Search
  • Follow NativePlanet
Share
ಮುಖಪುಟ » ಸ್ಥಳಗಳು » ಥೆಂಜ಼ಾಲ್ » ಹವಾಮಾನ

ಥೆಂಜ಼ಾಲ್ ಹವಾಮಾನ

ಥೇನ್ ಜ್ವಾಲಿಗೆ ಭೇಟಿ ನೀಡಲು ಮಳೆಗಾಲ ನಂತರದ ತಿಂಗಳು, ಚಳಿಗಾಲ ಮತ್ತು ಬೇಸಿಗೆ ಕಾಲ ಅತಿಸೂಕ್ತ. ಮಳೆಗಾಲ ನಂತರದ ತಿಂಗಳಲ್ಲಿ ಹಚ್ಚ ಹಸಿರಿನ ವಾತಾವರಣವಿದ್ದು, ವಿಶ್ರಾಂತಿ ಪಡೆಯಲು ಅತ್ಯಂತ ಸೂಕ್ತ ಸಮಯ, ಚಳಿಗಾಲದ ಸಮಯದಲ್ಲಿ ಟ್ರೆಕ್ಕಿಂಗ್ ಮತ್ತು ಥೇನ್ ಜ್ವಾಲ್ ಸಮೀಪದ ಪರಿಚಯವಿಲ್ಲದ ಪ್ರದೇಶದಲ್ಲಿ ಅಡ್ಡಾಡಬಹುದು. ಬೇಸಿಗೆಯ ತಿಂಗಳಲ್ಲಿ, ಅತಿಯಾದ ಉಷ್ಣಾಂಸದ ವಾತಾವರಣವಿದ್ದರೂ  ಬಾಹ್ಯ ಸೌಂದರ್ಯ ವೀಕ್ಷಣೆಗೆ ಅತ್ಯಂತ ಸೂಕ್ತ.

ಬೇಸಿಗೆಗಾಲ

ಥೆಂಜ಼ಾಲಿನಲ್ಲಿ ಬೇಸಿಗೆ ಕಾಲವು ಮಾರ್ಚ್ ತಿಂಗಳಲ್ಲಿ ಆರಂಭವಾಗಿ ಮೇ ಅಂತ್ಯದವರೆಗೂ ಅಥವಾ ಜೂನ್ ಮೊದಲಲ್ಲಿ ಮುಕ್ತಾಯವಾಗುತ್ತದೆ. ಕರ್ಕಾಟಕ ರಾಶಿಯ ಸಂಕ್ರಾತಿ ವೃತ್ತ ಈ ಹಳ್ಳಿಯ ಮೂಲಕ ಸಾಗುವುದರಿಂದ, ಬೇಸಿಗೆಯಲ್ಲಿ ಹೆಚ್ಚಿನ ಉಷ್ಣಾಂಷವಿರುತ್ತದೆ. ಸರಾಸರಿ ಉಷ್ಣಾಂಷ ಈ ಅವಧಿಯಲ್ಲಿ 20 ಡಿಗ್ರಿ ಸೆಲ್ಸಿಯಸ್ ನಿಂದ 30 ಸೆಲ್ಸಿಯಸ್ ವರೆಗಿರುತ್ತದೆ.

ಮಳೆಗಾಲ

ಮಳೆಗಾಲ ಥೆಂಜ಼ಾಲಿನಲ್ಲಿ ಭಾರೀ ಆಗಿರುತ್ತದೆ. ಜೂನ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ಭಾರೀ ಮಳೆಯಾಗುತ್ತದೆ. ಈ ತಿಂಗಳಲ್ಲಿ, ಥೆಂಜ಼ಾಲಿನ ವಿವಿಧ ಆಕರ್ಷಣೀಯ ಪ್ರದೇಶಗಳಿಗೆ ಭೇಟಿ ನೀಡುವುದು ಪ್ರಯಾಸದಾಯಕ. ಜುಲೈ ತಿಂಗಳಲ್ಲಂತೂ ಭಾರೀ ಮಳೆಯಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಪ್ರಸಕ್ತವಲ್ಲ.

ಚಳಿಗಾಲ

ಚಳಿಗಾಲ ಥೆಂಜ಼ಾಲಿನಲ್ಲಿ ಪ್ರಶಾಂತವಾಗಿರುತ್ತದೆ ಮತ್ತು ಸೂರ್ಯನ ಬೆಳಕು ದಿನವಿಡೀ ಪಸರಿಸುತ್ತಿರುತ್ತದೆ ಮತ್ತು ರಾತ್ರಿಯ ವೇಳೆ ರಮಣೀಯ ಚಳಿಯ ವಾತಾವರಣವಿರುತ್ತದೆ. ಚಳಿಗಾಲವು ನವೆಂಬರ್ ಕೊನೆಯಿಂದ ಫೆಬ್ರವರಿ ಅಂತ್ಯದವರೆಗಿರುತ್ತದೆ. ಥೆಂಜ಼ಾಲ್‍ಗೆ ಭೇಟಿ ನೀಡಲು ಸೂಕ್ತವಾಗಿದ್ದು ಟ್ರೆಕ್ಕಿಂಗ್ ಈ ಅವಧಿಯಲ್ಲಿ ಸೂಕ್ತ.