದರ ಒಳಗೆ

ಏನೇನಿದೆ ಇದರ ಒಳಗೆ

PC:Challiyan
ಈ ದ್ವೀಪದ ಒಳಗೆ ಒಂದು ಮರದ ಮನೆಯಿದೆ. ಪಕ್ಷೀ ವೀಕ್ಷಣೆ, ಫಿಶ್ಶಿಂಗ್‌ನಂತಹ ಚಟುವಟಿಕೆಗಳೂ ಕೂಡಾ ಇದೆ. ಬೆಚ್ಚಗಿನ ಆತೀಥ್ಯ ಕೂಡಾ ಇದೆ. ವಿನಿಸ್ ಫಾರ್ಮ್ ನಿಮ್ಮಗೆ ಒಂದು ರೀತಿಯ ಅದ್ಭುತ ಅನುಭವ ಹಾಗೂ ಆನಂದವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

2 ಎಕರೆಯಲ್ಲಿದೆ ಈ ದ್ವೀಪ

2 ಎಕರೆಯಲ್ಲಿದೆ ಈ ದ್ವೀಪ

PC:Hindrik
ಒಂದು ಕಡೆ ಸರೋವರ ಇನ್ನೊಂದು ಕಡೆ ನದಿಯಿಂದ ಸುತ್ತುವರಿದಿದೆ. ಸುಮಾರು 2 ಎಕರೆ ಸ್ಥಳದಲ್ಲಿ ಈ ದ್ವೀಪವಿದೆ. ಇಲ್ಲಿ ಎರಡು ದಿನ ಹಾಗೂ ಒಂದು ರಾತ್ರಿ ಕಳೆಯಬಹುದು. ನಿಮಗೆ ಹೆಚ್ಚಿನ ದಿನಗಳ ಬುಕ್ಕಿಂಗ್ ಮಾಡಬೇಕೆಂದಿದ್ದರೆ ಅವರ ಅಧೀಕೃತ ವೆಬ್‌ಸೈಟ್‌ನ್ನು ಭೇಟಿ ನೀಡಿ.

Read more about: island kerala ಕೇರಳ summer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X