Search
  • Follow NativePlanet
Share
» »ಹಳೆಯ ಬಾಂಬೆಯ ಬೊಂಬಾಟ್ ಚಿತ್ರಗಳು

ಹಳೆಯ ಬಾಂಬೆಯ ಬೊಂಬಾಟ್ ಚಿತ್ರಗಳು

By Vijay

ಪ್ರಸ್ತುತ ಮುಂಬೈ ಎಂದು ಕರೆಯಲ್ಪಡುವ ಭಾರತದ ನಾಲ್ಕು ಮಹಾನಗರಗಳ ಪೈಕಿ ಒಂದಾದ ಹಿಂದಿನ ಬಾಂಬೆ ನಗರವು ಇಂದು ದೇಶದ ಅತಿ ಜನನಿಬಿಡ ನಗರವಾಗಿದೆ. ದೇಶದ "ಆರ್ಥಿಕ ರಾಜಧಾನಿ", "ಹಿಂದಿ ಚಲನಚಿತ್ರಗಳ ತಾಯ್ನಾಡು", "ಕನಸುಗಳ ಮಾಯಾ ಲೋಕ" ಎಂಬೆಲ್ಲಾ ಪಟ್ಟಗಳನ್ನು ಹೊಂದಿರುವ ಮುಂಬೈ ಪ್ರವಾಸೋದ್ಯಮದಲ್ಲೂ ಸಹ ಹೆಚ್ಚು ಜನಪ್ರೀಯತೆಗಳಿಸಿದೆ.

ಮರಾಠಿ ಸಂಸ್ಕೃತಿ, ಸಂಪ್ರದಾಯಗಳ ತವರಾಗಿರುವ ಮಹಾರಾಷ್ಟ್ರ ರಾಜ್ಯದ ರಾಜಧಾನಿ ನಗರವಾದ ಮುಂಬೈ ಐತಿಹಾಸಿಕವಾಗಿಯೂ ಶ್ರೀಮಂತಿಕೆಯನ್ನು ಹೊಂದಿರುವ ನಗರವಾಗಿದೆ. ಭಾರತದ ಅದೆಷ್ಟೊ ಪಟ್ಟಣಗಳು, ಗ್ರಾಮಗಳು, ಊರು ಕೇರಿಗಳು ಇನ್ನೂ ಹೊರಜಗತ್ತಿಗೆ ತೆರೆದುಕೊಳ್ಳುವ ಸಂದರ್ಭದಲ್ಲಿಯೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಲೆ ಮುಂಬೈನಲ್ಲಿ ನಡೆಯತೊಡಗಿದ್ದವು.

ವಿಶೇಷ ಲೇಖನ : ಮೋಡಿ ಮಾಡುವ ಹಳೆಯ ಬೆಂಗಳೂರು

ಇಂದು ನೋಡುವ ಮುಂಬೈ ನಗರವು 19 ನೇಯ ಶತಮಾನದ ಸಂದರ್ಭದಲ್ಲಿ ಹೇಗಿತ್ತೆಂಬುದನ್ನು ಒಮ್ಮೆ ನೋಡಿದಾಗ ಅಚ್ಚರಿ, ಆಶ್ಚರ್ಯಗಳಾಗುವುದು ಸಹಜ. ವಿಶಾಲವಾದ ಬಯಲು ಪ್ರದೇಶಗಳು, ವಾಹನಗಳ ಓಡಾಟ ಇಲ್ಲದಿರುವುದು, ಜನ ದಟ್ಟನೆ ಇಲ್ಲದಿರುವುದು, ಅಸಂಖ್ಯಾತ ಗಿಡ ಮರಗಳು ಇವೆಲ್ಲವನ್ನು ನೋಡಿದಾಗ "ಅಬ್ಬಾ...ಮುಂಬೈ ಹೀಗಿತ್ತೆ?" ಎಂದು ಮೂಗಿನ ಮೇಲೆ ನೀವೇ ಬೆರಳಿಡುತ್ತೀರಿ.

ಹೌದು ಮುಂಬೈ ನಗರವನ್ನು ನೋಡಿದವರು, ಅಲ್ಲಿ ವಾಸಿಸುತ್ತಿರುವವರು, ಅಲ್ಲಿನ ಆಕರ್ಷಣೆಗಳ ಕುರಿತು ತಿಳಿದವರು ಪ್ರಸ್ತುತ ಲೇಖನದ ಮೂಲಕ ಹಳೆಯ ಮುಂಬೈ ನಗರದ ಕೆಲವು ಆಯ್ದ ಚಿತ್ರಗಳ ಪ್ರವಾಸ ಮಾಡಿದಾಗ ಖಂಡಿತವಾಗಿಯೂ ಅಚ್ಚರಿ ಪಡಬಹುದು. ಇನ್ನೇಕೆ ತಡ ಹಳೆಯ ಮುಂಬೈ ನಗರದ ಮಾಸದ ನೆನಪುಗಳನ್ನು ಚಿತ್ರಗಳ ಮೂಲಕ ನೋಡುತ್ತ ಮತ್ತೆ ನಿಮ್ಮ ಸ್ಮೃತಿ ಪಟಲದಲ್ಲಿ ಹಚ್ಚ ಹಸಿರಾಗುವಂತೆ ಮಾಡಿಕೊಳ್ಳಿ.

ಲೇಖನದಲ್ಲಿ ಬಳಸಲಾದ ಪ್ರತಿ ಚಿತ್ರಗಳಿಗೆ ಕೃಪೆ : commons.wikimedia

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ನಿಜ ಹೇಳಬೇಕೆಂದರೆ ಮುಂಬೈಗೆ ಬಾಂಬೆ ಎಂಬ ಹೆಸರು ಬರಲು ಒಂದು ರೊಚಕವಾದ ಹಿನ್ನಿಲೆಯಿದೆ. ಮುಂಬೈ ಮೂಲತಃ ಏಳು ದ್ವೀಪಗಳನ್ನು ಹೊಂದಿದ್ದ ಪ್ರದೇಶ. 16 ನೇಯ ಶತಮನದಲ್ಲಿ ಇಲ್ಲಿಗೆ ಕಾಲಿಟ್ಟ ಪೋರ್ಚುಗೀಸರು ಈ ಪ್ರದೇಶವನ್ನು ನೋಡಿ "ಬೊಮ್ ಬಾಹಿಯಾ" ಎಂದು ಕರೆದರು. ಪೋರ್ಚುಗೀಸ್ ಭಾಷೇಯಲ್ಲಿ ಬೊಮ್ ಎಂದರೆ ಉತ್ತಮ ಎಂದು ಹಾಗೂ ಬಾಹಿಯಾ ಎಂದರೆ ಬೇ ಅಥವಾ ಕೊಲ್ಲಿ ಪ್ರದೇಶವೆಂದು ಅರ್ಥ ಬರುತ್ತದೆ. ಈ ಪದವೆ ಮುಂದೆ ಕಾಲಾಂತರದಲ್ಲಿ ಬೊಂಬೆ ಅಥವಾ ಬಾಂಬೆ ಎಂದಾಯಿತು. ಮಲಬಾರ್ ಗುಡ್ಡದ ಬುಡದಿಂದ ಮುಂಬೈನ ಬ್ಯಾಕ್ ಬೇ ಪ್ರದೇಶ. 1870 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈ ಬಂದರು ಪ್ರದೇಶದಲ್ಲಿ ಬೀಡು ಬಿಟ್ಟಿರುವ ಮಧ್ಯಮ ಗಾತ್ರದ ದೋಣಿಗಳು. 1870 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈ ಬಂದರು ಪ್ರದೇಶದಲ್ಲಿದ್ದ ಲೈಟ್ ಹೌಸ್. 1874 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಪ್ರಸ್ತುತ ಮುಂಬೈ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಉನ್ನತ ಶಿಕ್ಷಣಕ್ಕೆ ಹೆಸರಾದ ಹಾಗೂ ಮುಂಬೈನ ಅತಿ ಹಳೆಯ ಕಾಲೇಜುಗಳ ಪೈಕಿ ಒಂದಾದ ಎಲ್ಫಿನ್ ಸ್ಟೋನ್ ಕಾಲೇಜು. 1870 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

1870 ರ ಸಂದರ್ಭದ ಬಾಂಬೆ ವಿಶ್ವವಿದ್ಯಾಲಯದ ಕಟ್ಟಡಗಳು.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಎಲ್ಫಿನ್ ಸ್ಟೋನ್ ವೃತ್ತ. 1870 ರ ಸಂದರ್ಭದಲ್ಲಿ. ಈ ವೃತ್ತದ ಸುತ್ತು ಮುತ್ತಲು ಹಲವಾರು ಬ್ಯಾಂಕುಗಳನ್ನು ಕಾಣಬಹುದಾಗಿದೆ. ಹಿಂದೆ ಈ ಒಟ್ಟಾರೆ ಪ್ರದೇಶವನ್ನು ಬಾಂಬೆ ಗ್ರೀನ್ ಎಂಬ ಹೆಸರಿನಿಂದ ಕರೆಯುತ್ತಿದ್ದರು.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಎಲ್ಫಿನ್ ಸ್ಟೋನ್ ವೃತ್ತದಲ್ಲಿರುವ ಟೌನ್ ಹಾಲ್. 1905 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈ ನಗರವನ್ನು ಠಾಣೆ ಪ್ರದೇಶದೊಂದಿಗೆ ಬೆಸೆಯುತ್ತಿದ್ದ ಸೇತುವೆ. ದಪೂರಿ ಸೇತುವೆ ಎಂದು ಆಗ ಇದು ಕರೆಯಲ್ಪಡುತ್ತಿತ್ತು. 1855 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈ ನಗರದಲ್ಲಿ ಸಂಚಾರಿ ಮಾಧ್ಯಮಗಳಾಗಿದ್ದ ಎತ್ತಿನ ಬಂಡಿ. 1870 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಹಾರ್ನಿಮನ್ ವೃತ್ತ ಹಾಗೂ ಉದ್ಯಾನ. ಇದು ಬಾಂಬೆ ಗ್ರೀನ್ ಎಂಬ ಹೆಸರಿನಿಂದಲೆ ಕರೆಯಲ್ಪಡುತ್ತಿತ್ತು. ವಿಶಾಲವಾದ ಉದ್ಯಾನದ ಹಾಗೂ ಹಿನ್ನಿಲೆಯಲ್ಲಿ ಸಂತ ಥಾಮಸ್ ರವರ ಕ್ಯಾಥೆಡ್ರಲ್.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಬಾಂಬೆ ಬಂದರಿನಲ್ಲಿ ಉಣ್ಣೆಗಳ ದಾಸ್ತಾನು. 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮಲಬಾರ್ ಬೆಟ್ಟದಿಂದ ಬಾಂಬೆ ಕೊಲ್ಲಿ ಪ್ರದೇಶದ ವಿಹಂಗಮ ನೋಟ. 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮಲಬಾರ್ ಬೆಟ್ಟದಿಂದ ಸೇಂಟ್ ಕ್ಸೇವಿಯರ್ ನ ನೋಟ ಅದ್ಭುತ. 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮಲಬಾರ್ ವೀಕ್ಷಣಾ ತಾಣ. ದೂರದಲ್ಲಿ ಕಾಣುತ್ತಿರುವುದು ಸರ್ಕಾರಿ ವಸತಿಗೃಹ. ಆ ಸಮಯದಲ್ಲಿ ಮುಂಬೈನ ಮಲಬಾರ್ ಪ್ರದೇಶವು ಹೆಚ್ಚಿನ ಬೇಡಿಕೆಯುಳ್ಳ ಪ್ರದೇಶವಾಗಿತ್ತು. 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಬಾಂಬೆ ಕೋಟೆ ಪ್ರದೇಶದಲ್ಲಿರುವ ಒಂದು ರ್ಸತೆ ಬೀದಿ. 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಇಂದು ಪ್ರಖ್ಯಾತ ಪ್ರವಾಸಿ ತಾಣವಾಗಿರುವ ಎಲಿಫಂಟಾ ಗುಹೆಗಳಿರುವ ನಡುಗಡ್ಡೆ ಪ್ರದೇಶ. 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ದಕ್ಷಿಣ ಮುಂಬೈನ ಮಲಬಾರ್ ಗುಡ್ಡದ ಬಳಿಯಿರುವ ವಾಲ್ಕೇಶ್ವರ ಎಂಬ ಗ್ರಾಮದಲ್ಲಿರುವ ವಾಲ್ಕೇಶ್ವರ ಶಿವನ ದೇವಸ್ಥಾನ. 1860 ರ ಸಂದರ್ಭದಲ್ಲಿ. ಇದನ್ನು ಬಾಣ ಗಂಗಾ ದೇವಸ್ಥಾನ ಎಂದೂ ಸಹ ಕರೆಯುತ್ತಾರೆ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ದಂತ ಕಥೆಯಂತೆ ರಾಮನು ಅಯೋಧ್ಯೆಯಿಂದ ಲಂಕೆಗೆ ತೆರಳುವಾಗ ಈ ಸ್ಥಳಕ್ಕೆ ಬಂದಿದ್ದ ಹಾಗೂ ಇಲ್ಲಿ ದೈವಾದೇಶದಂತೆ ಅವನು ಶಿವನನ್ನು ಪೂಜಿಸಬೇಕಾಗಿತ್ತು. ಅದಕ್ಕಾಗಿ ಲಕ್ಷ್ಮಣನನ್ನು ಮೂರ್ತಿ ತರಲು ಹೇಳಿ ಕಳುಹಿಸಿದ. ಬಹಳ ಹೊತ್ತಾದರೂ ಲಕ್ಷ್ಮಣನು ಮರಳದಿದ್ದಾಗ ಬೇಸತ್ತ ರಾಮ ಮರಳಿನಿಂದಲೆ ತಾನೆ ಸ್ವತಃ ಶಿವಲಿಂಗ ತಯಾರಿಸಿ ಪೂಜೆಗೈದ. ಸಂಸ್ಕೃತದಲ್ಲಿ ವಾಲುಕ ಎಂದರೆ ಮರಳು/ಉಸುಕು. ಆದ್ದರಿಂದ ಈ ಸ್ಥಳಕ್ಕೆ ವಾಲುಕ ಈಶ್ವರ ಅಂದರೆ ವಾಲ್ಕೇಶ್ವರ ಎಂಬ ಹೆಸರು ಬಂದಿತು. 1893 ರ ಸಮಯದಲ್ಲಿ.

ಚಿತ್ರಕೃಪೆ: The British Library

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಆ ಕಥೆಯು ಮುಂದುವರೆದಂತೆ, ರಾಮನಿಗೆ ತುಂಬಾ ನೀರಡಿಕೆಯಾಗಿ ಕುಡಿಯಲು ನೀರನ್ನು ಹುಡುಕಿದ. ಆದರೆ ಸಮುದ್ರದ ನೀರಿನ ಹೊರತಾಗಿ ಏನೂ ಸಿಗಲಿಲ್ಲ. ಆದ್ದರಿಂದ ರಾಮ ತನ್ನ ಬತ್ತಳಿಕೆಯಿಂದ ಬಾಣವನ್ನು ತೆಗೆದು ಭೂಮಿಗೆ ಬಿಟ್ಟು ಗಂಗೆಯು ಉದ್ಭವವಾಗುವಂತೆ ಮಾಡಿದ. ಇದರಿಂದ ಇಲ್ಲಿರುವ ಆ ಕೊಳವನ್ನು ಬಾಣಗಂಗಾ ಕೊಳ/ಕೆರೆ ಎಂದು ಕರೆಯುತ್ತಾರೆ. 1855 ರ ಸಂದರ್ಭದಲ್ಲಿ.

ಚಿತ್ರಕೃಪೆ: Johnson and Henderson

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಬಾಂಬೆ ಕಾಟನ್ ಮಾರ್ಕೆಟ್ ಅಥವಾ ಮುಂಬೈನ ಹತ್ತಿ ಮಾರುಕಟ್ಟೆ 1869 ರಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈ ನಗರದ ಒಂದು ಪಾಕ್ಷಿಕ ನೋಟ. 1880 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈನ ಮಲಬಾರ್ ಗುಡ್ಡದ ಬುಡದಲ್ಲಿ ತಲೆ ಎತ್ತಿ ನಿಂತಿರುವ ವಸತಿ ಪ್ರದೇಶ. 1880 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈ ಕಡಲ ತೀರದ ನೋಟ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: SMU Central University Libraries

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ಒಂದು ಪುರಾತನ ದೇವಸ್ಥಾನ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: SMU Central University Libraries

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಕೊಲಾಬಾ ಪ್ರದೇಶದಲ್ಲಿರುವ ಚಿಕ್ಕದೊಂದು ಕೋಟೆಯ ಕಟ್ಟಡ. ಬ್ರಿಟೀಷರು ಇದನ್ನು ಜೈಲನ್ನಾಗಿ ಅಂದು ಬಳಸುತ್ತಿದ್ದರು.

ಚಿತ್ರಕೃಪೆ: SMU Central University Libraries

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈನ ಅಪೊಲೊ ಬೀದಿ, 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈನಲ್ಲಿರುವ ಬಾಂಬೆ ಕ್ಯಾಥೆಡ್ರಲ್, 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

1860 ರ ಸಂದರ್ಭದಲ್ಲಿ ಬಾಂಬೆಯಲ್ಲಿ ಅಂದಿನ ಸಮಯಕ್ಕೆ ತಕ್ಕಂತೆ ಕೆಲವು ಐಷಾರಾಮಿ ಹೋಟೆಲುಗಳಿದ್ದವು. ಅವುಗಳಲ್ಲಿ ವ್ಯಾಟ್ಸನ್ ಹೋಟೆಲ್ ಸಹ ಒಂದು. ಮುಂಬೈನ ಒಂದು ನೋಟ ಅದೇ ವ್ಯಾಟ್ಸನ್ ಹೋಟೆಲ್ ಬಾಲ್ಕನಿಯಿಂದ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಅಂದಿನ ಬಾಂಬೆ ಪಟ್ಟಣದ ಒಂದು ವಿಹಂಗಮ ನೋಟ. 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಬೈಕುಲ್ಲಾ ಹೋಟೆಲ್, ಬಾಂಬೆ. 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈನ ಕ್ರಾವ್ ಫೋರ್ಡ್ ಮಾರುಕಟ್ಟೆ. 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಬಾಂಬೆ ಬಂದರಿನಲ್ಲಿ ನಿಂತ ಹಡಗಿನಲ್ಲಿ ಕೆಲಸ ನಿರತ ಸಿಬ್ಬಂದಿ ವರ್ಗ. 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈನಲ್ಲಿರುವ ವಿಕ್ಟೋರಿಯಾ ಉದ್ಯಾನಕ್ಕೆ ಪ್ರವೇಶ ದ್ವಾರ. 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈನಲ್ಲಿರುವ ಜಿ ಪಿ ಒ ಅಥವಾ ಪ್ರಧಾನ ಅಂಚೆ ಕಚೇರಿಯ ಕಟ್ಟಡ. 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈ ಬಳಿಯಿರುವ ಪ್ರಖ್ಯಾತ ಪ್ರವಾಸಿ ತಾಣವಾದ ಖಂಡಾಲಾ ಪ್ರದೇಶ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: SMU Central University Libraries

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈ ಬಳಿಯಿರುವ ಪ್ರಖ್ಯಾತ ಪ್ರವಾಸಿ ತಾಣವಾದ ಲೋಣಾವಲಾ ಹಾಗೂ ಅಲ್ಲಿರುವ ರೈಲು ನಿಲ್ದಾಣ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: SMU Central University Libraries

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈನಲ್ಲಿರುವ ಸರ್ಕಾರಿ ಆಡಳಿತ ಕಚೇರಿಯ ಕಟ್ಟಡ. 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಅಂದಿನ ಬಾಂಬೆಯಲ್ಲಿದ್ದ ಗೋವಾಲ್ ಕೆರೆ. 1860 ರ ಸಂದರ್ಭದಲ್ಲಿ.

19 ನೇಯ ಶತಮಾನದ ಮುಂಬೈ :

19 ನೇಯ ಶತಮಾನದ ಮುಂಬೈ :

ಮುಂಬೈನ ಬ್ರೀಚ್ ಕ್ಯಾಂಡಿ ಪ್ರದೇಶದ ಬಳಿಯಿರುವ ಪ್ರಖ್ಯಾತ ಮಹಾ ಲಕ್ಷ್ಮಿ ದೇವಾಲಯ. 1860 ರ ಸಂದರ್ಭದಲ್ಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X