Search
  • Follow NativePlanet
Share
» »ಋಷಿಕೇಶ್‌ಗೆ ಹೋಗಿ ಇದನ್ನ ಮಾಡಿದ್ರೆ ಪಾಪ ಸುತ್ತುಕೊಳ್ಳುತ್ತಂತೆ..ಹಾಗಾಗಿ ಜಾಗ್ರತೆಯಿಂದಿರಿ

ಋಷಿಕೇಶ್‌ಗೆ ಹೋಗಿ ಇದನ್ನ ಮಾಡಿದ್ರೆ ಪಾಪ ಸುತ್ತುಕೊಳ್ಳುತ್ತಂತೆ..ಹಾಗಾಗಿ ಜಾಗ್ರತೆಯಿಂದಿರಿ

ಉತ್ತರಖಂಡದಲ್ಲಿರುವ ಋಷಿಕೇಶ್ ಹಿಂದೂಗಳ ಒಂದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದನ್ನು ಚಾರ್ ಧಾಮ್ ಯಾತ್ರೆಯ ಸಣ್ಣ ಪ್ರವೇಶ ದ್ವಾರ ಎಂದೂ ಕರೆಯಲಾಗುತ್ತದೆ. ಇದು ಕೇವಲ ಧಾರ್ಮಿಕ ಸ್ಥಳ ಮಾತ್ರವಲ್ಲ. ಉತ್ತರಭಾರತದ ಪ್ರಸಿದ್ಧ ಪರ್ಯಾಟನಾ ಸ್ಥಳವೂ ಹೌದು. ಇಲ್ಲಿ ಪ್ರವಾಸಿಗರಿಗೆ ನೋಡುವಂತಹ ಅನೇಕ ಸ್ಥಳಗಳಿವೆ. ಅವುಗಳಲ್ಲಿ ಹಳೆಯ ಮಂದಿರಗಳಿಂದ ಹಿಡಿದು ರಾಮ್ ಜೂಲ ಲಕ್ಷ್ಮಣ ಜೂಲ ಸೇತುವೆ ಕೂಡಾ ಸೇರಿಕೊಂಡಿದೆ.

ಈ ದೇವಸ್ಥಾನದಲ್ಲಿ ಬರ್ಗರ್, ಸ್ಯಾಂಡ್‌ವಿಚ್ ಭಕ್ತರಿಗೆ ಪ್ರಸಾದ

ಕಳೆದ ಕೆಲವು ಸಮಯದಿಂದ ಸಾಹಸಮಯ ತಾಣವಾಗಿ ಪರಿವರ್ತನೆಗೊಂಡಿದೆ. ರಾಫ್ಟಿಂಗ್, ಬಂಗೀ ಜಂಪಿಂಗ್ ಇನ್ನಿತರ ಜಲಕ್ರೀಡೆಗಳ ಆನಂದವನ್ನು ಪಡೆಯಬಹುದು. ಋಷಿಕೇಶ್ ಒಂದು ಪವಿತ್ರ ಭೂಮಿಯಾಗಿದೆ. ಹಾಗಾಗಿ ಇದರ ಯಾತ್ರೆ ಮಾಡುವಾಗ ಕೆಲವು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿದೆ. ನೀವು ಋಷಿಕೇಶನ ಯಾತ್ರೆಗೆ ಹೋಗುವ ಸಂದರ್ಭ ಈ ಕೆಲವು ತಪ್ಪುಗಳನ್ನು ಮಾಡಲೇ ಬಾರದು.

ಮಧ್ಯಸೇವನೆ ಮಾಡಬಾರದು

ಮಧ್ಯಸೇವನೆ ಮಾಡಬಾರದು

ದೇವಭೂಮಿ ಉತ್ತರಖಂಡದಲ್ಲಿರುವ ಋಷಿಕೇಶವು ಒಂದು ಪವಿತ್ರ ಸ್ಥಳವಾಗಿದೆ. ಇಲ್ಲಿ ಮಧ್ಯ ಸೇವನೆ ಮಾಡುವಂತಿಲ್ಲ. ಇಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯ ಸೇವನೆ ವರ್ಜಿಸಲಾಗಿದೆ. ಇಲ್ಲಿನ ರೆಸ್ಟೋರೆಂಟ್‌ಗಳಲ್ಲಿಯೂ ಸಾರಾಯಿ ಮಾರಾಟ ಮಾಡೋದಿಲ್ಲ.

ಮಾಂಸಾಹಾರ ಸೇವನೆ

ಮಾಂಸಾಹಾರ ಸೇವನೆ

Pc:mattjkelley

ಋಷಿಕೇಶ್ ಒಂದು ಧಾರ್ಮಿಕ ಸ್ಥಳವಾಗಿರುವುದರಿಂದ ಇಲ್ಲಿ ಮಾಂಸಾಹಾರ ಸೇವನೆಯನ್ನು ವರ್ಜಿಸಲಾಗಿದೆ. ಅನೇಕ ಯೋಗಿ, ಸಂತರ ನಿವಾಸವಾಗಿರುವುದರಿಂದ ಈ ಸ್ಥಳದಲ್ಲಿ ಮಾಂಸಾಹಾರಿ ಸೇವನೆಯನ್ನು ವರ್ಜಿಸಲಾಗಿದೆ. ಕೇವಲ ಶಾಖಾಹಾರಿ ಆಹಾರವನ್ನಷ್ಟೇ ಸೇವಿಸಬಹುದು.

ರಾಮ- ಲಕ್ಷ್ಮಣಸೇತುವೆಯಲ್ಲಿ ಆಹಾರ ತೆಗೆದುಕೊಂಡು ಹೋಗಬೇಡಿ

ರಾಮ- ಲಕ್ಷ್ಮಣಸೇತುವೆಯಲ್ಲಿ ಆಹಾರ ತೆಗೆದುಕೊಂಡು ಹೋಗಬೇಡಿ

Pc:Rishabh Mathur

ಸೇತುವೆಯಲ್ಲಿ ಹೋಗುವಾಗ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಹೋಗುತ್ತೇವೆ. ಆದ್ರೆ ಸೇತುವೆ ಮೇಲೆ ಕೋತಿಗಳು ಇರುವುದರಿಂದ ಅವು ನಿಮ್ಮ ಕೈಯಿಂದ ತಿನಿಸುಗಳನ್ನು ಕಿತ್ತುಕೊಳ್ಳಬಹುದು. ನಿಮಗೂ ಹಾನಿಯುಂಟು ಮಾಡಬಹುದು.

ಬಿಕಾರಿಗಳು, ಮೋಸಗಾರರಿಂದ ಎಚ್ಚರದಿಂದಿರಿ

ಬಿಕಾರಿಗಳು, ಮೋಸಗಾರರಿಂದ ಎಚ್ಚರದಿಂದಿರಿ

ಋಷಿಕೇಶ್ ಪವಿತ್ರ ಸ್ಥಳವಾಗಿರುವುದರಿಂದ ಅಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ಸಾಧು ಸಂತರು ಕಾಣಸಿಗುತ್ತಾರೆ. ನಿಮ್ಮಲ್ಲಿ ದಕ್ಷಿಣೆ ಕೇಳಬಹುದು. ಸಾಮಾನ್ಯವಾಗಿ ಯಾವುದೇ ಸನ್ಯಾಸಿ ದಕ್ಷಿಣೆ ಕೇಳೋದಿಲ್ಲ. ಒಂದು ವೇಳೆ ನಿಮ್ಮಲ್ಲಿ ವಿನಾಕಾರಣ ದಕ್ಷಿಣೆ ಕೇಳುತ್ತಿದ್ದಾನೆಂದಾದರೆ ಆತ ಢೋಂಗಿ ಸನ್ಯಾಸಿ ಎಂದೇ ಅರ್ಥ.

ನಕಲಿ ಕಲ್ಲು ಖರೀದಿಸಬೇಡಿ

ನಕಲಿ ಕಲ್ಲು ಖರೀದಿಸಬೇಡಿ

ಸಾಮಾನ್ಯವಾಗಿ ಗ್ರಹಗಳ ಶಾಂತಿಗೆ ಯಾವುದೋ ಕಲ್ಲನ್ನು ಧರಿಸಬೇಕು ಎನ್ನಲಾಗುತ್ತದೆ. ಹಾಗಾಗಿ ನಾವು ಒಳ್ಳೆಯ ಕಲ್ಲಿನ ಹುಡುಕಾಟದಲ್ಲಿರುತ್ತೇವೆ. ಋಷಿಕೇಶದಲ್ಲಿ ಒಳ್ಳೆಯ ಕಲ್ಲನ್ನು ಕಡಿಮೆ ಬೆಲೆಗೆ ಪಡೆಯಬಹುದೆಂದು ನೀವು ಯೋಚಿಸಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಇದು ಧಾರ್ಮಿಕ ಸ್ಥಳವಾಗಿರುವುದರಿಂದ ಇಲ್ಲಿ ಅನೇಕರು ಇಂತಹ ಕಲ್ಲುಗಳನ್ನು ದಾರಿಬದಿಯಲ್ಲಿ ಮಾರಾಟ ಮಾಡುತ್ತಾ ಕಾಣಸಿಗುತ್ತಾರೆ.

ಯಾವುದೇ ಸ್ಥಳವನ್ನು ಮಲೀನಮಾಡಬೇಡಿ

ಯಾವುದೇ ಸ್ಥಳವನ್ನು ಮಲೀನಮಾಡಬೇಡಿ

Pc: Ssteaj

ನೀವು ಇಂತಹ ಧಾರ್ಮೀಕ ಸ್ಥಳಗಳಿಗೆ ಹೋಗುವಾಗ ಅಲ್ಲಿನ ಸುತ್ತಮುತ್ತಲಿನ ಸ್ಥಳವನ್ನು ಶುಚಿಯಾಗಿಡಿ. ಕಸವನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ಗಂಗಾ ನದಿಯನ್ನು ಕಲುಷಿತ ಮಾಡಬೇಡಿ.

Read more about: india travel temple rishikesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X