ಮಿಜೋರಾಂ : ದೃಶ್ಯ ವೈಭವ

ಮುಖಪುಟ » ಸ್ಥಳಗಳು » » ಮುನ್ನೋಟ

ಬೆಟ್ಟಗುಡ್ಡಗಳು, ತುಂಬಿ ಹರಿಯುವ ನದಿಗಳು, ಹಸಿರು ಕಣಿವೆಗಳು ಈಶಾನ್ಯ ಭಾರತದ ಸಾಮಾನ್ಯ ಲಕ್ಷಣಗಳಾಗಿವೆ. ಈಶಾನ್ಯ ಭಾರತದ ಏಳು ರಾಜ್ಯಗಳಲ್ಲಿ ಒಂದಾಗಿರುವ ಮಿಜೋರಾಂ ಬೆಟ್ಟಗುಡ್ಡಗಳಿಂದ ಕೂಡಿದ ರಾಜ್ಯವಾಗಿದೆ. ಮಿಜೋ ಎಂದರೆ ಬೆಟ್ಟಗಳ ಮನುಷ್ಯ ಎಂದರ್ಥ ಹಾಗೂ ರಾಂ ಎಂದರೆ ಭೂಮಿ ಎಂದರ್ಥ. ಈ ಹಿಂದೆ ಇದೊಂದು ಕೇಂದ್ರಾಡಳಿತ ಪ್ರದೇಶವಾಗಿತ್ತು ಆದರೆ 1986 ರಲ್ಲಿ ಒಂದು ರಾಜ್ಯವಾಗಿ ಪರಿವರ್ತನೆಯಾಯಿತು.

ಪ್ರಕೃತಿಯ ಮಡಿಲಲ್ಲಿ ದಿನಗಳನ್ನು ಕಳೆಯ ಬಯಸುವವರಿಗಾಗಿ ಮಿಜೋರಾಂ ಪ್ರವಾಸೋದ್ಯಮ ಸಾಕಷ್ಟು ಒದಗಿಸುತ್ತದೆ. ಇಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳು ಬಿದಿರಿನ ವನಗಳು, ಭೋರ್ಗರೆಯುವ ಜಲಪಾತಗಳು, ಸುಂದರವಾದ ಭತ್ತದ ಗದ್ದೆಗಳು ಪ್ರಕೃತಿಯ ಕೆಲವು ರಮಣೀಯ ದೃಶ್ಯಗಳಾಗಿವೆ. ಚಿಂಪ್ಟೂಯಿಪುಯಿ ಅಥವಾ ಕಲಾದನ್, ರಾಜ್ಯದ ಅತೀ ದೊಡ್ಡ ನದಿಯಾಗಿದೆ.

ಜನರು ಮತ್ತು ಸಂಸ್ಕೃತಿ

ಮಿಜೋಗಳ ಅಥವಾ ಮಿಜ಼ೋರಾಂ ನ ಜನರ ಬಣ್ಣ ಬಣ್ಣದ ಮತ್ತು ಸಾಂಪ್ರದಾಯಿಕ ಉಡುಗೆಗಳು ಬಹಳ ಸುಂದರವಾಗಿದ್ದು ಪ್ರವಾಸಿಗಳ ಗಮನ ಸೆಳೆಯುತ್ತವೆ. ಅವರು ಇಲ್ಲಿ ಸುಮಾರು 300 ವರ್ಷಗಳ ಹಿಂದೆ ಬಂದು ನೆಲೆಸಿದ್ದರು ಎಂದು ಅಂದಾಜಿಸಲಾಗಿದೆ. ಅವರು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಪಕ್ಕಾ ಅನುಯಾಯಿಗಳಾಗಿದ್ದಾರೆ. ಮಿಜೋರಾಂ ನ ಜನರು ಬಹಳ ಸರಳ ಮತ್ತು ಸುಂದರವಾದ ಜೀವನವನ್ನು ನಡೆಸುತ್ತಾರೆ.

ಇವರು ಸಹಾಯ ಹಸ್ತ ಚಾಚುವಲ್ಲಿ ಅತ್ತು ಅತಿಥಿ ಸತ್ಕಾರದಲ್ಲೂ ಬಹಳ ಮುಂದು. ಇಲ್ಲಿನ ಜನರ ಭಾಷೆ ಮಿಜೋ ಆಗಿದೆ. ಕ್ರಿಶ್ಚಿಯನ್ ಧರ್ಮವನ್ನು ಇಲ್ಲಿನ ಜನರು ಹೆಚ್ಚಾಗಿ ಪಾಲಿಸುತ್ತಾರೆ. ಜನರು ಬಹಳ ಕ್ರಿಯಾಶೀಲರಾಗಿದ್ದು ಸಂಗೀತ ಮತ್ತು ನೃತ್ಯ ಇಲ್ಲಿನ ಜನರ ಜೀವನಾಡಿಗಳಲ್ಲೇ ಇದೆ. ಸಂಗೀತ ಇಲ್ಲಿನ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅವರು ಡ್ರಮ್ಸ್ ಬಾರಿಸುತ್ತಾರೆ ಇದನ್ನು ಇಲ್ಲಿ ಖುವಾಂಗ್ ಎಂದು ಕರೆಯುತ್ತಾರೆ ಹಾಗು ಇದನ್ನು ಮರದಿಂದ ಮತ್ತು ಪ್ರಾಣಿಗಳ ಚರ್ಮವನ್ನು ಬಳಸಿ ತಯಾರಿಸುತ್ತಾರೆ.

ಮಿಜೋರಾಂ ನ ಹಬ್ಬಗಳು

ವರ್ಷಾದ್ಯಂತ ಇಲ್ಲಿನ ಜನರು ಅನೇಕ ಹಬ್ಬಗಳನ್ನು ಆಚರಿಸುತ್ತಾರೆ. ಲುಷೆಯಿ, ಮಾರಾ, ಲಾಯಿ ಇತ್ಯಾದಿ ಇಲ್ಲಿನ ಹಬ್ಬಗಳಾಗಿವೆ. ಬುಡಕಟ್ಟು ಜನರ ಹಬ್ಬಗಳು ಇಲ್ಲಿನ ಪ್ರವಾಸೋದ್ಯಮದ ಪ್ರಮುಖ ಅಂಗವಾಗಿದೆ. ವಸಂತ ಋತುವಿನ ಚಪ್ಚೂರ್ ಕುಟ್ ಎಂಬ ಹಬ್ಬ ಬಹಳ ಪ್ರಸಿದ್ಧವಾಗಿದೆ. ಪ್ರಸಿದ್ಧ ಬಿದಿರಿನ ನೃತ್ಯ ಅಥವಾ ಚೆರಾವ್ ಇಲ್ಲಿನ ಜನರು ಬಹಳ ಸಡಗರದಿಂದ ಆಚರಿಸುವ ಹಬ್ಬವಾಗಿದೆ. ಇನ್ನೊಂದು ಸಾಂಪ್ರದಾಯಿಕ ನೃತ್ಯವಾದ ಖುವಾಲ್ ವಸಂತ ಋತುವನ್ನು ಸ್ವಾಗತಿಸಲು ಮಾಡುವ ನೃತ್ಯವಾಗಿದೆ.

ಈ ಹಬ್ಬಗಳ ಸಮಯದಲ್ಲಿ ಇಲ್ಲಿನ ಜನರು ತಮ್ಮ ಕರಕುಶಲ ಕಲೆಗಳು ಮತ್ತು ಕೈಮಗ್ಗದ ಪ್ರದರ್ಶನ ಮತ್ತು ಮಾರಾಟವನ್ನೂ ನಡೆಸುತ್ತಾರೆ. ಕೃಷಿ ಇಲ್ಲಿನ ಪ್ರಮುಖ ಚಟುವಟಿಕೆಯಾದ ಕಾರಣ ಇಲ್ಲಿನ ಭೂಮಿಗಳಲ್ಲಿನ ಕಳೆ ಕಿತ್ತುವ ಚಟುವಟಿಕೆಗಳೂ ಸಹ ಕೆಲವು ಹಬ್ಬಗಳ ಮೂಲಕ ವಿಜೃಂಭಣೆಯಿಂದ ನಡೆಯುತ್ತವೆ. ಇವುಗಳನ್ನು ಥಲ್ಫಾಂಗ್ ಕುಟ್ ಎಂಬ ಹಬ್ಬಗಳೊಂದಿಗೆ ಆಚರಿಸಲಾಗುತ್ತದೆ. ಇದು ಇಲ್ಲಿನ ಜನರಿಗೆ ಬಹಳ ಪ್ರಮುಖವಾದ ಹಬ್ಬವಾಗಿದೆ.

ರೈಕ್ ಬೆಟ್ಟದಲ್ಲಿ ನಡೆಯುವ ಅಂಥೂರಿಯಂ ಹಬ್ಬ ಇಲ್ಲಿನ ಜನರ ಪ್ರಮುಖ ಉತ್ಸವ ಜೊತೆಗೆ ಪ್ರವಾಸಿಗರ ಆಕರ್ಷಣೆಯೆ ಕೇಂದ್ರ ಬಿಂದುವೂ ಹೌದು. ಇದು ಪ್ರತಿ ವರ್ಷ ಸೆಪ್ಟೆಂಬರ್ ನಲ್ಲಿ ನಡೆಯುತ್ತದೆ. ಹಾಗೂ ಅಂಥೂರಿಯಂ ನ ವಿಶೇಷತೆಯನ್ನು ಸಾರುತ್ತದೆ.

ಮಿಜೋರಾಂ ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ಪಾಲಾ ಸರೋವರ, ಅತೀ ದೊಡ್ಡ ಸರೋವರ ಮತ್ತು ತಮ್ ದಿಲ್ ಅಥವಾ ಲೇಕ್ ಆಫ್ ಮಸ್ಟರ್ಡ್ ಪ್ಲಾಂಟ್ ಇಲ್ಲಿನ ಎರಡು ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ರಾಜ್ಯದ ರಾಜಧಾನಿಯೂ ಆಗಿರುವ ಐಝ್ವಾಲ್ ಪ್ರಮುಖ ಪ್ರವಾಸಿ ತಾಣವು ಹೌದು. ಲುಂಗ್ಲೈ ಇನ್ನೊಂದು ಪ್ರಮುಖ ಪ್ರವಾಸಿ ಆಕರ್ಷಣೆ. ಇಲ್ಲಿ ಹಲವಾರು ಗುಹೆಗಳಿದ್ದು ಮಿಜೋರಾಂ ನ ಗತಕಾಲದ ಬಗ್ಗೆ ಹೆಚ್ಚಿನ ಮಾಹಿತಿ ನಿಡುತ್ತವೆ.

ಡಾಂಪಾ ಅಭಯಾರಣ್ಯ ಖಾಂಗ್ಲುಂಗ್ ಅಭಯಾರಣ್ಯ ದಂತಹ ಹಲವು ಅಭಯಾರಣ್ಯಗಳೂ ಇಲ್ಲಿವೆ. ಚಾರಣಿಗರ ಪಾಲಿಗೆ ಮಿಜೋರಾಂ ಅಂತೂ ಸ್ವರ್ಗವಿದ್ದಂತೆ. ಇಲ್ಲಿನ ಫಾಂಗುಫಿ ಬೆಟ್ಟಗಳು ಚಾರಣಿಗರಿಗೆ ಹೆಚ್ಚು ಇಷ್ಟವಾಗುವ ಬೆಟ್ಟವಾಗಿದೆ. ಪಾರಾ ಗ್ಲೈಡಿಂಗ್ ಇಲ್ಲಿನ ಪ್ರಸಿದ್ಧ ಸಾಹಸಿ ಕ್ರೀಡೆಯಾಗಿದೆ. ಇಲ್ಲಿ ಪಾರಾ ಗ್ಲೈಡಿಂಗ್ ಶಾಲೆಯೊಂದಿದ್ದು ಇದು ತರಬೇತಿ ಮತ್ತು ಪ್ರವಾಸಿ ಇಲಾಖೆಯ ಸಹಯೋಗದೊಂದಿಗೆ ಪಾರಾ ಗ್ಲೈಡಿಂಗ್ ಉತ್ಸವವನ್ನು ಆಯೋಜಿಸುತ್ತದೆ.

ಮಿಜೋರಾಂ ವಾಯುಗುಣ

ಇಲ್ಲಿ ಮಳೆ ಹೆಚ್ಚಾಗಿದೆ. ಬೇಸಿಗೆ ಕಾಲ ಆಹ್ಲಾದಕರವಾಗಿದ್ದು ಚಳಿಗಾಲದಲ್ಲಿ ಬಹಳ ಚಳಿ ಇರುತ್ತದೆ. ಆದರೂ ಚಳಿಗಾಲ ಅಷ್ಟೇನು ತಾಪಮಯವಾಗಿರದೆ ಸಾಮಾನ್ಯ ತಾಪಮಾನ ಸುಮಾರು 7 ರಿಂದ 21 ಡಿಗ್ರಿ ಸೆಲ್ಸಿಯಸ್ ತನಕ ಇರುತ್ತದೆ.

Please Wait while comments are loading...