» »ಕತ್ತಲಲ್ಲೂ ಮಿನುಗುವ ಕಡಲ ತೀರ

ಕತ್ತಲಲ್ಲೂ ಮಿನುಗುವ ಕಡಲ ತೀರ

By: Divya

ಅರಬ್ಬಿ ಸಮುದ್ರದ ಅಂಚಿನಲ್ಲಿ ಬರುವ ಸುಂದರ ತಾಣ ಕಾರವಾರ. ಗೋವಾಕ್ಕೆ ಹತ್ತಿರ ಇರುವ ಕಾರವಾರ, ದೇಶದ ಅತಿದೊಡ್ಡ ನೌಕಾನೆಲೆಯಾಗಿದೆ. ಸುತ್ತಲೂ ಕಡಲ ತೀರ, ಹತ್ತಿರದಲ್ಲಿ ಪುಣ್ಯಕ್ಷೇತ್ರಗಳನ್ನು ಒಳಗೊಂಡಿರುವ ಈ ತಾಣ ಪ್ರವಾಸಕ್ಕೊಂದು ಸೂಕ್ತ ಸ್ಥಳ. 1863ರ ಸಮಯದಲ್ಲಿ ಕಾರವಾರವು ಬ್ರಿಟಿಷ್‍ರ ಮುಖ್ಯ ಕಾರ್ಯಾಲಯದ ಸ್ಥಳವಾಗಿತ್ತು ಎಂದು ಹೇಳಲಾಗುತ್ತದೆ. ಇಲ್ಲಿ ಅನೇಕ ದ್ವೀಪಗಳು ಹಾಗೂ ಕಡಲ ತೀರಗಳಿರುವುದರಿಂದ ಯಾತ್ರಿಕ ತನ್ನ ಮನದ ದಣಿವನ್ನು ಕ್ಷಣಮಾತ್ರದಲ್ಲಿ ನಿವಾರಿಸಿಕೊಳ್ಳಬಹುದು.

ಏಕೈಕ ಅಣು ವಿದ್ಯುತ್ ಸಾಗರ ಕೈಗಾ ಕಾರವಾರಕ್ಕೆ ಸಮೀಪದಲ್ಲಿದೆ. ಬೆಂಗಳೂರಿನಿಂದ 520 ಕಿ.ಮೀ. ದೂರದಲ್ಲಿರುವ ಈ ತಾಣದಲ್ಲಿ ಕೆಲವು ವಿಶೇಷ ಸ್ಥಳಗಳಿವೆ. ವಾರದ ರಜೆಯಲ್ಲಿ ಬಂದರೆ ಕಡಲ ತೀರದ ಸೌಂದರ್ಯ ಹಾಗೂ ವಿಶೇಷತೆಗಳನ್ನು ನೋಡಬಹುದು.

ಕೂರ್ಮಗಡ

ಕೂರ್ಮಗಡ

ನೂರು ಹೆಕ್ಟೇರ್ ಪ್ರದೇಶಕ್ಕಿಂತಲೂ ಹೆಚ್ಚು ವಿಸ್ತಾರ ಹೊಂದಿದೆ ಈ ದ್ವೀಪ. ಕಾರವಾರದ ಬಂದರಿನಿಂದ ಸ್ವಲ್ಪವೇ ದೂರದಲ್ಲಿರುವ ಈ ದ್ವೀಪ ಆಮೆಯ ಆಕಾರದಲ್ಲಿದೆ. ಹಾಗಾಗಿಯೇ ಇದನ್ನು ಕೂರ್ಮಗಡ ಎಂದು ಕರೆಯುತ್ತಾರೆ. ಈ ದ್ವೀಪದ ಮಧ್ಯದಲ್ಲಿ ನರಸಿಂಹ ದೇವರ ಗುಡಿಯಿದೆ. ಇದು ಕಲ್ಲು ಬಂಡೆಯ ದ್ವೀಪವಾಗಿದ್ದರೂ ಇಲ್ಲಿ ಮರಳಿನ ತೀರವಿದೆ. ಈ ದ್ವೀಪದಲ್ಲಿ ಒಂದು ರೆಸಾರ್ಟ್ ಇದೆ. ಹಾಗಾಗಿ ಊಟ-ತಿಂಡಿಗೆ ಯಾವುದೇ ತೊಂದರೆ ಇರುವುದಿಲ್ಲ.

PC: wikipedia.org

ಸದಾಶಿವಗಡ

ಸದಾಶಿವಗಡ

ಸದಾಶಿವಗಡ ಎಂದರೆ ಕಾಳಿ ನದಿಯು ಅರಬ್ಬಿ ಸಮುದ್ರಕ್ಕೆ ಸೇರುವ ಸ್ಥಳ. ಇದು ಕಾರವಾರದಿಂದ 6 ಕಿ.ಮೀ. ದೂರದಲ್ಲಿದೆ. ಕಾರವಾರ ಮತ್ತು ಸದಾಶಿವಗಡದ ನಡುವೆ ಒಂದು ಉದ್ದವಾದ ಸೇತುವೆಯನ್ನು ನಿರ್ಮಿಸಲಾಗಿದೆ. ಇದಕ್ಕೆ ಹತ್ತಿರದಲ್ಲೇ ಗುಡ್ಡದ ಮೇಲಿರುವ ಕೋಟೆಯನ್ನು ನೋಡಬಹುದು. ಈ ಕೋಟೆಯಿಂದ ಸಮುದ್ರ ತೀರವನ್ನು ನೋಡುತ್ತಿದ್ದರೆ ಸುಂದರ ನಯನ ಮನೋಹರ ದೃಶ್ಯ ನಿಮ್ಮದಾಗುತ್ತದೆ. ಇದರ ಹತ್ತಿರದಲ್ಲಿ ದುರ್ಗಾದೇವಿ ದೇಗುಲ ಮತ್ತು ಶಿವಾಜಿ ಕೋಟೆಯಿದೆ.
PC: wikipedia.org

ಕದ್ರಾ ಅಣೆಕಟ್ಟೆ

ಕದ್ರಾ ಅಣೆಕಟ್ಟೆ

ಇದೊಂದು ನೈಸರ್ಗಿಕ ಸೌಂದರ್ಯವನ್ನು ಒಳಗೊಂಡ ಅಣೆಕಟ್ಟೆ. ಕಾಳಿ ನದಿಗೆ ಕಟ್ಟಲಾದ ಈ ಅಣೆಕಟ್ಟೆಯ ಸುತ್ತ ಸುಂದರವಾದ ಉದ್ಯಾನವನವಿದೆ. ಇದರಲ್ಲಿ ಕಾರಂಜಿಗಳು, ಜಲಪಾತ, ಗುಹೆ, ಬಣ್ಣ ಬಣ್ಣದ ಮರ-ಗಿಡಗಳು, ಗುಲಾಬಿ ತೋಟಗಳೂ ಇವೆ. ಹತ್ತಿರದಲ್ಲಿ ಪುರಾತನ ಕಾಲದ ಮಹಾಮಯಿ ದೇಗುಲವೂ ಇದೆ.
PC: wikipedia.org

ತಿಲ್ಮತಿ ಕಡಲು

ತಿಲ್ಮತಿ ಕಡಲು

ಇದೊಂದು ಸುಂದರ ಕಡಲ ತೀರ. ಇಲ್ಲಿ ಪ್ರವಾಸ ಹಾಗೂ ವಿಹಾರಕ್ಕೆ ಹೇಳಿ ಮಾಡಿಸಿದಂತಹ ಜಾಗ. ಇಲ್ಲಿ ರಾತ್ರಿ ಹೊತ್ತು ಬೀಡು ಬಿಟ್ಟು ಕುಳಿತುಕೊಳ್ಳಬಹುದು. ಇಲ್ಲವೇ ಹತ್ತಿರದಲ್ಲಿರು ಗುಡ್ಡದ ಮೇಲೂ ಟೆಂಟ್ ಹೌಸ್ ಮಾಡಿಕೊಂಡು ಸ್ನೇಹಿತರೊಂದಿಗೆ ಸಮಯ ಕಳೆಯಬಹುದು, ದಡದಲ್ಲಿರುವ ಕಲ್ಲಿನ ಮೇಲೆ ಕುಳಿತು ಮೀನು ಹಿಡಿಯ ಬಹುದು. ಕಪ್ಪು ಮರಳನ್ನು ಹೊತ್ತು ತರುವ ಈ ಸಮುದ್ರ ಪ್ರವಾಸಿಗನಿಗೊಂದು ಹೊಸ ಅನುಭವ ನೀಡುವುದರಲ್ಲಿ ಸಂದೇಹವಿಲ್ಲ.
PC: wikipedia.org

ರವೀಂದ್ರನಾಥ ಠಾಗೂರ್ ಕಡಲು

ರವೀಂದ್ರನಾಥ ಠಾಗೂರ್ ಕಡಲು

ಕಾರವಾರದಲ್ಲೇ ಇರುವ ಈ ಸಮುದ್ರ ವಿಶಾಲವಾದ ಹಾಗೂ ಸ್ವಚ್ಛವಾದ ಪರಿಸರದಿಂದ ಕೂಡಿದೆ. ಸಮುದ್ರದ ದಡದಲ್ಲಿ ಅಗಲವಾಗಿ ಹರಡಿರುವ ಉದ್ಯಾನವನ ಹಾಗೂ ಅಲ್ಲಲ್ಲಿ ಕೃತಕವಾಗಿ ನಿರ್ಮಿಸಿರುವ ಹಡಗನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜನ ಜಂಗುಳಿ ಇರದ ಈ ಜಾಗದಲ್ಲಿ ಬೇಕಾದಷ್ಟು ಸಮಯ ಕಳೆಯಬಹುದು. ಸೂರ್ಯೋದಯ ಹಾಗೂ ಸೂರ್ಯಾಸ್ತದ ಸೊಬಗನ್ನು ಕಣ್ತುಂಬಿಕೊಳ್ಳಬಹುದು.
PC: wikipedia.org

Read more about: karwar
Please Wait while comments are loading...