Search
  • Follow NativePlanet
Share
» »ಬೆಟ್ಟದ ಮೇಲಿರುವ ಗಣಪನ ದೇವಾಲಯ!

ಬೆಟ್ಟದ ಮೇಲಿರುವ ಗಣಪನ ದೇವಾಲಯ!

By Vijay

ತಮಿಳುನಾಡಿನ ತಿರುಚ್ಚಿ ಅಥವಾ ತಿರುಚಿರಾಪಳ್ಳಿಯು ಸಾಕಷ್ಟು ಐತಿಹಾಸಿಕ ಶ್ರೀಮಂತಿಕೆಯಿಂದ ಕೂಡಿರುವ. ಪ್ರದೇಶ. ಧಾರ್ಮಿಕವಾಗಿ ಮಾತ್ರವಲ್ಲದೆ ಐತಿಹಾಸಿಕವಾಗಿಯೂ ತಿರುಚ್ಚಿ ಸಾಕಷ್ಟು ಗಮನಸೆಳೆಯುತ್ತದೆ. ತಿರುಚ್ಚಿ ಕೋಟೆಯ ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.

ತಮಿಳುನಾಡಿನಲ್ಲಿ ಕಂಡುಬರುವ ಕೆಲವೆ ಕೆಲವು ವಿಶಿಷ್ಟ ಬೆಟ್ಟ ಕೋಟೆಗಳ ಪೈಕಿ ತಿರುಚ್ಚಿ ಬೆಟ್ಟ ಕೋಟೆಯು ಸಾಕಷ್ಟು ಪ್ರಾಮುಖ್ಯತೆಗಳಿಸಿರುವ ಐತಿಹಾಸಿಕ ರಚನೆಯಾಗಿದೆ. 272 ಅಡಿಗಳಷ್ಟು ಎತ್ತರದ ವಿಶಾಲವಾದ ಬಂಡೆ ಬೆಟ್ಟವೊಂದರ ಮೇಲೆ ನಿರ್ಮಿತವಾದ ಕೋಟೆ ಇದಾಗಿದ್ದು ಇಲ್ಲಿ ಗಣಪನಿಗೆ ಮುಡಿಪಾದ ಆಕರ್ಷಕ ದೇವಾಲಯವೊಂದನ್ನು ಕಾಣಬಹುದು.

ಗಣಪನ ಕೆಲವು ಪ್ರಮುಖ ದೇವಾಲಯಗಳು

ಶ್ರೀರಂಗಂ

ಶ್ರೀರಂಗಂ

ಪೌರಾಣಿಕವಾಗಿ ಈ ಒಂದು ಬೆಟ್ಟದಿಂದಲೆ ಚಿಕ್ಕ ಗಣೇಶನು ಶ್ರೀರಂಗಂನಲ್ಲಿ ರಂಗನಾಥಸ್ವಾಮಿಯನ್ನು ಪ್ರತಿಷ್ಠಾಪಿಸಿದ ನಂತರ ಅವನ ಬೆನ್ನಟ್ಟಿದ್ದ ವಿಬಿಷಣನಿಂದ ತಪ್ಪಿಸಿಕೊಂಡ ಎಂದು ಹೇಳಲಾಗುತ್ತದೆ. ಹಾಗಾಗಿ ಇಲ್ಲಿರುವ ಗಣಪನ ದೇವಾಲಯ ಸಾಕಷ್ಟು ಕುತೂಹಲ ಕೆರಳಿಸುತ್ತದೆ.

ಚಿತ್ರಕೃಪೆ: Santhoshj

ಪ್ರಾಚೀನವಾದದ್ದು

ಪ್ರಾಚೀನವಾದದ್ದು

ಈ ದೇವಾಲಯವು ಸುಮಾರು ಏಳನೇಯ ಶತಮಾನದಲ್ಲಿ ನಿರ್ಮಿತವಾದ ಅತಿ ಪ್ರಾಚಿನ ದೇವಾಲಯವಾಗಿದೆ ಎಂದು ಅಂದಾಜಿಸಲಾಗಿದೆ. ಪಲ್ಲವರು ಮೊದಲು ಈ ಬೆಟ್ಟದ ಕಲ್ಲುಗಳನ್ನು ಕೊರೆದು ಹದ ಮಾಡಿದರೆಂದೂ ನಂತರ ಮದುರೈ ನಾಯಕರು ಇಲ್ಲಿನೆ ದೇವಾಲಯಗಳನ್ನು ನಿರ್ಮಿಸಿದರೆಂದು ಸ್ಥಳೀಯ ಇತಿಹಾಸದಿಂದ ತಿಳಿದುಬರುತ್ತದೆ.

ಚಿತ್ರಕೃಪೆ: Rajesh Muralidharen

ವಿಶಿಷ್ಟ

ವಿಶಿಷ್ಟ

ಈ ದೇವಾಲಯವು ಒಂದು ರೀತಿಯಲ್ಲಿ ಭೇಟಿ ನೀಡುಗರಿಗೆ ರಹಸ್ಯಮಯವಾಗಿಯೂ, ವಿಶೇಷವಾಗಿಯೂ ಗೋಚರಿಸುತ್ತದೆ. ಗುಡ್ಡದ ತುದಿಯ ಮೇಲಿರುವ ಗಣೇಶನ ಸನ್ನಿಧಾನವು ಸಾಕಷ್ಟು ಚಿಕ್ಕದಾಗಿದ್ದು ಬಲು ಮೊನಚಾದ ಕೊರೆದ ಮೆಟ್ಟಿಲುಗಳ ಮೂಲಕ ಏರಿ ತಲುಪಬಹುದಾಗಿದೆ.

ಚಿತ್ರಕೃಪೆ: Neilsatyam

ಅದ್ಭುತ ದೃಶ್ಯ!

ಅದ್ಭುತ ದೃಶ್ಯ!

ಒಂದೊಮ್ಮೆ ಬೆಟ್ಟದ ತುದಿ ತಲುಪಿದರೆ ಸಾಕು, ಮೈಯೆಲ್ಲಾ ರೋಮಾಂಚನಗೊಳ್ಳುತ್ತದೆ. ಏಕೆಂದರೆ ಇಲ್ಲಿಂದ ಕಂಡುಬರುವ ತಿರುಚ್ಚಿಯ ಅದ್ಭುತ ನೋಟ, ಶ್ರೀರಂಗಂನ ಮೈಮಾಟ ಹಾಗೂ ಕಾವೇರಿ ನದಿಯ ದೃಶ್ಯಗಳು ಮೂಕವಿಸ್ಮಿತರಾಗುವಂತೆ ಮಾಡುತ್ತದೆ.

ಚಿತ್ರಕೃಪೆ: Ilasun

ಗಣೇಶನೆ ಉಪಾಯ

ಗಣೇಶನೆ ಉಪಾಯ

ಈ ಗಣೇಶನ ದೇವಾಲಯದ ಪೌರಾಣಿಕತೆಯೂ ಸಹ ಗೋಕರ್ಣದ ಮಾದರಿಯಲ್ಲೆ ಇದೆ ಎಂದು ಗೊತ್ತಾಗುತ್ತದೆ. ರಾಮಾಯಣ ಯುದ್ದದ ನಂತರ ರಾಮನು ಅಸುರ ರಾಜ ರಾವಣನ ಸಹೋದರನಾದ ವಿಭೀಷಣನು ತನ್ನೊಂದಿಗೆ ಧರ್ಮ ಮಾರ್ಗದಲ್ಲೆ ನಿಂತಿದ್ದಿದ್ದುದದರೆ ಗೌರವಾರ್ಥವಾಗಿ ಕೊನೆಗೆ ರಂಗನಾಥಸ್ವಾಮಿಯ ವಿಗ್ರಹವೊಂದನ್ನು ಪೂಜಿಸಲು ಕಾಣಿಕೆಯಾಗಿ ನೀಡುತ್ತಾನೆ.

ಚಿತ್ರಕೃಪೆ: Ashok Prabhakaran

ಲಂಕೆಗೆ ಹೊರಟ

ಲಂಕೆಗೆ ಹೊರಟ

ಹೀಗೆ ವಿಷ್ಣುವಿನ ವಿಗ್ರಹ ಪಡೆದು ಸಂತಸಗೊಂಡು ವಿಭೀಷಣನು ಇತ್ತ ಲಂಕೆಗೆ ತೆರಳಲು ಹೊರಡುತ್ತಾನೆ. ಆದರೆ ದೇವಲೋಕದಲ್ಲಿರುವ ಎಲ್ಲ ದೇವತೆಗಳಿಗೆ ಇದು ಸಹಿಸಲಾರದ ವಿಷಯವಾಗಿ ಪರಿಣಮಿಸುತ್ತದೆ, ಕಾರಣ, ವಿಭೀಷಣ ಎಷ್ಟೆ ಒಳ್ಳೆಯವನಾಗಿದ್ದರೂ ಆತ ಹುಟ್ಟು ಅಸುರ. ಅಲ್ಲದೆ ಅವನ ಸಾಮ್ರಾಜ್ಯವೂ ಅಸುರ ಸಾಮ್ರಾಜ್ಯ.

ಚಿತ್ರಕೃಪೆ: Raj

ಸಹಿಸಲಾರೆವು!

ಸಹಿಸಲಾರೆವು!

ಇಂತಹ ಅಸುರರಿರುವ ನಾಡಲ್ಲಿ ವಿಷ್ಣುವಿನ ಸ್ಥಾನಮಾನಗಳು ಕಳೆದುಹೋಗಿ ಅವಮಾನ ಉಂಟಾಗಬಹುದೆಂದು ಊಹಿಸುತ್ತಾರೆ ದೇವತೆಗಳು. ಅದಕ್ಕೆಂದು ಗಣೇಶನಲ್ಲಿ ಮೊರೆ ಹೋದಾಗ ಗಣೇಶನು ಸಹಾಯ ಮಾಡಲು ಒಪ್ಪಿ ಗೊಕರ್ಣದ ರೀತಿಯಲ್ಲೆ, ದನಗಾಹಿ ಹುಡುಗನಾಗಿ ವಿಭೀಷಣ ಮುಂದೆ ಬರುತ್ತಾನೆ. ಅಷ್ಟರಲ್ಲಾಗಲೆ ವಿಭೀಷಣನಿಗೆ ನಿತ್ಯ ಕಾರ್ಯ ಮಾಡುವ ಪ್ರಸಂಗ ತಲೆದೋರಿ, ದನಗಾಹಿ ಹುಡುಗನನ್ನು ಕರೆದು ರಂಗನಾಥಸ್ವಾಮಿಯ ವಿಗ್ರಹ ಕೊಟ್ಟು ಅದನ್ನು ಕೆಳೆಗಿಳಿಸಿದಂತೆ ಹೇಳಿ ಕಾವೇರಿಯಲ್ಲಿ ಮಿಂದಲು ಹೊರಡುತ್ತಾನೆ.

ಚಿತ್ರಕೃಪೆ: Ranjanigopi

ಪ್ರತಿಷ್ಠಾಪಿಸಿಯೆ ಬಿಟ್ಟ

ಪ್ರತಿಷ್ಠಾಪಿಸಿಯೆ ಬಿಟ್ಟ

ಪರಿಸ್ಥಿತಿಯ ಲಾಭ ಪಡೆದ ಗಣೇಶ ಅಲ್ಲೆ ತೀರದ ಮರಳಿನಲ್ಲಿ ಯೋಗ್ಯವಾದ ಸ್ಥಳವೊಂದನ್ನು ನೋಡಿ ಅಲ್ಲಿ ರಂಗನಾಥಸ್ವಾಮಿಯನ್ನು ಪ್ರತಿಷ್ಠಾಪಿಸಿಯೆ ಬಿಡುತ್ತಾನೆ. ಇದನ್ನು ನೋಡಿ ಹೌಹಾರಿದ ವಿಭೀಷಣ ಕೋಪಗೊಂಡು ಗಣೇಶನನ್ನು ಹಿಂಬಾಲಿಸುತ್ತಾನೆ ಹಾಗೂ ಕೊನೆಗೆ ಈ ಬೆಟ್ಟದ ತುದಿಯ ಮೇಲೆ ಆತನನ್ನು ಹಿಡಿದು ಹಣೆಗೆ ಒಂದು ಹೊಡೆತ ನೀಡುತ್ತಾನೆ.

ಚಿತ್ರಕೃಪೆ: Dinesh

ತೋರಿದ

ತೋರಿದ

ಅಷ್ಟರಲ್ಲಿ ಗಣೇಶ ತನ್ನ ನಿಜ ರೂಪ ತಳೆಯುತ್ತಾನೆ. ಇದರಿಂದ ಗಾಬರಿಗೊಂಡ ವಿಭೀಷಣ ಕ್ಷಮೆ ಕೋರುತ್ತಾನೆ. ನಂತರ ಗಣೇಶ ಅವನಿಗೆ ರಂಗನಾಥವು ಇಲ್ಲಿಯೆ ಪ್ರತಿಷ್ಠಾಪಿತವಾಗಿರಬೇಕಾಗಿದ್ದುದು ವಿಧಿ ನಿಯಮವಾಗಿತ್ತೆಂದು ಆತನದ್ದೇನೂ ತಪ್ಪಿಲ್ಲವೆಂದೂ ಆತನನ್ನು ಅನುಗ್ರಹಿಸಿ ಕಳುಹಿಸಿಕೊಡುತ್ತಾನೆ.

ಚಿತ್ರಕೃಪೆ: Adam63

ಆ ಗಾಯದ ಗುರುತು!

ಆ ಗಾಯದ ಗುರುತು!

ಇಂದಿಗೂ ಇಲ್ಲಿರುವ ಗಣೇಶನ ದೇವಾಲಯದ ಗಣೇಶನ ವಿಗ್ರಹದ ಹಣೆಯಿರುವ ಸ್ಥಳದಲ್ಲಿ ಚಿಕ್ಕ ತೆಗ್ಗೊಂದು ಬಿದ್ದಿರುವುದನ್ನು ಕಾಣಬಹುದು. ಇದನ್ನು ಬೆಟ್ಟಕೋಟೆಯ ಉಚ್ಚಿ ಪಿಲ್ಲಯಾರ್ ಗಣೇಶನ ದೇವಾಲಯ ಎಂದೆ ಕರೆಯುತ್ತಾರೆ.

ಚಿತ್ರಕೃಪೆ: Arunankapilan

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more