Search
  • Follow NativePlanet
Share
» »ಈ ದೇವಸ್ಥಾನದಲ್ಲಿ ಬರ್ಗರ್, ಸ್ಯಾಂಡ್‌ವಿಚ್ ಭಕ್ತರಿಗೆ ಪ್ರಸಾದ

ಈ ದೇವಸ್ಥಾನದಲ್ಲಿ ಬರ್ಗರ್, ಸ್ಯಾಂಡ್‌ವಿಚ್ ಭಕ್ತರಿಗೆ ಪ್ರಸಾದ

ನಮ್ಮ ದೇಶದಲ್ಲಿರುವ ಪ್ರತಿಯೊಂದು ದೇವಸ್ಥಾನದಲ್ಲೂ ವಿಭಿನ್ನ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಕೆಲವು ದೇವಸ್ಥಾನದಲ್ಲಿ ವಿಚಿತ್ರವೆಂಬಂತೆ, ವಿಸ್ಕೀ ನೀಡಿದ್ರೆ ಇನ್ನೂ ಕೆಲವು ದೇವಸ್ಥಾನದಲ್ಲಿ ಚಾಕೋಲೇಟ್‌ನ್ನು ನೀಡುತ್ತಾರೆ. ಆದರೆ ಚೆನ್ನೈನಲ್ಲಿರುವ ಈ ದುರ್ಗಾ ದೇವಸ್ಥಾನದಲ್ಲಿ ಭಕ್ತರಿಗೆ ಬರ್ಗರ್, ಸ್ಯಾಂಡ್‌ವಿಚ್ ನೀಡುತ್ತಾರೆ. ಭಕ್ತರ ಜನ್ಮದಿನದಂದು ಕೇಕ್ ಕೂಡಾ ನೀಡುತ್ತಾರಂತೆ. ಈ ಪ್ರಸಾದದ ಪ್ಯಾಕೇಟ್‌ನಲ್ಲಿ ಎಕ್ಸ್‌ಪಯರಿ ದಿನಾಂಕವನ್ನೂ ಹಾಕಲಾಗಿರುತ್ತದೆ. ಭಕ್ತರು ಮೇಷಿನ್‌ ಒಳಗೆ ಟೋಕನ್ ಹಾಕಿದ್ರೆ ಸಾಕು ಬರ್ಗರ್ ಹೊರಬರುತ್ತದೆ.

ಬರ್ಗರ್, ಬ್ರೌನಿ ಪ್ರಸಾದ

ಬರ್ಗರ್, ಬ್ರೌನಿ ಪ್ರಸಾದ

ಹಿಂದೂ ಧರ್ಮದಲ್ಲಿ ದೇವರಿಗೆ ನೈವೇದ್ಯ ಇಡುವ ಸಂಪ್ರದಾಯ ಹಲವಾರು ವರ್ಷಗಳಿಂದಲೂ ಇದೆ. ಈ ಪ್ರಸಾದವನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ. ಈ ವರೆಗೂ ನೀವು ಲಡ್ಡು, ಪಾಯಸ, ಹಲ್ವಾ, ಅಥವಾ ಇನ್ಯಾವುದೋ ಸಿಹಿ ತಿನಿಸಿನ ಪ್ರಸಾದ ತಿಂದಿರಬಹುದು. ಆದರೆ ತಮಿಳುನಾಡಿನ ರಾಜಧಾನಿಯಾಗಿರುವ ಚೆನ್ನೈನಲ್ಲಿರುವ ದೇವಸ್ಥಾನವೊಂದರಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಬರ್ಗರ್, ಬ್ರೌನಿ, ಸ್ಯಾಂಡ್‌ವಿಚ್ ನೀಡಲಾಗುತ್ತಿದೆ.

ಆ ದೇವಸ್ಥಾನ ಯಾವುದು?

ಆ ದೇವಸ್ಥಾನ ಯಾವುದು?

ಭಕ್ತರಿಗೆ ಪ್ರಸಾದ ರೂಪದಲ್ಲಿ ಬರ್ಗರ್, ಸ್ಯಾಂಡ್‌ವಿಚ್ ನೀಡುವ ಮಂದಿರ ದುರ್ಗಾ ಪೀಠಂ. ಈ ಮಂದಿರದ ವಿಶೇಷತೆ ಎಂದರೆ ಇಲ್ಲಿ ನೀಡಲಾಗುವ ಪ್ರಸಾದ, ಇಲ್ಲಿ ನೀಡುವ ಪ್ರಸಾದದ ಬಗ್ಗೆ ಕೇಳಿ ದೂರ ದೂರದ ಊರುಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ದೇವಸ್ಥಾನವನ್ನು ಸ್ಥಾಪಿಸಿರುವಂತಹ ಹರ್ಬಲ್ ಅಂಕಾಲಜಿಸ್ಟ್ ಶ್ರೀಧರ್‌ ಅವರ ಪ್ರಕಾರ, ದೇವರಿಗೆ ಪ್ರಸಾದವಾಗಿ ಯಾವುದೇ ವಸ್ತುವನ್ನು ಬಳಸಬಹುದು. ಆದರೆ ಅದು ಶ್ರದ್ಧೆ ಹಾಗೂ ಪವಿತ್ರತೆಯಿಂದ ತಯಾರಿಸಿದ್ದಾಗಿರಬೇಕು. ಅಂತಹ ಪ್ರಸಾದದಲ್ಲಿ ಯಾವುದೇ ದೋಷವಿಲ್ಲ.

ಪ್ರಸಾದದ ಪ್ಯಾಕೇಟ್‌ನಲ್ಲಿ ಎಕ್ಸ್‌ಪೈಯರ್ಡ್ ದಿನಾಂಕ ಕೂಡಾ ಇರುತ್ತದೆ

ಪ್ರಸಾದದ ಪ್ಯಾಕೇಟ್‌ನಲ್ಲಿ ಎಕ್ಸ್‌ಪೈಯರ್ಡ್ ದಿನಾಂಕ ಕೂಡಾ ಇರುತ್ತದೆ

ಇಲ್ಲಿ ನೀಡಲಾಗುವ ಪ್ರತಿಯೊಂದು ಪ್ರಸಾದವು ಎಫ್‌ಎಸ್‌ಎಸ್‌ಐ ಮೂಲಕ ಪ್ರಮಾಣೀಕರಿಸಲಾಗಿರುತ್ತದೆ. ಅಲ್ಲಿನ ಪ್ರತಿಯೊಂದು ಪ್ರಸಾದದ ಪ್ಯಾಕೆಟ್‌ನಲ್ಲೂ ಎಕ್ಸ್‌ಪೈಯರಿ ದಿನಾಂಕ ನಿಗಧೀಕರಿಸಲಾಗಿರುತ್ತದೆ. ಭಕ್ತರು ಮೆಷಿನ್‌ನಲ್ಲಿ ಟೋಕನ್ ಹಾಕ್ತಾರೆ. ಡಬ್ಬದಲ್ಲಿ ಮುಚ್ಚಲಾಗಿರುವ ಪ್ರಸಾದ ಹೊರಬರುತ್ತದೆ. ಭಕ್ತರ ಜನ್ಮದಿನದಂದು ಕೇಕ್ ಪ್ರಸಾದ ರೂಪದಲ್ಲಿ ದೊರೆಯುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ವಿಮಾನದಲ್ಲಿ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 22 ಕಿ.ಮೀ ದೂರದಲ್ಲಿ ಪಡಪ್ಪಾಯಿಯಲ್ಲಿ ಈ ದೇವಸ್ಥಾನವಿದೆ .

ರೈಲು ಮಾರ್ಗ: ಚೆನ್ನೈ ಸೆಂಟ್ರಲ್ ರೈಲ್ವೆ ಸ್ಟೇಶನ್ ಈ ದೇವಸ್ಥಾನ್ಕೆಕ ಸಮೀಪದ ರೈಲ್ವೆ ಸ್ಟೇಶನ್ ಆಗಿದೆ. ಇದು ಪಡಪ್ಪಾಯಿಯಿಂದ 44 ಕಿ.ಮೀ ದೂರದಲ್ಲಿದೆ.

ಎಲ್ಲಕ್ಕಿಂತ ಸುಲಭದ ವಿಧಾನವೆಂದರೆ ನೀವು ನಿಮ್ಮ ವಾಹನದ ಮೂಲಕ ರಸ್ತೆ ಮಾರ್ಗವಾಗಿ ಇಲ್ಲಿಗೆ ಹೋಗುವುದು.

Read more about: india travel temple chennai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X