Search
  • Follow NativePlanet
Share
» »ಮುಂಬೈಗೆ ಹೋದ್ರೆ ಇದನ್ನೆಲ್ಲಾ ನೋಡಲೇ ಬೇಕು

ಮುಂಬೈಗೆ ಹೋದ್ರೆ ಇದನ್ನೆಲ್ಲಾ ನೋಡಲೇ ಬೇಕು

By Manjula Balaraj Tantry

ಮುಂಬೈ ಒಂದು ದೊಡ್ಡ ನಗರವಾಗಿದೆ . ಇದು ಎಷ್ಟು ದೊಡ್ಡ ನಗರವೆಂದರೆ ನೀವು ನಿಮ್ಮ ಇಡೀ ಜೀವನವನ್ನು ಇಲ್ಲಿ ಕಳೆದರೂ ನೀವು ಇಲ್ಲಿಯ ನಗರದ ಎಲ್ಲಾ ಭಾಗಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಸದ್ದು ಗದ್ದಲಗಳಿಂದ ಕೂಡಿದ ರೈಲುಗಳು, ಸದಾ ಓಡಾಡುತ್ತಿರುವ ಜನರು ಮತ್ತು ಎಂದಿಗೂ ಕೊನೆಯೇ ಇಲ್ಲವೆನ್ನುವಂತಹ ಇಲ್ಲಿಯ ಜೀವನ ಇದೇ ಮುಂಬೈ. ಇಲ್ಲಿಗೆ ಕೆಲವರು ಕನಸು ಕಾಣುವ ಸಲುವಾಗಿ ಬಂದರೆ ಇನ್ನು ಕೆಲವರು ಇಲ್ಲಿಯ ಬಗ್ಗೆ ತಿಳಿದುಕೊಳ್ಳಲು ಬರುತ್ತಾರೆ ಮತ್ತೆ ಕೆಲವರು ಇಲ್ಲಿಯ ಸಾಗರವನ್ನು ನೋಡಲು ಮತ್ತು ಬ್ರಿಟಿಷ್ ವಾಸ್ತು ಶಿಲ್ಪವನ್ನು ನೋಡಲು ಬರುತ್ತಾರೆ.

ನೀವು ಯಾವ ವಿಭಾಗಕ್ಕೆ ಸೇರಿದವರು ಎಂದು ನಿರ್ಧರಿಸಿ. ನಾವು ಇಲ್ಲಿ ಕೆಳಗೆ ಪಟ್ಟಿ ಮಾಡಿದ 6 ವಿಷಯಗಳ ಪೈಕಿ ಒಂದನ್ನಾದರೂ ಆಯ್ಕೆ ಮಾಡಿಕೊಂಡರೆ ಉತ್ತಮ. ಆದುದರಿಂದ ನಿಮ್ಮ ಮುಂದಿನ ಪ್ರಯಾಣ ಮುಂಬೈಗೆ. ಇಲ್ಲಿ ನೀವು ಏನೆಲ್ಲಾ ಮಾಡಬಹುದೆಂದು ನಿಮಗೆ ತಿಳಿದಿದೆಯೇ...

1 ಮರೀನ್ ಡ್ರೈವ್ ಗೆ ಒಂದು ಪ್ರವಾಸ

1 ಮರೀನ್ ಡ್ರೈವ್ ಗೆ ಒಂದು ಪ್ರವಾಸ

Wusel007

ಇದನ್ನು ರಾಣಿಯ ಕಂಠೀ ಹಾರವೆಂದು ಕರೆಯಲಾಗುತ್ತದೆ. ಇದೊಂದು ವ್ಯವಸ್ಥಿತವಾದ ಸಮುದ್ರದ ಬದಿಯಲ್ಲಿ ಯೋಜಿತವಾಗಿ ನಿರ್ಮಾಣವಾಗಿದೆ. ನೀವು ಇಲ್ಲಿ ಒಂದು ಗಂಟೆಗಳ ಕಾಲ ಕುಳಿತುಕೊಂಡರೂ ಸಮಯ ಸಾಕಾಗುವುದಿಲ್ಲ. ನೀವು ಈ ಸ್ಥಳದಲ್ಲಿ ಮುಂಜಾನೆಯ ಸಮಯ ಅಥವಾ ಸಾಯಂಕಾಲದ ಸಮಯದಲ್ಲಿ ಇದ್ದಲ್ಲಿ, ಜಾಗಿಂಗ್ ಮಾಡುವವರು, ಓಟವನ್ನು ಕೈಗೊಳ್ಳುವ ತಂಡಗಳು ಮತ್ತು ನಾಯಿಗಳ ಜೊತೆಗೆ ವಾಕ್ ಮಾಡುವವರು ಮತ್ತು ಇನ್ನು ಕೆಲವು ಈ ಸಾಗರದ ತಂಪಾದ ಗಾಳಿ ಸೇವನೆ ಮಾಡುವವರನ್ನು ಕಾಣಬಹುದಾಗಿದೆ.

ನಿಮಗೇನಾದರೂ ಹಸಿವಾದಲ್ಲಿ, ನೀವು ಇಲ್ಲಿ ಹಣ್ಣು ವ್ಯಾಪಾರಿಗಳು , ಚಹಾ ಮಾರುವವರು ಕೂಗಾಡುತ್ತಾ ಸುತ್ತ ಮುತ್ತ ಮಾರುವುದನ್ನು ಕಾಣಬಹುದು. ಮತ್ತು ನೀವು ಯಾವಾಗ ಬೇಕಾದರೂ ಅವರನ್ನು ನಿಲ್ಲಿಸಿ ನಿಮಗೆ ಬೇಕಾದ ಒಂದು ಕಪ್ ಟೀ ಯನ್ನು ಮತ್ತು ಮುಂಬೈ ಶೈಲಿಯ ಬೇಲ್ ಅನ್ನು ಸವಿಯಬಹುದು. ಅನೇಕ ಜನರು ಮೆರೈನ್ ಡ್ರೈವ್ ನ ವೇದಿಕೆಯಲ್ಲಿ ಕುಳಿತು ಕಥೆ ಮತ್ತು ಕವನಗಳನ್ನು ಬರೆದಿದ್ದಾರೆ. ಮತ್ತು ಅಲ್ಲಿಗೆ ಹೋಗಿ ನೀವು ನೋಡಿದಲ್ಲಿ ಇದು ಯಾಕಿರಬಹುದು ಎಂಬ ಅರಿವಾಗುತ್ತದೆ.

2. ಜುಹು ಬೀಚ್ ನಲ್ಲಿ ಸೂರ್ಯಾಸ್ತ ವೀಕ್ಷಿಸಿ

2. ಜುಹು ಬೀಚ್ ನಲ್ಲಿ ಸೂರ್ಯಾಸ್ತ ವೀಕ್ಷಿಸಿ

Manas46951

ಮುಂಬೈಯು ಕರಾವಳಿಯ ತೀರದಲ್ಲಿಯೇ ಇರುವುದರಿಂದ ಜುಹೂ ಬೀಚ್ ನ ಸೌಂದರ್ಯತೆಯನ್ನು ನೋಡಲು ತಪ್ಪಿಸಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಇಲ್ಲಿ ನಿಮಗೆ ಅನೇಕ ಬಗೆಯ ಜನರನ್ನು ಕಾಣಬಹುದು ಧನಿಕರಿಂದ ಬಡವರವರೆಗೆ ಎಲ್ಲಾ ತರದ ಜನರೂ ಜುಹೂ ಬೀಚ್ ನಲ್ಲಿ ವಿಶ್ರಾಂತಿ ಪಡೆಯಲು ಬರುತ್ತಾರೆ ಮತ್ತು ಮನೋರಂಜನೆಯನ್ನು ಪಡೆಯುತ್ತಾರೆ.

ತಿನಿಸು ಪ್ರಿಯರಿಗೆ ಇಷ್ಟವಾದ ಅನೇಕ ಬಗೆಯ ತಿನಿಸುಗಳ ಅಂಗಡಿಗಳನ್ನು ಇಲ್ಲಿ ಕಾಣಬಹುದಾಗಿದೆ. ಒಂದು ಕಡೆಯಲ್ಲಿ ನೀವು ಕೇವಲ ಬೂದಿ ಬಣ್ಣದ ಮರಳಿನ ಮೇಲೆ ಕುಳಿತುಕೊಂಡು ಸೂರ್ಯಾಸ್ತದ ಸಮಯದಲ್ಲಿ ನಿಮ್ಮ ಸುತ್ತಲೂ ಚಲಿಸುವ ಜೀವನದ ದೃಶ್ಯವನ್ನು ನೋಡಬಹುದಾಗಿದೆ. ಕೆಲವು ಮಾರಾಟಗಾರರು ನಿಮ್ಮ ಬಳಿಯೇ ಬಂದು ತಮ್ಮ ವಸ್ತುಗಳ ಮಾರಾಟ ಮಾಡಲು ಪ್ರಯತ್ನಿಸುತ್ತಾರೆ. ಇಲ್ಲಿ ಕೆಲವು ವಸ್ತುಗಳು ಕಡಿಮೆ ಬೆಲೆಯದ್ದಾಗಿರುತ್ತವೆ ಮತ್ತು ಕೆಲವು ಅದ್ಬುತವಾದುದಾಗಿರುತ್ತದೆ.

3. ಸ್ಟ್ರೀಟ್ ಫುಡ್ ಅನ್ನು ಪ್ರಯತ್ನಿಸಿ

3. ಸ್ಟ್ರೀಟ್ ಫುಡ್ ಅನ್ನು ಪ್ರಯತ್ನಿಸಿ

ಮುಂಬೈ ಅನೇಕ ವಿಷಯಗಳಿಗೆ ಹೆಸರುವಾಸಿಯಾಗಿದೆ. ಅವುಗಳಲ್ಲೊಂದು ಸ್ಟ್ರೀಟ್ ಪುಡ್. ಚೌಪಾಟೀ ಮರೈನ್ ನಿಂದ ನೀವು ಸ್ಥಳಿಯ ಅನೇಕ ರುಚಿಕರವಾದ ಸ್ವಾದಿಷ್ಟವಾದ ತಿನಿಸುಗಳ ಅನ್ವೇಷಣೆ ಮಾಡಬಹುದಾಗಿದೆ. ಇಲ್ಲಿಯ ಬೇಲ್ ಪುರಿ ಮತ್ತು ಸೇವ್ ಪುರಿಯನ್ನು ಸವಿಯಲು ಮರೆಯದಿರಿ.ಇಲ್ಲಿಯ ಮಾರಾಟಗಾರರು ಸಿಹಿ, ಖಾರ, ಉಪ್ಪು ಇತ್ಯಾದಿ ನಿಮಗೆ ಹಿಡಿಸುವ ರುಚಿಗೆ ಸರಿಯಾಗುವಂತೆ ತಿನಿಸುಗಳನ್ನು ತಯಾರಿಸಿ ಕೊಡುತ್ತಾರೆ.ಪಾವ್ ಬಾಜಿ ಇನ್ನೊಂದು ಮುಂಬೈ ನ ಸ್ಟ್ರೀಟ್ ಆಹಾರವಾಗಿದ್ದು ಇದನ್ನು ಇಲ್ಲಿ ಸವಿಯಲೇ ಬೇಕು.

ನೀವು ಇಲ್ಲಿ ವಿವಿಧ ಬಗೆಯ ಸ್ವಾದವುಳ್ಳ ಗೋಲಾ (ಸುವಾಸನಾಯುಕ್ತ ಪುಡಿ ಮಾಡಲಾದ ಮಂಜುಗಡ್ಡೆ)ಯನ್ನು ಕೂಡ ಸವಿಯಬಹುದು. ಇಲ್ಲಿ ಇನ್ನೊಂದು ಆಹಾರ ತಯಾರಿಸುವ ವಿಭಾಗವಿದ್ದು ಇಲ್ಲಿ 99 ಬಗೆಯ ದೋಸೆಗಳನ್ನು ಸವಿಯಬಹುದಾಗಿದೆ. ನೀವು ಇಲ್ಲಿ ಒಂದು ವಾರಕ್ಕಿಂತ ಹೆಚ್ಚಾಗಿ ಇಲ್ಲಿ ಇದ್ದಲ್ಲಿ ಈ ಎಲ್ಲಾ ಬಗೆಯ ದೋಸೆಗಳನ್ನು ಸವಿಯ ಬಹುದಾಗಿದೆ.ಈ ಎಲ್ಲಾ ಬಗೆಯ ದೋಸೆಗಳನ್ನು ಪ್ರಯತ್ನಿಸಿದವರನ್ನೂ ಇಲ್ಲಿಯವರೆಗೂ ಹೇಳಿದ್ದು ಕೇಳಿಲ್ಲ ಆದುದರಿಂದ ಅಂತಹವರಲ್ಲಿ ನೀವು ಒಬ್ಬರಾಗಿ.

4. ಗೇಟ್ ವೇ ಆಫ್ ಇಂಡಿಯಾ

4. ಗೇಟ್ ವೇ ಆಫ್ ಇಂಡಿಯಾ

Shamanth kumar

ಈ ಅಮ್ಚಿ ಮುಂಬೈನ ಹಾದಿಯಲ್ಲಿ ಬರದೇ ಇರುವ ವಿಷಯಗಳಿಲ್ಲ ಅವುಗಳಲ್ಲಿ ತಪ್ಪಿಸಲೇ ಬಾರದೆನ್ನುವಂತಹದು ಭಾರತದ ಗೇಟ್ ವೇ . ಇದು ವ್ಯಾಪಕವಾಗಿ ಭಾರತೀಯ ಹಾಗೂ ವಿದೇಶೀ ಪ್ರವಾಸಿಗರಿಂದ ಮೆಚ್ಚುಗೆಯನ್ನು ಪಡೆದಿದೆ. ಇಲ್ಲಿಯ ಕಮಾನು ಸ್ಮಾರಕವನ್ನು 20ನೇ ಶತಮಾನದಲ್ಲಿ ಕಿಂಗ್ ಜಾರ್ಜಿ ವಿ ಮತ್ತು ಕ್ವೀನ್ ಮೇರಿಯನ್ನು ಸ್ವಾಗತಿಸಲು ನಿರ್ಮಿಸಲಾಯಿತು. ಅದರ ಪಕ್ಕದಲ್ಲಿಯೇ ನೀವು ಜಗತ್ಪ್ರಸಿದ್ದ ತಾಜ್ ಹೋಟೇಲನ್ನು ಕಾಣಬಹುದು.

ಇದು ಬ್ರಿಟಿಷರದ್ದಾದುದರಿಂದ ಇಲ್ಲಿ ಚಹಾ ಸೇವನೆ ಮಾಡಿದರೂ ಇಂಗ್ಲಿಷರೆ ಎನ್ನುವ ಭಾವನೆ ಬರುತ್ತದೆ. ನೀವು ನಿಮ್ಮ ಪ್ರವಾಸದ ಛಾಯಾ ಚಿತ್ರವನ್ನು ಇಲ್ಲಿಯ ಗೇಟ್ ವೇ ಯಲ್ಲಿ ತೆಗೆದುಕೊಂಡ ಬಳಿಕ ಅರಬ್ಬೀ ಸಮುದ್ರದಲ್ಲಿ ಸವಾರಿ ಮಾಡಲು ಬೋಟ್ ವಿಹಾರದ ಆಯ್ಕೆಯನ್ನು ಮಾಡಬಹುದಾಗಿದೆ. ಮೇಲಿನ ವಿಭಾಗದಲ್ಲಿ ನೀವು ಸವಾರಿ ಮಾಡಲಿಚ್ಚಿಸಿದಲ್ಲಿ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ನೀವು ಇಲ್ಲಿಯ ಭೂ ಭಾಗದ ದೃಶ್ಯವನ್ನು ನೋಡುವಾಗ ಈ ಹೆಚ್ಚಿನ ಪ್ರಮಾಣದ ವೆಚ್ಚಗಳು ನಿಮಗೆ ಭಾರೀ ಎನಿಸುವುದಿಲ್ಲ.

5. ಬ್ರಿಟೀಷ್ ವಾಸ್ತು ಶಿಲ್ಪವನ್ನು ಅನ್ವೇಷಣೆ ಮಾಡಿ

5. ಬ್ರಿಟೀಷ್ ವಾಸ್ತು ಶಿಲ್ಪವನ್ನು ಅನ್ವೇಷಣೆ ಮಾಡಿ

QuartierLatin1968

ದಕ್ಷಿಣ ಬಾಂಬೆಯು ಮುಂಬೈಯಲ್ಲಿ ಬ್ರಿಟಿಷರ ಒಂದು ಅತ್ಯಂತ ಅಚ್ಚು ಮೆಚ್ಚಿನ ಪಟ್ಟಣವಾಗಿತ್ತು. ಅದಕ್ಕೆ ಸಾಕ್ಷಿ ಎನ್ನುವಂತೆ ದಕ್ಷಿಣ ಮುಂಬೈ ನಲ್ಲಿ ಕೆಲವು ವಾಸ್ತು ಶಿಲ್ಪದ ಅದ್ಬುತಗಳನ್ನು ಬಿಟ್ಟು ಹೋಗಿದ್ದಾರೆ. ಒಂದು ಕ್ಯಾಬ್ ಅಥವಾ ಟ್ರೈ ನ್ ಮೂಲಕ ದಕ್ಷಿಣ ಮುಂಬೈಗೆ ಪ್ರಯಾಣ ಬೆಳೆಸಿ ಮತ್ತು ಚರ್ಚ್ ಗೇಟ್ ನಿಂದ ಕೋಲಾಬಾ ಗೆ ಒಂದು ವಾಕ್ ಮಾಡಿ. ನೀವು ಇಲ್ಲಿ ಕೆಲವು ವಸಾಹತುಶಾಹಿಯ ಕೆಲವು ಮನಮೋಹಕ ವಾಸ್ತು ಶಿಲ್ಪವನ್ನು ಕಾಣಬಹುದಾಗಿದೆ. ಇಲ್ಲಿಯ ಕಟ್ಟಡಗಳು ಇನ್ನೂ ಜೀವಂತವೆನಿಸುವಂತಿವೆ ಮತ್ತು ಜೀವಂತಿಕೆಯನ್ನು ಸಾರುತ್ತವೆ ವ್ಯತ್ಯಾಸವೇನೆಂದರೆ ಇಲ್ಲಿಯ ಜನರು ಬದಲಾಗಿದ್ದಾರೆ.

ಇಲ್ಲಿ ದೊಡ್ಡ ಕ್ರಿಕೆಟ್ ಮೈದಾನವಿದೆ. ನೀವು ಅದೃಷ್ಟವಂತರಾಗಿದ್ದಲ್ಲಿ, ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುವ ಅವಕಾಶವನ್ನೂ ಪಡೆಯಬಹುದು ಮುಂಬೈನ ಇನ್ನಿತರ ಭಾಗಗಳಿಗಿಂತ ಈ ಭಾಗವು ಅತ್ಯಂತ ಸ್ವಚ್ಚವಾಗಿದೆ. ಮತ್ತು ಇಲ್ಲಿ ರಿಕ್ಷಾಗಳಿಲ್ಲ. ಆದುದರಿಂದ ಮುಂಬೈನ ಈ ಭಾಗವು ಅತ್ಯಂತ ಶ್ರೀಮಂತವಾಗಿ ಕಾಣುತ್ತದೆ.

6. ಲೋಕಲ್ ಟ್ರೈನ್ ನಲ್ಲಿ ಪ್ರಯಾಣಿಸಿ

6. ಲೋಕಲ್ ಟ್ರೈನ್ ನಲ್ಲಿ ಪ್ರಯಾಣಿಸಿ

Dbenbenn

ಇಲ್ಲಿಯ ಅಕ್ಕ ಪಕ್ಕದ ಸ್ಥಳಗಳಿಗೆ ಲೋಕಲ್ ರೈಲಿನಲ್ಲಿ ಪ್ರಯಾಣ ಮಾಡುವುದಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲ. ನೀವು ಮುಂಬೈ ನ ವಾಸ್ತವದ ಬಗ್ಗೆ ಅನುಭವ ಹೊಂದಬೇಕೆಂದಿದ್ದಲ್ಲಿ, ಇಲ್ಲಿಯ ಲೋಕಲ್ ರೈಲನ್ನು ಹತ್ತಿ ಮತ್ತು ಚರ್ಚ್ ಗೇಟ್ ನಿಂದ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ ಮತ್ತು ನಿಮ್ಮ ಪ್ರಯಾಣದ ಮಜಾ ಅನುಭವಿಸಿ.

ನೀವು ಇಲ್ಲಿ ಸುಂದರವಾದ ನಗುವಿನಿಂದ , ಸಂಜೆಯ ಕೀರ್ತನೆ(ನೀವು ಆ ಸಮಯದಲ್ಲಿ ಪ್ರಯಾಣ ಮಾಡುತ್ತಿದ್ದಲ್ಲಿ), ಆಂಟಿಯರು ನಿಟ್ಟಿಂಗ್ ಮಾಡುತ್ತಾ, ಮಕ್ಕಳು ಆಟವಾಡುತ್ತಾ ಇರುವುದನ್ನು ಕಾಣಬಹುದು ಮತ್ತು ಕೆಲವು ಮಾರಾಟಗಾರರು ಕೆಲವು ಆಸಕ್ತಿದಾಯಕ ವಸ್ತುಗಳನ್ನು ಮಾರುವುದನ್ನು ಕಾಣಬಹುದು. ಇಲ್ಲಿಯ ಸುಂದರವಾದ ಜೀವನವನ್ನು ನೀವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದೂ ಲೋಕಲ್ ರೈಲಿನಲ್ಲಿ. ಅತ್ಯಂತ ಜನ ಸಂದಣಿ ಇರುವ ಹಾಗೂ ಕೆಲವು ಆಫೀಸು ಸಮಯದಲ್ಲಿ ರೈಲನ್ನು ಹತ್ತಬೇಡಿ. ಏಕೆಂದರೆ ಮೊದಲ ಸಲ ಪ್ರಯಾಣಿಸುವವರು ನೂಕು ನುಗ್ಗಲಿಗೆ ಒಳಗಾಗಬಹುದು.

ನೀವು ಇಲ್ಲಿಯ ಜನಭರಿತ ರೈಲಿನ ಚಿತ್ರಣವನ್ನು ನೋಡಿರಬಹುದು. ಜನರು ಯಾವ ಕಡೆಯಿಂದ ಸಾಧ್ಯವೋ ಅಲ್ಲಿಂದ ನೇತಾಡುವುದನ್ನು ಈ ರೈಲಿನಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯವಾಗಿದೆ. ಆದರೂ ಇದು ಸತ್ಯ. ಆದುದರಿಂದ ನೀವು ರೈಲು ಪ್ರಯಾಣ ಮಾಡುವ ಮೊದಲು ಎಚ್ಚರವಹಿಸಿ ಮತ್ತು ಬೆಳಿಗ್ಗೆ 9.00 ರ ಮೊದಲು ಪ್ರಯಾಣ ಮಾಡಿ.

7.ಮುಂಬೈಗೆ ಭೇಟಿ ಕೊಡಲು ಸೂಕ್ತ ಸಮಯ

7.ಮುಂಬೈಗೆ ಭೇಟಿ ಕೊಡಲು ಸೂಕ್ತ ಸಮಯ

Abhi madhani

ಮಳೆಗಾಲದಲ್ಲಿ ಮುಂಬೈ ಯು ಸ್ವರ್ಗದಂತಿರುತ್ತದೆ. ಜೂನ್ ನಿಂದ ಅಕ್ಟೋಬರ್ ಮಧ್ಯದ ಅವಧಿಯ ಮಳೆಗಾಲದಲ್ಲಿ ಮುಂಬೈ ನಲ್ಲಿ ಒಂದು ನಿಜವಾದ ರೋಚಕತೆಯನ್ನು ತರುತ್ತದೆ. ಮತ್ತು ಮರೀನ್ ಡ್ರೈ ವ್ ಅನ್ನು ಈ ಅವಧಿಯಲ್ಲಿ ಭೇಟಿ ಕೊಟ್ಟರೆ ನೀವು ಬಿಸಿಯಾದ ಚಹಾ ಕಪ್ಪಿನ ಜೊತೆಗೆ ಕೆಲವು ರುಚಿಕರ ವಡಾಪಾವ್ ಅನ್ನು ಕೂಡಾ ಸವಿಯಬಹುದು. ನವೆಂಬರ್ ನಿಂದ ಫೆಬ್ರವರಿಯ ವರೆಗಿನ ಚಳಿಗಾಲವು ಇಲ್ಲಿ ಉತ್ತಮವಾಗಿರುತ್ತದೆ ಹಾಗೂ ಮಾರ್ಚ್ ನಿಂದ ಮೇ ವರೆಗಿನ ಬೇಸಿಗೆಯಲ್ಲಿ ತಾಪಮಾನವು ಹೆಚ್ಚಾಗಿರುತ್ತದೆ.

8. ಮುಂಬೈ ತಲುಪುವುದು ಹೇಗೆ ?

8. ಮುಂಬೈ ತಲುಪುವುದು ಹೇಗೆ ?

Metasur

ಭಾರತದ ಅತ್ಯುತ್ತಮ ನಗರಗಳಲ್ಲೊಂದೆನಿಸಿದ ಮುಂಬೈ ಭಾರತದ ಎಲ್ಲಾ ಭಾಗಗಳಿಗೂ ಜಗತ್ತಿನ ಇನ್ನಿತರ ಭಾಗಗಳಿಗೂ ಉತ್ತಮವಾಗಿ ಸಂಪರ್ಕಿಸುತ್ತದೆ. ಚತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಮುಖವಾದ ವಿಮಾನ ನಿಲ್ದಾಣವಾಗಿದೆ ಮತ್ತು ಚತ್ರಪತಿ ಶಿವಾಜಿ ಟರ್ಮಿನಸ್ ಅತ್ಯಂತ ಜನಪ್ರೀಯ ರೈಲ್ವೇ ನಿಲ್ದಾಣವಾಗಿದೆ. ನೀವು ಬಸ್ಸು ಮೂಲಕ ಕೂಡ ಬೇರೆ ಬೇರೆ ನಗರದಿಂದ ಮುಂಬೈ ಗೆ ಪ್ರಯಾಣ ಮಾಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X