Search
  • Follow NativePlanet
Share
» »ತುಳಸಿ ಘಾಟ್‌ನಲ್ಲಿ ಅದೃಷ್ಟವಂತರ ಬೇಡಿಕೆ ಈಡೇರುತ್ತಂತೆ !

ತುಳಸಿ ಘಾಟ್‌ನಲ್ಲಿ ಅದೃಷ್ಟವಂತರ ಬೇಡಿಕೆ ಈಡೇರುತ್ತಂತೆ !

ವಾರಣಾಸಿಯನ್ನು ನಮ್ಮ ದೇಶದಲ್ಲಿನ ಒಂದು ಧಾರ್ಮಿಕ ಕೇಂದ್ರ ಎಂದೇ ಹೇಳಬಹುದು. ಪ್ರಪಂಚದ ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿಯಿಂದ ಕೂಡಿದ ನಗರಗಳಲ್ಲಿ ಇದೂ ಒಂದು. ಗಂಗಾ ನದಿಯ ತಟದಲ್ಲಿರುವ ಈ ನಗರವನ್ನು ವರುಣಾ ಮತ್ತು ಅಸಿ ಎಂಬ ನದಿಗಳು ಸುತ್ತುವರೆದಿವೆ.

ವಾರಣಾಸಿಗೆ ಹೋದವರಿಗೆ ತುಳಸಿ ಘಾಟ್ ಗೊತ್ತಿರಬಹುದು. ತುಳಸಿ ಘಾಟ್ ವಾರಣಾಸಿಯಲ್ಲಿರುವ ಇನ್ನೊಂದು ಘಾಟ್‌ ಮಾತ್ರವಲ್ಲ ಇದೊಂದು ವಾರಣಾಸಿಯ ಪ್ರಸಿದ್ಧ ಪ್ರವಾಸಿ ತಾಣವೂ ಆಗಿದೆ. ಈ ಘಾಟ್‌ಗೆ ಈ ಹೆಸರು ಬರಲು ಕಾರಣವೂ ಇದೆ.
ತುಳಸಿ ದಾಸ್ ಎನ್ನುವ ಸಂತನು ಇದೇ ನದಿಯ ದಡದಲ್ಲಿ ಕುಳಿತು ರಾಮಚರಿತ ಮಾನಸವನ್ನು ರಚಿಸಿದ್ದು ಎನ್ನಲಾಗುತ್ತದೆ.

ಪುರಾಣ

ಪುರಾಣ

PC:Nandanupadhyay

ಬಹಳ ವರ್ಷಗಳ ಹಿಂದೆ ಗೋಸ್ವಾಮಿ ತುಳಸಿದಾಸ್‌ ರಾಮಚರಿತ ಮಾನಸವನ್ನು ಆ ನದಿ ದಂಡೆಯಲ್ಲಿ ಕುಳಿತು ಬರೆದು ಪೂರ್ಣಗೊಳಿಸಿದರು. ಆ ಮನುಸ್ಕ್ರಿಪ್ಟ್ ತುಳಿಸಿದಾಸ್ ಕೈಯಿಂದ ಜಾರಿ ನದಿಗೆ ಬೀಳುತ್ತದೆ. ವಿಶೇಷವೆಂದರೆ ಆ ಪುಸ್ತಕ ನೀರಿಗೆ ಬಿದ್ದರೂ ಅದು ಮುಳುಗದೆ ನೀರಿನಲ್ಲೇ ತೇಲುತ್ತಾ ಮತ್ತೆ ಕೈಸೇರುತ್ತದೆ.

ನಾಗರಪಂಚಮಿಯಂದು ಮಾತ್ರ ತೆರೆಯುತ್ತೆ ಈ ಮಂದಿರ, ದರ್ಶನ ಪಡೆದ್ರೆ ನಾಗದೋಷಗಳೆಲ್ಲಾ ಪರಿಹಾರನಾಗರಪಂಚಮಿಯಂದು ಮಾತ್ರ ತೆರೆಯುತ್ತೆ ಈ ಮಂದಿರ, ದರ್ಶನ ಪಡೆದ್ರೆ ನಾಗದೋಷಗಳೆಲ್ಲಾ ಪರಿಹಾರ

ರಾಮ್‌ಲೀಲಾ

ರಾಮ್‌ಲೀಲಾ

PC:Perfectlyimperfectpriyanka

ಆ ಪುಸ್ತಕದಲ್ಲಿ ರಾಮನ ಜೀವನದ ಬಗೆಗಿನ ಕಥೆಗಳನ್ನು ಬರೆಯಲಾಗಿತ್ತು. ಸಿದ್ಧಾಂತದ ಪ್ರಕಾರ ರಾಮ್‌ಲೀಲಾ ಎನ್ನುವ ನಾಟಕವನ್ನು ಮೊದಲಬಾರಿಗೆ ಭಾರತದಲ್ಲಿ ಇಲ್ಲೇ ಪ್ರದರ್ಶೀಸಲಾಯಿತು. ಈ ಘಟನೆ ನಡೆದ ನಂತರ ಆ ಘಟನೆಯ ಸ್ಮರಣಾರ್ಥವಾಗಿ ರಾಮನ ಮಂದಿರವನ್ನು ಅಲ್ಲಿ ನಿರ್ಮಿಸಲಾಯಿತು.

ಕೃಷ್ಣಲೀಲಾ

ಕೃಷ್ಣಲೀಲಾ

PC: Nandanupadhyay

ಮುಂದಿನ ಪೀಳೀಗೆಯವರಿಗಾಗಿ ತುಳಸಿದಾಸ್‌ರ ವಸ್ತುಗಳನ್ನು ಅಲ್ಲೇ ಶೇಖರಿಸಿಡಲಾಗಿದೆ. ಅವರು ಬಳಸುತ್ತಿದ್ದ ಮಂಚ, ಹನುಮನ ವಿಗ್ರಹ ಇವೆಲ್ಲ ಅಲ್ಲಿ ಶೇಖರಿಸಿಡಲಾಗಿದೆ. ವಾರಣಾಸಿಗರ ಬಂದವರು ತುಳಿಸಿಘಾಟ್‌ಗೆ ಭೇಟಿ ನೀಡುತ್ತಾರೆ. ಮುಖ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ತುಳಿಸಿಘಾಟ್‌ಗೆ ಬಂದು ಕೃಷ್ಣಲೀಲಾವನ್ನು ನೋಡುತ್ತಾರೆ.

ರಾಣಿ ಪದ್ಮಿಣಿ ಆತ್ಮ ಇಂದಿಗೂ ಜೋಹರ್ ಕುಂಡದಲ್ಲಿದೆಯಂತೆ ! ರಾಣಿ ಪದ್ಮಿಣಿ ಆತ್ಮ ಇಂದಿಗೂ ಜೋಹರ್ ಕುಂಡದಲ್ಲಿದೆಯಂತೆ !

ಕೋರಿಕೆ ಈಡೇರುತ್ತದೆ

ಕೋರಿಕೆ ಈಡೇರುತ್ತದೆ

PC: Subu512

ಜನರು ಈ ಘಾಟ್‌ಗೆ ಬಂದು ಸಂತತಿ, ದೀರ್ಘಾಯುಷ್ಯ, ಕುಷ್ಠರೋಗ ನಿವಾರಣೆಗೆ ಪ್ರಾರ್ಥೀಸಲು ಇಲ್ಲಿಗೆ ಬರುತ್ತಾರೆ. ಪವಿತ್ರ ಲೋಲಾರ್ಕ್ ಕುಂಡ ಇಲ್ಲಿಂದ ಸ್ವಲ್ಪ ದೂರದಲ್ಲಿದೆ. ನೀವು ಒಂದು ವೇಳೆ ನಿಜಕ್ಕೂ ಅದೃಷ್ಟವಂತರಾದರೆ ನಿಮ್ಮ ಕೋರಿಕೆ ಖಂಡಿತಾ ಈಡೇರುತ್ತದೆಯಂತೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Dwivedi Ashok

ನೀವು ವಾರಣಾಸಿಗೆ ತಲುಪಿ ಅಲ್ಲಿಂದ ತುಳಿಸಿಘಾಟ್‌ಗೆ ಆಟೋ ರಿಕ್ಷಾ, ಅಥವಾ ಸೈಕಲ್ ರಿಕ್ಷಾದ ಮೂಲಕ ತಲುಪಬಹುದು. ಇದು ಶಿವಾಲಾದ ಬಳಿ ಇರುವ ಆಸಿ ಘಾಟ್ ಸಮೀಪದಲ್ಲೇ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X