Search
  • Follow NativePlanet
Share

ಠಾಣೆ - ಮಹಾರಾಷ್ಟ್ರದ ಲೇಕ್ ಸಿಟಿ

41

ಮಹಾರಾಷ್ಟ್ರದ ಒಂದು ಪ್ರಮುಖ ಜಿಲ್ಲೆ ಠಾಣೆ. ಇದು ಕೆರೆಗಳ ನಗರಿ ಅಂತಲೂ ಜನಪ್ರಿಯವಾಗಿದೆ. ಸರಿಸುಮಾರು 150 ಚದರ್‌ ಕಿ.ಮೀ. ವಿಸ್ತಾರವನ್ನು ಜಿಲ್ಲೆ ವ್ಯಾಪಿಸಿಕೊಂಡಿದೆ. 2.4 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಠಾಣೆಯು ಶ್ರೀ ಸ್ಥಾನಕ ಅಂತಲೂ ಕರೆಸಿಕೊಳ್ಳುತ್ತದೆ. ಮುಂಬಯಿಯ ಈಶಾನ್ಯ ಭಾಗದಲ್ಲಿ ಬರುವ ಈ ಜಿಲ್ಲೆ ಅತ್ಯಂತ ಜನಪ್ರಿಯ ತಾಣವಾಗಿ ಪ್ರವಾಸಿಗರಿಗೆ ಲಭಿಸಿದೆ.

ಇದೊಂದು ಪಾರ್ಶ್ವ ದ್ವೀಪವಾಗಿದ್ದು, ಸಮುದ್ರ ಮಟ್ಟದಿಂದ ಏಳು ಮೀಟರ್‌ ಎತ್ತರದಲ್ಲಿದೆ. ಅಪಾರ ಸಂಖ್ಯೆಯಲ್ಲಿ ಗುಡ್ಡ, ಬೆಟ್ಟದಿಂದ ಆವೃತ್ತವಾಗಿದೆ ಈ ಜಿಲ್ಲೆ. ಇವುಗಳಲ್ಲಿ ಪಾರ್ಸಿಕ್‌ ಹಾಗೂ ಎಲ್ಲೋರಾ ಬೆಟ್ಟಗಳು ಪ್ರಮುಖವಾದವುಗಳು.

ಇತಿಹಾಸದ ಪುಟ ತಿರುವಿದಾಗ

ದಶಕಗಳ ಹಿಂದಿನ ಭಾರತೀಯ ಇತಿಹಾಸದಲ್ಲಿ ಠಾಣೆಗೆ ಒಂದು ವಿಶೇಷ ಸ್ಥಾನಮಾನವಿತ್ತು. ಠಾಣೆ ಜಿಲ್ಲೆಗೆ ಆರಂಭಿಕ ಸ್ಪರ್ಶವನ್ನು ಗ್ರೀಕ್‌ ಭೂಗೋಳ ಶಾಸ್ತ್ರಜ್ಞ ಪೊಟೊಲೋಮಿ ನೀಡಿದರು. ಆಗ ಈ ತಾಣವನ್ನು ಚೆರಸೋನಿಸಸ್‌ ಎಂದು ಆತ ಕರೆದಿದ್ದ. ಈ ಕುರಿತ ಬರಹಗಳು ಲಭಿಸಿದ್ದು ಇವು ಕ್ರಿಸ್ತಶಕ 135 ರಿಂದ 150 ರ ನಡುವಿನ ಅವಧಿಯದ್ದು ಎನ್ನಲಾಗುತ್ತದೆ. ಕ್ರಿಸ್ತಶಕ 1321ರಿಂದ 1324 ರ ಜನಪ್ರಿಯ ಪ್ರವಾಸಿಗ ಪ್ರೇಯರ್‌ ಜೋರ್ಡನ್‌ ಎಂಬುವರು ಹೇಳಿದ ಪ್ರಕಾರ, ಠಾಣೆಯು ಆ ಸಂದರ್ಭದಲ್ಲಿ ಮುಸ್ಲಿಂ ಗವರ್ನರ್‌ಗಳ ಹಿಡಿತದಲ್ಲಿತ್ತು. ಇಬ್ನ್ ಬಟೂಟಾ ಹಾಗೂ ಅಬ್ದುಲ್‌ ಫಿದಾ ಅವರು ಠಾಣೆಯನ್ನು ಕುಕಿನ್‌ ತಾನಾ ಅಂತ ಕರೆದಿದ್ದು, ಇದೊಂದು ಅತ್ಯಾಕರ್ಷಕ ತಾಣವಾಗಿತ್ತೆಂದು ಆ ಕಾಲದಲ್ಲಿ ಬಣ್ಣಿಸಿದ್ದಾರೆ.

ಅಂತಿಮವಾಗಿ ಅಂದರೆ, 1530 ರಲ್ಲಿ ಪೋರ್ಚುಗೀಸರು ಈ ಭಾಗಕ್ಕೆ ತಲುಪಿದರು. ಅವರು ಠಾಣೆಯನ್ನು ಕಕಬೇ ದೇ ಥಾನಾ ಎಂದು ಕರೆದರು. ಮರಾಠರು ನಂತರ ಈ ಪ್ರದೇಶವನ್ನು ಆವರಿಸಿಕೊಂಡರು. ಅವರಾದ ಮೇಲೆ ಬ್ರಿಟೀಷರ ಆಡಳಿತ ಇಲ್ಲಿ ನಡೆಯಿತು. ಬ್ರಿಟೀಷರಿಂದ ಈ ಭಾಗಕ್ಕೆ ಠಾಣೆ ಎಂಬ ಹೆಸರು ಬಂತು. ಅದು 1863 ರಲ್ಲಿ. ಅದೇ ಸಂದರ್ಭದಲ್ಲಿಯೇ ಇದು ದೇಶದ ಮೊದಲ ನಗರಸಭೆ ಎಂದು ಘೋಷಿತವಾಯಿತು ಕೂಡ.

ಠಾಣೆಯಲ್ಲಿದ್ದಾಗ ನೋಡಲು ಮರೆಯದಿರಿ

ಠಾಣೆಯು ಕೆರೆಗಳ ನಗರಿ ಎಂದೇ ಪ್ರಸಿದ್ಧವಾಗಿದೆ. ಏಕೆಂದರೆ ಇಲ್ಲಿ ಅಪಾರ ಸಂಖ್ಯೆಯಲ್ಲಿ ಕೆರೆಗಳಿವೆ. ಜಿಲ್ಲೆಯ ಎಲ್ಲೆಡೆ ಸೇರಿಸಿ ಲೆಕ್ಕ ಹಾಕಿದರೆ ಒಟ್ಟು 30 ಕ್ಕೂ ಹೆಚ್ಚು ಕೆರೆಗಳು ಸಿಗುತ್ತವೆ. ಎಲ್ಲ ಕೆರೆಗಳಲ್ಲಿ, ಮಸುಂದಾ ತಾಲಾವ್ ಅತ್ಯಂತ ಸುಂದರ ಹಾಗೂ ವಿಶಾಲವಾದ ಕೆರೆಯಾಗಿದೆ. ಇದು ಸ್ಥಳೀಯರಿಂದ ತಾಲಾವ್ ಪಲ್ಲಿ ಅಂತ ಕರೆಸಿಕೊಳ್ಳುತ್ತದೆ. ಇಲ್ಲಿ ಸಾಕಷ್ಟು ವಿಧದ ಜಲ ಸಂಬಂಧಿ ಸಾಹಸಗಳು, ಚಟುವಟಿಕೆಗಳು ನಡೆಯುತ್ತವೆ. ಬೋಟಿಂಗ್‌, ವಾಟರ್‌ ಸ್ಟ್ರೋಕ್‌, ಮತ್ತಿತರೆ ಕ್ರೀಡೆಗಳು ನಡೆಯುತ್ತವೆ. ಇನ್ನೊಂದು ಪ್ರಸಿದ್ಧ ಕೆರೆ ಉಪವನ. ಎಲ್ಲೋರಾ ಬೆಟ್ಟಗಳನ್ನು ಒಂದೆಡೆ, ನೀಲಕಂಠ ಗುಡ್ಡಗಳು ಇನ್ನೊಂದೆಡೆ ಹೊಂದಿಕೊಂಡಂತೆ ನಡುವೆ ಇರುವ ಈ ಕೆರೆ ನೋಡಲು ರಮಣೀಯವಾಗಿದೆ.

ಎಲ್ಲೋರಾ ಬೆಟ್ಟಗಳ ನಡುವೆಯೇ ಸಂಜಯ್‌ಗಾಂಧಿ ರಾಷ್ಟ್ರೀಯ ಉದ್ಯಾನವನ ಕೂಡ ಇದೆ. ಈ ಮೂಲಕವೂ ಇವು ಜನಪ್ರಿಯವಾಗಿವೆ. ಈ ಬೆಟ್ಟಗಳು ವನ್ಯಜೀವಿ ತಾಣವಾಗಿ, ನೈಸರ್ಗಿಕವಾಗಿ ಸಮೃದ್ಧವಾಗಿ ಕಂಗೊಳಿಸುತ್ತಿವೆ. ಇದಕ್ಕೆ ಸಮೀಪವೇ ಕಾಶಿಮಿರಾ ಎಂಬ ಅದ್ಭುತ ತಾಣವಿದೆ. ಇಲ್ಲಿ ಹರಹರ ಗಂಗೆ ಜಲಪಾತ ಇದ್ದು, ಅತ್ಯಂತ ರಮಣೀಯ ದೃಶ್ಯ ಸೃಷ್ಟಿಸಿದೆ. ಇದು ದೇಶದ ಅತ್ಯಂತ ದೊಡ್ಡ ಹಾಗೂ ವಿಶಾಲವಾದ ಜಲಪಾತ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.

ಅಂಬರೇಶ್ವರ ದೇವಾಲಯ ಕೂಡ ಅತ್ಯಂತ ಜನಪ್ರಿಯ ದೇವಾಲಯವಾಗಿದ್ದು, ಅಂಬರನಾಥ ಇಲ್ಲಿ ನೆಲೆಸಿದ್ದಾನೆ. ಹೇಮಾಂದಪತಿ ಶೈಲಿಯ ವಾಸ್ತುಶಿಲ್ಪ ಬಳಸಿ ನಿರ್ಮಿಸಿದ ಈ ದೇವಾಲಯ ಅತ್ಯಂತ ಆಕರ್ಷಕವಾಗಿದ್ದು, ಒಂದು ಪ್ರಮುಖ ಧಾರ್ಮಿಕ ತಾಣವಾಗಿ ಜನಪ್ರಿಯವಾಗಿದೆ.

ಇತಿಹಾಸ ಪ್ರೇಮಿಗಳು ಹಾಗೂ ವಾಸ್ತುಶಿಲ್ಪವನ್ನು ಇಷ್ಟಪಡುವವರಿಗೆ ಇಲ್ಲಿನ ಬಸ್ಸೇನ್‌ ಕೋಟೆ (ವಾಸೈ ಕೋಟೆ) ಹಾಗೂ ಜವಾಹರ ಪ್ಯಾಲೇಸ್‌ ಅತ್ಯಂತ ಮಾಹಿತಿ ಯೋಗ್ಯವಾಗಿ ಲಭಿಸುತ್ತವೆ. ಟ್ರೆಕ್ಕಿಂಗ್‌, ಕಲ್ಲು ಬಂಡೆ ಏರುವುದು ಇತ್ಯಾದಿ ಸಾಹಸವನ್ನು ಇಷ್ಟಪಡುವವರಿಗೆ ನಾನೇಘಾಟ್‌ ಬೆಟ್ಟಗಳು ಅತ್ಯಂತ ಸೂಕ್ತ ತಾಣವಾಗಿದೆ. ದಿನದ ಸಂಜೆಯ ಅವಧಿಯನ್ನು ಅತ್ಯಂತ ವಿಶಿಷ್ಟವಾಗಿ, ಆರಾಮವಾಗಿ, ನಿಧಾನವಾಗಿ ಕಳೆಯಲು ಇಷ್ಟಪಡುವವರಿಗೆ ಕೇಲ್ವಾ ಕಡಲ ತೀರ ಸ್ವರ್ಗದಂತೆ ಲಭಿಸಿದೆ. ಕುಟುಂಬ ಸಮೇತರಾಗಿ ತೆರಳಿದರೆ ಅದರ ಮಜವೇ ಬೇರೆ.

ಇಲ್ಲಿ ಧಾರ್ಮಿಕ ಆಚರಣೆ ಕೂಡ ಅತ್ಯಂತ ಅದ್ದೂರಿಯಾಗಿ ಜರುಗುತ್ತದೆ. ಗಣೇಶ ಚತುರ್ಥಿ, ಗೋಕುಲಾಷ್ಟಮಿ, ದುರ್ಗಾ ಪೂಜೆ ಹಾಗೂ ಇತರೆ ಪೂಜೆಗಳು ಉತ್ಸವದ ರೂಪದಲ್ಲಿ ಪ್ರತಿ ವರ್ಷ ಆಯೋಜನೆಯಾಗುತ್ತವೆ. ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಇದನ್ನು ಯಶಸ್ವಿಯಾಗಿಸುತ್ತಾರೆ.

ಇನ್ನಷ್ಟು ಪೂರಕ ಮಾಹಿತಿಗಳು

ಠಾಣೆಯ ವಾತಾವರಣ ಸ್ಥಿತಿ ಮುಂಬೈ ಮಾದರಿಯಲ್ಲೇ ಇದೆ. ವರ್ಷದ ಬಹುತೇಕ ಸಂದರ್ಭದಲ್ಲಿ ವಾತಾವರಣದಲ್ಲಿ ತೇವಾಂಶ ತುಂಬಿರುತ್ತದೆ. ಸಮಶೀತ ವಾತಾವರಣ ಇಲ್ಲಿನದು. ಇದೇ ಕಾರಣದಿಂದ ಇಲ್ಲಿನ ತಾಣಗಳು ವರ್ಷದ ಎಲ್ಲಾ ದಿನವೂ ಪ್ರವಾಸಿಗರನ್ನು ಸೆಳೆಯುತ್ತಿರುತ್ತವೆ. ಬೇಸಿಗೆ ಇಲ್ಲಿ ತುಂಬಾ ಗಾಢವಾಗಿರುತ್ತದೆ. ವಾತಾವರಣದಲ್ಲಿ ತಾಪಮಾನ 40 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ. ಜಿಲ್ಲೆಯಲ್ಲಿ ಈ ಸಂದರ್ಭದಲ್ಲಿ ಅಪಾರ ಸೆಖೆಯ ವಾತಾವರಣ ಇರುತ್ತದೆ. ಈ ಸಂದರ್ಭದಲ್ಲಿ ಮೈ ಉರಿಯುವ ಸ್ಥಿತಿ ಇರದಿದ್ದರೂ, ಕೊಂಚ ಅಸಹನೀಯ ವಾತಾವರಣ ಇರುತ್ತದೆ. ನಂತರದ್ದು ಮಳೆಗಾಲ. ಈ ಸಮಯದಲ್ಲಿ ಇಲ್ಲಿನ ಅಪಾರ ಕೆರೆಗಳನ್ನು ವೀಕ್ಷಿಸುವುದು, ಜಲಪಾತವನ್ನು ನೋಡುವುದು ಅತ್ಯಂತ ಮನೋಹರ. ಚೆನ್ನಾಗಿ ಮಳೆ ಆಗುವುದರಿಂದ ಎಲ್ಲವೂ ತುಂಬಿ ತುಳುಕುತ್ತಿರುತ್ತವೆ. ಚಳಿಗಾಲದಲ್ಲಿ ವಾತಾವರಣ ಅತ್ಯಂತ ಅಪ್ಯಾಯಮಾನವಾಗಿದ್ದು, ಪ್ರವಾಸಕ್ಕೆ ವರ್ಷದಲ್ಲೇ ಅತ್ಯಂತ ಪ್ರಶಸ್ತ ಕಾಲ. ಈ ಸಮಯದಲ್ಲಿ ತಾಪಮಾನ ಅತ್ಯಂತ ಕಡಿಮೆ ಇರುತ್ತದೆ. ವಾತಾವರಣದಲ್ಲಿ ಉಷ್ಣಾಂಶ 10 ಡಿಗ್ರಿ ಸೆಲ್ಶಿಯಸ್‌ಗೆ ತಲುಪಿರುತ್ತದೆ. ಈ ಸಂದರ್ಭದಲ್ಲಿ ನೀಡುವ ಭೇಟಿ, ನೋಡುವ ತಾಣ ಬಹುಕಾಲ ಮನಸ್ಸಿನಲ್ಲಿ ಉಳಿಯುತ್ತದೆ.

ಮುಂಬಯಿ ಮಹಾನಗರಿಗೆ ಅತ್ಯಂತ ಸಮೀಪವಾಗಿರುವುದರಿಂದ ಅತ್ಯಂತ ಸುಗಮ ಸಂಪರ್ಕ ವ್ಯವಸ್ಥೆಯನ್ನು ಠಾಣೆ ಹೊಂದಿದೆ. ವಿಶ್ವದ ಎಲ್ಲಾ ಕಡೆಗಳಿಂದ ಇಲ್ಲಿಗೆ ಸಂಪರ್ಕ ಅತ್ಯಂತ ಸುಗಮವಾಗಿದೆ. ವಾಯು ಮಾರ್ಗದಲ್ಲಿ ಬರುವವರಿಗೆ ಮುಂಬಯಿಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅನುಕೂಲಕರವಾಗಿದೆ. ಠಾಣೆಯೇ ಅತ್ಯುತ್ತಮ ಸಂಪರ್ಕ ಉಳ್ಳ ಸುಸಜ್ಜಿತ ರೈಲು ನಿಲ್ದಾಣವನ್ನು ಹೊಂದಿದೆ. ಸಾಕಷ್ಟು ಹೊರ ಊರಿನ, ರಾಜ್ಯದ ರೈಲುಗಳು ಇಲ್ಲಿಗೆ ಸಂಪರ್ಕ ಹೊಂದಿವೆ. ಮಹಾರಾಷ್ಟ್ರದ ಎಲ್ಲೆಡೆಯಿಂದಲಂತೂ ಇಲ್ಲಿಗೆ ಅತ್ಯುತ್ತಮ ಸಂಪರ್ಕವಿದೆ. ಇನ್ನು ರಸ್ತೆ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವವರಿಗೆ  ಸುಗಮ ಸಂಚಾರದ ಅವಕಾಶ ಒದಗಿ ಬರುತ್ತದೆ. ಠಾಣೆಗೆ ಮೂರು ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕವಿದ್ದು, ಇವು ಠಾಣೆ ಮಾರ್ಗವಾಗಿಯೇ ಹಾದು ಹೋಗಿವೆ.

ಠಾಣೆಯು ಅತ್ಯಾಕರ್ಷಕ ಹಾಗೂ ಮನಮೋಹಕ ಪರಿಸರದಿಂದ ಕೂಡಿದ್ದು, ಪಕ್ಕದಲ್ಲೇ ಮುಂಬೈ ನಗರಿಯನ್ನು ಹೊಂದಿದೆ. ಅಲ್ಲದೇ ಐತಿಹಾಸಿಕವಾಗಿಯೂ ಪ್ರಸಿದ್ಧ ತಾಣ. ಮುಸ್ಲಿಮರು, ಮರಾಠರು, ಪೋರ್ಚುಗೀಸರು, ಬ್ರಿಟಿಷರು ಸೇರಿದಂತೆ ಹಲವು ದೇಶೀಯ ಹಾಗೂ ಅನ್ಯ ರಾಷ್ಟ್ರದ ಸಂಸ್ಕೃತಿ ಉಳ್ಳವರು ಈ ಭಾಗವನ್ನು ಆಳಿದ್ದಾರೆ ಮತ್ತು ಅವರು ಆ ಸಂದರ್ಭದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇದರಿಂದ ಇದು ಬಹು ಸಂಸ್ಕೃತಿಯ ತಾಣವಾಗಿದೆ. ಈ ಒಂದು ಪಟ್ಟಣವು ಜಿಲ್ಲೆಯಾಗಿ ಅತ್ಯಂತ ಉನ್ನತ ಸಂಸ್ಕೃತಿ ಹೊಂದಿದೆ. ಇದನ್ನು ಅರಿಯಲು ಒಮ್ಮೆ ಭೇಟಿ ನೀಡಲೇಬೇಕು.

ಠಾಣೆ ಪ್ರಸಿದ್ಧವಾಗಿದೆ

ಠಾಣೆ ಹವಾಮಾನ

ಉತ್ತಮ ಸಮಯ ಠಾಣೆ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಠಾಣೆ

  • ರಸ್ತೆಯ ಮೂಲಕ
    ಠಾಣೆಗೆ ರಸ್ತೆ ಸಂಪರ್ಕದ ಕೊಂಡಿ ಉತ್ತಮವಾಗಿದೆ. ಸಾಕಷ್ಟು ಹಲವು ನಗರಗಳಿಗೆ ತೆರಳುವ ವಾಹನಗಳು ಈ ಮಾರ್ಗವಾಗಿಯೆ ಸಾಗುತ್ತವೆ. ಅಲ್ಲದೆ ದೇಶದ ಪ್ರಮುಖ ಮೂರು ರಾಷ್ಟ್ರೀಯ ಹೆದ್ದಾರಿಗಳು, ಈ ನಗರ ಕೇಂದ್ರದ ಮೂಲಕವೇ ಹಾದು ಹೋಗಿವೆ. ಅವುಗಳೆಂದರೆ ಅಹ್ಮದಾಬಾದ್‌- ಮುಂಬೈ ಹೆದ್ದಾರಿ, ಮುಂಬೈ-ಆಗ್ರಾ ಹೆದ್ದಾರಿ ಹಾಗೂ ಮುಂಬೈ-ಬೆಂಗಳೂರು ಹೆದ್ದಾರಿ. ಇಲ್ಲಿ ನಿರಂತರವಾಗಿ ಸರ್ಕಾರಿ ಬಸ್‌ ಸೌಲಭ್ಯದ ಜತೆ ಖಾಸಗಿ ಬಸ್‌ ವ್ಯವಸ್ಥೆಯೂ ಉತ್ತಮವಾಗಿದೆ. ಠಾಣೆಯಿಂದ ಇತರೆ ನಗರಗಳಿಗೆ, ಅನ್ಯ ರಾಜ್ಯದ ಕೇಂದ್ರಗಳಿಗೆ ಸಂಪರ್ಕ ಚೆನ್ನಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೇಂದ್ರ ಹಾಗೂ ಇತರೆ ರೈಲು ಮಾರ್ಗವನ್ನು ಒಳಗೊಂಡಿರುವ ಠಾಣೆ ಜಿಲ್ಲಾ ಕೇಂದ್ರವು ಅತ್ಯಂತ ಪ್ರಶಸ್ತ ಹಾಗೂ ಉತ್ತಮ ರೈಲು ನಿಲ್ದಾಣವಾಗಿದೆ. ರಾಜ್ಯದ ಎಲ್ಲಾ ಭಾಗದಿಂದ ರೈಲು ಸಂಪರ್ಕ ಇಲ್ಲಿಗಿದೆ. ಅಲ್ಲದೆ, ಇಲ್ಲಿಗೆ ದಾದರ್‌ ಹಾಗೂ ಪನ್ವೇಲ್‌ ನಡುವೆ ಸಂಚರಿಸುವ ಸ್ಥಳೀಯ ರೈಲುಗಳ ಸಂಪರ್ಕವೂ ಇದೆ. ಸಹ್ಯಾದ್ರಿ ಎಕ್ಸ್‌ಪ್ರೆಸ್‌, ಕೋಯ್ನಾ ಎಕ್ಸ್‌ಪ್ರೆಸ್‌, ಗೋದಾವರಿ ಎಕ್ಸ್‌ಪ್ರೆಸ್‌, ಸೇವಾಗ್ರಾಮ ಎಕ್ಸ್‌ಪ್ರೆಸ್‌, ಕಲ್ಯಾಣಿ ಎಕ್ಸ್‌ಪ್ರೆಸ್‌, ಕುಶಾಲ್‌ನಗರ್‌ ಎಕ್ಸ್‌ಪ್ರೆಸ್‌, ಲೋಕಮಾನ್ಯ ತಿಲಕ್‌ - ಕೊಯಮತ್ತೂರು, ಸಿದ್ದೇಶ್ವರ ಎಕ್ಸ್‌ಪ್ರೆಸ್‌, ನೇತ್ರಾವತಿ ಎಕ್ಸ್‌ಪ್ರೆಸ್‌ ಹಾಗೂ ಮಹಾನಂದಗಿರಿ ಎಕ್ಸ್‌ಪ್ರೆಸ್‌ ರೈಲುಗಳು ಇದೆ ನಿಲ್ದಾಣ ಮಾರ್ಗವಾಗಿ ಹಾದು ಹೋಗುತ್ತವೆ. ಠಾಣೆಗೆ ಲಭಿಸಿರುವ ಇನ್ನೊಂದು ಗರಿ ಏನು ಗೊತ್ತಾ? ಇದು ದೇಶದಲ್ಲೆ, ಮೊದಲ ರೈಲು ಟರ್ಮಿನಸ್‌ ಹೊಂದಿದ ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದೆ. ಟರ್ಮಿನಸ್‌ನ್ನು 1853 ರಲ್ಲಿ ನಿರ್ಮಿಸಲಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಠಾಣೆಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಠಾಣೆಯಿಂದ 35 ಕಿ.ಮೀ. ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಠಾಣೆಗೆ ಕ್ಯಾಬ್‌ ಅಥವಾ ಬಸ್‌ ಮೂಲಕ ತಲುಪಬಹುದು. ದಟ್ಟಣೆ ಆಧರಿಸಿ ಪ್ರಯಾಣದ ಅವಧಿ ಹೆಚ್ಚೆಂದರೆ ಒಂದು ಗಂಟೆ ಆಗಬಹುದು. ದೇಶದ ಇತರೆ ರಾಜ್ಯಗಳು ಹಾಗೂ ಅನ್ಯ ರಾಷ್ಟ್ರದ ಸಾಕಷ್ಟು ಅಂತಾರಾಷ್ಟ್ರೀಯ ಹಾಗೂ ಡೊಮೆಸ್ಟಿಕ್‌ ವಿಮಾನ ಯಾನ ಸೌಲಭ್ಯ ಮುಂಬಯಿಗೆ ಇದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri