Search
  • Follow NativePlanet
Share
» »ಟ್ರೆಕ್ ಮಾಡಬೇಕೆ? ಇಲ್ಲಿದೆ ಕೆಲವು ಆಯ್ಕೆಗಳು

ಟ್ರೆಕ್ ಮಾಡಬೇಕೆ? ಇಲ್ಲಿದೆ ಕೆಲವು ಆಯ್ಕೆಗಳು

By Vijay

ಇಂದಿನ ಯುವ ಪೀಳಿಗೆಯು ಹೆಚ್ಚು ಹೆಚ್ಚು ಸಮಯ ಸಾಮಾಜಿಕ ವೆಬ್ ತಾಣಗಳಲ್ಲಿ ಕಳೆದರೂ ಎಂದಿಗೂ ಬತ್ತದ ಕೈಗೊಳ್ಳುವ ಒಂದು ಉತ್ಸಾಹಿ ಚಟುವಟಿಕೆಯೆಂದರೆ, ಟ್ರೆಕ್ಕಿಂಗ್ ಅಥವಾ ಚಾರಣಕ್ಕೆ ಹೋಗುವುದು. ಪ್ರಸ್ತುತ ಟ್ರೆಕ್ಕಿಂಗ್ ನ ಜನಪ್ರಿಯತೆ ಹಿಂದೆಂದಿಗಿಂತಲೂ ಹೆಚ್ಚು ಜನಪ್ರಿಯವಾಗುತ್ತಿದ್ದು, ಇದರ ಹಿಂದೆ ಸಾಮಾಜಿಕ ಮಾಧ್ಯಮಗಳಾದ ಫೇಸ್‍ಬುಕ್, ಟ್ವಿಟ್ಟರ್ ಹಾಗು ಜೀ ಪ್ಲಸ್ ಗಳ ಪಾತ್ರವು ಮಹತ್ವವಾಗಿದೆ. ಒಂದೊಮ್ಮೆ ಚಾರಣಕ್ಕೆ ಹೋಗಬೇಕೆಂದರೆ ಸ್ಥಳಗಳನ್ನು ತಿಳಿದುಕೊಳ್ಳಲು ಹರಸಾಹಸ ಪಡಬೇಕಾಗುತ್ತಿತ್ತು.

ಆದರೆ ಇಂದು, ಗಣಕ ಯಂತ್ರ, ಅಂತರ್ಜಾಲ ಹಾಗು ಆಧುನಿಕ ಸೌಲಭ್ಯಗಳಿಂದಾಗಿ ಕೇವಲ ಒಂದೆ ಒಂದು ಕ್ಲಿಕ್ಕಿನಲ್ಲಿ ಬೇಕಾದ ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ಚಾರಣವು ಪ್ರಕೃತಿಯೊಂದಿಗೆ ನಮ್ಮನ್ನು ಬೆಸೆಯುವ ಪ್ರಮುಖ ಮಾಧ್ಯಮವಾಗಿದೆ. ಎಲ್ಲ ಅವಶ್ಯಕ ಸೌಲಭ್ಯಗಳಿಂದ ಬೆಳೆದ ನಮಗೆ ದೂರದ ಕಾಡಿನಲ್ಲಿನ ಸ್ವಾಭಾವಿಕ ಜೀವನದ ಕುರಿತು ತಿಳಿದುಕೊಳ್ಳಲು ಇದು ಸಹಕಾರಿಯಾಗಿದೆ ಅಲ್ಲದೆ ಪ್ರಕೃತಿಯ ಕುರಿತು ತೋರಬೇಕಾದ ಗೌರವಾದರಗಳನ್ನು ಮನದಟ್ಟಾಗಿಸುತ್ತದೆ. ಕರ್ನಾಟಕ ರಾಜ್ಯವೂ ಕೂಡ ಹಲವು ಅದ್ಭುತವಾದ ಚಾರಣ ಮಾರ್ಗಗಳನ್ನು ಹೊಂದಿದೆ. ಇವುಗಳಲ್ಲಿ ಬಹುತೇಕವು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಸುಂದರ ತಾಣಗಳಾಗಿವೆ. ಈ ಲೇಖನದ ಮೂಲಕ ಕೆಲವು ಸುಂದರ ಚಾರಣ ತಾಣಗಳ ಪರಿಚಯ ನಿಮಗಾಗಿ.

ನರಸಿಂಹ ಪರ್ವತ, ಆಗುಂಬೆ

ನರಸಿಂಹ ಪರ್ವತ, ಆಗುಂಬೆ

ಆಗುಂಬೆಯು ಸೂರ್ಯಾಸ್ತದ ಅತ್ಯದ್ಭುತ ನೋಟವನ್ನು ಒದಗಿಸುತ್ತದೆ. ಈ ಗಿರಿ ಶೃಂಗವು ಪಶ್ಚಿಮ ಕರ್ನಾಟಕದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನದ ಭಾಗವಾಗಿದೆ. ಇಲ್ಲಿನ ಜೋಗಿಗುಂಡಿ ತಂಗಲು ಉತ್ತಮ ಪ್ರದೇಶವಾಗಿದ್ದು, ಆಗುಂಬೆಯು ಬೆಂಗಳೂರಿನಿಂದ 380 ಕಿ.ಮೀ ಹಾಗು ಮಂಗಳೂರಿನಿಂದ 130 ಕಿ.ಮೀಗಳಷ್ಟು ದೂರವಿದೆ. ಆಗುಂಬೆಯು ಭಾರತದ ಏಕೈಕ ಮಳೆಕಾಡು ಸಂಶೋಧನಾ ಸಂಸ್ಥೆಯನ್ನು ಹೊಂದಿದೆ.

ಬಾಣಂತಿಮರಿ ಬೆಟ್ಟ, ಕನಕಪುರ

ಬಾಣಂತಿಮರಿ ಬೆಟ್ಟ, ಕನಕಪುರ

ಕನಕಪುರ -ರಾಮನಗರಂ ಹೆದ್ದಾರಿಯಿಂದ ಕೇವಲ 3 ಕಿ.ಮೀ ದೂರದಲ್ಲಿದೆ ಈ ಬೆಟ್ಟ. ಕೋಣನದೊಡ್ಡಿ ಹಾಗು ಕುತ್ನಹಳ್ಳಿಗಳ ಮಧ್ಯದಲ್ಲಿ ನೆಲೆಸಿರುವ ಬೆಟ್ಟದ ಬುಡದಲ್ಲಿ ಬಾಣಂತಿಮರಿಯ ದೇವಾಲಯವನ್ನು ಕಾಣಬಹುದು. ಬೆಟ್ಟದ ತುದಿಯಿಂದ ರಾಮದೇವರ ಬೆಟ್ಟ ಹಾಗು ಕಬ್ಬಾಳದುರ್ಗದ ಅದ್ಭುತಗಳಿಗೆ ನೀವು ಸಾಕ್ಷಿಯಾಗಬಲ್ಲಿರಿ. ಈ ತಾಣವು ಬೆಂಗಳೂರಿನಿಂದ 75 ಕಿ.ಮೀ ದೂರವಿದ್ದು ಕನಕಪುರದಿಂದ ಕೇವಲ 3 ಕಿ.ಮೀ ಗಳಷ್ಟು ದೂರದಲ್ಲಿದೆ.

ಸೂಚನೆ: ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದ್ದು ಇದು ಆ ಪ್ರದೇಶದ ಚಿತ್ರವಲ್ಲ

ಚಿತ್ರಕೃಪೆ: Rayabhari

ಎಡಕುಮರಿ ಅಥವಾ ಹಸಿರುಪಥ:

ಎಡಕುಮರಿ ಅಥವಾ ಹಸಿರುಪಥ:

ಹಸಿರುಪಥ ಅಥವಾ ಗ್ರೀನ್ ರೂಟ್ ಎಂದು ಕರೆಯಲಾಗುವ ಈ ಚಾರಣ ಮಾರ್ಗವು ಮನಸೆಳೆವ ಹಸಿರಿನ ಕಾನನದಲ್ಲಿದ್ದು ಸಕಲೇಶಪುರದಿಂದ ಕುಕ್ಕೆ ಸುಬ್ರಮಣ್ಯದ ವರೆಗೆ ಚಾಚಿದೆ. ಸುಮಾರು 50 ಕ್ಕೂ ಅಧಿಕ ಕಿ.ಮೀ ಗಳಷ್ಟು ಚಾರಣಮಾರ್ಗವಿದ್ದು ರೈಲು ಹಳಿಯ ಮೂಲಕ ಸಾಗುತ್ತದೆ. 60 ಕ್ಕೂ ಅಧಿಕ ಟನಲ್ ಅಥವಾ ಸುರಂಗ ಮಾರ್ಗಗಳನ್ನು ಹಾದು ಹೋಗಬೇಕಾದ ರೋಮಾಂಚಕ ಅವಕಾಶವು ನಿಮಗೊದಗುತ್ತದೆ. ಹೆಚ್ಚಿನ ಸಮಯ ವ್ಯರ್ಥಗೊಳಿಸದಿರಲು ಕುಕ್ಕೆ ಅಥವಾ ದೋಣಿಗಲ್ ನಿಂದ ಚಾರಣ ಆರಂಭಿಸಬಹುದು.

ಚಿತ್ರಕೃಪೆ: M.S.Sunil

ಕುದುರೆಮುಖ:

ಕುದುರೆಮುಖ:

ಅರೇಬಿಯನ್ ಸಮುದ್ರಕ್ಕೆ ಎದುರಾಭಿಮುಖವಾಗಿ ನೆಲೆಸಿರುವ ಕುದುರೆಮುಖವು ಒಂದು ಪ್ರಖ್ಯಾತ ಗಿರಿಧಾಮವಾಗಿದ್ದು ಹಲವು ಸುಂದರ ಚಾರಣ ಮಾರ್ಗಗಳನ್ನು ಹೊಂದಿದ್ದು ಚಾರಣಿಗರ ಸ್ವರ್ಗವೆಂದೆ ಹೇಳಬಹುದು. ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಬರೋಬ್ಬರಿ 13 ಸುಂದರ ಚಾರಣಮಾರ್ಗಗಳ ಆನಂದವನ್ನು ಅನುಭವಿಸಬಹುದು.

ಚಿತ್ರಕೃಪೆ:

ಕುರಿಂಜಲ್, ದ.ಕ.ಜಿಲ್ಲೆ

ಕುರಿಂಜಲ್, ದ.ಕ.ಜಿಲ್ಲೆ

ಕುದುರೆಮುಖದಿಂದ 20 ಕಿ.ಮೀ ದೂರದಲ್ಲಿ ಈ ಸುಂದರ ಚಾರಣ ಶೃಂಗವಿದೆ. ಭಗವತಿ ಕಾಡಿನ ಮೂಲಕ ಮಾಲಾ ಎಂಬ ಹಳ್ಳಿಯನ್ನು ತಲುಪಬಹುದು. ಚಾರಣದ ಸಮಯದಲ್ಲಿ ಕಾಡು ಬೈಸನ್ ಗಳನ್ನು ಕಾಣಬಹುದಾಗಿದ್ದು, ಪ್ರಕೃತಿ ಶಿಬಿರ, ಭಗವತಿ, ಹನುಮಾನಗುಂಡಿ, ಕುದುರೆಮುಖ ಸುತನಬ್ಬೆ ಜಲಪಾತಗಳನ್ನು ಕಾಣಬಹುದು. ಈ ತಾಣವು ಬೆಂಗಳೂರಿನಿಂದ 300 ಕಿ.ಮೀ ದೂರವಿದ್ದು, ಸೆಪ್ಟಂಬರ್ ನಿಂದ ಮಾರ್ಚ್ ಮಧ್ಯದ ಅವಧಿ ಚಾರಣಕ್ಕೆ ಯೋಗ್ಯವಾಗಿದೆ.

ಚಿತ್ರಕೃಪೆ: karnatakatouristguide

ತಡಿಯಾಂಡಮೋಲ್, ಕೊಡಗು

ತಡಿಯಾಂಡಮೋಲ್, ಕೊಡಗು

ಮಡಿಕೇರಿ ಜಿಲ್ಲೆಯ ಮಾಕುಟ್ಟ ಅರಣ್ಯದ ಪಕ್ಕದಲ್ಲಿದೆ ಈ ಕೊಡಗಿನ ಅತಿ ಎತ್ತರದ ಈ ಗಿರಿ ಶಿಖರ. ಇದೊಂದು ಒಂದು ದಿನದ ಚಾರಣ ಮಾರ್ಗವಾಗಿದ್ದು ಭಾಗಮಂಡಲ, ಮಡಿಕೇರಿ, ಅಬ್ಬೆ ಜಲಪಾತ ಹಾಗು ನಾಗರಹೊಳೆಗಳನ್ನು ಸಂದರ್ಶಿಸಿ ಇಲ್ಲಿಗೆ ತಲುಪಬಹುದು.

ಚಿತ್ರಕೃಪೆ: Shyamal

ತಡಿಯಾಂಡಮೋಲ್ ಶಿಖರ, ಕೊಡಗು

ತಡಿಯಾಂಡಮೋಲ್ ಶಿಖರ, ಕೊಡಗು

ಮಡಿಕೇರಿ ಜಿಲ್ಲೆಯ ವಿರಾಜಪೇಟೆಯಲ್ಲಿರುವ ಈ ಶಿಖರವು ಕರ್ನಾಟಕದ ಎರಡನೆಯ ಅತಿ ಎತ್ತರದ ಹಾಗು ಕೊಡಗಿನ ಮೊದಲನೆಯ ಅತಿ ಎತ್ತರದ ಚಾರಣಯೋಗ್ಯ ಶಿಖರವಾಗಿದೆ. ಬೆಂಗಳೂರಿನಿಂದ 250 ಕಿ.ಮೀ ದೂರವಿರುವ ಈ ಬೆಟ್ಟದ ತಾಣವನ್ನು ವಿರಾಜಪೇಟೆಯ ಮೂಲಕ ತಲುಪಬಹುದಾಗಿದೆ. ಇಲ್ಲಿನ ಕಕ್ಕಾಬೆ ಎಂಬ ಹಳ್ಳಿಯಿಂದ ಚಾರಣವನ್ನು ಪ್ರಾರಂಭಿಸಬಹುದು. ಸ್ವಲ್ಪಮಟ್ಟಿಗೆ ಕಷ್ಟವಾಗಿರುವ ಈ ಚಾರಣವು ಬೆಟ್ಟದಗುಂಟ 8 ಕಿ.ಮೀ ಚಲಿಸಬೇಕಾಗಿದ್ದು 5 ಘಂಟೆಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಕಕ್ಕಾಬೆ ಹಳ್ಳಿಯಲ್ಲಿ ತಂಗಲು ವಸತಿ ಮನೆಗಳಿದ್ದು, ಹಿಂದಿನ ದಿನ ರಾತ್ರಿ ಇಲ್ಲಿಗೆ ಬಂದು ಮರು ದಿನ ಬೆಳಿಗ್ಗೆ ಚಾರಣವನ್ನು ಪ್ರಾರಂಭಿಸಬಹುದಾಗಿದೆ.

ಚಿತ್ರಕೃಪೆ: Shyamal

ಕೊಡಗು:

ಕೊಡಗು:

ಪಶ್ಚಿಮ ಘಟ್ಟಗಳ ಕಾನನದಲ್ಲಿ ನೆಲೆಸಿರುವ ಸುವಾಸನೆಯ ಕಾಫಿನಾಡು ಕೊಡಗು ಜಿಲ್ಲೆಯೆ ಒಂದು ಸುಂದರ ಅನುಭವ ಕೊಡಬಲ್ಲ ಜನಪ್ರಿಯವಾದ ಚಾರಣ ತಾಣವಾಗಿದೆ. ಬೆಂಗಳೂರಿನಿಂದ 250 ಕಿ.ಮೀ ಗಳಷ್ಟು ದೂರವಿರುವ ಕೊಡಗನ್ನು ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದಾಗಿದ್ದು, ಹತ್ತು ಹಲವು ಚಾರಣ ಮಾರ್ಗಗಳನ್ನು ಇಲ್ಲಿಂದ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ತಲಕಾವೇರಿ, ಕೊಟ್ಟೆಬೆಟ್ಟ, ಭಾಗಮಂಡಲ, ಕಾಫಿ ತೋಟಗಳು ಈ ರೀತಿಯಾಗಿ ಚಾರಣಗಳನ್ನು ಕೈಗೊಳ್ಳಬಹುದಾಗಿದೆ.

ಚಿತ್ರಕೃಪೆ: Aneezone

ಅಂತರಗಂಗೆ:

ಅಂತರಗಂಗೆ:

ಬೆಂಗಳೂರಿನಿಂದ 70 ಕಿ.ಮೀ ದೂರವಿರುವ ಅಂತರಗಂಗೆಯು ಅಗ್ನಿಶಿಲೆಗಳನೊಳಗೊಂಡ ಒಂದು ಅದ್ಭುತ ಬೆಟ್ಟವಾಗಿದೆ. ಮುಳ್ಳು ಪೊದೆಗಳು, ಗಿಡಮರಗಳಿಂದ ಆವೃತವಾಗಿರುವ ಪರ್ವತದ ಬುಡವು ಒಂದು ಸಾಹಸಮಯ ಚಾರಣದ ಉತ್ತಮ ಅನುಭೂತಿಯನ್ನು ನೀಡುತ್ತದೆ. ಬೆಟ್ಟದ ತಪ್ಪಲಿನಲ್ಲಿ ದೇವಾಲಯವೊಂದನ್ನು ಕಾಣಬಹುದಾಗಿದ್ದು ನೀರಿನ ಚಿಲುಮೆಯೊಂದು ಇಲ್ಲಿರುವುದರಿಂದ ಇದಕ್ಕೆ ಅಂತರಗಂಗೆ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Vedamurthy J

ಕುಂತಿಬೆಟ್ಟ:

ಕುಂತಿಬೆಟ್ಟ:

ಚಾರಣಯೋಗ್ಯವಾದ ಕುಂತಿಬೆಟ್ಟವು ಬೆಂಗಳೂರಿನಿಂದ 100 ಕಿ.ಮೀ ಗಳಷ್ಟು ದೂರವಿದ್ದು, ಮೈಸೂರಿನ ಪಾಂಡವಪುರದ ಬಳಿಯಲ್ಲಿದೆ. ಮೂಲತಃ ಕುಂತಿಬೆಟ್ಟವು ಎರಡು ಬೆಟ್ಟಗಳಾಗಿದ್ದು, ಬಲಬದಿಯ ಎತ್ತರದ ಬೆಟ್ಟವನ್ನು ಭೀಮನಬೆಟ್ಟ ಎನ್ನಲಾಗುತ್ತದೆ.

ಚಿತ್ರಕೃಪೆ: Ashwini Sukhdeve

ಸಾವನದುರ್ಗ:

ಸಾವನದುರ್ಗ:

ಸಾಹಸಮಯ ಚಾರಣ ಮಾಡಬಯಸುವ ಬೆಂಗಳೂರಿಗರಿಗೆ ಇದೊಂದು ನೆಚ್ಚಿನ ತಾಣವಾಗಿದೆ. ಬೆಂಗಳೂರಿನಿಂದ 60 ಕಿ.ಮೀ ಗಳಷ್ಟು ದೂರವಿರುವ ಈ ತಾಣವು ಹಲವು ಲಂಬ ಹಾಗು ಮೊನಚಾದ ಬಂಡೆಗಳಿಂದ ಕೂಡಿದ್ದು ಏರುವಾಗ ರೋಮಾಂಚಕ ಅನುಭವವನ್ನು ನೀಡುತ್ತದೆ. ಈ ಬೆಟ್ಟ ಏರುವುದು ಸ್ವಲ್ಪ ಕ್ಲಿಷ್ಟಕರವಾಗಿದ್ದು ಬಹು ಸಮಯ ತೆಗೆದುಕೊಳ್ಳುವುದರಿಂದ ಬೆಳಿಗ್ಗೆ ಸೂರ್ಯೋದಯವಾಗುವ ಕೆಲ ಘಳಿಗೆ ಮುಂಚೆಯೆ ಚಾರಣ ಆರಂಭಿಸಿದರೆ ಸೂಕ್ತ.

ಚಿತ್ರಕೃಪೆ: L. Shyamal

ಕುಮಾರ ಪರ್ವತ:

ಕುಮಾರ ಪರ್ವತ:

ಪುಷ್ಪಗಿರಿ ಅಥವಾ ಕುಮ್ಮರ ಪರ್ವತವು ಕೊಡಗಿನ ಸೋಮವಾರಪೇಟೆಯಲ್ಲಿದ್ದು, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೂ ಹತ್ತಿರವಾಗಿದೆ. ಇದೊಂದು ಕಷ್ಟಕರವಾದ ಚಾರಣ ಪಥವಾಗಿದ್ದು ಅಷ್ಟೆ ಮ್ಧುರ ಮನೋಹರವಾದ ಪ್ರಾಕೃತಿಕ ನೋಟಗಳನ್ನು, ದೃಶ್ಯಗಳನ್ನು ಚಾರಣಿಗರಿಗೆ ಒದಗಿಸುತ್ತದೆ. 30 ಕಿ.ಮೀ ಗಳಷ್ಟು ದೂರವಿರುವ ಈ ಮಾರ್ಗವು ನಿಮ್ಮನ್ನು ಕುಕ್ಕೆಯ ದಟ್ಟ ಅರಣ್ಯದೊಳಗಿಂದ ಕರೆದುಕೊಂಡು ಹೋಗುತ್ತದೆ ಹಾಗು ನೀವು ಚಾರಣಕ್ಕೆ ಹೊಸಬರಿದ್ದಲ್ಲಿ ಕನಿಷ್ಠ ಎರಡು ದಿನಗಳಷ್ಟು ಕಾಲ ತೆಗೆದುಕೊಳ್ಳುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X