Search
  • Follow NativePlanet
Share
» »ಕೊಡೈನಿಂದ ಮುನ್ನಾರ್ "ಎಸ್ಕೇಪ್ ರೂಟ್ ಟ್ರೆಕ್ಕಿಂಗ್"

ಕೊಡೈನಿಂದ ಮುನ್ನಾರ್ "ಎಸ್ಕೇಪ್ ರೂಟ್ ಟ್ರೆಕ್ಕಿಂಗ್"

By Vijay

ಕೆಲ ವರುಷಗಳ ಹಿಂದೆ ಎಲ್ಲ ಚಾರಣಿಗರ, ದಕ್ಷಿಣ ಭಾರತದ ಅತಿ ನೆಚ್ಚಿನ ಟ್ರೆಕ್ ಮಾರ್ಗವಾಗಿತ್ತು "ಎಸ್ಕೇಪ್ ರೋಡ್ ಟ್ರೆಕ್ಕಿಂಗ್". ಇದು ಕೊಡೈಕೆನಲ್ ನಿಂದ ಟ್ರೆಕ್ ಮಾಡುತ್ತ ಮುನ್ನಾರ್ ತಲುಪುವುದಾಗಿತ್ತು. ಈ ಮಾರ್ಗದಲ್ಲಿ ಯಾವುದೆ ರೀತಿಯ ರಸ್ತೆಯಾಗಲಿ ಇರಲಿಲ್ಲ ಬದಲಾಗಿ ದಟ್ಟ ಕಾಡಿನ ಮಧ್ಯದೊಳಗೆ ನುಸುಳುತ್ತ, ಕಾಡು ಪ್ರಾಣಿಗಳ ಕುರಿತು ಎಚ್ಚರಿಕೆ ವಹಿಸುತ್ತ, ಪ್ರಕೃತಿಯ ಅದ್ಭುತ ಸೊಬಗಿನ ಮಧ್ಯದಲ್ಲಿ ಚಲಿಸುವುದಾಗಿತ್ತು.

ಹೋಟೆಲ್ ಮತ್ತು ಪ್ರವಾಸಗಳ ಬುಕ್ಕಿಂಗ್ ಮೇಲೆ 70% ರಷ್ಟು ಅಮೋಘ ಕಡಿತ

ಈ ಟ್ರೆಕ್ ಮಾಡಿದವರ ಪಾಲಿಗೆ ಈ ಮಾರ್ಗವು ಇಂದಿಗೂ ಅದ್ಭುತವಾದ ಮಾರ್ಗವಾಗಿದೆ. ಇತ್ತೀಚಿಗೆ ಈ ಮಾರ್ಗದಲ್ಲಿ ಟ್ರೆಕ್ ಅನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗುತ್ತದೆ. ಟ್ರೆಕ್ ಮಾಡಲು ಅನುಮತಿ ದೊರೆಯುತ್ತಿಲ್ಲ ಎಂಬ ಮಾತಿದ್ದರೂ, ಎರಡೂ ರಾಜ್ಯಗಳ ಅರಣ್ಯ ಇಲಾಖೆಗಳಿಂದ ಮುಂಚಿತವಾಗಿ ಅನುಮತಿಯನ್ನು ನಿರ್ದಿಷ್ಟ ಸಮಯದಲ್ಲಿ ಮಾತ್ರವೆ ತೆಗೆದುಕೊಳ್ಳಬಹುದೆಂದೂ ಸಹ ಹೇಳಲಾಗುತ್ತದೆ.

ವಿಶೇಷ ಲೇಖನ : ಅತ್ಯದ್ಭುತ ಕೊಡೈಕೆನಲ್ ಆಕರ್ಷಣೆಗಳು

ಪ್ರಸ್ತುತ ಲೇಖನವು ಕೊಡೈನಿಂದ ಮುನ್ನಾರ್ ಗೆ ಸಾಗುವ ಈ ಅದ್ಭುತ ಮಾರ್ಗದ ಕುರಿತು ಸಂಕ್ಷೀಪ್ತವಾಗಿ ವಿವರಿಸುತ್ತದೆ. ಪ್ರೀತಿಯ ಓದುಗ ಪ್ರವಾಸಿಗರೆ ನಿಮಗೂ ಈ ಪ್ರವಾಸ/ಟ್ರೆಕ್ ಮಾಡಲು ಇಷ್ಟವಿದ್ದಲ್ಲಿ ಅವಸರ ಪಡದೆ ಈ ಮಾರ್ಗದಲ್ಲಿ ಅನುಮತಿ ನೀಡಲಾಗುತ್ತಿದೆಯೊ, ಇಲ್ಲವೊ ಎಂಬುದನ್ನು ಮೊದಲು ಖಚಿತಪಡಿಸಿಕೊಂಡು ನಂತರ ಯೋಜಿಸಿ. ಒಂದು ವೇಳೆ ಲಭ್ಯವಿದ್ದರೆ ಪೂರ್ವಾನುಮತಿಯನ್ನು ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಅರಣ್ಯ ಇಲಾಖೆಗಳಿಂದ ಪಡೆದುಕೊಳ್ಳುವುದು ಕಡ್ಡಾಯ.

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ಮೂಲತಃ ಈ ಮಾರ್ಗಕ್ಕೆ ಎಸ್ಕೇಪ್ ರೋಡ್ ಅಥವಾ ಪಾರಾಗುವ ರಸ್ತೆ ಎಂಬ ಹೆಸರಾದರೂ ಬರಲು ಕಾರಣವೇನೆಂಬುದು ಹಲವರಲ್ಲಿ ಮೂಡುವ ಸಂಶಯ. ಹೌದು ಈ ಮಾರ್ಗವು ಕೊಡೈನಿಂದ ಮುನ್ನಾರ್ ವರೆಗೆ ಸುಮಾರು 82 ಕಿ.ಮೀ ಗಳಲ್ಲಿ ಹಬ್ಬಿತ್ತು. ಬ್ರೀಟಿಷರು ಈ ರಸ್ತೆಯನ್ನು 1942 ರಲ್ಲಿ, ಜಪಾನಿ ಸೇನೆಯು ದಕ್ಷಿಣ ಭಾರತದ ಮೂಲಕ ಮಾಡಬಹುದಾದ ಸಂಭಾವ್ಯ ಆಕ್ರಮಣದ ಸಮಯದಲ್ಲಿ ಬಳಸಿಕೊಂಡು ಪಾರಾಗಲು ಅಭಿವೃದ್ಧಿಪಡಿಸಿದ್ದರು. ಆ ಒಂದು ಕಾರಣದಿಂದ ಈ ರಸ್ತೆಗೆ "ಎಸ್ಕೇಪ್ ರೋಡ್" ಎಂದು ಕರೆಯಲಾಗುತ್ತಿತ್ತು. ಎಸ್ಕೇಪ್ ರೋಡ್, 1981 ರಲ್ಲಿ.

ಚಿತ್ರಕೃಪೆ: MarkLaun

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

1990 ರಲ್ಲಿ ಮುಚ್ಚಿ ಹೋಗುವಕ್ಕಿಂತ ಮುಂಚೆ ಈ ರಸ್ತೆಯು ಹಿಮಾಲಯದ ನಂತರ ದಕ್ಷಿಣ ಭಾರತದಲ್ಲಿನ ಅತಿ ಎತ್ತರದಲ್ಲಿ ವಾಹನ ಚಲಾಯಿಸಬಹುದಾದ ರಸ್ತೆ ಎಂಬ ಕೀರ್ತಿಗೆ ಪಾತ್ರವಾಗಿತ್ತು. ಇಂದು ಆ ರಸ್ತೆಯು ಬಹುತೇಕವಾಗಿ ನಾಶಗೊಂಡಿದ್ದು ಅಲ್ಲೆಲ್ಲ ದಟ್ಟವಾಗಿ ಬೆಳೆದ ಮರ ಗಿಡಗಳನ್ನು ಮಾತ್ರವೆ ಕಾಣಬಹುದಾಗಿದೆ.

ಚಿತ್ರಕೃಪೆ: Peter Vangeit

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ಕೊಡೈಕೆನಾಲ್ ಬಳಿಯಿರುವ ಬೆರಿಜಾಮ್ ಕೆರೆಯಿಂದ ಈ ಟ್ರೆಕ್ಕಿಂಗ್ ಅನ್ನು ಪ್ರಾರಂಭಿಸಬಹುದಾಗಿದೆ. ಬೆರಿಜಾಮ್ ಕೆರೆಯು ಒಂದು ನಿಷೇಧಿತ ಪ್ರದೇಶವಾಗಿದ್ದು, ಬೆಳಿಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗೆ ಮಾತ್ರವೆ ಪ್ರವೇಶಿಸಲು ಅನುಮತಿಯಿದೆ ಹಾಗೂ ಇದಕ್ಕೆ ಅನುಮತಿ ಪಡೆಯಬೇಕಾಗಿರುವುದು ಅವಶ್ಯವಾಗಿದೆ. ಕೆರೆಯ ಸುತ್ತಮುತ್ತಲಿನ ಪ್ರದೇಶವು ಅಗಾಧವಾದ ಪ್ರಕೃತಿ ಸಂಪತ್ತಿನಿಂದ ಕೂಡಿದ್ದು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ವಿಶೇಷ ಅನುಮತಿಯ ಮೆರೆಗೆ ಇಲ್ಲಿ ರಾತ್ರಿ ಕ್ಯಾಂಪ್ ಗಳನ್ನೂ ಸಹ ಹೂಡಬಹುದು.

ಚಿತ್ರಕೃಪೆ: Ravi S. Ghosh

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ಈ ಟ್ರೆಕ್ಕಿಂಗ್ ಮಾರ್ಗವು ಮೊದಲಿಗೆ ಬೆರಿಜಾಮ್ ನಿಂದ ಟಾಪ್ ಸ್ಟೇಷನ್ ಎಂಬ ಸ್ಥಳಕ್ಕೆ ತಲುಪುವುದಾಗಿದೆ. ಈ ಮಾರ್ಗದಲ್ಲಿ ಹಲವಾರು ನದಿಗಳನ್ನು ದಾಟಬೇಕಾದ ಪರಿಸ್ಥಿತಿಯಿದೆ. ಇದರಿಂದಾಗಿ ಈ ಮಾರ್ಗವು ಸವಾಲೊಡ್ಡುವ ಚಾರಣ ಮಾರ್ಗವಾಗಿದೆ.

ಚಿತ್ರಕೃಪೆ: Chandrachoodan Gopalakrishnan

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ಬೆರಿಜಾಮ್ ನಿಂದ ಪ್ರಾರಂಭವಾಗಿ ದಟ್ಟಾರಣ್ಯದ ಮಧ್ಯೆ ನುಸುಳುತ್ತ ಹಲವು ನೀರಿನ ತೊರೆಗಳನ್ನು ದಾಟಿದ ನಂತರ ಕಿಳವರೈ ಎಂಬ ಹಳ್ಳಿಗೆ ತಲುಪುತ್ತೇವೆ. ಈ ಟ್ರೆಕ್ಕಿಂಗ್ ಸಂದರ್ಭದಲ್ಲಿ ಕಾಡುಗಳಲ್ಲಿ ಸಾಕಷ್ಟು ಜಿಗಣೆಗಳಿರುವುದರಿಂದ ಎಚ್ಚರ ವಹಿಸುವುದು ಅತ್ಯಗತ್ಯ.

ಚಿತ್ರಕೃಪೆ: Peter Vangeit

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ಅಲ್ಲದೆ ಈ ಕಾಡಿನ ಭಾಗಗಳು ಕಾಡು ಪ್ರಾಣಿಗಳ ಓಡಾಟಕ್ಕೆ ಮುಕ್ತವಾಗಿರುವುದರಿಂದ ಕಾಡು ಪ್ರಾಣಿಗಳು ಕಂಡುಬರಬಹುದು. ಅಂತಹ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಅಲ್ಲದೆ ಪ್ರಥಮೋಪಾಯವಾಗಿ ನಿಮ್ಮಲ್ಲಿ ಊಟದ ವ್ಯವಸ್ಥೆ, ಟಾರ್ಚುಗಳಿದ್ದರೆ ಬಲು ಉತ್ತಮ. ಇನ್ನೂ ಈ ಚಾರಣಕ್ಕೆ ನಿಪುಣ ಮಾರ್ಗದರ್ಶಿಯ ಸಹಾಯ ಬೇಕಾಗುವ ಅವಶ್ಯಕತೆಯಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: MarkLaun

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ಕಿಳವರೈ ನಂತರ ಸಾಕಷ್ಟು ಏರು ಹಾಗೂ ತಗ್ಗು ಪ್ರದೇಶಗಳು ಚಾರಣಿಗರನ್ನು ಸ್ವಾಗತಿಸುತ್ತದೆ. ಅಲ್ಲದೆ ಅಲ್ಲಲ್ಲಿ ದೊರೆಯುವ ನೀರಿನ ತೊರೆಗಳು ನಿಮ್ಮನ್ನು ಕಿಚಾಯಿಸುತ್ತಿರುವಂತೆ ತೋರುತ್ತವೆ. ಆದರೆ ಈ ನೀರು ಶುದ್ಧ ಹಾಗೂ ನಿಜವಾಗಿ ಖನಿಜಯುಕ್ತವಾಗಿರುವುದರಿಂದ ಸಾಕಷ್ಟು ಚಾರಣಿಗರು ತಮ್ಮ ಬಾಟಲ್ಲುಗಳಲ್ಲಿ ಈ ನೀರನ್ನು ಮುಂದೆ ನಡೆಯುವಾಗ ಕುಡಿಯಲೆಂದು ತುಂಬಿಕೊಳ್ಳುತ್ತಾರೆ. ಈ ಮಾರ್ಗದಲ್ಲಿ ಮೊನಚಾದ ತಿರುವುಗಳು, ಆಳಗಳು ಇರುವುದರಿಂದ ಸಾಕಷ್ಟು ಜಾಗರೂಕತೆಯಿಂದ ಚಲಿಸುತ್ತಿರಬೇಕು. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: MarkLaun

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ಈ ಮಾರ್ಗದಲ್ಲಿ ಹೀಗೆ ಮುಂದೆ ಸಾಗಿದಾಗ ಒಂದು ವೀಕ್ಷಣಾ ಗೋಪುರವು ದೊರೆಯುತ್ತದೆ. ಇದರ ಮೇಲಿನಿಂದ ನೋಡಿದಾಗ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯದ ಅಗಾಧತೆಯು ಕಣ್ಣುಗಳ ಮುಂದೆ ಅದ್ಭುತವಾಗಿ ಗೋಚರಿಸುತ್ತದೆ.

ಚಿತ್ರಕೃಪೆ: Petner Vangeit

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ಈ ಮಾರ್ಗವು ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಗಡಿಯ ಮಾರ್ಗವಾಗಿದ್ದು ಇದರಲ್ಲಿ ಮುಂದುವರೆದಾಗ ಅರಣ್ಯ ಇಲಾಖೆಯ ವಸತಿ ಗೃಹವೊಂದು ನಿಮ್ಮನ್ನು ಬರಮಾಡಿಕೊಳ್ಳುತ್ತದೆ. ಇಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದಾಗಿದ್ದು, ಬೇಕಿದ್ದರೆ ಅಡುಗೆಯನ್ನೂ ಸಹ ಮಾಡಿಕೊಳ್ಳಬಹುದು. ಗಮನವಿರಲಿ: ಇದರಲ್ಲಿ ತಂಗಲು ಮೊದಲೆ ಅನುಮತಿಪಡೆಯಬೇಕಾಗಿರುತ್ತದೆ ಹಾಗೂ ಅಡುಗೆ ಮಾಡಿಕೊಳ್ಳಲು ಯಾವುದೆ ರೀತಿಯ ಸಾಮಾನು ಸಾಮಗ್ರಿಗಳು ಇಲ್ಲಿ ಇರದೆ ಇರುವುದರಿಂದ ನೀವೆ ಸ್ವತಃ ಅವುಗಳನ್ನು ತರಬೇಕಾಗುತ್ತದೆ. ಪೂಂಬರೈ ಎಂಬ ಹಳ್ಳಿ.

ಚಿತ್ರಕೃಪೆ: Marcus334

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ವಸತಿ ಗೃಹದಲ್ಲಿ ವಿಶ್ರಾಂತಿ ಪಡೆದ ನಂತರ ಮತ್ತೆ ಚಾರಣಕ್ಕೆ ತಯಾರಾಗಿ. ಈ ಮುಂದಿನ ಚಾರಣವು ನಿಜ ಅರ್ಥದಲ್ಲಿ ಎಸ್ಕೇಪ್ ರಸ್ತೆಯ ಮೂಲಕ ಹೋಗುವ ಮಾರ್ಗವಾಗಿದೆ. ಹಿಂದೆ ರಸ್ತೆ ಸುಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಇದರ ಮೇಲೆ ಮೈಲಿಗಲ್ಲುಗಳು ಹಾಗೂ ಸೂಚಕಗಳಿದ್ದವು. ಆದರೆ ಇಂದು ರಸ್ತೆಯಿಲ್ಲದಿರುವ ಕಾರಣದಿಂದ ಅವುಗಳು ಅಲ್ಲಲ್ಲಿ ನಶಿಸಿ ಹೋಗಿದ್ದು ರಸ್ತೆಯ ಮೇಲೆಲ್ಲ ಗಿಡ ಮರಗಳು ಆವರಿಸಿರುವುದನ್ನು ಕಾಣಬಹುದು.

ಚಿತ್ರಕೃಪೆ: Marcus334

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ಈ ಮಾರ್ಗವು ಅದ್ಭುತವಾದ ಟಾಪ್ ಸ್ಟೇಷನ್ ಸ್ಥಳಕ್ಕೆ ಕರೆದೊಯ್ಯುತ್ತದೆ. ಈ ಮಾರ್ಗದಲ್ಲಿ ಅಲ್ಲಲ್ಲಿ ಮೊನಚಾದ ಎತ್ತರದ ಶಿಖರಗಳನ್ನು ಕಾಣಬಹುದಾಗಿದ್ದು ಅದರ ಮೇಲಿನಿಂದ ಸ್ಥಳದ ಅದ್ಭುತ ವಿಹಂಗಮ ನೋಟವನ್ನು ಸವಿಯಬಹುದಾಗಿದೆ. ಮುಂದಿನ ಸ್ಲೈಡುಗಳಲ್ಲಿ ಟಾಪ್ ಸ್ಟೆಷನ್ ಮಾರ್ಗದಿಂದ ಹಿಡಿದು 34 ಕಿ.ಮೀ ದೂರದಲ್ಲಿರುವ ಮುನ್ನಾರ್ ವರೆಗಿನ ಮಧ್ಯದಲ್ಲಿ ಕಂಡುಬರುವ ಚಿತ್ರಗಳನ್ನು ಸವಿಯಿರಿ. ರಸ್ತೆಯ ಮೈಲಿಗಲ್ಲು ಸೂಚಕ.

ಚಿತ್ರಕೃಪೆ: Peter Vangeit

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ರೋಮಾಂಚನಗೊಳಿಸುವ ಟ್ರೆಕ್ ಮಾರ್ಗದ ಮಧ್ಯದಲ್ಲಿ ಕಂಡುಬರುವ ಸುಂದರ ಹಾಗೂ ಅಮೋಘ ದೃಶ್ಯಾವಳಿಗಳು.

ಚಿತ್ರಕೃಪೆ: Shanmugamp7

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ರೋಮಾಂಚನಗೊಳಿಸುವ ಟ್ರೆಕ್ ಮಾರ್ಗದ ಮಧ್ಯದಲ್ಲಿ ಕಂಡುಬರುವ ಸುಂದರ ಹಾಗೂ ಅಮೋಘ ದೃಶ್ಯಾವಳಿಗಳು.

ಚಿತ್ರಕೃಪೆ: Shanmugamp7

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ರೋಮಾಂಚನಗೊಳಿಸುವ ಟ್ರೆಕ್ ಮಾರ್ಗದ ಮಧ್ಯದಲ್ಲಿ ಕಂಡುಬರುವ ಸುಂದರ ಹಾಗೂ ಅಮೋಘ ದೃಶ್ಯಾವಳಿಗಳು.

ಚಿತ್ರಕೃಪೆ: Shanmugamp7

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ರೋಮಾಂಚನಗೊಳಿಸುವ ಟ್ರೆಕ್ ಮಾರ್ಗದ ಮಧ್ಯದಲ್ಲಿ ಕಂಡುಬರುವ ಸುಂದರ ಹಾಗೂ ಅಮೋಘ ದೃಶ್ಯಾವಳಿಗಳು.

ಚಿತ್ರಕೃಪೆ: Arshad.ka5

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ರೋಮಾಂಚನಗೊಳಿಸುವ ಟ್ರೆಕ್ ಮಾರ್ಗದ ಮಧ್ಯದಲ್ಲಿ ಕಂಡುಬರುವ ಸುಂದರ ಹಾಗೂ ಅಮೋಘ ದೃಶ್ಯಾವಳಿಗಳು.

ಚಿತ್ರಕೃಪೆ: Issacsam

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ರೋಮಾಂಚನಗೊಳಿಸುವ ಟ್ರೆಕ್ ಮಾರ್ಗದ ಮಧ್ಯದಲ್ಲಿ ಕಂಡುಬರುವ ಸುಂದರ ಹಾಗೂ ಅಮೋಘ ದೃಶ್ಯಾವಳಿಗಳು.

ಚಿತ್ರಕೃಪೆ: Lakshmichandrakanth

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ರೋಮಾಂಚನಗೊಳಿಸುವ ಟ್ರೆಕ್ ಮಾರ್ಗದ ಮಧ್ಯದಲ್ಲಿ ಕಂಡುಬರುವ ಸುಂದರ ಹಾಗೂ ಅಮೋಘ ದೃಶ್ಯಾವಳಿಗಳು.

ಚಿತ್ರಕೃಪೆ: Bimal K C

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ರೋಮಾಂಚನಗೊಳಿಸುವ ಟ್ರೆಕ್ ಮಾರ್ಗದ ಮಧ್ಯದಲ್ಲಿ ಕಂಡುಬರುವ ಸುಂದರ ಹಾಗೂ ಅಮೋಘ ದೃಶ್ಯಾವಳಿಗಳು.

ಚಿತ್ರಕೃಪೆ: RanjithSiji

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ರೋಮಾಂಚನಗೊಳಿಸುವ ಟ್ರೆಕ್ ಮಾರ್ಗದ ಮಧ್ಯದಲ್ಲಿ ಕಂಡುಬರುವ ಸುಂದರ ಹಾಗೂ ಅಮೋಘ ದೃಶ್ಯಾವಳಿಗಳು.

ಚಿತ್ರಕೃಪೆ: Matthieu Aubry

ಎಸ್ಕೇಪ್ ರೋಡ್ ಟ್ರೆಕ್:

ಎಸ್ಕೇಪ್ ರೋಡ್ ಟ್ರೆಕ್:

ಅದ್ಭುತವಾದ ನೋಟ ಹೊತ್ತು ನಿಂತ ಮುನ್ನಾರ್ ಗಿರಿಧಾಮ.

ಚಿತ್ರಕೃಪೆ: Bimal K C

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more