Search
  • Follow NativePlanet
Share
» »ಮಹಾರಾಷ್ಟ್ರದ ವಿಜಯದುರ್ಗ ಕೋಟೆ ಹೇಗಿದೆ ನೋಡಿ

ಮಹಾರಾಷ್ಟ್ರದ ವಿಜಯದುರ್ಗ ಕೋಟೆ ಹೇಗಿದೆ ನೋಡಿ

ವಿಜಯದುರ್ಗ ಪಟ್ಟಣ ಮತ್ತು ಸಿಂಧುದುರ್ಗ ಜಿಲ್ಲೆಯು, ಮರಾಠಾ ಆಡಳಿತದಲ್ಲಿ ನೌಕಾ ನೆಲೆಯಾಗಿ ಕಾರ್ಯನಿರ್ವಹಿಸಿತ್ತು. ಇಂದಿಗೂ ಕೂಡಾ ಇದು ಬಂದರು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮಹಾರಾಷ್ಟ್ರ ರಾಜ್ಯದಲ್ಲಿರುವ ಸಣ್ಣ ಪಟ್ಟಣ ವಿಜಯದುರ್ಗವು ಭಾರತದ ಕರಾವಳಿಯಲ್ಲಿದೆ. ಇದು ಮುಂಬೈನಿಂದ ಸುಮಾರು 485 ಕಿ.ಮೀ ದೂರದಲ್ಲಿದ್ದು, ಸಿಂಧುದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಇದನ್ನು ಹಿಂದೆ ಜೆರಿಯಾ ಎಂದು ಕರೆಯಲಾಗುತ್ತಿತ್ತು. ಅರೇಬಿಯನ್‌ ಸಮುದ್ರ ಒಂದು ಕಡೆ ಸಹ್ಯಾದ್ರಿ ಪರ್ವತ ಶ್ರೇಣಿ ಇನ್ನೊಂದು ಕಡೆ, ಇಂಥ ಸುಂದರ ಪರಿಸರದಿಂದಾಗಿ ಈ ಪ್ರದೇಶ ಪ್ರವಾಸಿಗರಿಗೆ ಇಷ್ಟವಾಗುತ್ತದೆ.

 ಐತಿಹಾಸಿಕ ಕೋಟೆಗಳು

ಐತಿಹಾಸಿಕ ಕೋಟೆಗಳು

PC: Ravi Vaidyanathan
ವಿಜಯದುರ್ಗ ಪಟ್ಟಣ ಮತ್ತು ಸಿಂಧುದುರ್ಗ ಜಿಲ್ಲೆಯು, ಮರಾಠಾ ಆಡಳಿತದಲ್ಲಿ ನೌಕಾ ನೆಲೆಯಾಗಿ ಕಾರ್ಯನಿರ್ವಹಿಸಿತ್ತು. ಇಂದಿಗೂ ಕೂಡಾ ಇದು ಬಂದರು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೀಚ್‌ಗಳು, ಐತಿಹಾಸಿಕ ಕೋಟೆಗಳು - ಹೀಗೆ ವಿಜಯದುರ್ಗವು ಪ್ರವಾಸಿಗರಿಗೆ ಹಲವು ತಾಣಗಳನ್ನು ಹೊಂದಿದೆ. ಬೀಚ್‌ಗಳು ತೆಂಗಿನ ಮರಗಳ ದಟ್ಟ ಹಸಿರಿನಿಂದ ಆವರಿಸಿದೆ. ಮಾವು ಪ್ಲಾಂಟೇಷನ್‌ಗಳಿದ್ದು, ಬೇಸಿಗೆಯಲ್ಲಿ ಇಡೀ ಸಮುದ್ರ ತೀರವನ್ನು ಮಾವಿನ ಹಣ್ಣಿನ ಸುವಾಸನೆಯು ಹೊಂದಿರುತ್ತದೆ. ಕೆಂಪು ಮರಗಳಿಂದ ಮಾಡಿದ ಮನೆಗಳು ಮತ್ತು ತಾರಸಿಗಳು ಸಮುದ್ರ ತೀರದ ಸೌಂದರ್ಯವನ್ನು ವೃದ್ಧಿಸುತ್ತವೆ.

ವಿಜಯದುರ್ಗ ಕೋಟೆ

ವಿಜಯದುರ್ಗ ಕೋಟೆ

PC: Rehansarang
ವಾಸ್ತುಶಿಲ್ಪದ ಕೌತುಕ ವಿಜಯದುರ್ಗವು ಕೋಟೆಯಿಂದಾಗಿಯೇ ತುಂಬಾ ಜನಪ್ರಿಯ. ಇದನ್ನು ವಿಜಯದ ಕೋಟೆ ಎಂದೂ ಕೂಡಾ ಕರೆಯಲಾಗುತ್ತದೆ. ಮರಾಠಾ ಆಡಳಿತದ ಅವಧಿಯಲ್ಲಿ ಶಿವಾಜಿ ಮಹಾರಾಜನಿಂದ ಇದನ್ನು ಕಟ್ಟಲ್ಪಟ್ಟಿತು. ಸುಮಾರು 300 ವರ್ಷಗಳಿಗಿಂತಲೂ ಹಿಂದೆ, 17ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ಕೋಟೆಯನ್ನು ಗೆರಿಯಾ ಎಂದೂ ಕೂಡಾ ಕರೆಯಲಾಗುತ್ತದೆ. ಇದು ನಾಲ್ಕರಲ್ಲಿ ಮೂರು ಭಾಗಗಳಿಂದ ಸಮುದ್ರವೇ ಸುತ್ತುವರಿದಿರುವ ಪ್ರದೇಶವಾಗಿದೆ. ಪೇಶ್ವೆ ಮತ್ತು ಮರಾಠಾ ಆಡಳಿತದಲ್ಲಿ ಈ ಕೋಟೆಯನ್ನು ಪರಿಗಣಿಸಬಹುದಾಗಿದ್ದು, ವಿದೇಶಿ ಶಕ್ತಿಗಳಿಂದ ಸುರಕ್ಷಿತವಾಗಿರುವುವದಕ್ಕೆ ಎಂತಲೇ ನಿರ್ಮಿಸಿಕೊಂಡ ತಾಣವಾಗಿದೆ ಎಂದು ಹೇಳಬಹುದಾಗಿದೆ. ಕೋಟೆಗೆ ಮೂರು ಸುತ್ತಿನ ಗೋಡೆಗಳಿದ್ದು, ಹಲವು ಟವರ್ ಗಳು ಮತ್ತು ಕಟ್ಟಡಗಳು ಇವೆ.

ಈಸ್ಟರ್ನ್‌ ಗಿಬ್ರಾಲ್ಟರ್

ಈಸ್ಟರ್ನ್‌ ಗಿಬ್ರಾಲ್ಟರ್

PC:Karanjmahajan
ಸುಮಾರು 17 ಎಕರೆಯಷ್ಟು ವಿಶಾಲವಾಗಿದೆ ಈ ಕೋಟೆ. ಬೃಹತ್ತಾದ ಈ ಕೋಟೆಯನ್ನು ನಂತರ ಬ್ರಿಟಿಷರಿಂದ ಆಕ್ರಮಿಸಿಕೊಳ್ಳಲ್ಪಟ್ಟು, ಅಗಸ್ಟಸ್ ಕೋಟೆ ಮತ್ತು ಓಶಿಯನ್‌ ಕೋಟೆ ಎಂದು ನಾಮಾಂಕಿತವಾಗಿತ್ತು. ಶತಮಾನಗಳಷ್ಟು ಹಿಂದಿನ ಈ ಕೋಟೆಯ ವಾಸ್ತುಶಿಲ್ಪ ಕುತೂಹಲಗಳನ್ನು ಕಣ್ತುಂಬಿಕೊಳ್ಳಬಹುದು. ಈ ಕೋಟೆಯು ವಾಸ್ತುಶಿಲ್ಪಶಾಸ್ತ್ರದಲ್ಲೇ ಅತ್ಯಮೋಘವಾಗಿದೆ. ಯಾಕೆಂದರೆ ಇದರ ನಿರ್ಮಾಣದಲ್ಲಿ ಶಿವಾಜಿಯೇ ಹೆಚ್ಚಿನ ಮುತುವರ್ಜಿ ವಹಿಸಿದ್ದ. ಖಾರ್ಪೇತನ್‌ ಬಂದರು ಇದಕ್ಕೆ ಹೊಂದಿಕೊಂಡಂತಿದ್ದು, ದೊಡ್ಡ ದೊಡ್ಡ ಹಡಗುಗಳು ಇದರ ಒಳಗೆ ಬಂದರೆ ಹೊರ ಜಗತ್ತಿಗೆ ಕಾಣಿಸದಂತಿದೆ. ಮರಾಠಾ ರಾಜರಿಂದ ಈ ಬಂದರನ್ನು ಯುದ್ಧ ಹಡಗುಗಳ ನಿರ್ವಹಣೆಗೆ ಬಳಸಲ್ಪಡುತ್ತಿತ್ತು. ಈ ಕೋಟೆಯು ನಂತರದಲ್ಲಿ ಈಸ್ಟರ್ನ್‌ ಗಿಬ್ರಾಲ್ಟರ್ ಎಂದು ಹೆಸರು ಪಡೆದಿತ್ತು.

ವಾಗ್ಜೋತನ್‌ ಬಂದರು

ವಾಗ್ಜೋತನ್‌ ಬಂದರು

PC:Rehansarang
ಅರೇಬಿಯನ್‌ ಸಮುದ್ರದಲ್ಲಿ ನಿರ್ಮಾಣಗೊಂಡ ಈ ಕೋಟೆಯ ಉದ್ದೇಶ ರಕ್ಷಣೆಯದ್ದಾಗಿತ್ತು. ನಾವಲ್‌ ಡಾಕ್‌ನಲ್ಲಿ ಮರಾಠಾ ಯುದ್ಧ ಹಡಗುಗಳನ್ನು ರಿಪೇರಿ ಮಾಡಲಾಗುತ್ತಿತ್ತು. ಇದನ್ನು ವಾಗ್ಜೋತನ್‌ ಬಂದರು ಎಂದು ಕರೆಯಲಾಗುತ್ತಿತ್ತು. ಕೋಟೆಯಿಂದ ಸುಮಾರು ಒಂದೂವರೆ ಕಿಲೋಮೀಟರು ದೂರದಲ್ಲಿದೆ. ಶಿವಾಜಿಯ ಕೇಸರಿ ಬಾವುಟ ಹಾರಿದ ಕೋಟೆಗಳಲ್ಲಿ ಇವೆರಡೇ ಆಗಿದೆ. ಇನ್ನೊಂದು ಎಂದರೆ ತೋರಣ ಕೋಟೆ. ಸುತ್ತಲಿನ ಪ್ರದೇಶದಲ್ಲಿ ಹಲವು ದೇಗುಲಗಳು ಕಾಣಸಿಗುತ್ತವೆ. ಮಾರುತಿಯಿಂದ ಮಹಾಪುರುಷ ಮತ್ತು ಮಹಾದೇವರ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ. ಇಲ್ಲಿ ತುಂಬಾ ಹಳೆಯದಾದ ರಾಮೇಶ್ವರ ದೇವಸ್ಥಾನವನ್ನು ನೀವು ವೀಕ್ಷಿಸಬಹುದು. ಹಿಂದು ಭಕ್ತರಿಗೆ ಇದೊಂದು ತುಂಬಾ ಜನಪ್ರಿಯವಾದ ದೇವಸ್ಥಾನವಾಗಿದೆ.

ಸ್ಥಳೀಯ ರುಚಿ

ಸ್ಥಳೀಯ ರುಚಿ

PC: Ravi Vaidyanathan
ವಿಜಯದುರ್ಗಕ್ಕೆ ಬಂದು ನೀವು ಇಲ್ಲಿನ ಸ್ಥಳೀಯ ರುಚಿಯನ್ನು ಸವಿಯದೇ ಹೋಗುವ ಹಾಗಿಲ್ಲ. ಮಾಲ್ವಾನಿ ಕರಿಯನ್ನು ನೀವು ಸವಿಯಲೇಬೇಕು. ಸೋಲ್‌ ಕಡಿಯನ್ನೂ ಕೂಡಾ ನೀವು ಮಿಸ್‌ ಮಾಡಿಕೊಳ್ಳಬಾರದು. ಮೀನು ಇಷ್ಟಪಡುವವರಾದರೆ, ವಿವಿಧ ರೀತಿಯ ಮೀನುಗಳು ಇಲ್ಲಿ ನಿಮಗೆ ಸಿಗುತ್ತವೆ. ಇಲ್ಲಿನ ಜನ ಆತ್ಮೀಯರಾಗುತ್ತಾರೆ ಮತ್ತು ತುಂಬಾ ಮುತುವರ್ಜಿ ವಹಿಸುತ್ತಾರೆ. ವಸತಿಯು ಇಲ್ಲಿ ನಿಮಗೆ ಸಮಸ್ಯೆಯಾಗಲಾರದು. ಬೇಸಿಗೆಗಾಲದಲ್ಲಿ ನೀವು ವಿಜಯದುರ್ಗಕ್ಕೆ ಪ್ರವಾಸ ಕೈಗೊಳ್ಳುತ್ತೀರಾದರೆ, ಇಲ್ಲಿಯೇ ಬೆಳೆದ ರುಚಿಯಾದ ಮಾವಿನ ಹಣ್ಣನ್ನು ತಿನ್ನುವುದಕ್ಕೆ ಹಿಂಜರಿಯಬೇಡಿ. ಗೇರುಬೀಜ ಫ್ಯಾಕ್ಟರಿಗೆ ಒಮ್ಮೆ ಭೇಟಿಕೊಡಿ ಮತ್ತು ಅಲ್ಲಿ ಹೇಗೆ ಗೇರು ಬೀಜವು ಸಂಸ್ಕರಣಗೊಳ್ಳುತ್ತದೆ ಎಂಬುದನ್ನು ಕಣ್ಣಾರೆ ನೋಡಿ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Rehansarang

ಮುಂಬೈ, ರಾಜಪುರ ಇತ್ಯಾದಿ ಪ್ರಮುಖ ನಗರಗಳಿಂದ ವಿಜಯದುರ್ಗಕ್ಕೆ ಬಸ್‌ ಸೌಲಭ್ಯ ನಿರಂತರವಾಗಿದೆ. ನೀವು ಬಸ್‌ನ ವಿಧಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಮಾಣದಲ್ಲಿ, ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.
ಸಮೀಪದ ರೈಲ್ವೇ ನಿಲ್ದಾಣವು ಕುಡಲ್ ಮತ್ತು ರಾಜಪುರವಾಗಿದೆ. ಸಾಮಾನ್ಯ ರೈಲುಗಳು ಪ್ರತಿದಿನವೂ ಬಹುತೇಕ ಎಲ್ಲಾ ನಗರಗಳಿಂದ, ಪಟ್ಟಣಗಳಿಂದ ಆಗಮಿಸುತ್ತವೆ.
ಗೋವಾದಲ್ಲಿನ ಪಣಜಿ ವಿಮಾನ ನಿಲ್ದಾಣವು ವಿಜಯದುರ್ಗಕ್ಕೆ ಸಮೀಪದ್ದು. ಮುಖ್ಯ ಪಟ್ಟಣದಿಂದ ಇಲ್ಲಿಗೆ ಸುಮಾರು 180 ಕಿ.ಮೀ ದೂರವಿದೆ. ವಿಮಾನ ನಿಲ್ದಾಣದಿಂದ ಮತ್ತು ಬಸ್‌ಗಳ ಮೂಲಕ ವಿಜಯದುರ್ಗಕ್ಕೆ ಆಗಮಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X