» » ರಾಣಿ ರುದ್ರಮ್ಮ ದೇವಿ ಸ್ನಾನ ಮಾಡುತ್ತಿದ್ದ ಶೃಂಗಾರ ಬಾವಿ ಇದು...

ರಾಣಿ ರುದ್ರಮ್ಮ ದೇವಿ ಸ್ನಾನ ಮಾಡುತ್ತಿದ್ದ ಶೃಂಗಾರ ಬಾವಿ ಇದು...

Written By:

ಬಾವಿಗಳು ನಾವು ಪುರಾತನ ಕಾಲದಿಂದಲೂ ಕಾಣುತ್ತಾ ಬರುತ್ತಿದ್ದೇವೆ. ಬಾವಿಗಳ ಬಗ್ಗೆ ನಮ್ಮ ಪುರಾಣಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಹಿಂದೂ ಧರ್ಮದ ಪ್ರಕಾರ ಬಾವಿಗಳಿಗೂ ಕೂಡ ದೈವ ವಾಸಸ್ಥಾನ ಎಂದು ಪೂಜಿಸುವ ಪಾರಿಪಾಠವಿದೆ. ಭಾರತದಲ್ಲಿ ಇತ್ತೀಚಿಗೆ ಬಾವಿಗಳ ಮಹತ್ವವೂ ಕಡಿಮೆಯಾಗುತ್ತಾ ಇದೆ. ಅಲ್ಲಲ್ಲಿ ಬಾವಿಗಳನ್ನು ಪ್ರಸ್ತುತ ಕಾಣಬಹುದಾಗಿದೆ.

ಪುರಾತನ ರಾಜರು ತಾವು ನಿರ್ಮಿಸುತ್ತಿದ್ದ ಬಾವಿಗಳೂ ಕೂಡ ವಿಶೇಷವಾಗಿರಬೇಕೆಂದು ಭಾವಿಸುತ್ತಿದ್ದರು. ವಿವಿಧ ಬಾವಿಗಳ ಬಗ್ಗೆ ನೀವು ಸಾಮಾನ್ಯವಾಗಿ ಕೇಳಿರುತ್ತೀರ. ಆದರೆ ಶೃಂಗಾರ ಬಾವಿಯ ಬಗ್ಗೆ ಕೇಳುವುದು ಇದೇ ಮೊದಲ ಬಾರಿ ಎಂದು ತಿಳಿಯುತ್ತೇನೆ. ಹಾಗಾದರೇ

ಈ ಬಾವಿಯಲ್ಲಿ ನೀವು ಎಂದೂ ಊಹಿಸಲಾಗದ ವಿಶೇಷಗಳನ್ನು ಕಾಣಬಹುದಾಗಿದೆ. ಈ ಬಾವಿಯ ಬಗ್ಗೆ ಹಲವಾರು ರಹಸ್ಯಗಳನ್ನು ಅಡಗಿಸಿಕೊಂಡಿದ್ದು, ಅದರ ಬಗ್ಗೆ ಈ ಲೇಖನದ ಮೂಲಕ ತಿಳಿಯಿರಿ.....

ಎಲ್ಲಿದೆ?

ಎಲ್ಲಿದೆ?

ಆಂಧ್ರ ಪ್ರದೇಶದ ವರಂಗಲ್‍ನಲ್ಲಿದೆ ಸುಂದರವಾದ ಶೃಂಗಾರ ಬಾವಿ. ಶೃಂಗಾರ ಬಾವಿಯನ್ನು ಕಟ್ಟಿಸಿದವರು ಅಂದಿನ ಕಾಕತೀಯ ಸಾಮ್ರಾಜ್ಯದ ರಾಜರು. ಇವರು ಕೇವಲ ದೇವಾಲಯಗಳು, ಗೋಪರಗಳು, ಅಪರೂಪದ ಶಿಲ್ಪಗಳು ಮಾತ್ರವೇ ಅಲ್ಲದೇ ರಹಸ್ಯವನ್ನು ಅಡಗಿಸಿರುವ ಬಾವಿ ಕೂಡ ಕಟ್ಟಿಸಿದ್ದಾರೆ.

ಬಾಹ್ಯ ಪ್ರಪಂಚಕ್ಕೆ ತಿಳಿಯದ ಬಾವಿ

ಬಾಹ್ಯ ಪ್ರಪಂಚಕ್ಕೆ ತಿಳಿಯದ ಬಾವಿ

ಆಂಧ್ರ ಪ್ರದೇಶದ ವರಂಗಲ್ ಜಿಲ್ಲೆಯಲ್ಲಿನ ಶೃಂಗಾರ ಬಾವಿಯ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಇದು ಕಾಕತೀಯ ಕಾಲದಲ್ಲಿ ನಿರ್ಮಾಣವಾದ ಶೃಂಗಾರ ಬಾವಿಯಾಗಿದೆ. ಈ ಶೃಂಗಾರ ಬಾವಿಯಲ್ಲಿ ಬಾಹ್ಯ ಪ್ರಪಂಚಕ್ಕೆ ತಿಳಿಯದ ಅದೆಷ್ಟು ರಹಸ್ಯವನ್ನು ತನ್ನಲ್ಲಿ ಅಡಗಿಸಿಕೊಂಡಿದೆ.

PC: ShashiBellamkonda

ಮೂರು ಅಂತಸ್ತು

ಮೂರು ಅಂತಸ್ತು

ಈ ಶೃಂಗಾರ ಬಾವಿಯನ್ನು ಮೂರು ಅಂತತ್ತಿನಲ್ಲಿ ನಿರ್ಮಿಸಲಾಗಿದೆ. ಈ ಬಾವಿಯಲ್ಲಿ ಇಳಿದು ನೋಡಿದರೆ ಟೈಮ್ ಮಿಷಿನ್‍ನಲ್ಲಿ ತೆರಳುತ್ತಿದ್ದ ಹಾಗೆ ಭಾಸವಾಗುತ್ತದೆ.


PC:ShashiBellamkonda

ರಾಣಿ ರುದ್ರಮ್ಮ ದೇವಿ

ರಾಣಿ ರುದ್ರಮ್ಮ ದೇವಿ

ಕಾಕತೀಯ ಸಾಮ್ರಾಜ್ಯದ ರಾಣಿ ರುದ್ರಮ್ಮ ದೇವಿ ಹಾಗೂ ಈ ವಂಶದ ಹಲವಾರು ರಾಜರು, ರಾಣಿಗಳು ಈ ಶೃಂಗಾರ ಬಾವಿಯಲ್ಲಿ ಸ್ನಾನ ಮಾಡಿದ್ದಾರೆ.

ಬಾವಿಯ ವಿಶಿಷ್ಟತೆ

ಬಾವಿಯ ವಿಶಿಷ್ಟತೆ

ಶೃಂಗಾರ ಬಾವಿಯ ವಿಶೇಷವೆನೆಂದರೆ, ರುದ್ರಮ್ಮ ದೇವಿ ಈ ಬಾವಿಯಲ್ಲಿ ಸ್ನಾನ ಮಾಡಿರುವುದಾಗಿದೆ. ಈ ಬಾವಿ ರುದ್ರಮ್ಮ ದೇವಿ ಸ್ನಾನದ ಶೃಂಗಾರ ಬಾವಿ ಎಂದೇ ಪ್ರಸಿದ್ಧವಾಗಿದೆ.

PC:ShashiBellamkonda

ಸುರಂಗ ಮಾರ್ಗ

ಸುರಂಗ ಮಾರ್ಗ

ಆಶ್ಚರ್ಯ ಏನೆಂದರೆ ಶೃಂಗಾರ ಬಾವಿಯಿಂದ ನೇರವಾಗಿ ಸಾವಿರ ಸ್ಥಂಭಗಳ ಗುಡಿಗೆ ಸುರಂಗ ಮಾರ್ಗವನ್ನು ಕೂಡ ಈ ಇಲ್ಲಿ ಕಾಣಬಹುದಾಗಿದೆ. ಕಾಕತೀಯ ಸಾಮ್ರಾಜ್ಯಕಾರರು ಸುಮಾರು 360 ಬಾವಿಗಳನ್ನು ನಿರ್ಮಿಸಿದರು ಎಂಬ ಪ್ರತೀತಿ ಇದೆ. ಅವುಗಳಲ್ಲಿ ಈ 3 ಅಂತಸ್ತುವುಳ್ಳ ಬಾವಿಯು ಒಂದು.

PC:ShashiBellamkonda

ಬಾವಿಯ ವಿಶೇಷತೆ

ಬಾವಿಯ ವಿಶೇಷತೆ

ಈ ಬಾವಿ ಪ್ರತ್ಯೇಕತೆ ಏನೆಂದರೆ ಈ ಬಾವಿಯಲ್ಲಿ ಒಂದು ಸುರಂಗ ಮಾರ್ಗವಿದೆ. ಆದರೆ ಸಾವಿರ ಸ್ತಂಭದ ದೇವಾಲಯದಲ್ಲಿರುವ ನೀರಿನಲ್ಲಿ ಸ್ನಾನ ಮಾಡುವುದು ನಿಷಿದ್ಧ.


PC:ShashiBellamkonda

ಶಿವನ ಅಭಿಷೇಕ

ಶಿವನ ಅಭಿಷೇಕ

ಈ ಪವಿತ್ರವಾದ ನೀರನ್ನು ಪರಮಶಿವನಿಗೆ ಮಾತ್ರ ಅಭಿಷೇಕ ಮಾಡಲು ಮಾತ್ರ ಉಪಯೋಗಿಸುತ್ತಿದ್ದರು. ಹಾಗಾಗಿ ಇಲ್ಲಿ ಸ್ನಾನ ಮಾಡಿ ಸುರಂಗ ಮಾರ್ಗದ ಮೂಲಕ ಸಾವಿರ ಸ್ತಂಭದ ದೇವಾಲಯಕ್ಕೆ ಹೋಗಿ ಪೂಜೆಯನ್ನು ಮಾಡಿಸುತ್ತಿದ್ದರಂತೆ.

PC:ShashiBellamkonda

ಶೃಂಗಾರ ಬಾವಿ ನಿರ್ಮಾಣ

ಶೃಂಗಾರ ಬಾವಿ ನಿರ್ಮಾಣ

ಶೃಂಗಾರ ಬಾವಿ ನಿರ್ಮಾಣವು ಅತ್ಯಂತ ಸುಂದರವಾಗಿ ಕಾಣುತ್ತದೆ. ಇಲ್ಲಿನ ಶಿಲ್ಪಕಲಾ ಶೈಲಿ, ನಾಟ್ಯಭಂಗಿಗಳು ಅತ್ಯಂತ ರಮಣೀಯವಾಗಿದೆ.

PC:ShashiBellamkonda


ಶತ್ರು

ಶತ್ರು

ಮೂರು ಅಂತಸ್ತಿನಿಂದ ನಿರ್ಮಿಸಿದ ಶೃಂಗಾರ ಬಾವಿಯಲ್ಲಿ ಶತ್ರುಗಳು ಪ್ರವೇಶಿಸಿದರೆ ಕೆಳಗಿನ ಅಂತಸ್ತಿನವರಿಗೆ ಶೀಘ್ರವಾಗಿ ತಿಳಿದುಬಿಡುತ್ತಿತ್ತು.

PC:ShashiBellamkonda

ಕಾಕತೀಯ ರಾಜರು

ಕಾಕತೀಯ ರಾಜರು

ಈ ಶೃಂಗಾರ ಬಾವಿಯನ್ನು ಕಾಕತೀಯ ರಾಜರು ಕೇವಲ ಸ್ನಾನ ಮಾಡಲು ಮಾತ್ರ ಬಳಸುತ್ತಿದ್ದರು. ಇದರಲ್ಲಿ 9 ಅಂತಸ್ತುಗಳು ಇವೆ. ಮೊದಲ ಅಂತಸ್ತಿನಲ್ಲಿ 9 ಸ್ತಂಭಗಳು, ಎರಡನೇ ಅಂತಸ್ತಿನಲ್ಲಿ 4 ಸ್ತಂಭಗಳು ಹಾಗೂ ಮೂರನೇ ಅಂತಸ್ತಿನಲ್ಲಿ 2 ಸ್ತಂಭಗಳಿಂದ ಈ ಬಾವಿಯನ್ನು ನಿರ್ಮಿಸಲಾಗಿದೆ.

PC:ShashiBellamkonda

ಸ್ತ್ರಿ

ಸ್ತ್ರಿ

ಶೃಂಗಾರ ಬಾವಿಯಲ್ಲಿ ರಾಜರ ಸ್ತ್ರಿಯರು ಸ್ನಾನ ಮಾಡುವಾಗ ಇತರ ವ್ಯಕ್ತಿಗಳು ಪ್ರವೇಶ ಮಾಡಿದರೆ ಅವರ ಬಿಂಬವು ನೀರಿನಲ್ಲಿ ಕಾಣುತ್ತಿತ್ತು. ಹಾಗೇ ಯಾರೇ ಆಗಲಿ ಯಾವುದೇ ಅಂತಸ್ತಿನಲ್ಲಿ ಇದ್ದರೂ ಕೂಡ ಅವರ ಪ್ರತಿಬಿಂಬವು ಸ್ಪಷ್ಟವಾಗಿ ಶೃಂಗಾರ ಬಾವಿಯಲ್ಲಿ ಕಾಣುತ್ತಿತ್ತು.

ಅದ್ಭುತ ಕಟ್ಟಡ

ಅದ್ಭುತ ಕಟ್ಟಡ

ಈ ಅದ್ಭುತ ಕಟ್ಟಡವು ಭೌತಿಕಶಾಸ್ತ್ರಕ್ಕೆ ಸಂಬಂಧಿಸಿದ ಅದ್ಭುತವಾದ ಕಟ್ಟಡ. ಈ ಬಾವಿ ಎಷ್ಟೇ ಬೇಸಿಗೆ ಇದ್ದರೂ ಕೂಡ ಎಂದಿಗೂ ನೀರು ಹಾಗೆಯೇ ತುಂಬಿತುಳುಕುತ್ತಾ ಇರುತ್ತದೆ.


PC:ShashiBellamkonda

ಮಳೆಗಾಲ

ಮಳೆಗಾಲ

ಮಳೆಯ ಅಭಾವವಿದ್ದರೂ ಕೂಡ ಎಂದಿಗೂ ಕೂಡ ಶೃಂಗಾರ ಬಾವಿಯ ನೀರು ಹಾಗೆಯೇ ಇರುವುದು ಎಲ್ಲರಿಗೂ ಆಶ್ಚರ್ಯ ಚಕಿತಗೊಳಿಸಿದೆ.

ಸಮೀಪದ ರೈಲ್ವೆ ಸ್ಟೇಷನ್

ಸಮೀಪದ ರೈಲ್ವೆ ಸ್ಟೇಷನ್

ಆಂಧ್ರ ಪ್ರದೇಶದಲ್ಲಿನ ವರಂಗಲ್‍ನಲ್ಲಿ ಇರುವ ಈ ಸುಂದರವಾಸ ಶೃಂಗಾರ ಬಾವಿಗೆ ತೆರಳಲು ಸಮೀಪವಾದ ರೈಲ್ವೆ ನಿಲ್ದಾಣವೆಂದರೆ ವರಂಗಲ್ ರೈಲ್ವೆ ಸ್ಟೇಷನ್.