Search
  • Follow NativePlanet
Share
» »ಯಾವುದೇ ಊರಿಗೆ ಹೋದ್ರೂ ಇದನ್ನು ಕೊಂಡೋಗೋದನ್ನಂತೂ ಮರೆಲೇ ಬಾರದು

ಯಾವುದೇ ಊರಿಗೆ ಹೋದ್ರೂ ಇದನ್ನು ಕೊಂಡೋಗೋದನ್ನಂತೂ ಮರೆಲೇ ಬಾರದು

ವಾರಾಂತ್ಯ ಬಂತೆಂದರೆ ಸಾಕು ಎಲ್ಲರದ್ದೂ ಏನಾದರೊಂದು ಪ್ಲ್ಯಾನಿಂಗ್ ಇದ್ದೇ ಇರುತ್ತದೆ. ಔಟಿಂಗ್ ಹೋಗೋದು, ಪಿಕ್‌ನಿಕ್, ಶಾಪಿಂಗ್ ಹೀಗೆ ಫ್ಯಾಮಿಲಿ ಜೊತೆ ಅಥವಾ ಸ್ನೇಹಿತರ ಜೊತೆ ಎಲ್ಲದರೂ ಸುತ್ತಾಡೋ ಪ್ಲ್ಯಾನಿಂಗ್ ಇರುತ್ತದೆ. ಹೀಗಿರುವಾಗ ಹೋಟೆಲ್, ಬಸ್‌ ಟಿಕೇಟ್, ಟ್ರೈನ್ ಟಿಕೇಟ್ ಇಲ್ಲ ವಿಮಾನದ ಟಿಕೇಟ್ ಎಲ್ಲಾ ಮೊದಲೇ ಬುಕ್ ಮಾಡಿ ಇಡಬೇಕಾಗುತ್ತದೆ. ಪ್ರವಾಸಕ್ಕೆ ಹೋದಾಗ ಅಲ್ಲಿ ಉಳಿದುಕೊಳ್ಳುವುದು ಎಲ್ಲಿ ಎನ್ನುವುದರ ಬಗ್ಗೆ ಮುಂಚಿತವಾಗಿಯೇ ಯೋಚಿಸಿ ಹೋಗಬೇಕಾಗುತ್ತದೆ.

ಮುಂಚಿತವಾಗಿ ಪ್ಲ್ಯಾನ್

ಮುಂಚಿತವಾಗಿ ಪ್ಲ್ಯಾನ್

ಭಾರತೀಯರಂತೂ ಎಲ್ಲವೂ ಮುಂಚಿತವಾಗಿ ಪ್ಲ್ಯಾನ್ ಮಾಡಿ ಪ್ರವಾಸಕ್ಕೆ ಹೋಗುವುದರಲ್ಲಿ ಎತ್ತಿದ ಕೈ. ಅವರಿಗೆ ಪ್ರತಿಯೊಂದು ಪರ್ಫೇಕ್ಟ್ ಆಗಿರಬೇಕು. ಕೊನೆಕ್ಷಣಕ್ಕೆ ಅಲ್ಲಿಗೆ ಹೋಗಿ ಬೇಕಾದ ವಸ್ತುವಿಗೆ ಪರದಾಡುವ ಸ್ಥಿತಿಯನ್ನು ಯಾರೂ ಇಷ್ಟಪಡೋದಿಲ್ಲ. ಹೀಗಿರುವಾಗ ಕೆಲವು ಮುಖ್ಯವಾದ ವಸ್ತುಗಳು ಭಾರತೀಯರು ಪ್ರವಾಸಕ್ಕೆ ಹೋಗುವಾಗ ಅವರ ಜೊತೆ ಕೊಂಡೊಯ್ಯುವುದನ್ನು ಮಾತ್ರ ಮರೆಯೊಲ್ಲ. ಅದು ಮರೆಯಬಾರದು ಕೂಡಾ. ಹಾಗಾದ್ರೆ ಅದು ಯಾವೆಲ್ಲಾ ವಸ್ತುಗಳು ಎನ್ನೋದನ್ನು ನೋಡೋಣ.

ಚರ್ಮರೋಗ ನಿವಾರಣೆಗೆ ಎಲ್ಲಾ ಧರ್ಮದವರು ಇಲ್ಲಿನ ದೇವಿಗೆ ಹಾಲು ಅರ್ಪಿಸ್ತಾರಂತೆ ಚರ್ಮರೋಗ ನಿವಾರಣೆಗೆ ಎಲ್ಲಾ ಧರ್ಮದವರು ಇಲ್ಲಿನ ದೇವಿಗೆ ಹಾಲು ಅರ್ಪಿಸ್ತಾರಂತೆ

ನೀರಿನ ಬಾಟಲ್

ನೀರಿನ ಬಾಟಲ್

ಪ್ರತಿಯೊಬ್ಬರೂ ಪಿಕ್‌ನಿಕ್ ಹೋಗುವಾಗ ನೀರಿನ ಬಾಟಲ್‌ನ್ನು ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ಇನ್ನೂ ಬೇರೆಡೆಗೆ ಹೋದಾಗ ಬಾಯಾರಿಕೆಯಾದಾಗ ಅಲ್ಲಿ ನೀರಿಗಾಗಿ ಅಲೆಯಬಾರದು ಎನ್ನುವ ಮುಂಜಾಗ್ರತೆಯಿಂದಾಗಿ ನೀರಿನ ಬಾಟಲ್‌ನ್ನು ಇಟ್ಟುಕೊಳ್ಳುತ್ತಾರೆ. ತಮ್ಮ ಕಾರಿನಲ್ಲು ಸಾಕಷ್ಟು ನೀರಿನ ಬಾಟಲ್ ಇಟ್ಟುಕೊಳ್ಳಿ, ಹಾಗೆಯೇ ಬ್ಯಾಗ್‌ನಲ್ಲೂ ಒಂದು ನೀರಿನ ಬಾಟಲ್ ಇಟ್ಟುಕೊಳ್ಳಿ.

ಸ್ವೆಟರ್

ಸ್ವೆಟರ್

ಸ್ವೆಟರ್ ಚಳಿಯಿಂದ ನಿಮ್ಮನ್ನು ರಕ್ಷಿಸುತ್ತದೆ. ನೀವು ಪ್ರವಾಸಕ್ಕೆ ಹೋದಲ್ಲಿ ಹೆಚ್ಚು ಚಳಿಯಿದ್ದರೆ, ತಂಪಾದ ವಾತಾವರಣವಿದ್ದರೆ ಸ್ವೆಟರ್ ನಿಮ್ಮನ್ನು ಬೆಚ್ಚಗಿಡುತ್ತದೆ. ಹಾಗಾಗಿ ನಿವು ಬ್ಯಾಗ್‌ನಲ್ಲಿ ಸ್ಪೆಟರ್ ಇಟ್ಟುಕೊಳ್ಳೋದು ಒಳ್ಳೆಯದು.

ಬೆಂಗಳ್ಳೂರಲ್ಲಿದ್ದೇ ಗೋವಾ, ಕೇರಳ, ಆಂಧ್ರ, ದೆಹಲಿ ಫುಡ್ ಚಪ್ಪರಿಸಿಬೆಂಗಳ್ಳೂರಲ್ಲಿದ್ದೇ ಗೋವಾ, ಕೇರಳ, ಆಂಧ್ರ, ದೆಹಲಿ ಫುಡ್ ಚಪ್ಪರಿಸಿ

ಸ್ಯಾನಿಟೈಸರ್

ಸ್ಯಾನಿಟೈಸರ್

ಹೋದಲ್ಲೆಲ್ಲಾ ನಮಗೆ ಕೈ ತೊಳೆಯಲು ನೀರು ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ದಾರಿ ಮಧ್ಯೆ ಏನೆಲ್ಲಾ ಮುಟ್ಟಿರುತ್ತೇವೆ. ಅದೇ ಕೈಯಲ್ಲಿ ಆಹಾರ ಸೇವಿಸಿದರೆ ಕೀಟಾಣುಗಳು ನಮ್ಮ ಹೊಟ್ಟೆಯನ್ನು ಸೇರಿಕೊಳ್ಳುತ್ತವೆ. ಹಾಗಾಗಿ ಹ್ಯಾಂಡ್ ಸೆನಿಟೈಸರ್‌ನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ. ಅದರಿಂದ ಕೈ ಸ್ವಚ್ಛಮಾಡಿ ಆಹಾರವನ್ನು ಸೇವಿಸಿ.

ಸನ್‌ಸ್ಕ್ರೀನ್ ಲೋಶನ್

ಸನ್‌ಸ್ಕ್ರೀನ್ ಲೋಶನ್

ಬಿಸಿಲಿಗೆ ಓಡಾಡುವುದರಿಂದ ಚರ್ಮ ಕಪ್ಪಗಾಗುವ ಸಾಧ್ಯತೆ ಇದೆ. ಸಮುದ್ರದ ಬದಿಯಲ್ಲಿ ಓಡಾಡುವಾಗ ಸನ್‌ಟ್ಯಾನ್ ಆಗುವ ಸಾಧ್ಯತೆ ಇದೆ. ಹಾಗಾಗಿ ನಿವು ಬ್ಯಾಗ್‌ನಲ್ಲಿ ಸನ್‌ಸ್ಕ್ರೀನ್ ಲೋಶನ್‌ನ್ನು ಇಟ್ಟುಕೊಳ್ಳುವುದು ಒಳಿತು. ಇದು ನಿಮ್ಮ ಚರ್ಮವನ್ನು ಬಿಸಿಲಿನಿಂದ ಸುರಕ್ಷಿತವಾಗಿರಿಸುತ್ತದೆ.

ಸೊಳ್ಳೆ ಕ್ರೀಮ್

ಸೊಳ್ಳೆ ಕ್ರೀಮ್

ಭಾರತದಲ್ಲಿ ನೀವು ಯಾವುದೇ ಊರಿಗೆ ತಿರುಗಾಡಿದರೂ ಅಲ್ಲಿ ಕಾಡುವ ಸಾಮಾನ್ಯ ಸಮಸ್ಯೆ ಎಂದರೆ ಸೊಳ್ಳೆ. ಈ ಸೊಳ್ಳೆ ಕಚ್ಚಿ ನಿಮ್ಮ ದೇಹದ ರಕ್ತ ಹೀರುವುದರಿಂದ ನಿಮಗೆ ಮಲೆರಿಯಾ, ಡೆಂಗ್ಯುವಿನಂತಹ ರೋಗ ಬರಬಹುದು. ಆದ್ದರಿಂದ ಸೊಳ್ಳೆ ಕ್ರೀಮ್‌ನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.

 ಸ್ಕ್ರಾರ್ಫ್‌

ಸ್ಕ್ರಾರ್ಫ್‌

ಧೂಳಿನಿಂದ ರಕ್ಷಿಸಲು ನಾವು ಸ್ಕಾರ್ಫ್ ಇಟ್ಟುಕೊಳ್ಳಬೇಕು. ಚಳಿ ಸಂದರ್ಭದಲ್ಲೂ ಸ್ಕಾರ್ಫ್ ಸಹಾಯಕ್ಕೆ ಬರುತ್ತದೆ. ದ್ವಿಚಕ್ರವಾಹನದಲ್ಲಿ ಚಲಿಸುವಾಗಂತೂ ಸ್ಕಾರ್ಫ್ ಹಾಕಿಕೊಳ್ಳೋದು ಮುಖ್ಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X