Search
  • Follow NativePlanet
Share
» »ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಹೋದ್ರೆ ದೋಷ ಪರಿಹಾರವಾಗುತ್ತಂತೆ!

ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಹೋದ್ರೆ ದೋಷ ಪರಿಹಾರವಾಗುತ್ತಂತೆ!

ನಮ್ಮ ದೇಶದಲ್ಲಿ ಅನೇಕ ದೇವಿ, ದೇವತೆಯರ ದೇವಾಲಯಗಳು ಇವೆಯೋ ಹಾಗೆಯೇ ಅನೇಕ ಗರುಡ ದೇವಾಲಯಗಳೂ ಇವೆ. ಪ್ರತಿಯೊಂದಕ್ಕೂ ಒಂದೊಂದು ವಿಶೇಷತೆ ಇರುತ್ತದೆ. ಇಂದು ನಾವು ಅಂತಹದ್ದೇ ಒಂದು ವಿಶೇಷ ಗರುಡ ದೇವಾಲಯದ ಬಗ್ಗೆ ಹೇಳ ಹೊರಟಿದ್ದೇವೆ. ಹಾಗಾದರೆ ಬನ್ನಿ ಆ ವಿಶೇಷ ದೇವಾಲಯ ಯಾವುದು ಅನ್ನೋದನ್ನು ತಿಳಿಯೋಣ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

PC: NithinSantosh

ತಮಿಳುನಾಡಿನ ಚೆನ್ನೈನ ತಿರುವಳ್ಳುರು ಸಮೀಪದಲ್ಲಿ ಗರುಡನ ದೇವಾಲಯವೊಂದಿದೆ. ಇದನ್ನು ವಿನವರಾಯ ಪೆರುಮಳ್ ದೇವಸ್ಥಾನ ಎನ್ನುತ್ತಾರೆ. ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

 ವಿಶೇಷತೆ ಏನು?

ವಿಶೇಷತೆ ಏನು?

PC: Ms Sarah Welch

ಈ ದೇವಸ್ಥಾನದ ವಿಶೇಷತೆ ಏನೆಂದರೆ ಹಲ್ಲಿದೋಷ ನಿವಾರಣೆಯಾಗುತ್ತದಂತೆ. ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಬಂದು ಪ್ರಾರ್ಥೀಸಿದರೆ ದೋಷ ಪರಿಹಾರವಾಗುತ್ತದೆ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ದೊರೆಯುತ್ತದೆ , ನಾಗದೋಷ ಪರಿಹಾರವಾಗುತ್ತದೆ ಎನ್ನಲಾಗುತ್ತದೆ.

ಇತಿಹಾಸ

ಇತಿಹಾಸ

ಈ ದೇವಸ್ಥಾನವಿದ್ದ ಊರಿನಲ್ಲಿ ಹಿಂದೊಮ್ಮೆ ರಾಜ ನಗರ ಸಮೀಕ್ಷೆಗೆ ಹೋಗಿರುತ್ತಾನೆ. ದಾರಿ ಮಧ್ಯೆ ರಾಜನಿಗಾಗಿ ತಂದಿದ್ದ ಆಹಾರವೆಲ್ಲಾ ಮುಗಿದುಹೋಗುತ್ತದೆ. ಆಗ ಈ ದೇವಸ್ಥಾನಕ್ಕೆ ಬಂದು ಏನಾದರೂ ಆಹಾರವಿದೆಯೋ ಎಂದು ಕೇಳಿದಾಗ ದೇವಸ್ಥಾನವ ಅರ್ಚಕರು ದೇವರಿಗೆ ಅರ್ಪಿಸಿದ್ದ ಆಹಾರವನ್ನು ನೀಡುತ್ತಾರೆ. ಕ್ಷಾಮದಿಂದಾಗಿ ಅಲ್ಲಿನ ಜನರಿಗೂ ಆಹಾರವಿಲ್ಲದಂತಾಗಿತ್ತು. ಅಲ್ಲಿನ ಜನರ ಸ್ಥಿತಿಯನ್ನು ಅರಿತ ರಾಜ ಧನ ಕನಕಗಳನ್ನು ದೇವಸ್ಥಾನಕ್ಕೆ ನೀಡಿದನು ಎನ್ನಲಾಗುತ್ತದೆ.

ಭಕ್ತಿಯಿಂದ ಪ್ರಾರ್ಥಿಸಿ

ಭಕ್ತಿಯಿಂದ ಪ್ರಾರ್ಥಿಸಿ

PC: Akash.nakka

ಸಂತಾನ ಪಡೆಯಬೇಕೆಂದಿರುವವರು ಈ ಮಂದಿರಕ್ಕೆ ಬಂದು ಭಕ್ತಿಯಿಂದ ಪ್ರಾರ್ಥಿಸಿದರೆ ಅವರ ಇಷ್ಟ ಈಡೇರುತ್ತದೆ. ಹಾಗೆಯೇ ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿದರೆ ಹಲ್ಲಿ ದೋಷದಿಂದ ಮುಕ್ತರಾಗುತ್ತಾರೆ. ನಾಗದೋಷ ಪರಿಹಾರವಾಗುತ್ತದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುತ್ತದೆ ಎನ್ನಲಾಗುತ್ತದೆ.

ಏನೆಲ್ಲಾ ದೇವರಿಗೆ ಅರ್ಪಿಸಲಾಗುತ್ತದೆ

ಏನೆಲ್ಲಾ ದೇವರಿಗೆ ಅರ್ಪಿಸಲಾಗುತ್ತದೆ

PC: Ssriram mt

ತಮ್ಮ ಮನೋಕಾಮನೆ ಈಡೇರಿದ್ದಲ್ಲಿ ಜನರು ಈ ದೇವರಿಗೆ ಪಟ್ಟು ಸೀರೆಯನ್ನು, ಹಣವನ್ನು ಅರ್ಪಿಸುತ್ತಾರೆ. ಅನ್ನದಾನವನ್ನು ಏರ್ಪಡಿಸುತ್ತಾರೆ. ಈ ದೇವಸ್ಥಾನಕ್ಕೆ ಅನೇಕರು ಏನಾದರೂ ಮನೋಕಾಮನೆಯನ್ನು ಇಟ್ಟುಕೊಂಡೇ ಬರುತ್ತಾರೆ.

ಯಾವಾಗ ತೆರೆದಿರುತ್ತದೆ?

ಯಾವಾಗ ತೆರೆದಿರುತ್ತದೆ?

PC:Ssriram mt

ದೇವಸ್ಥಾನವು ಭಕ್ತರ ದರ್ಶನಕ್ಕಾಗಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 11 ಗಂಟೆ ವರೆಗೆ ತೆರೆದಿರುತ್ತದೆ. ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ತೆರೆದಿರುತ್ತದೆ. ಶನಿವಾರ ವಿಶೇಷ ಪೂಜೆಯನ್ನ ಏರ್ಪಡಿಸಲಾಗುತ್ತದೆ. ಈ ದೇವಾಲಯದಲ್ಲಿ ತಿರುಓಣಂ ಹಾಗೂ ವೈಕುಂಠ ಏಕಾದಶೀಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಇನ್ನಿತರ ದೇವರುಗಳು

ಇನ್ನಿತರ ದೇವರುಗಳು

ಇತರ ದೇವಸ್ಥಾನಗಳಲ್ಲಿ ಇರುವಂತೆ ಇಲ್ಲಿಯೂ ಇತರ ದೇವರುಗಳೂ ಇದ್ದಾರೆ. ಈ ದೇವಸ್ಥಾನದಲ್ಲಿ ಗರುಡಾಳ್ವರ್‌ನ್ನು ಹೊರತುಪಡಿಸಿ ಇನ್ನೂ ಕೆಲವು ದೇವರ ಸನ್ನಿಧಿಗಳಿವೆ. ಇಲ್ಲಿ ಪೆರುಮಾಳ್‌, ಕನಕವಲ್ಲಿ ಅಮ್ಮ, ಶ್ರೀದೇವಿ, ಭೂದೇವಿ, ರಾಮಾನುಜರ ಮೂರ್ತಿಗಳೂ ಇವೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಚೆನ್ನೈನ ವಿನವರಾಯ ಪೆರುಮಳ್ ದೇವಸ್ಥಾನಕ್ಕೆ ಹೋಗಬೇಕಾದರೆ ತಿರುವಳ್ಳುರು-ತಾಮರೈಪಾಕಂ-ಕೊಡುವಲ್ಲಿ ರಸ್ತೆ ಮೂಲಕ 30 ಕಿ.ಮೀ ಸಾಗಬೇಕು.
ವಿಮಾನದ ಮೂಲಕ ಹೋಗುವುದಾದರೆ ಸಮೀಪದ ಏರ್‌ಪೋರ್ಟ್ ಚೆನ್ನೈ ಏರ್‌ಪೋರ್ಟ್. ಇಲ್ಲಿಗೆ ರೈಲಿನ ವ್ಯವಸ್ಥೆಯೂ ಇದೆ. ಬಸ್‌ ಮೂಲಕವೂ ಹೋಗಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+