• Follow NativePlanet
Share
» »ಭಾರತದಲ್ಲಿರುವ ಈ ನದಿ ದ್ವೀಪಗಳನ್ನು ನೋಡಿದ್ದೀರಾ?

ಭಾರತದಲ್ಲಿರುವ ಈ ನದಿ ದ್ವೀಪಗಳನ್ನು ನೋಡಿದ್ದೀರಾ?

Posted By: Manjula Balaraj Tantry

ನದಿ ದ್ವೀಪವು ಒಂದು ನದಿಯ ಸೌಮ್ಯ ಹರಿವಿನಿಂದ ಸುತ್ತುವರಿದ ಭೂಮಿಯ ಭಾಗವಾಗಿದೆ ಮತ್ತು ಭಾರತವು ಜಗತ್ತಿನ ಅಂತಹ ಒಂದು ದೇಶವಾಗಿದ್ದು ಇದು ಅನೇಕ ಸುಂದರವಾದ ಮತ್ತು ಅದ್ಬುತವಾದ ನದಿ ದ್ವೀಪಗಳನ್ನು ಹೊಂದಿದೆ. ಈ ಕೆಳಗಿನ ಕೆಲವು ನದಿದ್ವೀಪಗಳಿಗೆ ಖಚಿತವಾಗಿಯೂ ಹೆಚ್ಚಿನ ಕಾಳಜಿಯ ಅವಶ್ಯಕತೆಯಿದೆ. ಇವುಗಳ ಸೌಂದರ್ಯತೆಯ ಬಗ್ಗೆ ತಿಳಿದುಕೊಳ್ಳಲು ಇತ್ತೀಗಷ್ಟೇ ಅನ್ವೇಷಿಸಲ್ಪಟ್ಟ ಭಾರತದ ನದಿದ್ವೀಪಗಳ ಬಗ್ಗೆ ತಿಳಿಯಿರಿ.

1. ಭವಾನಿ ದ್ವೀಪ

1. ಭವಾನಿ ದ್ವೀಪ

PC- Krishna Chaitanya Velaga

133 ಎಕರೆಗಳಷ್ಟು ಹರಡಿರುವ ಭವಾನಿ ನದೀ ದ್ವೀಪವು ಅತ್ಯಂತ ದೊಡ್ಡ ನದಿದ್ವೀಪಗಳಲ್ಲೊಂದಾಗಿದ್ದು ಇದು ಸ್ಥಳೀಯರಲ್ಲಿ ಮತ್ತು ಪ್ರವಾಸಿಗರಿಗೆ ಒಂದು ಪ್ರಮುಖ ಕೇಂದ್ರವಾಗಿದೆ. ಇದು ಆಂಧ್ರಪ್ರದೇಶದ ಕೃಷ್ಣ ನದಿ ದಡದಲ್ಲಿದೆ ಮತ್ತು ಕನಕ ದುರ್ಗಾ ದೇವಾಲಯವೆಂದು ಕರೆಯಲಾಗುತ್ತದೆ ಈ ದೇವಾಲಯವು ಭವಾನಿ ದೇವಿಗೆ ಸಮರ್ಪಿತವಾಗಿದೆ. ಈ ದೇವಾಲಯವು ಕೃಷ್ಣ ನದಿಯಿಂದ ಸುತ್ತುವರಿಯಲ್ಪಟ್ಟಿದ್ದು ಇದರ ಪರಿಸರವು ಬೆರಗು ಗೊಳಿಸುತ್ತದೆ ಈ ದ್ವೀಪವು ಶಾಂತಿಯುತ ಮತ್ತು ರೋಮಾಂಚಕವಾಗಿದೆ. ನೀವು ಭವಾನಿ ದ್ವೀಪಕ್ಕೆ ಹತ್ತಿರದಲ್ಲಿರುವ ಮಾನವ ನಿರ್ಮಿತ ಸಣ್ಣ ದ್ವೀಪವನ್ನು ಕೂಡ ಭೇಟಿ ಕೊಡಬಹುದಾಗಿದೆ. ಇಲ್ಲಿಯ ನೈಸರ್ಗಿಕ ಪರಿಸರದಲ್ಲಿ ಆನಂದಿಸುವುದಲ್ಲದೆ ನೀವು ಇಲ್ಲಿ ನಿಮ್ಮ ಸಮಯವನ್ನು ಈ ಪರಿಸರದ ಸುತ್ತ ಮುತ್ತ ವಾಸಿಸುವ ಅನೇಕ ಸುಂದರವಾದ ವರ್ಣರಂಜಿತ ಪಕ್ಷಿಗಳನ್ನು ಕೂಡಾ ಕಾಣಬಹುದಾಗಿದೆ.

2 ದ್ವೀಪ

2 ದ್ವೀಪ

PC- Ramesh39ch

ಕೋಯಂ ನದಿ ಮೇಲಿರುವ ದ್ವೀಪವು ಚೆನ್ನೈ ನಗರದಲ್ಲಿದೆ. 19ನೇ ಶತಮಾನದ ಕಾಲದಲ್ಲಿ ಈ ದ್ವೀಪವು ಕೋಯಮ್ ನದಿ ಮತ್ತು ಇಲಾಂಬೋರ್ ನದಿಯ ವಿಲೀನಗೊಳಿಸಿದ ಪರಿಣಾಮವಾಗಿ ಆಗಿದೆ ಎಂದು ನಂಬಲಾಗುತ್ತದೆ. ನೀವು ಈ ದ್ವೀಪದ ಪರಿಸರದಲ್ಲಿ ಆನಂದಿಸಬಹುದಾದ ಪ್ರಮುಖ ಕೇಂದ್ರಗಳಲ್ಲಿ ಸರ್ ಥೋಮಸ್ ಮುನ್ರೋ ಅವರ ಪ್ರತಿಮೆಯೂ ಒಳಗೊಂಡಿದೆ. ಜನವರಿಯಿಂದ ಮಾರ್ಚ್ ಅಂತ್ಯದವರೆಗೂ ಪ್ರತಿವರ್ಷ ನಡೆಯುವ ಪ್ರದರ್ಶನ ಮತ್ತು ವ್ಯಾಪಾರದ ಪ್ರದರ್ಶನಕ್ಕಾಗಿ ಸ್ಥಳೀಯರಲ್ಲಿ ದ್ವೀಪವು ಅತ್ಯಂತ ಜನಪ್ರಿಯವಾಗಿದೆ. ಆದುದರಿಂದ ಈ ವರ್ಷದ ವಾರ್ಷಿಕ ಉತ್ಸವವು ಮುಗಿಯುದರ ಒಳಗಾಗಿ ಈ ಕಡಿಮೆ ಅನ್ವೇಷಿತ ದ್ವೀಪದ ಕಡೆಗೆ ನಿಮ್ಮ ಪ್ರಯಾಣ ಬೆಳೆಸಿ. ವರ್ಣರಂಜಿತ ದೀಪಗಳ ಬಣ್ಣಗಳು ಸುಂದರವಾದ ಕೋಯಮ್ ನದಿಯ ನೀರಿನಲ್ಲಿ ರಾರಾಜಿಸುವುದು ಖಚಿತವಾಗಿಯೂ ಸಂದರ್ಶಕರ ಮನಸೂರೆಗೊಳಿಸುತ್ತದೆ.

3 ಮನ್ರೋ ದ್ವೀಪ

3 ಮನ್ರೋ ದ್ವೀಪ

PC- Navaneeth Kishor

ನಿಸ್ಸಂದೇಹವಾಗಿಯೂ ಇದು ಭಾರತದ ಒಂದು ಸುಂದರವಾದ ದ್ವೀಪಗಳಲ್ಲೊಂದಾಗಿದೆ. ಮನ್ರೋ ದ್ವೀಪವು ಸ್ವತಃ ಸ್ವರ್ಗವೇ ಸರಿ. ದೇವರ ಸ್ವಂತ ನಾಡಾದ ಕೇರಳದಲ್ಲಿ ನೆಲೆಸಿರುವ ಈ ದ್ವೀಪದಲ್ಲಿ ಕಡಿಮೆ ಯಾವುದೂ ಬಯಸುವಂತಿಲ್ಲ. ನೀವು ಹೊಸತೇನಾದರು ಅನ್ವೇಷಿಸ ಬಯಸುವಿರಾದಲ್ಲಿ ನಿಮ್ಮ ಪ್ರಯಾಣದ ಪಟ್ಟಿಯಲ್ಲಿ ಮನ್ರೋ ದ್ವೀಪವನ್ನು ಸೇರಿಸಿ. ಮುನ್ರೋ ದ್ವೀಪವು ಅಷ್ಟಮುಡಿ ಸರೋವರದ ಮತ್ತು ಕಲ್ಲಾಡ ನದಿಯ ಸಂಗಮದಲ್ಲಿದೆ ಮತ್ತು ಇದು 8 ದ್ವೀಪಗಳ ಸಮೂಹವಾಗಿದೆ. ಈ ಆರಾಮದಾಯಕ ನೀರಿನಲ್ಲಿ ಮಾಡಬಹುದಾದ ಪ್ರಮುಖ ಚಟುವಟಿಕೆಗಳೆಂದರೆ ಬೋಟಿಂಗ್, ಮೀನುಗಾರಿಕೆ ಮತ್ತು ಈಜುವಿಕೆ. ನೀವು ಇಲ್ಲಿ ಹೌಸ್ ಬೋಟ್ ಕ್ರೂಸಸ್ ನಲ್ಲಿಯೂ ಸಹ ಸೌಂದರ್ಯವನ್ನು ಆಸ್ವಾದಿಸಬಹುದು .

4 ಪರುಮಾಲ

4 ಪರುಮಾಲ

PC- Joe Ravi

ಪಂಪಾ ನದಿಯ ಮೇಲೆ ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿರುವ ಪರಮಲಾ ಒಂದು ಸಣ್ಣ ಹಳ್ಳಿ ದ್ವೀಪವಾಗಿದೆ. ದೇವರ ಸ್ವಂತ ದೇಶವಾದ ಸ್ವರ್ಗದ ಛಾಯೆಗಳ ಅಡಿಯಲ್ಲಿ ಬೆಳೆದಿರುವ , ಪರಮಲಾ ದ್ವೀಪವು ಮೋಡಿ ಮತ್ತು ಪ್ರಕೃತಿಯ ಮೂಲ ಸಾರವನ್ನು ಹೊಂದಿರುವ ನೈಸರ್ಗಿಕವಾದ ದ್ವೀಪವಾಗಿದೆ. ಈ ಸಣ್ಣ ಹಾಗೂ ಪ್ರಸಿದ್ದವಾದ ಸುಂದರವಾದ ದ್ವೀಪವು ತನ್ನಲ್ಲಿರುವ ಪರುಮಾಲ ಚರ್ಚ್ ಗೆ ಪ್ರಸಿದ್ದ ವಾಗಿದೆ. ಇದು ಕ್ರೈಸ್ತರ ಒಂದು ಪ್ರಮುಖವಾದ ಯಾತ್ರೀ ತಾಣವಾಗಿದೆ. ಆರ್ಮಾಪೇರುನ್ನಲ್ ನ ವಾರ್ಷಿಕ ಮಹೋತ್ಸವ ಕಾರ್ಯಕ್ರಮವನ್ನು ನವೆಂಬರ್ ತಿಂಗಳಿನಲ್ಲಿ ಈ ಚರ್ಚ ನ ಆವರಣದ ಒಳಗೆ ನಡೆಸಲಾಗುತ್ತದೆ. ಈ ಚರ್ಚ್ ಕ್ರೈಸರಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದ್ದರೂ ಪರುಮಾಳ ದ್ವೀಪದ ಸೌಂದರ್ಯವು ಯಾವಾಗಲೂ ನಿರ್ಲಕ್ಷಿಸಲ್ಪಡುತ್ತದೆ. ವಿಶ್ವಪ್ರಸಿದ್ದವಾದ ಚರ್ಚ್ ಗೆ ಭೇಟಿ ನೀಡುವುದರ ಹೊರತಾಗಿ ನೀವು ನಿಮ್ಮ ಸಮಯವನ್ನು ಇಂತಹ ಅದರ ವಿಸ್ಮಯಕರ ನೀರಿನ ಸೌಂದರ್ಯದಲ್ಲಿ ಕಳೆಯಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ