Search
  • Follow NativePlanet
Share
ಮುಖಪುಟ » ಸ್ಥಳಗಳು» ಥೆಂಜ಼ಾಲ್

ಥೆಂಜ಼ಾಲ್ - ಆಧುನಿಕತೆಯಿಂದ ದೂರವಿರುವ ಸುರಕ್ಷಿತ ಪ್ರವಾಸಿ ತಾಣ

6

ಹೊರಗಿನಿಂದ ಬಂದವರಿಗೆ ಮಿಜೋರಾಮಿನ ಅತ್ಯಂತ ಸುಂದರ ಪ್ರವಾಸಿ ತಾಣ ಪಟ್ಟಿಯಲ್ಲಿ ಥೆಂಜ಼ಾಲ್ ಪ್ರಮುಖವಾದದ್ದು. ಸೆರ್ಚಿಪ್ ಜಿಲ್ಲಾಡಳಿತದ ಅಡಿಯಲ್ಲಿ ಬರುವ ಥೆಂಜ಼ಾಲ್ ಹಿಂದೆ ಒಂದು ದಟ್ಟಾರಣ್ಯವಾಗಿತ್ತು.  ಥೆಂಜ಼ಾಲ್ ಐಜ಼ಾಲ್ ನಗರದಿಂದ 43 ಕಿಲೋಮೀಟರ್ ದೂರದಲ್ಲಿದ್ದು, ಐಜ಼ಾಲ್ ಮಿಜೋರಾಮಿನ ರಾಜಧಾನಿಯಾಗಿದೆ.

1961ರ ವರೆಗೂ ಥೆಂಜ಼ಾಲ್ ದಟ್ಟಾರಣ್ಯವಾಗಿದ್ದು ಕಾಡು ಪ್ರಾಣಿಗಳು ಓಡಾಟ ನಡೆಸುತ್ತಿದ್ದನ್ನು ನೋಡಬಹುದಾಗಿತ್ತು. ಆದರೆ 1961 ನಂತರ ಅರಣ್ಯಕ್ಕೆ ಹಾಕಿದ್ದ ಬೇಲಿಯನ್ನು ತೆಗೆದು, ಸಾಗುವಳಿ ಮಾಡಿ ನೆಲೆಸಲು ಯೋಗ್ಯವಾಗಿ ಮಾಡಲಾಗಿತ್ತು. ಇತಿಹಾಸದ ಪ್ರಕಾರ ಬೆನಗುವಾಯಿ ಸೈಲೋ ಇಲ್ಲಿ ಅಂದರೆ 1963ರಲ್ಲಿ ಹಳ್ಳಿಯೊಂದನ್ನು ನಿರ್ಮಿಸಿದ್ದರು. ಆರಂಭದ ಪರಿಷ್ಕರಣೆಯ ನಂತರ ಥೆಂಜ಼ಾಲ್ ಮಿಜೋ ಕೈಮಗ್ಗದ ಕಾರ್ಖಾನೆಗಳಿಗೆ ಪ್ರಸಿದ್ದಿ ಪಡೆಯಿತು.

ಥೆಂಜ಼ಾಲ್ ಸುತ್ತಮುತ್ತ ವಿರುವ ಪ್ರವಾಸಿ ತಾಣಗಳು

ಥೆಂಜ಼ಾಲ್ ಅತಿ ಉತ್ತಮವಾದ ಪ್ರವಾಸಿ ತಾಣ. ಥೆಂಜ಼ಾಲ್ ಪ್ರವಾಸೋದ್ಯಮ ಆಫ್-ಬೀಟ್ ಬಯಸುವ ಪ್ರವಾಸಿಗರಿಗೆ ಅತಿಸೂಕ್ತ. ಇದು ಹೂಗಳ ಮತ್ತು ಪ್ರಾಣಿಗಳ ಅತಿ ಸುಂದರವಾದ ಪ್ರದೇಶ. ಥೆಂಜ಼ಾಲ್ ಪ್ರವಾಸೋದ್ಯಮ ಕೆಲವೊಂದು ಉಸಿರು ಬಿಗಿ ಹಿಡಿಯುವಂತಹ ರುದ್ರರಮಣೀಯ ಪ್ರವಾಸಿ ಸ್ಥಳಗಳನ್ನು ಹೊಂದಿದೆ. ವಾಂಟ್ವಾಗ್ ಜಲಪಾತ ಮಿಜೋರಾಮಿನ ಅತಿ ಎತ್ತರದ ಜಲಪಾತ, ಥೆಂಜ಼ಾಲ್ ಜಿಂಕೆ ಪಾರ್ಕ್ ನಲ್ಲಿ ವಿವಿಧ ರೀತಿಯ ಜಿಂಕೆಗಳನ್ನು ನೋಡಬಹುದಾಗಿದೆ. ಚಾಂಗ್ ಚಿಲ್ಚಿ ಗುಹೆ ಪ್ರಸಿದ್ದವಾಗಿದ್ದು ಇಲ್ಲಿ ಮಹಿಳೆ ಮತ್ತು ಹಾವಿನ ನಡುವೆ ಪ್ರೇಮಾಂಕುರವಾಗಿತ್ತು ಎನ್ನುವುದು ನಂಬಿಕೆ. ತುಲ್ವಿಂಗಿ ತಿಲಾನ್ ಪ್ರಸಿದ್ದ ಪಡೆದಿದ್ದು ಮಹಿಳೆ ತನ್ನ ಮೊದಲ ಗಂಡ ಮತ್ತು ಮೊದಲ ಪ್ರೀತಿ ಕೊನೆಗೊಂಡ ನಂತರ ಆತ್ಮಾಹುತಿ ಮಾಡಿಕೊಂಡಳು ಎನ್ನುವುದು ಇಲ್ಲಿನ ಜನರ ಅಂಬೋಣ.

ಥೆಂಜ಼ಾಲ್ ತಲುಪುವುದು ಹೇಗೆ

ಥೆಂಜ಼ಾಲ್ ನಗರ ಐಜ಼ಾಲ್ ನಿಂದ 43 ಕಿಲೋಮೀಟರ್ ಅಂತರದಲ್ಲಿದ್ದು, ರಾಜ್ಯ ಸಾರಿಗೆಯ ಬಸ್ಸುಗಳು ಇಲ್ಲಿಗಿವೆ. ಪ್ರವಾಸಿಗರು ಐಜ಼ಾಲ್ ನಗರದ ಮೂಲಕ ವಿಮಾನದಲ್ಲೂ ಪ್ರಯಾಣಿಸಬಹುದು ಮತ್ತು ರಸ್ತೆಯ ಮೂಲಕವೂ ಥೆಂಜ಼ಾಲ್ ಪ್ರಯಾಣಿಸಬಹುದು. ಇದಲ್ಲದೇ, ಖಾಸಾಗಿ ಕ್ಯಾಬ್ ಮೂಲಕವೂ ಐಜ಼ಾಲ್ ನಿಂದ ಥೆಂಜ಼ಾಲ್ ತಲುಪಬಹುದು.

ಥೆಂಜ಼ಾಲ್ ವಾತಾವರಣ

ಥೆಂಜ಼ಾಲ್ ನಲ್ಲಿ ಆಹ್ಲಾದಕರ ವಾತಾವರಣ ವರ್ಷ ಪೂರ್ತಿ ಇರುತ್ತದೆ. ಬೇಸಿಗೆ ಅತಿ ಸೆಖೆಯಿಂದ ಕೂಡಿರುವುದಿಲ್ಲ, ಮಳೆಗಾಲದಲ್ಲಿ ಅತಿ ಮಳೆಯಾಗುತ್ತದೆ, ಚಳಿಗಾಲದಲ್ಲಿ ಬಿಸಿಲು ಮಿಶ್ರಿತ ಒಣ ವಾತಾವರಣವಿರುತ್ತದೆ. ಪ್ರವಾಸಿಗರು ಥೆಂಜ಼ಾಲ್ ನಗರವನ್ನು ವರ್ಷದ ಎಲ್ಲಾ ಸಮಯದಲ್ಲಿ ಭೇಟಿ ನೀಡಬಹುದು.

ಥೆಂಜ಼ಾಲ್ ಪ್ರಸಿದ್ಧವಾಗಿದೆ

ಥೆಂಜ಼ಾಲ್ ಹವಾಮಾನ

ಉತ್ತಮ ಸಮಯ ಥೆಂಜ಼ಾಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಥೆಂಜ಼ಾಲ್

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ 54 ಉದ್ದವಾಗಿ ಮತ್ತು ವಿಸ್ತಾರವಾಗಿ ಮಿಜೋರಾಂ ರಾಜ್ಯದಲ್ಲಿ ಹರಡಿದೆ. ಪ್ರವಾಸಿಗರು ಈ ಹೆದ್ದಾರಿಯ ಮುಖಾಂತರ ಐಜ಼ಾಲ್ ಮೂಲಕ ಥೆಂಜ಼ಾಲ್ ತಲುಪಬಹುದು. ಮಿಜೋರಾಮಿನ ರಾಜಧಾನಿಯಿಂದ ಥೆಂಜ಼ಾಲಿಗೆ 43 ಕಿಲೋಮೀಟರ್ ಅಂತರ, ಮತ್ತು ಇಲ್ಲಿಗೆ ತಲುಪಲು ಸುಮಾರು ಒಂದು ಘಂಟೆಯ ಅವಧಿ ಸಾಕು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಥೆಂಜ಼ಾಲಿಗೆ ಹತ್ತಿರದ ರೈಲು ನಿಲ್ದಾಣ ಸಿಲ್ಚರ್ ನಲ್ಲಿದೆ, ಇದು 266 ಕಿಲೋಮೀಟರ್ ದೂರಲ್ಲಿದ್ದು ದಕ್ಷಿಣ ಅಸ್ಸಾಂ ನಗರದಲ್ಲಿದೆ. ಸಿಲ್ಚರ್ ನಲ್ಲಿ ಸಣ್ಣ ರೈಲು ನಿಲ್ದಾಣವಿದ್ದು, ಇದು ಅಗರ್ತಲಾ ಮತ್ತು ಲುಮ್ ಡಿಂಗ್ ಪಟ್ಟಣವನ್ನು ಇಕ್ಕಟ್ಟಾದ ಹಳಿಯ ಮೂಲಕ ತಲುಪಿಸುತ್ತದೆ. ರೈಲಿನಲ್ಲಿ ಗುವಹಾಟಿ ಮೂಲಕ ಸಂಚರಿಸುವ ಪ್ರವಾಸಿಗರು ಮೊದಲು ಲುಮ್ ಡಿಂಗ್ ನಲ್ಲಿ ನಿಲುಗಡೆ ಯಾಗಬಹುದು ಮತ್ತು ಅಲ್ಲಿಂದ ಸಂಪರ್ಕ ರೈಲಿನ ಮೂಲಕ ಸಿಲ್ಚರ್ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಐಜ಼ಾಲಿನಲ್ಲಿರುವ ಲೆಂಗ್ ಪೂಯಿ ವಿಮಾನನಿಲ್ದಾಣ ಥೆಂಜ಼ಾಲಿಗೆ ಇರುವ ಹತ್ತಿರದ ವಿಮಾನ ನಿಲ್ದಾಣ. ಐಜ಼ಾಲ್ ನಗರದಿಂದ ಇಲ್ಲಿಗೆ ಬರಲು ಸುಮಾರು ಒಂದು ಘಂಟೆಯ ಸಮಯ ತೆಗೆದುಕೊಳ್ಳತ್ತದೆ. ಲೆಂಗ್ ಪೂಯಿ ವಿಮಾನ ನಿಲ್ದಾಣದಿಂದ ಕೊಲ್ಕತ್ತಾ, ಗುವಹಾಟಿ, ಅಗರ್ತಲಾ ಮತ್ತು ಇಂಫಾಲಿಗೆ ವಿಮಾನ ಸಂಪರ್ಕವಿದೆ. ಲಿಂಗ್ ಪೂಯಿ ವಿಮಾನ ನಿಲ್ದಾಣ ಇಲ್ಲಿನ ಅತಿದೊಡ್ಡ ವಿಮಾನ ನಿಲ್ದಾಣ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri

Near by City