Search
  • Follow NativePlanet
Share
» »ಬೆಂಗಳೂರಿನಲ್ಲಿ ಫೇಮಸ್ ಪುಸ್ತಕ ಮಾರಾಟ ಮಳಿಗೆಗಳು ಎಲ್ಲೆಲ್ಲಿವೆ ಗೊತ್ತಾ?

ಬೆಂಗಳೂರಿನಲ್ಲಿ ಫೇಮಸ್ ಪುಸ್ತಕ ಮಾರಾಟ ಮಳಿಗೆಗಳು ಎಲ್ಲೆಲ್ಲಿವೆ ಗೊತ್ತಾ?

ಬೆಂಗಳೂರಿನಲ್ಲಿರುವ ಅನೇಕರಿಗೆ ಪುಸ್ತಕ ಓದುವ ಹವ್ಯಾಸವಿದೆ. ಹಾಗಾಗಿ ಬೆಂಗಳೂರಿನ ಎಲ್ಲೇ ನೋಡಿದರು ಸೆಕೆಂಡ್‌ ಹ್ಯಾಂಡ್ ಪುಸ್ತಕ ಮಾರಾಟ ಮಾಡುವವರು ಜಾಸ್ತಿ ಇರುತ್ತಾರೆ. ಇಲ್ಲಿನ ಜನರ ಓದುವ ಹವ್ಯಾಸವನ್ನು ಮನಗೊಂಡು ಕೆಲವರು ತಮ್ಮದೇ ಆದ ಪುಸ್ತಕಮಳಿಗೆಯನ್ನು ತೆರೆದಿದ್ದಾರೆ. ಬೆಂಗಳೂರನ್ನು ಬುಕ್‌ಗಳ ಪ್ಯಾರಡೈಸ್ ಎನ್ನಬಹುದು. ಬೆಂಗಳೂರು ನಗರದಲ್ಲಿ ಓಡಾಡುವಾಗ ಒಂದಲ್ಲ ಒಂದು ಪುಸ್ತಕ ಮಾರಾಟ ಮಳಿಗೆಗಳೇ ಕಣ್ಣಿಗೆಗೆ ಬೀಳುತ್ತವೆ. ಈ ದೇವಸ್ಥಾನದಲ್ಲಿ ಮೊಟ್ಟೆ ಒಡೆದರೆ ನಿಮ್ಮ ಮನೋಕಾಮನೆ ಈಡೇರುತ್ತದಂತೆ!

ಬೆಂಗಳೂರನಲ್ಲಿ ಸಾಕಷ್ಟು ಪುಸ್ತಕ ಮಳಿಗೆಗಳಿವೆ. ಆದ್ರೆ ಸಮಯವನ್ನು ಉಳಿಸುವ ಸಲುವಾಗಿ ನಾವಿಲ್ಲಿ ಕೆಲವೇ ಕೆಲವು ಪ್ರಸಿದ್ಧ ಪುಸ್ತಕ ಮಳಿಗೆಗಳ ಬಗ್ಗೆ ತಿಳಿಸಿದ್ದೇವೆ.

ಬುಕ್ ಸ್ಟಾಪ್( ಕೋರಮಂಗಲ)

ಬುಕ್ ಸ್ಟಾಪ್( ಕೋರಮಂಗಲ)

PC: Kprateek

ಇದು ನೆಲಮಾಳಿಗೆಯಲ್ಲಿರುವ ಒಂದು ಪುಸ್ತಕ ಮಳಿಗೆಯಾಗಿದೆ. ಇಲ್ಲಿ ಗ್ರಾಹಕರು ಈ ಮಳಿಗೆಯ ಬಾಗಿಲ ಬಳಿ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಬೆಲ್‌ಕಮ್ ಬೆಲ್ ಇದೆ. ಬೆಂಗಳೂರಿನಲ್ಲಿರುವ ಇತರ ಪುಸ್ತಕ ಮಳಿಗೆಗಳಿಗೆ ಹೋಲಿಸಿದರೆ ಇದು ಬಹಳ ಸಣ್ಣದಾಗಿದೆ. ಇಲ್ಲಿ ಪುಸ್ತಕ ಕುಳಿತುಕೊಂಡು ಓದಲು ಸ್ಥಳಾವಕಾಶವಿಲ್ಲ. ಪುಸ್ತಕವನ್ನು ಕೊಂಡುಕೊಂಡು ಹೋಗಬೇಕಷ್ಟೇ.

ಬ್ಲೋಸಮ್ ಬುಕ್ ಹೌಸ್ (ಚರ್ಚ್ ಸ್ಟ್ರಿಟ್)

ಬ್ಲೋಸಮ್ ಬುಕ್ ಹೌಸ್ (ಚರ್ಚ್ ಸ್ಟ್ರಿಟ್)

PC: CamilleaM1FLERéunion

ಬ್ಲೋಸಮ್ ಬುಕ್ ಹೌಸ್ ಬೆಂಗಳೂರಿನಲ್ಲಿರುವ ಪ್ರಸಿದ್ದ ಪುಸ್ತಕ ಮಾರಾಟ ಮಳಿಗೆಯಾಗಿದೆ. ನೀವು ಪುಸ್ತಕ ಪ್ರೇಮಿಗಳಾಗಿದ್ದರೆ ಈ ಪುಸ್ತಕ ಮಳಿಗೆಯ ಹೆಸರನ್ನು ಒಮ್ಮೆಯಾದರೂ ಕೇಳಿರಬಹುದು. ಒಂದು ವೇಳೆ ನೀವು ಬೆಂಗಳೂರಿಗೆ ಹೊಸಬರು ಎಂದಾದರೆ ನೀವು ಆದಷ್ಟು ಬೇಗ ಬೆಂಗಳೂರಿಗೆ ಭೇಟಿ ನೀಡುವುದು ಒಳ್ಳೆಯದು. ಕಡಿಮೆ ಬೆಲೆಗೆ ಪುಸ್ತಕ ಮಾರಾಟಮಾಡಲಾಗುತ್ತದೆ ಇಲ್ಲಿ. ಇಲ್ಲಿ ಪುಸ್ತಕದ ಕಾಡೇ ಇದೆ ಎನ್ನಬಹುದು. ಮುಗಿಯದಷ್ಟು ಪುಸ್ತಕದ ಸಾಲುಗಳು ಇಲ್ಲಿದೆ.

ಬುಕ್‌ಫೇರ್‌(ಕೋರಮಂಗಲ)

ಬುಕ್‌ಫೇರ್‌(ಕೋರಮಂಗಲ)

ಬುಕ್‌ಫೇರ್ ಪುಸ್ತಕ ಮಳಿಗೆಯಲ್ಲಿ ಯುನಿಕ್ ಕಲೆಕ್ಷನ್‌ಗಳಿವೆ. ಇಲ್ಲಿ 100ರೂ. 200ರೂ. ಹಾಗೂ 500ರೂ.ಯ ಪುಸ್ತಕದ ಸೆಕ್ಷನ್‌ಗಳಿವೆ. ನೀವು ಈ ಸೆಕ್ಷನ್‌ಗೆ ಹೀಗಿ ನಿಮಗೆ ಬೇಕಾದುದನ್ನು ಆರಿಸಿಕೊಳ್ಳಬಹುದು. ಇಲ್ಲಿ ನಿಮ್ಮ ಅಭಿರುಚಿಗನುಗುಣಾವಾದ ಎಲ್ಲಾ ರೀತಿಯ ಪುಸ್ತಕಗಳು ಸಿಗುತ್ತವೆ. ಇಲ್ಲಿನ ಸಾವಿರಾರು ಪುಸ್ತಕಗಳ ನಡುವೆ ನಿಮಗೆ ಬೇಕಾದದ್ದನ್ನು ಹುಡುಕಬೇಕಷ್ಟೇ.

ಸಪ್ನಾ ಬುಕ್‌ ಹೌಸ್

ಸಪ್ನಾ ಬುಕ್‌ ಹೌಸ್

ಏಷ್ಯಾದ ಅತ್ಯಂತ ದೊಡ್ಡ ಪುಸ್ತಕ ಮಳಿಗೆ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ನಾಲ್ಕು ಅಂತಸ್ಥನ್ನು ಹೊಂದಿದ್ದು, ಇದು ಪುಸ್ತಕಗಳಿಗಾಗಿಯೇ ಇರುವ ದೊಡ್ಡ ಶಾಪಿಂಗ್ ಮಾಲ್‌ ರೀತಿ ಇದೆ. ಇಲ್ಲಿ ಎಂಬಿಎ, ಐಐಟಿ, ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ರೀತಿಯ ಪುಸ್ತಕವನ್ನು ಮಾರಾಟಮಾಡಲಾಗುತ್ತಿದೆ.

ಬುಕ್‌ವರ್ಮ್ (ಚರ್ಚ್ ಸ್ಟ್ರೀಟ್)

ಬುಕ್‌ವರ್ಮ್ (ಚರ್ಚ್ ಸ್ಟ್ರೀಟ್)

PC: Maxpixel

2002ರಲ್ಲಿ ಈ ಪುಸ್ತಕ ಮಳಿಗೆಯನ್ನು ಕೃಷ್ಣ ಎನ್ನುವವರು ಪ್ರಾರಂಭಿಸಿದರು. ಹಲವು ವರ್ಷಗಳ ಕಾಲ ಪುಸ್ತಕ ಮಾರಾಟ ಮಾಡುತ್ತಿದ್ದ ಕೃಷ್ಣ ಇಂತದ್ದೊಂದು ಪುಸ್ತಕ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಇಲ್ಲಿ ಹೆಚ್ಚಾಗಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಟೆಕ್ಟ್ಸ್ ಪುಸ್ತಕಗಳು ಲಭ್ಯವಿದೆ. ಹಾಗೆಯೇ ಕಾದಂಬರಿಗಳೂ ಕೂಡಾ ಲಭ್ಯವಿದೆ. ಇಲ್ಲಿ ಸೆಕೆಂಡ್‌ಹ್ಯಾಂಡ್ ಪುಸ್ತಕಗಳೂ ಲಭ್ಯವಿದೆ.

ಹಗ್ಗಿನ್‌ಬಾಥಮ್ಸ್‌(ಎಂ.ಜಿ ರೋಡ್)

ಹಗ್ಗಿನ್‌ಬಾಥಮ್ಸ್‌(ಎಂ.ಜಿ ರೋಡ್)

PC: రహ్మానుద్దీన్

ಇದು ಬೆಂಗಳೂರಿನಲ್ಲಿರುವ ಅತ್ಯಂತ ಹಳೆಯ ಪುಸ್ತಕ ಮಳಿಗೆಯಾಗಿದೆ. ಹಳೆಯ ಕಾಲದ ಬಿಲ್ಡಿಂಗ್ ಇದಾಗಿದೆ. ಇಲ್ಲಿರುವ ಪುಸ್ತಕ ಕಲೆಕ್ಷನ್ ನಿಮ್ಮ ಪುಸ್ತಕದ ದಾಹವನ್ನು ತೀರಿಸುವಷ್ಟಿದೆ. ಕೆಲವರಿಗೆ ಪುಸ್ತಕ ಆಯ್ಕೆ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ಸ್ವಲ್ಪ ಓದಿ ನಂತರ ಪುಸ್ತಕವನ್ನು ಆಯ್ಕೆ ಮಾಡುತ್ತಾರೆ ಅಂತವರಿಗೂ ಇಲ್ಲಿ ಓದಲು ಸ್ಥಳಾವಕಾಶ ಕೂಡಾ ಇದೆ. ಒಟ್ಟಾರೆ ಹಗ್ಗಿನ್‌ಬಾಥಮ್ಸ್‌ ಪುಸ್ತಕ ಪ್ರಿಯರು ಭೇಟಿ ನೀಡಲೇ ಬೇಕಾದ ಸ್ಥಳವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X