Search
  • Follow NativePlanet
Share
» »ಕೇರಳದ ಸಾಂಸ್ಕೃತಿಕ ರಾಜಧಾನಿ ತ್ರಿಶ್ಶೂರ್ ಪ್ರವಾಸ

ಕೇರಳದ ಸಾಂಸ್ಕೃತಿಕ ರಾಜಧಾನಿ ತ್ರಿಶ್ಶೂರ್ ಪ್ರವಾಸ

By Vijay

ಕರ್ನಾಟಕಕ್ಕೆ ಮೈಸೂರು ಹೇಗೆ ಸಾಂಸ್ಕೃತಿಕ ರಾಜಧಾನಿ ಎಂದು ಪ್ರೀತಿಯಿಂದ ಕರೆಯಲ್ಪಡುತ್ತದೊ ಅದೆ ರೀತಿಯಾಗಿ ತ್ರಿಶ್ಶೂರ್ ಅನ್ನು ಕೇರಳ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಸಂಭೋದಿಸಲಾಗುತ್ತದೆ. ಕಾರಣ ಕೇರಳದ ಸಂಪ್ರದಾಯದ ಹಲವು ವಿಶಿಷ್ಟ ಉತ್ಸವಗಳು, ಆಚರಣೆಗಳು ಪ್ರಮುಖವಾಗಿ ತ್ರಿಶ್ಶೂರ್ ನಲ್ಲಿ ಜರುಗುತ್ತವೆ.

ವಿಶೇಷ ಲೇಖನ : ಮನಸೆಳೆವ ಕೊಟ್ಟಿಯೂರು ವೈಶಾಖ ಉತ್ಸವ

ಕೇವಲ, ಸಾಂಸ್ಕೃತಿಕವಾಗಿ ಅಲ್ಲದೆ ತ್ರಿಶ್ಶೂರ್ ಜಿಲ್ಲೆಯು ವಿರಾಮ ಕಾಲದ ಸಮಯವನ್ನು ಪರಿಪೂರ್ಣವಾಗಿ ಕಳೆಯುವ ನಿಟ್ಟಿನಲ್ಲಿ ಪ್ರವಾಸ ಮಾಡಬೇಕಾದ ಒಂದು ಅದ್ಭುತ ಸ್ಥಳವಾಗಿದೆ. ವಿಶಿಷ್ಟ ಹಬ್ಬ, ಉತ್ಸವಗಳ ಜೊತೆಗೆ, ಕಡಲ ತೀರ, ಕಾಡುಗಳು, ಜಲಪಾತಗಳು ಹೀಗೆ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನು ಈ ಜಿಲ್ಲೆಯಲ್ಲಿ ಕಾಣಬಹುದು.

ವಿಶೇಷ ಲೇಖನ : ಪಾಲಕ್ಕಾಡಿಗೊಂದು ಪ್ರೀತಿಯ ಸಲಾಂ

ತ್ರಿಶ್ಶೂರ್ ಬೆಂಗಳೂರಿನಿಂದ ಸುಮಾರು 475 ಕಿ.ಮೀ ಗಳಷ್ಟು ದೂರವಿದ್ದು ಬಸ್ಸುಗಳು ದೊರೆಯುತ್ತದೆ. ಅಲ್ಲದೆ ಕೋಯಮತ್ತೂರು, ಕೊಚ್ಚಿ, ಕೋಳಿಕೋಡ್ ಮುಂತಾದ ಪ್ರಮುಖ ನಗರಗಳಿಂದಲೂ ಸಹ ತ್ರಿಶ್ಶೂರಿಗೆ ತೆರಳಲು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ತ್ರಿಶ್ಶೂರ್ ರೈಲು ನಿಲ್ದಾಣವು ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.

ಎಲ್ಲ ಥಾಮಸ್ ಕುಕ್ ಪ್ರವಾಸ ಕೂಪನ್ನುಗಳನ್ನು ಉಚಿತವಾಗಿ ಪಡೆಯಿರಿ

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪ್ರವಾಸಿಗರನ್ನು ಸದಾ ಆತ್ಮೀಯತೆಯಿಂದ ಸ್ವಾಗತಿಸುವ ತ್ರಿಶ್ಶೂರ್ ಜಿಲ್ಲೆಯು ಭೇಟಿ ನೀಡಿದವರಿಗೆ ಸಂತೃಪ್ತಿ ಪಡಿಸದೆ ಇರಲಾರದು. ಪ್ರಸ್ತುತ ಲೇಖನದ ಮೂಲಕ ತ್ರಿಶ್ಶೂರಿನ ಕುರಿತು ಸಮಗ್ರ ಪ್ರವಾಸಿ ಅನುಕೂಲ ಮಾಹಿತಿ ಪಡೆಯಿರಿ ಹಾಗೂ ಸಮಯ ಸಿಕ್ಕಾಗ ಈ ಸಾಂಸ್ಕೃತಿಕ ರಾಜಧಾನಿಗೊಮ್ಮೆ ಭೇಟಿ ನೀಡಲು ಮರೆಯದಿರಿ.

ಚಿತ್ರಕೃಪೆ: Navaneeth KN

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಚಿಮ್ಮಿನಿ ಜಲಾಶಯ ಹಾಗೂ ವನ್ಯಜೀವಿಧಾಮ: ತ್ರಿಶ್ಶೂರ್ ನಗರದಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಮುಕುಂದಪುರಂ ತಾಲೂಕಿನ ಈ ಸುಂದರ ವನ್ಯಜೀವಧಾಮ ಹಾಗೂ ಜಲಾಶಯ ಸ್ಥಳೀಯ ನಿವಾಸಿಗಳ ನೆಚ್ಚಿನ ಪಿಕ್ನಿಕ್ ತಾಣವಾಗಿದೆ. ಜಲಾಶಯಗಂಟಿಕೊಂಡಂತೆ ವನ್ಯಜೀವಿ ಧಾಮವಿದ್ದು ಅರಣ್ಯ ಇಲಾಖೆ ಟ್ರೆಕ್ಕಿಂಗ್, ಬಾಂಬೂ ರಾಫ್ಟಿಂಗ್ ನಂತಹ ಸಾಹಸಮಯ ಚಟುವಟಿಕೆಗಳನ್ನು ಆಯೋಜಿಸುತ್ತದೆ. ಚಿಮ್ಮಿನಿ ನದಿಗೆ ಅಡ್ಡಲಾಗಿ ಈ ಜಲಾಶಯವನ್ನು ನಿರ್ಮಿಸಲಾಗಿದೆ.

ಚಿತ್ರಕೃಪೆ: Sirajvk

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪೀಚಿ ಆಣೆಕಟ್ಟು : ತ್ರಿಶ್ಶೂರ್ ನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಈ ಆಣೆಕಟ್ಟು ಒಂದು ಸುಂದರ ಪಿಕ್ನಿಕ್ ತಾಣವಾಗಿದೆ. ಮನಾಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ನೀರಾವರಿ ಜಲಾಶಯವು ತ್ರಿಶ್ಶೂರ್ ನಗರದ ಜನರ ಕುಡಿಯುವ ನೀರಿನ ಬವಣೆಯನ್ನೂ ನೀಗಿಸಿದೆ.

ಚಿತ್ರಕೃಪೆ: Sibyav

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪೂಮಲ ಜಲಾಶಯ : ತ್ರಿಶ್ಶೂರ್ ನಗರದಿಂದ ಹನ್ನೊಂದು ಕಿ.ಮೀ ಗಳಷ್ಟೆ ದೂರದಲ್ಲಿರುವ ಪುಳಕ್ಕಲ್ ಪ್ರದೇಶದಲ್ಲಿ ಈ ಸುಂದರ ಜಲಾಶಯ. ವಿರಾಮದ ಸಮಯವನ್ನು ಹಾಯಾಗಿ ಕಳೆಯಬಯಸುವ ಪ್ರವಾಸಿಗರಿಗೆ ಈ ಆಣೆಕಟ್ಟು ಒಂದು ವರದಾನವಿದ್ದಂತೆ.

ಚಿತ್ರಕೃಪೆ: Manojk

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ವಳಾನಿ ಜಲಾಶಯ : ತ್ರಿಶ್ಶೂರ್ ನಲ್ಲಿರುವ ಒಂದು ಚಿಕ್ಕ ಪಟ್ಟಣ ವಡಕ್ಕಂಚೇರಿ. ಈ ಪಟ್ಟಣದಲ್ಲಿರು ಒಂದು ಸುಂದರ ಪ್ರವಾಸಿ ಆಕರ್ಷಣೆಯೆ ವಳಾನಿ ಜಲಾಶಯ. ಇದು ತ್ರಿಶ್ಶೂರ್ ನಗರದಿಂದ ಸುಮಾರು 22 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Arayilpdas

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

"ಭಾರತದ ನಯಾಗ್ರಾ" ಎಂದೆ ಖ್ಯಾತಿಗಳಿಸಿರುವ ಅತಿರಪಳ್ಳಿ ಜಲಪಾತವು ತ್ರಿಶ್ಶೂರ್ ಜಿಲ್ಲೆಯ ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ಹಲವಾರು ಭಾಷೆಗಳ ಸಾಕಷ್ಟು ಚಲನಚಿತ್ರಗಳ ಸನ್ನಿವೇಶಗಳು ಈ ಮನಮೋಹಕ ಜಲಪಾತ ತಾಣದ ಬಳಿ ಚಿತ್ರೀಕರಣಗೊಂಡಿವೆ. ಇದು ತ್ರಿಶ್ಶೂರ್ ನಗರದಿಂದ ಸುಮಾರು 60 ಕಿ.ಮೀ ದೂರವಿದ್ದು, ಮುಕುಂದಪುರಂ ತಾಲೂಕಿನಲ್ಲಿದೆ.

ಚಿತ್ರಕೃಪೆ: iriyas

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ತ್ರಿಶ್ಶೂರ್ ಜಿಲ್ಲೆಯ ಅತಿರಪಳ್ಳಿ ಪಂಚಾಯತ್ ಅಡಿಯಲ್ಲೆ ಬರುವ ಚರ್ಪಾ ಜಲಪಾತವು ಮತ್ತೊಂದು ಸುಂದರ ಜಲಪಾತ ಕೇಂದ್ರವಾಗಿದೆ. ಇದು ಅತಿರಪಳ್ಳಿ ಮತ್ತು ವಳಾಚಲ್ ಜಲಪಾತಗಳ ಮಧ್ಯದಲ್ಲಿ ಹರಿದಿರುವ ಚಾಲಕ್ಕುಡಿ ನದಿಯಿಂದ ರೂಪಗೊಂಡಿದೆ.

ಚಿತ್ರಕೃಪೆ: Jan J George

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಮೊದಲೆರಡು ಜಲಪಾತಗಳ ಜೊತೆ ಜೊತೆಯಲ್ಲೆ ನೆಲೆಸಿದೆ ಮತ್ತೊಂದು ಸುಂದರ ಜಲಪಾತ ವಳಾಚಲ್ ಜಲಪಾತ. ಮತ್ತೊಂದು ತಿಳಿದಿರ ಬೇಕಾದ ವಿಚಾರವೆಂದರೆ ಅತಿರಪಳ್ಳಿ ಮತ್ತು ವಳಾಚಲ್ ಜಲಪಾತ ಕೇಂದ್ರಗಳಿಗೆ ತೆರಳಲು ಪ್ರವೇಶ ಶುಲ್ಕ ಪಾವತಿಸಬೇಕಾದ್ದು ಅವಶ್ಯ.

ಚಿತ್ರಕೃಪೆ: Sreejith K

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ತ್ರಿಶ್ಶೂರ್ ಪಟ್ಟಣದಿಂದ 28 ಕಿ.ಮೀ ದೂರದಲ್ಲಿದೆ ಚಾವಕ್ಕಾಡ್ ಎಂಬ ಕರಾವಳಿಯ ಪುಟ್ಟ ಪಟ್ಟಣ. ಚಾವಕ್ಕಾಡ್ ತನ್ನಲ್ಲಿರುವ ಸುಂದರ ಕಡಲ ತೀರದಿಂದಾಗಿ ಜನಪ್ರೀಯವಾಗಿದೆ. ಇದನ್ನು ಚಾವಕ್ಕಾಡ್ ಬೀಚ್ ಎಂಬ ಹೆಸರಿನಿಂದಲೆ ಕರೆಯಲಾಗುತ್ತದೆ.

ಚಿತ್ರಕೃಪೆ: Drajay1976

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ತ್ರಿಶ್ಶೂರಿನ ಅಳಿಕೋಡ್ ನಲ್ಲಿರುವ ಮುನಕ್ಕಲ್ ಕಡಲ ತೀರ ತ್ರಿಶ್ಶೂರ್ ಜಿಲ್ಲೆಯ ಮತ್ತೊಂದು ಆಕರ್ಷಕ ಕಡಲ ತೀರ ಆಕರ್ಷಣೆಯಾಗಿದೆ. ಮೊನಚಾದ ಕಲ್ಲುಗಳಿಂದ ಈ ಕಡಲ ತೀರವು ತುಂಬಿದುದರಿಂದ ಇದಕ್ಕೆ ಮುನಕ್ಕಲ್ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Haribhagirath

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ತ್ರಿಶ್ಶೂರ್ ಪಟ್ಟಣದಿಂದ 22 ಕಿ.ಮೀ ದೂರದಲ್ಲಿರುವ ತಾಲಿಕುಲಂ ಹಳ್ಳಿಯಲ್ಲಿರುವ ಒಂದು ಆಕರ್ಷಕ ಕಡಲ ತೀರದ ಹೆಸರು ಸ್ನೇಹತೀರಂ ಅಥವಾ "ಲವರ್ಸ್ ಶೋರ್". ಸ್ಥಳೀಯ ಪ್ರವಾಸಿಗರ ಸದಾ ನೆಚ್ಚಿನ ತಾಣವಾಗಿರುವ ಈ ಕಡಲ ತೀರವು 2010 ರಲ್ಲಿ ಕೇರಳ ಪ್ರವಾಸೋದ್ಯಮ ಇಲಾಖೆಯಿಂದ ವರ್ಷದ ಉತ್ತಮ ಕಡಲ ತೀರದ ಬಿರುದನ್ನು ಪಡೆದಿದೆ.

ಚಿತ್ರಕೃಪೆ: Jpullokaran

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಗುರುವಾಯೂರು : ತ್ರಿಶ್ಶೂರ್ ಪಟ್ಟಣದಿಂದ ಕೇವಲ 28 ಕಿ.ಮೀ ದೂರದಲ್ಲಿದೆ ಪ್ರಸಿದ್ಧ ತೀರ್ಥ ಕ್ಷೇತ್ರ ಗುರುವಾಯೂರು. ಗುರುವಾಯೂರು ಮೂಲತಃ ಶ್ರೀಕೃಷ್ಣನ ದೇವಾಲಯದಿಂದಾಗಿ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ. ಕೃಷ್ಣನ ದೇವಾಲಯ ಹಾಗೂ ಮುಂದಿರುವ ಪುಷ್ಕರಿಣಿ.

ಚಿತ್ರಕೃಪೆ: SreeBot

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ನೀವು ಇತಿಹಾಸಪ್ರಿಯ ಪ್ರವಾಸಿಗರಾಗಿದ್ದಲ್ಲಿ ತ್ರಿಶ್ಶೂರ್ ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ಚೆಟ್ಟುವಾಗೆ ಹೋದಾಗ ಅಲ್ಲಿ ವಿಲಿಯಮ್ ಕೋಟೆಯನ್ನು ಕಾಣಬಹುದು. ಡಚ್ಚರು, ಕೊಚ್ಚಿ ರಾಜ, ಮೈಸೂರು ರಾಜ್ಯ, ಟಿಪ್ಪು ಸುಲ್ತಾನ ಹೀಗೆ ಹಲವರ ಕೈವಶವಾಗುತ್ತ ಕೊನೆಗೆ ಟಿಪ್ಪುವಿಗೆ ದಕ್ಕಿ ಆತ ಅದನ್ನು ಭಾಗಶಃ ನಾಶ ಮಾಡಿದನು. ಕೋಟೆಗೆ ನೀರಿನ ನಾಲೆಯ ಮೂಲಕ ಹೋಗ ಬೇಕಾಗಿತ್ತು.

ಚಿತ್ರಕೃಪೆ: Karipparasunil

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ತ್ರಿಶ್ಶೂರ್ ಪಟ್ಟಣದಲ್ಲಿರುವ ಕೊಲ್ಲೆಂಗೋಡೆ ಅರಮನೆ. ಇಂದು ಇದು ಮ್ಯೂರಲ್ ಕಲೆಯ ಪ್ರದರ್ಶನಗಳ ಅದ್ಭುತ ಸಂಗ್ರಾಹಲಯವಾಗಿ ಜನಪ್ರೀಯವಾಗಿದೆ.

ಚಿತ್ರಕೃಪೆ: Arjuncm3

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಇಂದು ವಸ್ತು ಸಂಗ್ರಹಾಲಯವಾಗಿರುವ ಶಕ್ತನ್ ತಂಪುರನ್ ಅರಮನೆಯು ತ್ರಿಶ್ಶೂರ್ ಪಟ್ಟಣದ ಒಂದು ಪ್ರವಾಸಿ ಆಕರ್ಷಣೆಯಾಗಿದೆ. ಶಕ್ತನ್ ತಂಪುರನ್ ಕೊಚ್ಚಿ ಸಾಮ್ರಾಜ್ಯದ ಮಹಾ ರಾಜನಾಗಿದ್ದನು.

ಚಿತ್ರಕೃಪೆ: Sibyav

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ತ್ರಿಶ್ಶೂರ್ ಪಟ್ಟಣವು ಹಬ್ಬಗಳಿಗಾಗಿ ವಿಶೇಷ ಸ್ಥಾನವನ್ನೆ ಪಡೆದಿದೆ. ಇಲ್ಲಿ ಆಚರಿಸಲಾಗುವ ಉತ್ಸವವು ಕೇರಳದ ಸಮಗ್ರ ಜೀವನಶೈಲಿಯ ತುಣುಕುಗಳನ್ನು ಬಿಂಬಿಸುವ ಅಂಶಗಳಾಗಿವೆ. ತ್ರಿಶ್ಶೂರ್ ಪುರಂ ಒಂದು ಪ್ರಮುಖ ಉತ್ಸವವಾಗಿದೆ. ತ್ರಿಶ್ಶೂರ್ ನಗರದ ವಡಕ್ಕುನಾಥನ್ ದೇವಾಲಯದಲ್ಲಿ ಇದನ್ನು ಆಚರಿಸಲಾಗುತ್ತದೆ. ಇದೊಂದು ವಾರ್ಷಿಕ ಉತ್ಸವವಾಗಿದ್ದು ಮಲಯಾಳಂ ಕ್ಯಾಲೆಂಡರಿನ ಅನ್ವಯ ಪೂರಂ ನಕ್ಷತ್ರದೊಂದಿ ಚಂದ್ರೋದ್ಯವಾಗುವ ದಿನದಂದು ಇದನ್ನು ಆಚರಿಸಲಾಗುತ್ತದೆ.

ಚಿತ್ರಕೃಪೆ: Rameshng

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಆನಊಟ : ಆನೆಗಳಿಗೆ ಊಟ ನೀಡಿ ಸಂಭ್ರಮಿಸುವ ಒಂದು ವಿಶಿಷ್ಟ ಹಬ್ಬ ಇದಾಗಿದೆ. ತ್ರಿಶ್ಶೂರಿನ ವಡಕ್ಕುನಾಥ ದೇವಾಲಯದ ಸುತ್ತಮುತ್ತಲಿನಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಮಲಯಾಳಂ ಕ್ಯಾಲೆಂಡರಿನ ಪ್ರಕಾರ ಕಾರಕ್ಕಿದಕಂ ತಿಂಗಳ ಮೊದಲ ದಿನದಂದು (ಸಾಮಾನ್ಯವಾಗಿ ಜುಲೈ ಸಂದರ್ಭದಲ್ಲಿ) ಈ ಹಬ್ಬವಿರುತ್ತದೆ. ಕಬ್ಬು, ತೆಂಗು, ಬೆಲ್ಲ, ಸಿಹಿಯಾದ ಪ್ರಸಾದ, ಹಣ್ಣುಗಳು ಹೀಗೆ ರುಚಿಕರವಾದ ಖಾದ್ಯಗಳನ್ನು ಆನೆಗಳಿಗೆ ನೀಡಲಾಗುತ್ತದೆ.

ಚಿತ್ರಕೃಪೆ: Joseph Lazer

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಓಣಂ ಕೇರಳದಲ್ಲೆ ಅತಿ ಪ್ರಮುಖವಾಗಿ ಆಚರಿಸಲಾಗು ಉತ್ಸವ. ಈ ಸಂದರ್ಭದಲ್ಲಿ ಆಚರಿಸಲಾಗುವ ಮತ್ತೊಂದು ವಿಶೇಷ ಆಚರಣೆ ಎಂದರೆ ಪುಲಿ ಕಾಲಿ ಅಥವಾ ಹುಲಿ ವೇಶ. ಈ ಆಚರಣೆಯು ತ್ರಿಶ್ಶೂರ್ ಪಟ್ಟಣದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.

ಚಿತ್ರಕೃಪೆ: Felix Francis

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಉತ್ರಾಲಿಕಾವು ಪೂರಂ : ತ್ರಿಶ್ಶೂರ್ ಜಿಲ್ಲೆಯ ತಲಪಿಲ್ಲಿ ತಾಲೂಕಿನ ವಡಕಂಚೇರಿಯ ಶ್ರೀ ರುದಿರಾಮಹಕಾಲಿಕಾವು ದೇವಸ್ಥಾನದಲ್ಲಿ ಆಚರಿಸಲಾಗುವ ಉತ್ರಾಲಿಕಾವು ಪೂರಂ ಉತ್ಸವವೂ ಸಹ ಒಂದು ಪ್ರಮುಖ ಉತ್ಸವವಾಗಿದೆ. ಈ ಉತ್ಸವವನ್ನು ಬೇಸಿಗೆಯ ಪ್ರಾರಂಭದ ಮುಂಚಿನ ದಿನಗಳಲ್ಲಿ ಆಚರಿಸಲಾಗುತ್ತದೆ. ಮತ್ತೊಂದು ವಿಶೇಷವೆಂದರೆ ಇದು ಕೇರಳದಲ್ಲಿಯೆ ಬಾಣ ಬಿರುಸುಗಳನ್ನು ಸಿಡಿಸುವ ಎರಡನೆಯ ದೊಡ್ಡ ಉತ್ಸವವಾಗಿದೆ.

ಚಿತ್ರಕೃಪೆ: Manojk

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ತ್ರಿಶ್ಶೂರ್ ಬಳಿಯಿರುವ ಒಲ್ಲೂರ್ ನಲ್ಲಿ ಆಚರಿಸಲಾಗುವ ಮತ್ತೊಂದು ವಿಶಿಷ್ಟ ಉತ್ಸವವೆಂದರೆ ಸಂತ ರಾಫೇಲರ ಹಬ್ಬ. ಪ್ರತಿ ವರ್ಷ ಅಕ್ಟೋಬರ್ 23 ಹಾಗೂ 24 ರಂದು ಆಚರಿಸಲಾಗುವ ಈ ಹಬ್ಬವು ಕೇರಳದ ಕ್ರಿಶ್ಚಿಯನ್ನರ ಹಬ್ಬಗಳ ಪೈಕಿ ಪ್ರಮುಖವಾದುದಾಗಿದೆ.

ಚಿತ್ರಕೃಪೆ: Jpullokaran

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ವಂಚಿಕುಲಂ : ಇದು ತ್ರಿಶ್ಶೂರ್ ನಗರದಲ್ಲಿರುವ ತಾಜಾ ನೀರಿನ ಕೆರೆಯಾಗಿದ್ದು ಭೇಟಿ ನೀಡಬಹುದಾದ ಸುಂದರ ತಾಣವಾಗಿದೆ. ಹಿಂದೆ ಈ ಕೆರೆಯು ಕೊಚ್ಚಿ ಹಾಗೂ ತ್ರಿಶ್ಶೂರ್ ನಗರವನ್ನು ಬೆಸೆಯುವ ಜಲಮಾರ್ಗವಾಗಿ ಬಳಸಲ್ಪಡುತ್ತಿತ್ತು.

ಚಿತ್ರಕೃಪೆ: Smokingsingh

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ವಡಕ್ಕೆಚಿರಾ : ಇದು ತ್ರಿಶ್ಶೂರ್ ನಗರದಲ್ಲಿರುವ ಗುರುತರವಾದ ಕೊಳವಾಗಿದೆ. ಈ ಪುರಾತನ ಐತಿಹಾಸಿಕ ಪ್ರಸಿದ್ಧ ಕೊಳವು ಕೊಚ್ಚಿ ದೇವಸ್ವೋಮ ಬೋರ್ಡ್ ನ ಅಧೀನದಲ್ಲಿದೆ. ದೇವಸ್ವೋಮ ಬೋರ್ಡ್ ಕೇರಳ ಸರ್ಕಾರ ನೇಮಿಸಿದ, ಹಿಂದೂ ದೇವಾಲಯಗಳ ನಿರ್ವಹಣೆಮಾಡುವ ಒಂದು ಇಲಾಖೆಯಾಗಿದೆ.

ಚಿತ್ರಕೃಪೆ: Hashpv

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ತ್ರಿಶ್ಶೂರ್ ನಗರದ ಹೃದಯ ಭಾಗದಲ್ಲಿ ಸ್ಥಿತವಿರುವ ತ್ರಿಶ್ಶೂರ್ ಪ್ರಾಣಿ ಸಂಗ್ರಹಾಲಯ ಒಂದು ಆಕರ್ಷಕ ಪ್ರವಾಸಿ ಆಕರ್ಷಣೆಯಾಗಿದೆ. ಭಾರತದಲ್ಲಿರುವ ಹಳೆಯ ಪ್ರಾಣಿ ಸಂಗ್ರಹಾಲಯಗಳ ಪೈಕಿ ಒಂದಾಗಿರುವ ಇದು 13.5 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿದ್ದು 1885 ರಲ್ಲಿ ಸ್ಥಾಪಿಸಲ್ಪಟ್ಟಿದೆ. ಸೋಮವಾರವೊಂದನ್ನು ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲೂ ಈ ಪ್ರಾಣಿ ಸಂಗ್ರಹಾಲಯ ಸಾರ್ವಜನಿಕರಿಗೆ ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6.30 ಘಂಟೆಯವರೆಗೆ ತೆರೆದಿರುತ್ತದೆ. ವಿರಮಿಸುತ್ತಿರುವ ಮುಳ್ಳು ಹಂದಿ.

ಚಿತ್ರಕೃಪೆ: Arjuncm3

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ತ್ರಿಶ್ಶೂರ್ ನಗರದಲ್ಲಿರುವ ಪುರಾತನ ನಾಲ್ಕು ಕೊಳಗಳ ಪೈಕಿ ಪದಿಂಜರೆಚಿರಾ ಕೊಳವೂ ಸಹ ಒಂದಾಗಿದ್ದು ನಗರದ ಗುರುತರವಾದ ಆಕರ್ಷಣೆಯಾಗಿದೆ. ಹಿಂದೆ ಕೇರಳದ ಮಹಾ ರಾಜ ಶಕ್ತನ್ ತಂಪುರನ್ ನಿಂದ ನಿರ್ಮಿಸಲ್ಪಟ್ಟ ಈ ಕೊಳ ಇಂದು ವಡಕ್ಕೆ ಮಧೋಮ್ ಪಂತದ ಒಡೆತನದಲ್ಲಿದೆ. ವಡಕ್ಕೆ ಮಧೋಮ್ ಎನ್ನುವುದು ಅದ್ವೈತ ಮತ ಸಾರುವ ಪಂತವಾಗಿದ್ದು ಆದಿ ಶಂಕರರ ಶಿಷ್ಯರಾಗಿದ್ದ ಹಸ್ತಮಲಿಕಾಚಾರ್ಯರಿಂದ ಪ್ರಾರಂಬಿಸಲ್ಪಟ್ಟಿದೆ.

ಚಿತ್ರಕೃಪೆ: Smokingsingh

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ವಿಲಂಗನ್ ಬೆಟ್ಟ ತ್ರಿಶ್ಶೂರ್ ನಗರಕ್ಕೆ ಹತ್ತಿರದಲ್ಲಿರುವ ಒಂದು ಪುಟ್ಟ ಗಿರಿ ಪ್ರದೇಶವಾಗಿದ್ದು ಭೇಟಿ ನೀಡಲು ಯೋಗ್ಯವಾದ ಸ್ಥಳವಾಗಿದೆ. ಇದನ್ನು ಪ್ರೀತಿಯಿಂದ ತ್ರಿಶ್ಶೂರ್ ನಗರದ "ಆಕ್ಸಿಜನ್ ಜಾರ್" ಎಂದು ಕರೆಯಲಾಗುತ್ತದೆ. ಬೆಟ್ಟದ ತುದಿಯಿಂದ ಕಂಡುಬರುವ ತ್ರಿಶ್ಶೂರ್ ನಗರದ ವಿಹಂಗಮ ನೋಟವು ಮನಸೂರೆಗೊಳ್ಳುವಂತಿರುತ್ತದೆ.

ಚಿತ್ರಕೃಪೆ: Aruna

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಪರಿಪೂರ್ಣ ಆಕರ್ಷಣೆಗಳ ತ್ರಿಶ್ಶೂರ್:

ಅರಿಯಣ್ಣೂರು ಛತ್ರಿಗಳು ಎಂದೆ ಪ್ರಸಿದ್ಧವಾಗಿರುವ ಈ ಅಣಬೆ ಆಕಾರದ ಇತಿಹಾಸ ಪೂರ್ವ ಕಲ್ಲುಗಳ ರಚನೆಯು ಕುತೂಹಲ ಕೆರಳಿಸುವ ಪ್ರವಾಸಿ ಆಕರ್ಷಣೆಯಾಗಿದೆ. ತ್ರಿಶ್ಶೂರ್ ನಗರದಿಂದ ಸುಮಾರು 23 ಕಿ.ಮೀ ಗಳಷ್ಟು ದೂರದಲ್ಲಿರುವ ಅರಿಯಣ್ಣೂರಿನಲ್ಲಿ ಈ ಕಲ್ಲುಗಳನ್ನು ನೋಡಬಹುದು. ಹಿಂದೆ ಇವು ಸಮಾಧಿ ಸ್ಮಾರಕಗಳಾಗಿ ನಿರ್ಮಿಸಲ್ಪಡುತ್ತಿದ್ದವು. ಸ್ಥಳೀಯವಾಗಿ ಇದನ್ನು ಅರಿಯಣ್ಣೂರು ಕುಡಕ್ಕಲ್ ಎಂದು ಕರೆಯುತ್ತಾರೆ.

ಚಿತ್ರಕೃಪೆ: Smokingsingh

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X