Search
  • Follow NativePlanet
Share
» »ಒಂದೇ ರಾತ್ರಿಯಲ್ಲಿ ದೇವತೆಗಳೇ ನಿರ್ಮಿಸಿದ ದೇವಾಲಯವಿದು...

ಒಂದೇ ರಾತ್ರಿಯಲ್ಲಿ ದೇವತೆಗಳೇ ನಿರ್ಮಿಸಿದ ದೇವಾಲಯವಿದು...

By Sowmyabhai

ನಮ್ಮ ಭಾರತ ದೇಶದಲ್ಲಿ ಕೋಟ್ಯಾಂತರ ದೇವಾಲಯಗಳಿವೆ. ಗಲ್ಲಿ-ಗಲ್ಲಿಯಿಂದ ಹಿಡಿದು ಪುಣ್ಯಕ್ಷೇತ್ರದವರೆವಿಗೂ ಶಕ್ತಿಯುತವಾದ ಹಾಗು ಮಹಿಮಾನ್ವಿತವಾದ ದೇವಾಲಯಗಳು ಇರುವುದನ್ನು ಕಾಣಬಹುದು. ಕಾಶ್ಮೀರದಿಂದ ಕನ್ಯಾಕುಮಾರಿಯವರೆವಿಗೂ ಇರುವ ದೇವಾಲಯಗಳು ತನ್ನದೇ ಆದ ಮಹತ್ವಗಳನ್ನು ಹೊಂದಿರುವ ತೀರ್ಥಕ್ಷೇತ್ರಗಳನ್ನು ಕಾಣಬಹುದು.

ಅದರಲ್ಲಿಯೂ ದೇವಾಲಯಗಳ ನಾಡು ಎಂದೇ ಖ್ಯಾತವಾಗಿರುವ ತಮಿಳುನಾಡು, ತನ್ನ ಅದ್ಭುತವಾದ ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿದೆ. ಕೆಲವು ದೇವಾಲಯಗಳು ರಾಜರು ನಿರ್ಮಾಣ ಮಾಡಿದರೆ, ಇನ್ನು ಕೆಲವು ದೇವಾಲಯಗಳನ್ನು ಜನಸಾಮಾನ್ಯರು ನಿರ್ಮಾಣ ಮಾಡಿರುವುದನ್ನು ಕಾಣಬಹುದು. ಸ್ವತಃ ದೇವತೆಗಳೇ ಒಂದೇ ರಾತ್ರಿಯಲ್ಲಿ ನಿರ್ಮಾಣ ಮಾಡಿರುವ ದೇವಾಲಯದ ಬಗ್ಗೆ ನಿಮಗೆ ಗೊತ್ತೆ?

ಆ ಪವಿತ್ರವಾದ ದೇವಾಲಯವಿರುವುದಾದರು ಎಲ್ಲಿ ಎಂಬುವುದಾದರು ಗೊತ್ತೆ? ಹಾಗಾದರೆ ಬನ್ನಿ ಲೇಖನದ ಮೂಲಕ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯೋಣ.

1.ಒಂದೇ ದಿನದಲ್ಲಿ ದೇವತೆಗಳು ನಿರ್ಮಿಸಿದ ದೇವಾಲಯ

1.ಒಂದೇ ದಿನದಲ್ಲಿ ದೇವತೆಗಳು ನಿರ್ಮಿಸಿದ ದೇವಾಲಯ

PC:YOUTUBE

ಪುರಾತನ ಕಾಲದಿಂದಲೂ ಈ ದೇವಾಲಯವು ಅತ್ಯಂತ ಮಹಿಮಾನ್ವಿತವಾದುದು ಎಂದು ಹೇಳುತ್ತಾರೆ. ಇಲ್ಲಿನ ವಿಶೇಷವೆನೆಂದರೆ, ಇಲ್ಲಿ ನೆಲೆಸಿದ ಸ್ವಾಮಿಗೆ ಸ್ವತಃ ದೇವತೆಗಳೇ ದೇವಾಲಯಗಳನ್ನು ನಿರ್ಮಾಣ ಮಾಡಿದರು ಎಂಬುದು ಪ್ರತೀತಿ. ಹಾಗಾದರೆ ದೇವತೆಗಳ ಕೈಯಲ್ಲಿ ಕಟ್ಟಲ್ಪಟ್ಟ ಆ ದೇವಾಲಯ ಎಲ್ಲಿದೆ ಗೊತ್ತ? ಇಲ್ಲಿ ನೆಲೆಸಿರುವ ಆ ಸ್ವಾಮಿ ಯಾರು? ದೇವಾಲಯದಲ್ಲಿರುವ ಶ್ರೀ ಚಕ್ರ ಸ್ನಾನಗಳು, ಡೋಲೋತ್ಸವಗಳು ಹೇಗೆ ನಡೆಯುತ್ತವೆ ಎಂಬುದನ್ನು ತಿಳಿದುಕೊಳ್ಳೊಣ.

2.ಎಲ್ಲಿದೆ?

2.ಎಲ್ಲಿದೆ?

PC:YOUTUBE

ಈ ಮಹಿಮಾನ್ವಿತವಾದ ದೇವಾಲಯವು ಆಂಧ್ರ ಪ್ರದೇಶ ರಾಜ್ಯದ ಶ್ರೀಕಾಕುಳ ಜಿಲ್ಲೆಯಿಂದ ಕೇವಲ 24 ಕಿ.ಮೀ ದೂರದಲ್ಲಿ ಮಹೇಂದ್ರಗಿರಿಯ ಸಮೀಪದಲ್ಲಿ ಮೇಲಿಯಾಪುಟ್ಟಿ ಮಂಡಲದ ಉತ್ಕಳಾಂಧ್ರ ಸರಿಹದ್ದು ಪ್ರದೇಶದ ಮಹೇಂದ್ರ ತೀರದಲ್ಲಿ ಶ್ರೀ ವೇಣೂ ಗೋಪಾಲ ಸ್ವಾಮಿ ದೇವಾಲಯವಿದೆ. ಇಲ್ಲಿ ತೆಲುಗು, ಒರಿಯಾ ಸಂಸ್ಕøತಿಯಿಂದ ಜೀವನ ಸಾಗಿಸುವ ಕೆಲವು ಗಿರಿವಾಸಿ ಜನರ ಇಷ್ಟ ದೈವವೇ ಈ ರಾಧಾ ಗೋಪಾಲ ಸ್ವಾಮಿ.

3.ಯಾರು ನಿರ್ಮಾಣ ಮಾಡಿದರು?

3.ಯಾರು ನಿರ್ಮಾಣ ಮಾಡಿದರು?

PC:YOUTUBE

ಇನ್ನು 1840 ರಲ್ಲಿ ಮಹಾರಾಜನಾದ ವೀರೇಂದ್ರ ರುದ್ರನು, ತನ್ನ ಪತ್ನಿ ವಿಷ್ಣುಪ್ರಿಯೆಯ ಕೋರಿಕೆಯ ಮೇರೆಗೆ ಈ ದೇವಾಲಯವನ್ನು ನಿರ್ಮಾಣ ಮಾಡಿದನು ಎಂದು ಹೇಳಲಾಗುತ್ತಿದೆ. ಗರ್ಭಾಲಯದಲ್ಲಿ ಕಂಚಿನ ವಿಗ್ರಹಗಳಾದ ರಾಧಾ, ಕೃಷ್ಣರನ್ನು ಆರಾಧಿಸುತ್ತಾರೆ. ಇನ್ನು ಪುರಾಣಕ್ಕೆ ಬಂದರೆ ಇಂತಹ ಮಹತ್ವವುಳ್ಳ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಬೇಕು ಎಂಬ ಸಂಕಲ್ಪ ದೇವತೆಗಳಿಗೆ ಏರ್ಪಡುತ್ತದೆ.

4.ದೇವತೆಗಳು ನಿರ್ಮಾಣ ಮಾಡಿರುವುದು

4.ದೇವತೆಗಳು ನಿರ್ಮಾಣ ಮಾಡಿರುವುದು

PC:YOUTUBE

ಆ ಸಂಕಲ್ಪದ ಪ್ರಕಾರ ಒಂದು ರಾತ್ರಿಯ ಸಮಯದಲ್ಲಿ ದೇವತೆಗಳು ರಹಸ್ಯವಾಗಿ ಮಂದಿರವನ್ನು ನಿರ್ಮಾಣ ಮಾಡಿ ವೇಣು ಗೋಪಾಲ ಸ್ವಾಮಿಯನ್ನು ಪ್ರತಿಷ್ಟಾಪಿಸಿದರಂತೆ. ದ್ವಾರದ ಬಳಿ ಕಟ್ಟುವ ಸಮಯದಲ್ಲಿ ಬೆಳಗಾಗುವುದನ್ನು ಕಂಡು ಯಾರಾದರೂ ತಮ್ಮನ್ನು ನೋಡುತ್ತಾರೆ ಎಂದು ಅಂದುಕೊಂಡು ಅಲ್ಲಿಂದ ಹೊರಟುಬಿಟ್ಟರಂತೆ.

5.ಉತ್ಸವಗಳು

5.ಉತ್ಸವಗಳು

PC:YOUTUBE

ಹಾಗಾಗಿಯೇ ಈ ದೇವಾಲಯದ ಕಟ್ಟಡವು ಅಸಂಪೂರ್ಣವಾಗಿದೆ ಎಂದು ಹೇಳುತ್ತಾರೆ. ಇನ್ನು ಈ ದೇವಾಲಯದ ಪ್ರತಿ ವರ್ಷ ಪಾಲ್ಗುಣಿಯಂದು ಡೋಲೋತ್ಸವವನ್ನು ಸತತ 9 ದಿನಗಳ ಕಾಲ ವಿಜೃಂಬಣೆಯಿಂದ ನಿರ್ವಹಿಸುತ್ತಾರೆ. ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಮುಖ್ಯವಾಗಿ ಕೃಷ್ಣನ ಪರ್ವ ಹಬ್ಬಗಳಂದು ವಿಶೇಷವಾದ ಉತ್ಸವಗಳನ್ನು ಆಚರಿಸಲಾಗುತ್ತದೆ. ಉತ್ಸವದ ವೈಭವವನ್ನು ಕಾಣುವ ಸಲುವಾಗಿ ಕೇವಲ ಆಂಧ್ರ ಪ್ರದೇಶ ರಾಜ್ಯದಿಂದಲೇ ಅಲ್ಲದೇ, ಒರಿಸ್ಸಾ ರಾಜ್ಯದಿಂದಲೂ ಕೂಡ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.

6.ಪಾಪ ಪರಿಹಾರ

6.ಪಾಪ ಪರಿಹಾರ

PC:YOUTUBE

ಉತ್ಸವಗಳ ಸಮಯದಲ್ಲಿ ದೇವಾಲಯದ ಪುರೋಹಿತರು ವೇಣು ಗೋಪಾಲ ಸ್ವಾಮಿಯನ್ನು ನದಿಗೆ ಕರೆದುಕೊಂಡು ಹೋಗಿ ಸ್ನಾನವನ್ನು ಮಾಡಿಸುತ್ತಾರೆ. ಇದನ್ನು ಶ್ರೀ ಚಕ್ರ ಸ್ನಾನ ಎಂದು ಕರೆಯುತ್ತಾರೆ. ಒಂದು ಕಡೆ ವೇಣು ಗೋಪಾಲ ಸ್ವಾಮಿಯನ್ನು ಪುರೋಹಿತರು ಸ್ನಾನ ಮಾಡಿಸುತ್ತಿದ್ದರೆ, ಇನ್ನೊಂದು ಕಡೆ ಭಕ್ತರು ಆ ನದಿಯಲ್ಲಿ ಇಳಿದು ಸ್ನಾನವನ್ನು ಆಚರಿಸುತ್ತಾರೆ. ಹೀಗೆ ಸ್ನಾನ ಮಾಡುವುದರಿಂದ ತಮ್ಮ ಪಾಪಗಳು ನಾಶವಾಗುತ್ತವೆ ಎಂಬುದು ಭಕ್ತರ ಪ್ರಬಲವಾದ ನಂಬಿಕೆಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more