Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಜಯದುರ್ಗ » ಹವಾಮಾನ

ವಿಜಯದುರ್ಗ ಹವಾಮಾನ

ವಿಜಯದುರ್ಗವು ಅರೆ ಉಷ್ಣವಲಯದ ವಾತಾವರಣವನ್ನು ಹೊಂದಿದ್ದು ತಾಪಮಾನವು ಬಿಸಿ ಮತ್ತು ತೇವವಾಗಿರುತ್ತದೆ. ವಿಜಯದುರ್ಗದ ಹಲವು ಆಕರ್ಷಣೆಯನ್ನು ವೀಕ್ಷಿಸಲು ಚಳಿಗಾಲವು ಸುಸಮಯ ಎನ್ನಲಾಗಿದೆ.

ಬೇಸಿಗೆಗಾಲ

ಫೆಬ್ರುವರಿಯಿಂದ ಮೇ ತನಕ ವಿಜಯದುರ್ಗದಲ್ಲಿ ಬೇಸಿಗೆಗಾಲವಿರುತ್ತದೆ. ಈ ಸಂದರ್ಭದಲ್ಲಿ ತಾಪಮಾನವು ಗರಿಷ್ಠ 32 °C ಇರುತ್ತದೆ ಹಾಗೂ ಕನಿಷ್ಟ 27°C ಇರುತ್ತದೆ. ಈ ಪ್ರದೇಶಕ್ಕೆ ಬೇಸಿಗೆಯಲ್ಲಿ ಪ್ರವಾಸ ಮಾಡುವುದನ್ನು ಸಲಹೆ ಮಾಡಲಾಗುವುದಿಲ್ಲ.

ಮಳೆಗಾಲ

ಉರಿಯುವ ಬೇಸಿಗೆಕಾಲದಿಂದ ಬದಲಾವಣೆ ಕೋರಿ ಮಳೆಗಾಲವು ಜೂನ್‌ ಮಧ್ಯಭಾಗದಿಂದ ಆರಂಭವಾಗಿ ಅಕ್ಟೋಬರಿನ ಮಧ್ಯಭಾಗಕ್ಕೆ ಮುಗಿಯುತ್ತದೆ. ಈ ಅವಧಿಯಲ್ಲಿ ಸಾಕಷ್ಟು ಮಳೆಯಾಗುತ್ತದೆ. ಈ ಸಂದರ್ಭದಲ್ಲಿ ತಾಪಮಾನವು ಸಾಕಷ್ಟು ಇಳಿಯುತ್ತದೆ ಮತ್ತು ಕೆಲವರಿಗೆ ಈ ವಾತಾವರಣನ ಇಷ್ಟವಾಗುತ್ತದೆ.

ಚಳಿಗಾಲ

ನವೆಂಬರಿನಿಂದ ಮಧ್ಯದಿಂದ ಫೆಬ್ರುವರಿಯ ತನಕ ಚಳಿಗಾಲವಿರುತ್ತದೆ ಇಲ್ಲಿ. ವಿಜಯದುರ್ಗಕ್ಕೆ ಪ್ರವಾಸ ಮಾಡುವುದಕ್ಕೆ ಇದು ಸೂಕ್ತವಾದ ಸಮಯ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಇಲ್ಲಿನ ವಾತಾವರಣ ತಂಪಾಗಿ ಮತ್ತು ಶಾಂತವಾಗಿರುತ್ತದೆ. ಗರಿಷ್ಠ ತಾಪಮಾನವು 26°C ಇರುತ್ತದೆ.