Search
  • Follow NativePlanet
Share
» »ಇವು ಮುಂಬಯಿನ ಅದ್ಭುತಗಳು....

ಇವು ಮುಂಬಯಿನ ಅದ್ಭುತಗಳು....

ಮುಂಬಯಿ ನಗರ ಮಹಾರಾಷ್ಟ್ರದ ರಾಜಧಾನಿ. ಪ್ರಪಂಚದಲ್ಲಿ 5 ನೇ ಅತಿ ದೊಡ್ಡ ನಗರ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಇಲ್ಲಿ ಅನೇಕ ಪ್ರವಾಸಿ ತಾಣಗಳನ್ನು ಕಾಣಬಹುದು. ಅಷ್ಟೇ ಅಲ್ಲ, ಮುಂಬೈ ಮನರಂಜನಾ ಲೋಕ ಹಾಗು ಕನಸಿನ ಲೋಕ ಎಂದೇ ಹೆಸರುವಾಸಿಯಾಗಿದೆ. ಮ

By Sowmyabhai

ಮುಂಬಯಿ ನಗರ ಮಹಾರಾಷ್ಟ್ರದ ರಾಜಧಾನಿ. ಪ್ರಪಂಚದಲ್ಲಿ 5 ನೇ ಅತಿ ದೊಡ್ಡ ನಗರ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಇಲ್ಲಿ ಅನೇಕ ಪ್ರವಾಸಿ ತಾಣಗಳನ್ನು ಕಾಣಬಹುದು. ಅಷ್ಟೇ ಅಲ್ಲ, ಮುಂಬೈ ಮನರಂಜನಾ ಲೋಕ ಹಾಗು ಕನಸಿನ ಲೋಕ ಎಂದೇ ಹೆಸರುವಾಸಿಯಾಗಿದೆ. ಮುಂಬಯಿಯ ಮೂಲ ಹೆಸರು ಮುಂಬಾದೇವಿ. ಮುಂಬಾದೇವಿ ದೇವಾಲಯವು ಇಂದಿಗೂ ಮುಂಬಯಿಯ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದು. ಪೋರ್ಚುಗೀಸರು ಈ ಪ್ರದೇಶವನ್ನು ಬೋಮ್ ಬಹಿಯಾ ಎಂದೂ, ಬ್ರಿಟೀಷ್‍ರು ಮುಂಬಯಿ ಎಂದೂ ನಾಮಕರಣ ಮಾಡಿದ್ದರು.

ಅಸಲಿಗೆ ಮುಂಬೈಗೆ ಭೇಟಿ ನೀಡಿದರೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗುತ್ತದೆ. ಏಕೆಂದರೆ ಈ ನಗರದ ಪರಂಪರೆ, ನಗರದ ವೈಭವ, ಶ್ರಮ ಮತ್ತು ಜೀವನ ಅತ್ಯಂತ ವಿಭಿನ್ನತೆಯಿಂದ ಕೂಡಿದೆ. ಮುಂಬೈ ವಿಶ್ವದ ಅತ್ಯಂತ ಜನನಿಬಿಡವಾದ ನಗರಗಳಲ್ಲಿ ಒಂದಾಗಿದೆ. ಮುಂಬೈ ಅನೇಕ ನಟ-ನಟಿಯರ ತಾಣ ಎಂದೇ ಹೇಳಬಹುದು. ಹಾಗಾದರೆ ಬನ್ನಿ ಲೇಖನದ ಮೂಲಕ ಸಂಕ್ಷೀಪ್ತವಾಗಿ ಮುಂಬೈನ ಪ್ರಸಿದ್ಧವಾದ ತಾಣದ ಕುರಿತು ತಿಳಿಯೋಣ.

1.ಗೇಟ್ ವೇ ಆಫ್ ಇಂಡಿಯಾ

1.ಗೇಟ್ ವೇ ಆಫ್ ಇಂಡಿಯಾ

PC: Ting Chen

ಗೇಟ್ ವೇ ಆಫ್ ಇಂಡಿಯಾದ ಎತ್ತರ ಸುಮಾರು 85 ಅಡಿ. ಇದರ ನಿರ್ಮಾಣದ ಉದ್ದೇಶ 5 ನೇ ಕಿಂಗ್ ಜಾರ್ಜ್‍ರ ಸ್ಮರಣಾರ್ಥವಾಗಿತ್ತು. ಇದರ ವಾಸ್ತು ಶಿಲ್ಪವು ಅತ್ಯಂತ ಸುಂದರವಾಗಿದ್ದು, ಮೂರು ಶೈಲಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಅವುಗಳೆಂದರೆ ಹಿಂದೂ. ಇಸ್ಲಾಂ ಮತ್ತು ಯುರೋಪಿಯನ್ನ ಗೋಥಿಕ್ ಶೈಲಿಗಳ ಪರಿಪೂರ್ಣವಾದ ಮಿಶ್ರಣವೇ ಆಗಿದೆ. ಅದ್ಭುತವಾದ ಎಲಿಫೆಂಟಾ ಗುಹೆಗಳಿಗೆ ಭೇಟಿ ನೀಡಲು ಇಲ್ಲಿಂದ ದೋಣಿಗಳ ಮೂಲಕ ಸುಲಭವಾಗಿ ತೆರಳಬಹುದು.

ಪ್ರಸಿದ್ಧ: ಬ್ರಿಟಿಷ್ ಶೈಲಿ.
ಶುಲ್ಕ: ಯಾವುದೇ ಶುಲ್ಕವಿಲ್ಲ.
ಪ್ರವೇಶ ಸಮಯ: ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ.
ಬೇಕಾಗುವ ಸಮಯ: 30 ನಿಮಿಷ.

2.ಎಲಿಫೆಂಟಾ ಗುಹೆಗಳು

2.ಎಲಿಫೆಂಟಾ ಗುಹೆಗಳು

ಎಲಿಫೆಂಟಾ ಗುಹೆಗಳು ಎಲಿಫೆಂಟಾ ದ್ವೀಪದಲ್ಲಿವೆ. ಇದು ಗೇಟೆ ಆಫ್ ಇಂಡಿಯಾದಿಂದ ಸರಿಸುಮಾರು 40 ನಿಮಿಷಗಳ ಕಾಲ ದೋಣಿ ಸವಾರಿ ಮಾಡಬೇಕಿದೆ. ಯುನೆಸ್ಕೋ 600 ಎ.ಡಿಗೆ ಸೇರಿದ ಎಲಿಫೆಂಟಾ ಗುಹೆಗಳನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಣೆ ಮಾಡಿದೆ. ಪೋರ್ಚುಗೀಸರು ಇಲ್ಲಿ ಕತ್ತಿ ಅಭ್ಯಾಸವನ್ನು ಬಳಸಿದ ಕಾರಣ ಹಿಂದೂ ಮತ್ತು ಬೌದ್ಧ ದೇವತೆಗಳ ಕಲ್ಲಿನ ಶಿಲ್ಪಗಳು ಹಾನಿಗೆ ಒಳಗಾಗಿದೆ. ಎಲಿಫೆಂಟಾ ಗುಹೆಗಳು ಭಾರತದ 7 ಅದ್ಭುತಗಳಲ್ಲಿ ಒಂದಾಗಿದೆ.

ಪ್ರಸಿದ್ಧ: ಶಿಲ್ಪಗಳು, ಇತಿಹಾಸ, ಕಲೆ, ಗುಹೆಗಳು
ಟಿಕೆಟ್‍ಗಳು: ದೋಣಿ ಸವಾರಿಗೆ ಶುಲ್ಕ
ಪ್ರವೇಶ ಶುಲ್ಕ: ಭಾರತೀಯರಿಗೆ 10 ರೂಪಾಯಿಗಳು, ವಿದೇಶಿಯರಿಗೆ 250 ರೂಪಾಯಿಗಳು.
ಪ್ರವೇಶ ಸಮಯ/ದಿನಗಳು: ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ.
ಅವಧಿ: 3 ಗಂಟೆಗಳ ಕಾಲ.

3.ಮರೀನ್ ಡ್ರೈವ್

3.ಮರೀನ್ ಡ್ರೈವ್

PC:KANNADA NATIVE PLANET

ಮರೀನ್ ಡ್ರೈವ್ ಮುಂಬಯಿಯ ಹೃದಯಭಾಗದಲ್ಲಿದೆ. ಹಾಗಾಗಿ ನೀವು ಎಲ್ಲಿಂದಲಾದರೂ ಸುಲಭವಾಗಿ ಪ್ರವೇಶಿಸಬಹುದು. ಇದು ಸುಮಾರು 3 ಕಿ.ಮೀಟರ್ ಉದ್ದವಿದೆ. ಇದು ಅರಬ್ಬಿ ಸಮದ್ರವನ್ನು ಕೊಲ್ಲಿಯನ್ನು ರಚಿಸುತ್ತದೆ. ನರಿಮನ್ ಪಾಯಿಂಟ್ ಮತ್ತು ಬಾಬುಲ್ನಾಥ್ ಅನ್ನು ಸಂಪರ್ಕಿಸುವ "ಸಿ" ಆಕಾರವು ವಿಸ್ತಾರವಾಗಿದೆ. ಈ ಸ್ಥಳವು ಸೂರ್ಯಾಸ್ತದ ಅದ್ಭುತ ನೋಟವನ್ನು ನೀಡುತ್ತದೆ. ಇಲ್ಲಿಗೆ ಭೇಟಿ ನೀಡಿದರೆ ತಂಪಾದ ಗಾಳಿಯನ್ನು ಅನುಭವಿಸಬಹುದು.

ಪ್ರಸಿದ್ಧ: ಸಮುದ್ರ, ಸೂರ್ಯೋದಯ, ವಾಕ್, ವೀಕ್ಷಣೆಗಳು.
ಶುಲ್ಕ: ಶುಲ್ಕವಿಲ್ಲ.
ತೆರೆಯುವ ಶುಲ್ಕ: ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ.
ಅವಧಿ: ಸಂದರ್ಶಕರು ಅವಲಂಬಿಸಿರುತ್ತದೆ.

4.ಛತ್ರಪತಿ ಶಿವಾಜಿ ಟರ್ಮಿನಸ್

4.ಛತ್ರಪತಿ ಶಿವಾಜಿ ಟರ್ಮಿನಸ್

PC: Shaileshsonare

ಇದನ್ನು ಮೊದಲು ವಿಕ್ಟೋರಿಯಾ ಟರ್ಮಿನಸ್ ಎಂದು ಕರೆಯಲಾಗುತ್ತಿತ್ತು. ಈ ಕಟ್ಟಡವು 1897 ರಲ್ಲಿ ಪೂರ್ಣಗೊಂಡಿತು. 2004 ರಲ್ಲಿ ವಿಶ್ವ ಪರಂಪರೆಯ ತಾಣವಾಗಿ ಯುನೆಸ್ಕೋ ಟರ್ಮಿನಸ್ ಅನ್ನು ಘೋಷಿಸಿತು. ಈ ಕಟ್ಟಡವನ್ನು ಸಾಂಪ್ರದಾಯಿಕವಾದ ಭಾರತೀಯ, ವಿಕ್ಟೋರಿಯಾನ್ ಮತ್ತು ಗೋಥಿಕ್ ಸೇರಿದಂತೆ ವಿವಿಧ ಸಂಸ್ಕøತಿಗಳ ವಾಸ್ತುಶಿಲ್ಪಶೈಲಿಯನ್ನು ಪ್ರತಿನಿಧಿಸುತ್ತದೆ. ಈ ಅದ್ಭುತವಾದ ಕಟ್ಟಡವು ಪ್ರವಾಸಿಗರಿಗೆ ಬೆರಗುಗೊಳಿಸದೇ ಇರದು.

ಪ್ರಸಿದ್ಧ: ಗೋಥಿಕ್ ವಾಸ್ತುಶಿಲ್ಪ, ರೈಲ್ವೆ ನಿಲ್ದಾಣ.
ಶುಲ್ಕ: ಶುಲ್ಕವಿಲ್ಲ.
ತೆರೆಯುವ ಸಮಯ: ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ.
ಸಮಯ: ಸಂದರ್ಶಕರನ್ನು ಅವಲಂಬಿಸಿರುತ್ತದೆ.

5.ಹಾಜಿ ಅಲಿ ಮಂದಿರ

5.ಹಾಜಿ ಅಲಿ ಮಂದಿರ

PC:travelwayoflife

ವೋರ್ಲಿಯಾದ ಹೃದಯಭಾಗದಲ್ಲಿರುವ ಹಾಜಿ ಅಲಿ ಮಂದಿರವು ಭಾರತೀಯ ಮುಸ್ಲಿಂ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. ಸುಮಾರು 85 ಅಡಿ ಎತ್ತರದ ರಚನೆಯನ್ನು ಹೊಂದಿರುವ 4500 ಮೀಟರ್ ಪ್ರದೇಶದಲ್ಲಿದೆ. ತಾಜ್ ಮಹಲ್ ನಿರ್ಮಾಣದ ಹೋಲಿಕೆಯಂತೆ ಮಾರ್ಬಲ್‍ನಲ್ಲಿ ಈ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ. ಇದರ ಸ್ತಂಭವು ಅತ್ಯಂತ ಕಲಾತ್ಮಕತೆಯನ್ನು ಹೊಂದಿದೆ. ಹಾಜಿ ಅಲಿ ಶ್ರೈನ್‍ನ ಅತ್ಯಾಕರ್ಷಕ ವಾಸ್ತುಶಿಲ್ಪವು ವಿವಿಧ ಧರ್ಮಗಳ ಮತ್ತು ನಂಬಿಕೆಗಳ ಜನರನ್ನು ಆಕರ್ಷಿಸುತ್ತದೆ.

ಪ್ರಸಿದ್ಧಿ: ದರ್ಗಾ, ಇಸ್ಲಾಮಿಕ್ ವಾಸ್ತುಶಿಲ್ಪ,
ಶುಲ್ಕ: ಶುಲ್ಕವಿಲ್ಲ.
ತೆರೆಯುವ ಸಮಯ: ಎಲ್ಲಾ ಸಮಯದಲ್ಲಿ ತೆರೆದಿರುತ್ತದೆ.
ಅವಧಿ: 1 ಗಂಟೆಗಳ ಕಾಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X