Search
  • Follow NativePlanet
Share
» »ನಗರವೊಂದು ಅದ್ಬುತಗಳು ಹಲವಾರು : ಮೈಸೂರು

ನಗರವೊಂದು ಅದ್ಬುತಗಳು ಹಲವಾರು : ಮೈಸೂರು

ಹಲವಾರು ಅದ್ಬುತಗಳ ತವರೂರು ಮೈಸೂರು !

ಪ್ರಕೃತಿಯ ವಿಷಯದಲ್ಲಾಗಲಿ ಅಥವಾ ಬೇರೆ ಯಾವುದಾದರೂ ಅದ್ಬುತಗಳಿಗಾಗಲಿ ಮೈಸೂರು ಹಲವಾರು ಅದ್ಬುತಗಳನ್ನು ತನ್ನಲ್ಲಿ ಹೊಂದಿರುವಂತಹ ನಗರವಾಗಿದೆ. ಈ ಸಲ ಮೈಸೂರು ದಸರಾಗೆ ಪ್ರವಾಸ ಮಾಡಲು ಇಚ್ಚಿಸುವಿರಾದಲ್ಲಿ, ಇಲ್ಲಿ ಕೆಲವು ಸ್ಥಳಗಳ ಪಟ್ಟಿ ಇದೆ. ಇವುಗಳಿಗೆ ನೀವು ಖಂಡಿತವಾಗಿಯೂ ಭೇಟಿ ಕೊಡಲೇಬೇಕು. ಟಾಂಗಾಗಳು ಮತ್ತು ಅರಮನೆಗಳೊಂದಿಗೆ, ಮೈಸೂರು ಹಳೆಯ-ಪ್ರಪಂಚದ ಮೋಡಿಯನ್ನು ಮರುಸೃಷ್ಟಿಸುತ್ತದೆ, ಇಂತಹ ಅನುಭವವನ್ನು ಅನುಭವಿಸಲು ನೀವು ತಪ್ಪಿಸಿಕೊಳ್ಳಬಾರದು!

"ಕರ್ನಾಟಕದ ಸಾಂಸ್ಕೃತಿಕ ನಗರವೆಂಬ "ಹೆಮ್ಮೆಗೆ ಮೈಸೂರು ಪಾತ್ರವಾಗಿದೆ. ಹಿಂದೆ ಹಲವಾರು ರಾಜವಂಶಗಳಿಂದ ಆಳಿದ ರಾಜ್ಯವಾಗಿರುವುದರಿಂದ, ಈ ನಗರ ಮತ್ತು ಅದರ ಜನರು ಕಲೆ ಮತ್ತು ಕರಕುಶಲ ಕೆಲಸಗಳ ಪೋಷಕರಾಗಿದ್ದಾರೆ. ಅದು ಮೈಸೂರು ಶೈಲಿಯ ಚಿತ್ರಕಲೆಯಾಗಿರಬಹುದು ಅಥವಾ ಮೃದುವಾದ ಸಿಹಿ ಖಾದ್ಯ ಮೈಸೂರು ಪಾಕ್ ಆಗಿರಬಹುದು ಅಥವಾ ಮೈಸೂರು ಪೇಟಾ ಎಂಬ ಸಾಂಪ್ರದಾಯಿಕ ಪೇಟ ಅಥವಾ ಜಗತ್ರ್ಪಸಿದ್ದ ಮೈಸೂರು ಸಿಲ್ಕ್ ಸೀರೆಯಾಗಿರಬಹುದು, ಮೈಸೂರು ಸಾಂಪ್ರದಾಯಿಕ ಕೈಗಾರಿಕೆಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಮೈಸೂರಿನಿಂದ ಹರಿದುಬರುವ ಕನ್ನಡ ಸಾಹಿತ್ಯಕ್ಕೆ ಕೆಲವು ಸ್ಥಾನಮಾನಗಳನ್ನು ಹೊಂದಿದೆ. ಅಲ್ಲದೆ ಮೈಸೂರು ಪ್ರವಾಸೋದ್ಯಮದಲ್ಲಂತೂ ಎತ್ತಿದ ಕೈ. ಹತ್ತು ದಿನಗಳ ದಸರಾ ಹಬ್ಬಗಳು ಪ್ರಪಂಚದಾದ್ಯಂತದ ಜನರನ್ನು ಅಪಾರ ಸಂಖ್ಯೆಯಲ್ಲಿ ಆಕರ್ಷಿಸುತ್ತವೆ.

06-mysorepalacedone-1663148280.jpg -Properties

ಮೈಸೂರಿನ ಬುಟ್ಟಿಯಲ್ಲಿರುವ ಕೆಲವು ಪ್ರವಾಸಿ ತಾಣಗಳು

ಶ್ರೀಮಂತಿಕೆಯ ಸ್ಪರ್ಶ ನೀಡುವ ಅಂಬಾ ವಿಲಾಸ ಅರಮನೆ !

ಅಂಬಾ ವಿಲಾಸ ಅರಮನೆ ಅಥವಾ ಮೈಸೂರು ಅರಮನೆಯು ಒಡೆಯರ್ ಗಳ ಅಧಿಕೃತ ನಿವಾಸವಾಗಿತ್ತು. ಕಾಲಾನಂತರದಲ್ಲಿ, ರಾಜವಂಶವು ಅರಮನೆಯ ವಿಸ್ತೃತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಮೈಸೂರು ಅರಮನೆಯು ಭವ್ಯವಾದ ತಾಜ್ ಮಹಲ್ ನಂತರ ಪಟ್ಟಿ ಮಾಡಲಾದ ಭಾರತದಲ್ಲಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣವಾಗಿದೆ ಎಂದು ಹೇಳಲಾಗುತ್ತದೆ. ಈ ಅರಮನೆಯ ಭೇಟಿಯ ಸಮಯವು ಬೆಳಿಗ್ಗೆ 10.00 ರಿಂದ ಸಂಜೆ 5.30 ರವರೆಗೆ ಇರುತ್ತದೆ.

giraffe-17-1476708025-1663148288.jpg -Properties

ಪ್ರಾಣಿ ಪ್ರಿಯರಿಗಾಗಿ ಮೈಸೂರು 'ಝೂ'!

ರಾಜಮನೆತನದ ಆಶ್ರಯದಲ್ಲಿ 1892 ರಲ್ಲಿ ಸ್ಥಾಪಿತವಾದ ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಅಥವಾ ಮೈಸೂರು ಮೃಗಾಲಯವು ಪ್ರಪಂಚದ ಅತ್ಯಂತ ಹಳೆಯ ಮೃಗಾಲಯಗಳಲ್ಲಿ ಒಂದಾಗಿದೆ. ಭಾರತದಲ್ಲಿನ ಎಲ್ಲಾ ಪ್ರಾಣಿಸಂಗ್ರಹಾಲಯಗಳಿಗೆ ಹೋಲಿಸಿದರೆ ಮೃಗಾಲಯವು ಹೆಚ್ಚಿನ ಸಂಖ್ಯೆಯ ಭಾರತೀಯ ಆನೆಗಳನ್ನು ಹೊಂದಿದೆ. ಮೈಸೂರು ಮೃಗಾಲಯವು ಎಲೆಕ್ಟ್ರಾನಿಕ್ ಟಿಕೆಟಿಂಗ್ ಅನ್ನು ಪ್ರಾರಂಭಿಸಿದ ಮೊದಲನೆಯ ಮೃಗಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಾರಂಜಿ ಲೇಕ್, ಪಕ್ಷಿಯ ಮತ್ತು ಸುಂದರ ತಟಗಳು

ಕಾರಂಜಿ ಸರೋವರವು 1976 ರಲ್ಲಿ ಮೈಸೂರು ಮೃಗಾಲಯದ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡ ಒಂದು ಸಣ್ಣ ದ್ವೀಪವಾಗಿದೆ. ಈ ಸರೋವರವು ಚಿಟ್ಟೆ ಪಾರ್ಕ್ ಮತ್ತು ಭಾರತದ ಅತಿದೊಡ್ಡ 'ವಾಕ್-ಥ್ರೂ' ಪಂಜರವನ್ನು ಹೊಂದಿದೆ. ಅಲ್ಲದೆ, ನೈಸರ್ಗಿಕ ಇತಿಹಾಸವನ್ನು ಒಳಗೊಂಡ ಈ ಪ್ರಾದೇಶಿಕ ವಸ್ತುಸಂಗ್ರಹಾಲಯವು ಈ ಸುಂದರ ಸರೋವರದ ದಡದಲ್ಲಿದೆ.ಗ್ರೇ ಪೆಲಿಕನ್, ಐಬಿಸ್, ಪೇಂಟೆಡ್ ಸ್ಟೋರ್ಕ್ ಮತ್ತು ಎಗ್ರೆಟ್ ಸೇರಿದಂತೆ 147 ಜಾತಿಯ ಪಕ್ಷಿಗಳು ಪ್ರತಿ ವರ್ಷ ಸರೋವರಕ್ಕೆ ವಲಸೆ ಬರುತ್ತವೆ.

krs1-14-1473837516-1663148296.jpg -Properties

ಆಧುನಿಕ ಯುಗಕ್ಕಾಗಿ, ಕೆಆರ್ ಎಸ್ ಅಣೆಕಟ್ಟು!

ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣ ರಾಜ ಸಾಗರ ಅಣೆಕಟ್ಟು ಅಥವಾ ಕೆಆರ್ ಎಸ್ ಅಣೆಕಟ್ಟನ್ನು ನಿರ್ಮಿಸಲಾಗಿದ್ದು, ಇದು ಮೈಸೂರು ಮತ್ತು ಮಂಡ್ಯಾ ಜಿಲ್ಲೆಗೆ ಪ್ರಮುಖ ನೀರಾವರಿ ಮೂಲವಾಗಿದೆ. ಸರ್.ಎಂ ವಿಶ್ವೇಶ್ವರಯ್ಯ ಅವರು ಈ ಅಣೆಕಟ್ಟಿನ ಮುಖ್ಯ ಎಂಜಿನಿಯರ್ ಆಗಿದ್ದರು. ಇಲ್ಲಿಯ ಗೇಟ್‌ಗಳನ್ನು ತೆರೆದ ಕ್ಷಣದಲ್ಲಿ ಕಾವೇರಿ ನದಿಯು ಧುಮ್ಮಿಕ್ಕುವ ನೋಟವು ಅತ್ಯಂತ ಸುಂದರವಾದ ದೃಶ್ಯಾವಳಿಯಾಗಿದೆ.

ಸಂಗೀತ ಮತ್ತು ಸೌಂದರ್ಯತೆಗಾಗಿ ಬೃಂದಾವನ ಉದ್ಯಾನವನಗಳು!

ಬೃಂದಾವನ ಉದ್ಯಾನವನವು ಕೆಆರ್‌ಎಸ್ ಅಣೆಕಟ್ಟಿಗೆ ಅಡ್ಡಲಾಗಿ ನಿರ್ಮಿಸಲಾದ ಅಲಂಕಾರಿಕ ಉದ್ಯಾನವಾಗಿದೆ. ಸೊಗಸಾದ ಬೃಂದಾವನ ಉದ್ಯಾನಗಳು ಕಾಶ್ಮೀರದ ಶಾಲಿಮಾರ್ ಉದ್ಯಾನಗಳಿಂದ ಸ್ಫೂರ್ತಿ ಪಡೆದು ನಿರ್ಮಿತವಾದುದಾಗಿದ್ದು,. ಇಲ್ಲಿರುವ ಸಂಗೀತ ಮತ್ತು ನೃತ್ಯ ಕಾರಂಜಿಗಳು ಎಲ್ಲಾ ವಯೋಮಾನದ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಕಲಾವಸ್ತುಗಳಿಗಾಗಿ ಜಗನ್ಮೋಹನ ಪ್ಯಾಲೇಸ್ !

ಮೈಸೂರು ನಗರವನ್ನು "ಅರಮನೆಗಳ ನಗರ" ಎಂದೂ ಕರೆಯಲಾಗುತ್ತದೆ ಜಗನ್ಮೋಹನ ಅರಮನೆಯು ಮೈಸೂರಿನ ಅತ್ಯಂತ ಸುಂದರ ಅರಮನೆಗಳಲ್ಲೊಂದಾಗಿದೆ. ಈ ಅರಮನೆಯು ಮೊದಲು ಮೈಸೂರಿನ ರಾಜವಂಶಸ್ಥರ ವಾಸಸ್ಥಳವಾಗಿತ್ತು. ಇಂದು ಈ ಅರಮನೆಯು ಆರ್ಟ್ ಗ್ಯಾಲರಿಯಾಗಿ ಪರಿವರ್ತನೆಗೊಂಡಿದೆ. ಇಲ್ಲಿ ದಸರಾ ಉತ್ಸವಗಳ ಸುಂದರ ಚಿತ್ರಣಗಳು ಮತ್ತು ರಾಜಾ ರವಿ ವರ್ಮಾ ಅವರ ಪ್ರಸಿದ್ಧ ವರ್ಣಚಿತ್ರಗಳು ಪ್ರಮುಖವಾಗಿವೆ.

25-1443185620-brindavan2-1663148271.jpg -Properties

ನಗರದಲ್ಲಿಯ ಪ್ರಶಾಂತವಾದ ತಾಣ ಕುಕ್ಕರಹಳ್ಳಿ ಸರೋವರ, !

ನಗರದ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಯು ಮೈಸೂರು ವಿಶ್ವವಿದ್ಯಾನಿಲಯದ ಆವರಣದ ಭಾಗವಾಗಿದೆ. ಇಲ್ಲಿಗೆ ವಲಸೆ ಬರುವ ಪಕ್ಷಿಗಳೂ ಈ , ಸರೋವರವನ್ನು ಸುಂದರಗೊಳಿಸುತ್ತವೆ. ಸೈಬೀರಿಯಾದ ಪಕ್ಷಿಗಳು ಪ್ರತಿ ವರ್ಷ ಇಲ್ಲಿಗೆ ವಲಸೆ ಬರುತ್ತವೆ ಎಂದು ಹೇಳಲಾಗುತ್ತದೆ. ಕಾಲ್ನಡಿಗೆಗೆ ಅನುಕೂಲವಾಗುವಂತಹ ಮಾರ್ಗಗಳು ಮತ್ತು ಕಲ್ಲಿನ ಬೆಂಚುಗಳನ್ನು ಹೊಂದಿರುವ ಈ ಸ್ಥಳವು ಪ್ರವಾಸಿಗರಿಗೆ ಆರಾಮದಾಯಕವಾದ ವಾತಾವರಣವನ್ನು ಒದಗಿಸುತ್ತದೆ.

ಸೌಂದರ್ಯತೆಯನ್ನು ಪ್ರತಿಬಿಂಬಿಸುವ ರೈಲು ಮ್ಯೂಸಿಯಂ (ವಸ್ತು ಸಂಗ್ರಹಾಲಯ)
ವಿಂಟೇಜ್ ಮೋಟಾರ್‌ಗಳ ಹೊರಾಂಗಣ ಪ್ರದರ್ಶನ, ದೆಹಲಿಯ ರಾಷ್ಟ್ರೀಯ ರೈಲು ವಸ್ತುಸಂಗ್ರಹಾಲಯದ ನಂತರ ಮೈಸೂರಿನ ರೈಲು ವಸ್ತುಸಂಗ್ರಹಾಲಯವು ದೇಶದ ಎರಡನೆಯ ರೈಲು ಸಂಗ್ರಹಾಲಯವಾಗಿದೆ. . ಇದನ್ನು 1979 ರಲ್ಲಿ ಭಾರತೀಯ ರೈಲ್ವೆ ಸ್ಥಾಪಿಸಿತು. ಮಕ್ಕಳಿಗೆ ಆನಂದಿಸಲು ಈ ಸ್ಥಳದಲ್ಲಿ ಮಿನಿ-ರೈಲು ಇದ್ದು ಸಂತೋಷ-ಸವಾರಿಯನ್ನು ನೀಡುತ್ತದೆ. !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X