» »ಬೆಂಗಳೂರಿನಿಂದ ಊಟಿಗೊಂದು ಅದ್ಭುತ ಪ್ರಕೃತಿಯ ಪಯಣ

ಬೆಂಗಳೂರಿನಿಂದ ಊಟಿಗೊಂದು ಅದ್ಭುತ ಪ್ರಕೃತಿಯ ಪಯಣ

Written By:

ವಾರಾಂತ್ಯದಲ್ಲಿ ಯಾವುದಾದರೂ ಸುಂದರ ಪ್ರದೇಶದಲ್ಲಿ ಸ್ನೇಹಿತರ ಜೊತೆ ಹೋಗಬೇಕು ಎಂದು ಯೋಜನೆ ರೂಪಿಸುತ್ತಿದ್ದರೆ ಅಂತಹವರಿಗೆ ಬಂಡೀಪುರ, ಮಧುಮಾಲಾಯಿ, ಊಟಿ ಒಂದು ಅತ್ಯುತ್ತಮವಾದ ತಾಣವಾಗಲಿದೆ. ಬೆಂಗಳೂರಿನಿಂದ ಊಟಿಗೆ ಸುಮಾರು 277 ಕಿ,ಮೀ ದೂರವಿದ್ದು, ಹಲವಾರು ಪ್ರವಾಸಿಗರು ಈ ತಾಣಕ್ಕೆ ಹೆಚ್ಚು ಭೇಟಿ ನೀಡುತ್ತಾರೆ.

ಆಕರ್ಷಣೀಯವಾದ ಪ್ರಕೃತಿಯಲ್ಲಿ ಸ್ವಲ್ಪ ದಿನಗಳವರೆಗೆ ಹಚ್ಚ ಹಸಿರಿನ ಸೌಂದರ್ಯದಲ್ಲಿ ಮಲಗಿ ಬರಲು ಹಾಗೂ ವನ್ಯ ಜೀವಿ ಪ್ರೇಮಿಗಳಿಗೆ ಬಂಡೀಪುರ ಹಾಗೂ ಮಧುಮಾಲಾಯಿ ಸೂಕ್ತವಾದ ಸ್ಥಳವಾಗಿದೆ.

ಸಾಮಾನ್ಯವಾಗಿ ಯುವ ಜನತೆಯು ಕಾಡಿನಲ್ಲಿ ಓಡಾಡಲು, ಟ್ರೆಕ್ಕಿಂಗ್ ಮಾಡಲು, ಸಾಹಸವನ್ನು ಮಾಡಲು ಬಯಸುತ್ತಾರೆ. ಈ ಎಲ್ಲಾ ಚಟುವಟಿಕೆಗಳಿಗೆ ಅತ್ಯತ್ತುಮವಾದ ತಾಣವಾಗಲಿದೆ. ಅತ್ಯಂತ ಸಂತೋಷವನ್ನು ನೀಡುವ ಈ ಸ್ಥಳಕ್ಕೆ ಒಮ್ಮೆ ಭೇಟಿ ನೀಡಲೇಬೇಕು ಅಲ್ಲವೇ?

ಬಂಡೀಪುರ ಅರಣ್ಯ

ಬಂಡೀಪುರ ಅರಣ್ಯ

ಮಾಸಿನಗುಡಿಗೆ ಸಮೀಪದಲ್ಲಿ ಬಂಡೀಪುರ ರಾಷ್ಟೀಯ ಉದ್ಯಾನವನವಿದೆ. ಇದು 25 ಕಿ,ಮೀ ದೂರದಲ್ಲಿರುವ ಭಾರತದ ಸುರಕ್ಷಿತವಾದ ಪ್ರದೇಶದಲ್ಲಿ ಒಂದಾಗಿದೆ. ಇದು ಪ್ರಮುಖ ಪ್ರಾಜೆಕ್ಟ್ ರಿಸರ್ವ್. ಸುಮಾರು 70 ಹುಲಿಗಳು ಮತ್ತು ದೊಡ್ಡ ಸಂಖ್ಯೆಯ ಏಶಿಯಾಟಿಕ್ ಆನೆಗಳನ್ನೂ ಕೂಡ ಒಳಗೊಂಡ ಅದ್ಭುತವಾದ ಕಾಡು ಇದಾಗಿದೆ. ಬಂಡೀಪುರ ಅರಣ್ಯವು ವನ್ಯ ಜೀವಿಗಳಿಗೆ ಸುರಕ್ಷಿತವಾದ ಸ್ವರ್ಗ ಎಂದರೆ ತಪ್ಪಾಗಲಾರದು.

ಬಂಡೀಪುರ ಅರಣ್ಯ

ಬಂಡೀಪುರ ಅರಣ್ಯ

ಬಂಡೀಪುರವು ಪ್ರಾಣಿ ಪ್ರಿಯರಿಗೆ ಒಂದು ರಸ ದೌತಣ. ಇಲ್ಲಿ ಪಕ್ಷಿ ಪ್ರಪಂಚವನ್ನು ಕೂಡ ಸವಿಯಬಹುದಾಗಿದೆ. ಸುಮಾರು 300 ಕ್ಕೂ ಅಧಿಕ ವಿವಿಧ ಪಕ್ಷಿಗಳ ನೆಲೆಯೂ ಕೂಡ ಆಗಿದೆ. ಇಲ್ಲಿ ಆನೆಗಳು, ಪ್ಯಾಂತರ್, ಜ್ಯಾಕಲ್, ಜಿಂಕೆಗಳು, ಕರಡಿಗಳು, ಸರ್ಪಗಳು ಇನ್ನೂ ಹಲವಾರು ಪ್ರಾಣಿ ಹಾಗೂ ಪಕ್ಷಿ ಸಂಕುಲವನ್ನು ಹೊಂದಿರುವ ಅದ್ಭುತ ಅರಣ್ಯವೇ ಬಂಡೀಪುರ ಅರಣ್ಯ.

ತಂಗಲು ಸ್ಥಳ

ತಂಗಲು ಸ್ಥಳ

ಇಲ್ಲಿ ಹಲವಾರು ಪ್ರವಾಸಿಗರು ತಂಗುವ ಸ್ಥಳವಾಗಿದ್ದು, ಹಾಸ್ಟೇಲ್, ಕುಠೀರಗಳ ವ್ಯವಸ್ಥೆ ಕೂಡ ಇಲ್ಲಿನ ಪ್ರವಾಸಿಗಳಿಗಿದೆ. ರುಚಿ ರುಚಿಯಾದ ಆಹಾರದಿಂದ ನಿಮ್ಮನ್ನು ಸ್ವಾಗತಿಸುವ ಈ ಕುಠೀರಗಳು ಜೀವನದ ಒಂದು ಸಂತೋಷದಾಯಕವಾದ ಕ್ಷಣ ನಿಮ್ಮದಾಗಲಿದೆ.

ಮಧುಮಾಲಾಯಿಗೆ ಸ್ವಾಗತ

ಮಧುಮಾಲಾಯಿಗೆ ಸ್ವಾಗತ

ಮುದುಮಲೈ ರಾಷ್ಟೀಯ ಉದ್ಯಾನವನವು ಮಾನಸಗುಡಿಯಿಂದ ಸುಮಾರು 15 ಕಿ,ಮೀ ದೂರದಲ್ಲಿದೆ. ಈ ಅರಣ್ಯ ಪ್ರದೇಶವನ್ನು ಹುಲಿ ಮೀಸಲು ಸ್ಥಳ ಎಂದು ಘೋಷಿಸಲಾಗಿದೆ. ಇಲ್ಲಿ ಏಷ್ಯಾದ ಆನೆಗಳು, ಕಾಡೆಮ್ಮೆ ಮತ್ತು ಮಚ್ಚೆಗಳುಳ್ಳ ಜಿಂಕೆಗಳು ದೊಡ್ಡ ಹಿಂಡುಗಳನ್ನು ಕಾಣಬಹುದಾಗಿದೆ. ಈ ಅಭಯಾರಣ್ಯವು ಹುಲಿಗಳು, ಚಿರತೆಗಳು ಮತ್ತು ಅಪರೂಪದ ಪ್ರಾಣಿಗಳನ್ನು ಹೊಂದಿರುವ ಕಾಡು ಎಂದು ಹೆಗ್ಗಳಿಕೆ ಪಡೆದಿದೆ. ಇಲ್ಲಿ ಅಳಿವಿನಂಚಿನಲ್ಲಿರುವ ಕಪ್ಪು ಹಾಗೂ ಕಿತ್ತಳೆ ಬಣ್ಣದ ಪ್ಲೈಕ್ಯಾಚರ್ ಸೇರಿದಂತೆ ಸುಮಾರು 266 ಜಾತಿಯ ಪಕ್ಷಿಗಳ ನೆಲೆಯಾಗಿದೆ. ಈ ಸುಂದವಾದ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಹಲವಾರು ಪ್ರವಾಸಿಗರು ಈ ತಾಣಕ್ಕೆ ಬರುತ್ತಾರೆ.

ಹಿಮಾವದ್ ಗೋಪಾಲಸ್ವಾಮಿ ಬೆಟ್ಟ

ಹಿಮಾವದ್ ಗೋಪಾಲಸ್ವಾಮಿ ಬೆಟ್ಟ

ಪ್ರಸಿದ್ಧ ಬೆಟ್ಟದ ಹಿಮಾವದ್ ಗೋಪಾಲಸ್ವಾಮಿ ಬೆಟ್ಟ ಸಹ ಮಾಸಿನಗುಡಿಯ ಪ್ರಮುಖವಾದ ಆಕರ್ಷಣೆಯಾಗಿದೆ. ಬೆಟ್ಟದ ತುದಿಯಲ್ಲಿ ಶ್ರೀ ಕೃಷ್ಣನಿಗೆ ಸಮರ್ಪಿತವಾದ ದೇವಾಲವಿದೆ. ಸುಂದರವಾದ ಮಂಜು ವರ್ಷದ ಹೆಚ್ಚಿನ ದಿನಗಳು ಆವರಿಸಿರುತ್ತದೆ. ಈ ಬೆಟ್ಟದಿಂದ ಬಂಡೀಪುರ ಅರಣ್ಯವನ್ನು ಕಾಣಬಹುದು. ನಿಮ್ಮ ಪ್ರಯಾಣದ ಅವಧಿಯಲ್ಲಿ ತಪ್ಪದೇ ಈ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಅಲ್ಲಿನ ಶ್ರೀ ಕೃಷ್ಣನ ದರ್ಶನ ಭಾಗ್ಯವನ್ನು ಪಡೆಯಿರಿ.

ಊಟಿ

ಊಟಿ

ಮಾಸಿನಗುಡಿಯಿಂದ ಸುಮಾರು 36 ಕಿ,ಮೀ ದೂರದಲ್ಲಿರುವ ಊಟಿ ಮತ್ತೊಂದು ಸುಂದರವಾದ ಪ್ರವಾಸಿ ಆರ್ಕಷಣೆಯಾಗಿದೆ. ಊಟಿ ಯುವಕರಿಂದ ಹಿಡಿದು ವೃದ್ದರಿಗೂ ಅಚ್ಚು ಮೆಚ್ಚು. ಇಲ್ಲಿನ ತಂಪಾದ ಗಾಳಿ, ಚಳಿ, ವಾತಾವರಣ ಬೆಂಗಳೂರಿನ ಬೇಸಿಗೆಯ ಸಮಯದಲ್ಲಿ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿನ ಸೌಂದರ್ಯವು ಎಲ್ಲರನ್ನೂ ಬೆರಗು ಮೂಡಿಸುವಂತಹದ್ದು. ಇಲ್ಲಿ ಉದ್ಯಾನವನಗಳು, ವಸ್ತು ಸಂಗ್ರಹಾಲಯಗಳು, ದೋಣಿ ವಿಹಾರದಂತಹ ಚಟುವಟಿಕೆಯನ್ನು ಮಾಡಬಹುದಾಗಿದೆ. ಶಾಪಿಂಗ್ ಪ್ರಿಯರಿಗೆ ಊಟಿ ಒಂದು ಉತ್ತಮವಾದ ವೇದಿಕೆಯಾಗಲಿದೆ. ಇಲ್ಲಿ ಸುತ್ತ ಮುತ್ತ ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ.

Please Wait while comments are loading...