Search
  • Follow NativePlanet
Share
» »ಮಿಜೋರಾಮ್‌ನಲ್ಲಿರುವ ಥೆಂಜ಼ಾಲ್‌ನ ಪ್ರವಾಸಿ ತಾಣಗಳಿವು

ಮಿಜೋರಾಮ್‌ನಲ್ಲಿರುವ ಥೆಂಜ಼ಾಲ್‌ನ ಪ್ರವಾಸಿ ತಾಣಗಳಿವು

ಹೊರಗಿನಿಂದ ಬಂದವರಿಗೆ ಮಿಜೋರಾಮಿನ ಅತ್ಯಂತ ಸುಂದರ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಥೆಂಜ಼ಾಲ್ ಪ್ರಮುಖವಾದದ್ದು. ಸೆರ್ಚಿಪ್ ಜಿಲ್ಲಾಡಳಿತದ ಅಡಿಯಲ್ಲಿ ಬರುವ ಥೆಂಜ಼ಾಲ್ ಹಿಂದೆ ಒಂದು ದಟ್ಟಾರಣ್ಯವಾಗಿತ್ತು. ಥೆಂಜ಼ಾಲ್ ಐಜ಼ಾಲ್ ನಗರದಿಂದ 43 ಕಿಲೋಮೀಟರ್ ದೂರದಲ್ಲಿದ್ದು, ಐಜ಼ಾಲ್ ಮಿಜೋರಾಮಿನ ರಾಜಧಾನಿಯಾಗಿದೆ.

ಇತಿಹಾಸದ ಪ್ರಕಾರ

ಇತಿಹಾಸದ ಪ್ರಕಾರ

1961ರ ವರೆಗೂ ಥೆಂಜ಼ಾಲ್ ದಟ್ಟಾರಣ್ಯವಾಗಿದ್ದು ಕಾಡು ಪ್ರಾಣಿಗಳು ಓಡಾಟ ನಡೆಸುತ್ತಿದ್ದನ್ನು ನೋಡಬಹುದಾಗಿತ್ತು. ಆದರೆ 1961 ನಂತರ ಅರಣ್ಯಕ್ಕೆ ಹಾಕಿದ್ದ ಬೇಲಿಯನ್ನು ತೆಗೆದು, ಸಾಗುವಳಿ ಮಾಡಿ ನೆಲೆಸಲು ಯೋಗ್ಯವಾಗಿ ಮಾಡಲಾಗಿತ್ತು. ಇತಿಹಾಸದ ಪ್ರಕಾರ ಬೆನಗುವಾಯಿ ಸೈಲೋ ಇಲ್ಲಿ 1963ರಲ್ಲಿ ಹಳ್ಳಿಯೊಂದನ್ನು ನಿರ್ಮಿಸಿದ್ದರು. ಆರಂಭದ ಪರಿಷ್ಕರಣೆಯ ನಂತರ ಥೆಂಜ಼ಾಲ್ ಮಿಜೋ ಕೈಮಗ್ಗದ ಕಾರ್ಖಾನೆಗಳಿಗೆ ಪ್ರಸಿದ್ದಿ ಪಡೆಯಿತು.

ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಸುತ್ತಮುತ್ತಲಿನ ಪ್ರವಾಸಿ ತಾಣಗಳು

PC: Didini Tochhawng
ಥೆಂಜ಼ಾಲ್ ಸುತ್ತಮುತ್ತವಿರುವ ಪ್ರವಾಸಿ ತಾಣಗಳು ಥೆಂಜ಼ಾಲ್ ಅತಿ ಉತ್ತಮವಾದ ಪ್ರವಾಸಿ ತಾಣ. ಥೆಂಜ಼ಾಲ್ ಪ್ರವಾಸೋದ್ಯಮ ಆಫ್-ಬೀಟ್ ಬಯಸುವ ಪ್ರವಾಸಿಗರಿಗೆ ಅತಿಸೂಕ್ತ. ಇದು ಹೂಗಳ ಮತ್ತು ಪ್ರಾಣಿಗಳ ಅತಿ ಸುಂದರವಾದ ಪ್ರದೇಶ. ಥೆಂಜ಼ಾಲ್ ಪ್ರವಾಸೋದ್ಯಮ ಕೆಲವೊಂದು ಉಸಿರು ಬಿಗಿ ಹಿಡಿಯುವಂತಹ ರುದ್ರರಮಣೀಯ ಪ್ರವಾಸಿ ಸ್ಥಳಗಳನ್ನು ಹೊಂದಿದೆ.

ವಾಂಟ್ವಾಗ್ ಜಲಪಾತ

ವಾಂಟ್ವಾಗ್ ಜಲಪಾತ

PC: Lpachuau

ವಾಂಟ್ವಾಗ್ ಜಲಪಾತ ಮಿಜೋರಾಮಿನ ಅತಿ ಎತ್ತರದ ಜಲಪಾತ, ಥೆಂಜ಼ಾಲ್ ಜಿಂಕೆ ಪಾರ್ಕ್ ನಲ್ಲಿ ವಿವಿಧ ರೀತಿಯ ಜಿಂಕೆಗಳನ್ನು ನೋಡಬಹುದಾಗಿದೆ. ಚಾಂಗ್ ಚಿಲ್ಚಿ ಗುಹೆ ಪ್ರಸಿದ್ದವಾಗಿದ್ದು ಇಲ್ಲಿ ಮಹಿಳೆ ಮತ್ತು ಹಾವಿನ ನಡುವೆ ಪ್ರೇಮಾಂಕುರವಾಗಿತ್ತು ಎನ್ನುವುದು ನಂಬಿಕೆ. ತುಲ್ವಿಂಗಿ ತಿಲಾನ್ ಪ್ರಸಿದ್ದ ಪಡೆದಿದ್ದು ಮಹಿಳೆ ತನ್ನ ಮೊದಲ ಗಂಡ ಮತ್ತು ಮೊದಲ ಪ್ರೀತಿ ಕೊನೆಗೊಂಡ ನಂತರ ಆತ್ಮಾಹುತಿ ಮಾಡಿಕೊಂಡಳು ಎನ್ನಲಾಗುತ್ತದೆ.

 ಥೆಂಜ಼ಾಲ್ ತಲುಪುವುದು ಹೇಗೆ?

ಥೆಂಜ಼ಾಲ್ ತಲುಪುವುದು ಹೇಗೆ?

PC: Bodhisattwa
ಥೆಂಜ಼ಾಲ್ ನಗರ ಐಜ಼ಾಲ್ ನಿಂದ 43 ಕಿಲೋಮೀಟರ್ ಅಂತರದಲ್ಲಿದ್ದು, ರಾಜ್ಯ ಸಾರಿಗೆಯ ಬಸ್ಸುಗಳು ಇಲ್ಲಿಗಿವೆ. ಪ್ರವಾಸಿಗರು ಐಜ಼ಾಲ್ ನಗರದ ಮೂಲಕ ವಿಮಾನದಲ್ಲೂ ಪ್ರಯಾಣಿಸಬಹುದು ಮತ್ತು ರಸ್ತೆಯ ಮೂಲಕವೂ ಥೆಂಜ಼ಾಲ್ ಪ್ರಯಾಣಿಸಬಹುದು. ಇದಲ್ಲದೇ, ಖಾಸಾಗಿ ಕ್ಯಾಬ್ ಮೂಲಕವೂ ಐಜ಼ಾಲ್ ನಿಂದ ಥೆಂಜ಼ಾಲ್ ತಲುಪಬಹುದು. ಥೆಂಜ಼ಾಲ್ ವಾತಾವರಣ ಥೆಂಜ಼ಾಲ್ ನಲ್ಲಿ ಆಹ್ಲಾದಕರ ವಾತಾವರಣ ವರ್ಷ ಪೂರ್ತಿ ಇರುತ್ತದೆ. ಬೇಸಿಗೆ ಅತಿ ಸೆಖೆಯಿಂದ ಕೂಡಿರುವುದಿಲ್ಲ, ಮಳೆಗಾಲದಲ್ಲಿ ಅತಿ ಮಳೆಯಾಗುತ್ತದೆ, ಚಳಿಗಾಲದಲ್ಲಿ ಬಿಸಿಲು ಮಿಶ್ರಿತ ಒಣ ವಾತಾವರಣವಿರುತ್ತದೆ. ಪ್ರವಾಸಿಗರು ಥೆಂಜ಼ಾಲ್ ನಗರವನ್ನು ವರ್ಷದ ಎಲ್ಲಾ ಸಮಯದಲ್ಲಿ ಭೇಟಿ ನೀಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X