» »ಶಿವನು ಕತ್ತರಿಸಿದ ವಿನಾಯಕನ ತಲೆ ಈ ಪ್ರದೇಶದಲ್ಲಿದೆ

ಶಿವನು ಕತ್ತರಿಸಿದ ವಿನಾಯಕನ ತಲೆ ಈ ಪ್ರದೇಶದಲ್ಲಿದೆ

Posted By:

ಹಿಂದೂ ಪುರಾಣಗಳ ಪ್ರಕಾರ ಶಿವ ಪಾವರ್ತಿಗೆ ಹುಟ್ಟಿದ್ದ ಮೊದಲ ಮಗು ವಿನಾಯಕ. ವಿನಾಯಕನ ಬಗ್ಗೆ ಅತ್ಯಂತ ಸುಂದರವಾದ ಕಥೆಯಿದೆ. ಈ ಕಥೆ ಏನೆಂದರೆ ಪಾವರ್ತಿಯು ತಲೆಸ್ನಾನ ಮಾಡುವಾಗ ತನ್ನ ಮೈಗೆ ಹಾಕಿ ಕೊಂಡಿದ್ದ ಹರಿಶಿಣವನ್ನು ತನ್ನ ದೇಹದಿಂದ ಸ್ವಲ್ಪ ಸ್ವಲ್ಪವೇ ತೆಗೆದು ಒಂದು ಮಾನವಾಕೃತಿಯನ್ನು ಮಾಡಿದಳು.

ಈ ಮಾನವಾಕೃತಿಯೇ ಬಾಲಾಕ ಗಣೇಶ. ಗಣೇಶನನ್ನು ಗಜಮುಖ, ವಿಘ್ನ ವಿನಾಶಕ, ಗಣಪತಿ, ಪಾವರ್ತಿಸುತ ಎಂದು ವಿವಿಧ ಬಗೆ ಬಗೆಯಿಂದ ಕರೆಯುತ್ತಾರೆ. ಹೀಗೆ ಒಂದು ದಿನ ಪಾರ್ವತಿಯು ಸ್ನಾನಕ್ಕೆ ತೆರಳುವಾಗ ಯಾರೇ ಆಗಲಿ ಸ್ನಾನ ಗೃಹದ ಪ್ರವೇಶವನ್ನು ನೀಡಬೇಡ ಎಂದು ಪಾರ್ವತಿಯು ಸ್ನಾನಕ್ಕೆ ತೆರಳುತ್ತಾಳೆ.

ತನ್ನ ತಾಯಿಯ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಿರುವಾಗ, ಮಹಾ ಶಿವನು ಬಾಲಾ ಗಣೇಶನನ್ನು ಕಂಡು ಒಳ ಪ್ರವೇಶ ಮಾಡಲು ಬಿಡು ಎಂದು ಹೇಳುತ್ತಾನೆ. ಆಗ ಗಣೇಶನು ಯಾವುದೇ ರೀತಿಯಲ್ಲೂ ಮಣಿಯದಿದ್ದಾಗ ಕೋಪಗೊಂಡ ಮಹಾ ಶಿವನು ಗಣೇಶನ ಶಿರ ಛೇಧನ ಮಾಡುತ್ತಾನೆ. ಆದರೆ ಈ ಶಿರ ಎಲ್ಲಿದೆ? ಎಂಬ ಪ್ರಶ್ನೆ ಎಲ್ಲರಿಗೂ ಮುಡುವುದು ಸಾಮಾನ್ಯ ಆದರೆ ಆ ಶಿರದ ಬಗ್ಗೆ ಸಂಕ್ಷೀಪ್ತವಾದ ವಿವರಣೆ ಇಲ್ಲಿದೆ.

ಪ್ರಸ್ತುತ ಲೇಖನದಲ್ಲಿ ವಿಘ್ನ ವಿನಾಶಕನ ಶಿರವಿರುವ ತಾಣದ ಬಗ್ಗೆ ತಿಳಿಯೋಣ.

ಶಿರ ಎಲ್ಲಿದೆ?

ಶಿರ ಎಲ್ಲಿದೆ?

ಗಣಪತಿಯ ಶಿರವು ಉತ್ತರಖಂಡ ರಾಜ್ಯದ ಭುವನೇಶ್ವರ ನಗರದ ಪಾತಾಳ ಭುವನೇಶ್ವರ ಗುಹಾಲಯದಲ್ಲಿದೆ. ಪಾತಾಳ ಭುವನೇಶ್ವ ಅತ್ಯಂತ ಚಿಕ್ಕ ಗ್ರಾಮ. ಈ ಗುಹೆಗೆ ಹೋಗಬೇಕಾದರೆ 2 ರಿಂದ 3 ಕಿ,ಮೀ ನಡೆಯಬೇಕಾಗುತ್ತದೆ.


PC: uttarakhandtourism.gov.in


ಶಿವಾಲಯ

ಶಿವಾಲಯ

ಈ ಗುಹೆಯ ಮುಂದೆ ಸುಂದರವಾದ ಚಿಕ್ಕದಾದ ಶಿವನ ದೇವಾಲಯವಿರುತ್ತದೆ. ಈ ಗುಹೆಯ ದ್ವಾರ ಅತ್ಯಂತ ಚಿಕ್ಕದಾಗಿದ್ದು, ಒಬ್ಬ ಮನುಷ್ಯ ಮಾತ್ರ ಹೋಗಬಹುದಾಗಿದೆ.

PC :uttarakhandtourism.gov.in

ಕೈಲಾಸ ಪರ್ವತಕ್ಕೆ ನೇರ ದಾರಿ

ಕೈಲಾಸ ಪರ್ವತಕ್ಕೆ ನೇರ ದಾರಿ

ಈ ಗುಹೆಯಿಂದ ಕೈಲಾಸ ಪರ್ವತಕ್ಕೆ ದಾರಿ ಇದೆ. ಆದರೆ ಈ ಮಾರ್ಗವು ಅತ್ಯಂತ ಅಪಾಯಕರವಾದುದು. ಆಕ್ಸಿಜನ್ ಕೂಡ ದೊರೆಯದ ಭಯಂಕರವಾದ ಮಾರ್ಗವಾಗಿದೆ. ಕೆಲವೊಮ್ಮೆ ಮರಣವು ಕೂಡ ಸಂಭವಿಸಬಹುದು. ಇಲ್ಲಿ ಗುಹೆಯಲ್ಲಿ ಹಲವು ರೀತಿಯ ಔಷಧ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ಕಾಣಬಹುದಾಗಿದೆ.

PC:uttarakhandtourism.gov.in

ಭಕ್ತರು

ಭಕ್ತರು

ಗಣೇಶ ಎಂದರೇ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಅತ್ಯಂತ ಇಷ್ಟವಾದ ದೇವರು. ಈ ದೇವಾಲಯಕ್ಕೆ ಬರುವ ಹಲವಾರು ಭಕ್ತರು ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಾರೆ. ಈ ಗಣೇಶನ ದೇವಾಲಯವನ್ನು ದರ್ಶನ ಮಾಡಿ ಮುಕ್ತಿ ಹಾಗೂ ಆನಂದಗಳನ್ನು ಪಡೆದೆವು ಎಂದು ಹೇಳುತ್ತಾರೆ. ಈ ದೇವಾಲಯಕ್ಕೆ ಹೋಗುವುದು ಅಷ್ಟು ಸುಲಭವಾದುದಲ್ಲ ಸುಮಾರು 90 ನಡಿಗೆಗಳ ಮೂಲಕ 160 ಮೀಟರ್ ದೂರವಿದೆ. ಈ ಗಣೇಶನ ಕಾಣಲು ಬಂದ ಅದೆಷ್ಟೋ ಭಕ್ತರು ಮಧ್ಯೆದಲ್ಲಿಯೇ ಉಳಿದು ಬಿಡುತ್ತಾರೆ.

PC:uttarakhandtourism.gov.in

ಗುಹೆ ಒಂದು ಗುಹೆ ಮಾತ್ರ ಅಲ್ಲ

ಗುಹೆ ಒಂದು ಗುಹೆ ಮಾತ್ರ ಅಲ್ಲ

ಪಾತಾಳ ಭುವನೇಶ್ವರ ಗುಹಾ ಒಂದು ಕೇವಲ ಗುಹೆ ಮಾತ್ರ ಅಲ್ಲ. ಬದಲಾಗಿ ಅನೇಕ ಗುಹಾಲಯದ ಸಮುದಾಯವಾಗಿದೆ. ಇಲ್ಲಿ ಶಿವನ ಜಟಾಝಟಂ, ಶಿವನಿಗೆ ಸುತ್ತುವರಿದ ನಾಗರ ಹಾವು, ಐರಾವತ, ಕಲ್ಪ ವೃಕ್ಷ, ಕಾಮದೇನು, ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ 33 ಕೋಟಿ ದೇವತೆಗಳ ಆಕಾರಗಳನ್ನು ಇಲ್ಲಿ ಕಾಣಬಹುದಾಗಿದೆ. ಇದು ಒಂದು ಗುಹೆಯ ಸಮುದಾಯವಾಗಿದೆ.

PC:uttarakhandtourism.gov.in

ತಲುಪಲು ಮಾರ್ಗ

ತಲುಪಲು ಮಾರ್ಗ

ಪಾತಾಳ ಭುವನೇಶ್ವರ ಗುಹಾ ದೇವಾಲಯಕ್ಕೆ ತಲುಪಲು ಸುಮಾರು 12 ಗಂಟೆಗಳು ತಗಲಬಹುದು. ಟ್ರಾಫಿಕ್‍ನಿಂದ ಮುಕ್ತಿ ಹೊಂದಲು ರಹದಾರಿ ನಂಬರ್ 24 ರಿಂದ ಪ್ರಯಾಣಿಸಬಹುದು..

PC:uttarakhandtourism.gov.in

ಸಮೀಪದ ದೇವಾಲಯಗಳು

ಸಮೀಪದ ದೇವಾಲಯಗಳು

ಇಲ್ಲಿ ಕೂಡ ಹಲವಾರು ಪ್ರಸಿದ್ಧವಾದ ದೇವಾಲಯಗಳಿವೆ. ಅವುಗಳೆಂದರೆ ನಾಗಾ ಮಂದಿರ, ಕೌಸನಿ, ಅಲ್ಮೊರಾ, ಬಿನ್ಸಾರ್, ಪಿತೌರಗರ್, ಶಿವನ ದೇವಾಲಯ, ಮಹಾ ಕಾಳಿಕ ದೇವಾಲಯ, ರುದ್ರತಾ ಜಲಪಾತ.

ಮಂದಿರ ನಾಗ್

ಮಂದಿರ ನಾಗ್

ಇದು ಪ್ರಕೃತಿ ದತ್ತವಾಗಿ ನಿರ್ಮಾಣವಾದಂತಹ ದೇವಾಲಯವಾಗಿದೆ. ಗಣೇಶನನ್ನು ಆರಾಧಿಸಲು ಸಾಲು ಸಾಲಾಗಿ ಹಲವಾರು ಭಕ್ತರು ಇಲ್ಲಿ ಆಗಮಿಸುತ್ತಾರೆ.

ಪ್ರಕೃತ್ತಿ ದತ್ತ

ಪ್ರಕೃತ್ತಿ ದತ್ತ

ಆಶ್ಚರ್ಯಕರವಾದ ಸಂಗತಿ ಏನೆಂದರೆ ಈ ಗುಹಾ ದೇವಾಲಯದ ಸ್ವಲ್ಪ ದೂರದಲ್ಲಿ ಒಬ್ಬ ಚಿಕ್ಕ ಬಾಲಕ ನಿಂತಿರುವ ಹಾಗೆ ಕಾಣುತ್ತದೆ ಎಂತೆ.

PC:Krish Dulal

ಶಿಲಾ ರೂಪ

ಶಿಲಾ ರೂಪ

ವಿನಾಯಕನ ಶಿರಛೇಧನದ ನಂತರ ಶಿವನು ವಿನಾಯಕನಿಗೆ ಉತ್ತರ ದಿಕ್ಕಿನಲ್ಲಿ ಮುಖ ಮಾಡಿಕೊಂಡಿದ್ದ ಆನೆಯ ತಲೆಯನ್ನು ತಂದು ಅಂಟಿಸಲಾಯಿತು. ಹಾಗೇಯೆ ಶಿವನ ಒಂದು ರೂಪವನ್ನು ಇಲ್ಲಿ ಬಿಟ್ಟು ಹೋಗಲಾಯಿತು ಎಂದು ಭಕ್ತರ ನಂಬಿಕೆಯಾಗಿದೆ.

PC:Anshumandatta

ನೆಮ್ಮದಿ

ನೆಮ್ಮದಿ

ಈ ದೇವಾಲಯವನ್ನು ಕಂಡು ಧನ್ಯತಾ ಭಾವವನ್ನು ಹಾಗೂ ನೆಮ್ಮದಿಯನ್ನು ಭಕ್ತರು ಪಡೆಯುತ್ತಾರೆ.

PC:solarshakti

Please Wait while comments are loading...