• Follow NativePlanet
Share
Menu
» »ಈ ಕೋಟೆಯ ಒಳಹೋದವರು ಎಂದಿಗೂ ಹೋರಗೆ ಬರುವುದಿಲ್ಲ

ಈ ಕೋಟೆಯ ಒಳಹೋದವರು ಎಂದಿಗೂ ಹೋರಗೆ ಬರುವುದಿಲ್ಲ

Written By:

ಪುರಾತನವಾದ ಕೋಟೆಗಳು, ಕಟ್ಟಡಗಳು, ದೇವಾಲಯಗಳು ತನ್ನದೇ ಆದ ರಹಸ್ಯವನ್ನು ಅಡಗಿಸಿಕೊಂಡಿರುತ್ತದೆ. ಕೆಲವೊಂದು ಬಾಹ್ಯಾ ಪ್ರಪಂಚಕ್ಕೆ ಗೊತ್ತಾದರೆ, ಇನ್ನೂ ಕೆಲವು ನಿಗೂಢವಾಗಿರುತ್ತವೆ. ಆ ರಹಸ್ಯಗಳನ್ನು ಭೇಧಿಸಲು ಹೋರಟರೆ ಕೆಲವೊಮ್ಮೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲಿ ಒಂದು ವಿಶಿಷ್ಟವಾದ ಪುರಾತನ ಕಟ್ಟಡವಿದೆ. ಈ ಕಟ್ಟಡದ ಒಳಹೋದವರು ಮತ್ತೇಂದಿಗೂ ಹೊರಬರುವುದಿಲ್ಲ ಎಂಬ ಪ್ರತೀತಿ ಇದೆ. ಆ ಸ್ಥಳ ಎಲ್ಲದೆ? ಆ ಕಟ್ಟಡ ಯಾವುದು ಎಂದು ಯೋಚಿಸುತ್ತಿದ್ದಿರಾ? ಹಾಗಾದರೆ

ಪ್ರಸ್ತುತ ಲೇಖನದಲ್ಲಿ ಅಂತಹದೊಂದು ರಹಸ್ಯವಾದ ಕಟ್ಟಡದ ಬಗ್ಗೆ ತಿಳಿಯಿರಿ.

ಕಟ್ಟಡ

ಕಟ್ಟಡ

ಈ ಕಟ್ಟಡ ಒಂದು ಮಾಯಾ ಕೋಟೆ. ಈ ಕೋಟೆಯನ್ನು ಕರಾಕೊಂಡ ಕೋಟೆ ಎಂದು ಕರೆಯುತ್ತಾರೆ. ಈ ಭಯಾನಕ ಕೋಟೆಯು ಉತ್ತರ ಪ್ರದೇಶದ ಪ್ರಸಿದ್ದವಾದ ತಾಣ ಝಾನ್ಸಿಯಿಂದ ಸುಮಾರು 70 ಕಿ,ಮೀ ದೂರದಲ್ಲಿ ಕರಾಕೊಂಡ ಕೋಟೆ ಇದೆ.
PC:YOUTUBE

 ನಂಬಲಾಗದ ರಹಸ್ಯ

ನಂಬಲಾಗದ ರಹಸ್ಯ

ಈ ಕೋಟೆಯಲ್ಲಿ ಜನರು ಮಾಯಾವಾಗುವುದು ಏಕೆ? ಈ ಕೋಟೆಯಲ್ಲಿ ಅಂತಹದೇನಿದೆ ಎಂಬುದುರ ಬಗ್ಗೆ ಇದುವರೆವಿಗೂ ಯಾರಿಗೂ ತಿಳಿದಿಲ್ಲ.

PC:YOUTUBE

ಅಂತಸ್ತು

ಅಂತಸ್ತು

ಈ ಕೋಟೆಯು ಮೂರು ಅಂತಸ್ತಿನಿಂದ ನಿರ್ಮಿಸಿದ ಕಟ್ಟಡವಾಗಿದೆ. ಕೋಟೆಯ ಒಳಭಾಗದಲ್ಲಿ ಕಾಣಬಹುದಾಗಿದೆ ಅಂತೆ.

PC:YOUTUBE

ಐಶ್ವರ್ಯ

ಐಶ್ವರ್ಯ

ಈ ರಹಸ್ಯ ಕೋಟೆಯಲ್ಲಿ ಹೆಚ್ಚು ಬಂಗಾರ, ವಜ್ರ, ನಿಧಿಗಳಿವೆ ಎಂದು ಅಲ್ಲಿನ ಸ್ಥಳೀಯರ ನಂಬಿಕೆಯಾಗಿದೆ.

PC:YOUTUBE

ಮದುವೆಯ ಮಂದಿ

ಮದುವೆಯ ಮಂದಿ

ಒಮ್ಮೆ ಮದುವೆಯ ಮಂದಿ ಮದುವೆ ಮುಗಿದ ನಂತರ ಸಮೀಪ ಕೋಟೆಗೆ ಭೇಟಿ ಮಾಡೊಣ ಎಂದು ಕರಾಕೊಂಡ ಕೋಟೆಗೆ ಹೋದರಂತೆ ಆದರೆ ಇವರು ಇದ್ದಕಿದ್ದ ಹಾಗೆ ಮಾಯಾವಾಗಿಬಿಟ್ಟರಂತೆ.

PC:YOUTUBE

ಎಲ್ಲಿ ಹೋದರು?

ಎಲ್ಲಿ ಹೋದರು?

ಕೋಟೆಗೆ ಹೋಗಿದ್ದ ಜನರು ಇಂದಿಗೂ ಅವರು ಪತ್ತೆಯಾಗಲಿಲ್ಲವಂತೆ. ಹಾಗಾಗಿ ಭಯ ಭೀತಗೊಂಡ ಸ್ಥಳೀಯರು ಶಾಶ್ವತವಾಗಿ ಈ ಕರಾಕೊಂಡ ಕೋಟೆಗೆ ಬೀಗವನ್ನು ಹಾಕಿ ಮುಚ್ಚಲಾಗಿದೆ.

PC:YOUTUBE

ಭೂಮಿಯ ಒಳಭಾಗದಲ್ಲಿ

ಭೂಮಿಯ ಒಳಭಾಗದಲ್ಲಿ

ವಿಸ್ಮಯವೆನೆಂದರೆ ಈ ಕೋಟೆಯನ್ನು ಸುಮಾರು 12 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನಲಾಗಿದೆ, 3 ಅಂತಸ್ತು ಮೇಲ್ಭಾಗದಲ್ಲಿ ಹಾಗೂ 2 ಅಂತಸ್ತು ಭೂಮಿಯ ಕೆಳಭಾಗದಲ್ಲಿ ನಿರ್ಮಿಸಲಾಗಿದೆ.

PC:YOUTUBE

ಆಧಾರ

ಆಧಾರ

ಈ ಕರಾಕೊಂಡ ಕೋಟೆಯನ್ನು ಯಾರು ನಿರ್ಮಿಸಿದರು, ಯಾವ ನಿರ್ಧಿಷ್ಟ ಸಮಯದಲ್ಲಿ ನಿರ್ಮಿಸಿದರು ಎಂಬುದರ ಬಗ್ಗೆ ಯಾವುದೇ ಪುರಾವೆಗಳಿಲ್ಲ.

PC:YOUTUBE

 ಪುರಾತನ

ಪುರಾತನ

ಈ ಕರಾಕೊಂಡ ಕೋಟೆಯು ಸುಮಾರು 1500 ರಿಂದ 2000ದ ವರ್ಷದ ಪುರಾತನವಾದ ಕೋಟೆಯೆಂದು ಭಾವಿಸಲಾಗಿದೆ.


PC:YOUTUBE

ರಹಸ್ಯ

ರಹಸ್ಯ

ಮದುವೆಗೆ ಬಂದ ಜನ ಕೋಟೆಗೆ ತೆರಳಿದರು ಅಲ್ಲಿ ಅವರು ಮಾಯಾವಾದಾಗಾ ಕೆಲವರ ಅಭಿಪ್ರಾಯ ಪಟ್ಟ ಹಾಗೆ ಅವರು ಸುರಂಗ ಮಾರ್ಗದ ಮೂಲಕ ಎಲ್ಲಿಗೂ ಹೋಗಿರಬಹುದು ಎಂದು ಅನುಮಾನವನ್ನು ವ್ಯಕ್ತ ಪಡಿಸಿದರು.

PC:YOUTUBE

ತಿರುಗಿ ಬಂದಿಲ್ಲ

ತಿರುಗಿ ಬಂದಿಲ್ಲ

ಕೆಲವರು ತಿಳಿಸಿದಂತೆ ಸುರಂಗ ಮಾರ್ಗದ ಮೂಲಕ ಹಾದು ಹೋದ ಜನ ಹಿಂದುರಿಗೆ ಬರಬೇಕಿತ್ತು. ಆದರೆ ಅವರಲ್ಲಿ ಒಬ್ಬರೂ ಕೂಡ ಇಂದಿಗೂ ಹೋರಗೆ ಬಾರದೇ ಇರುವುದು ಅನುಮಾನಕ್ಕೆ ಕನ್ನಡಿಯಾಗಿದೆ. ಆ ಜನರು ಎಲ್ಲಿದ್ದಾರೆ? ಹೇಗಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ.

PC:YOUTUBE

ಇನ್ನೂ ಕೆಲವು ಘಟನೆಗಳು

ಇನ್ನೂ ಕೆಲವು ಘಟನೆಗಳು

ಈ ಕರಾಕೊಂಡ ಕೋಟೆಗೆ ತೆರಳಿದ ಸುಮಾರು 60 ಮಂದಿ ಪ್ರವಾಸಿಗರು ಕೂಡ ಮತ್ತೆಂದಿಗೂ ಹೊರ ಬಂದಿಲ್ಲವಂತೆ. ಹಾಗೆಯೇ ಇಂತಹ ಹಲವಾರು ಘಟನೆಗಳು ಕರಾಕೊಂಡ ಕೋಟೆ ಹೊಂದಿದೆ.

PC:YOUTUBE

ಅಂಡರ್ ಗ್ರೌಂಡ್

ಅಂಡರ್ ಗ್ರೌಂಡ್

ಈ ಕೋಟೆಗೆ ಹೋದವರು ಮತ್ತೆ ಬಾರದಿರುವುದು ಕಂಡು ಈ ಕೋಟೆಯಲ್ಲಿರುವ ಅಂಡರ್ ಗ್ರೌಂಡ್‍ನಲ್ಲಿ ಹೋಗುವ ದಾರಿಗಳನ್ನು ಮುಚ್ಚಲಾಗಿದೆ.

PC:YOUTUBE

ಬೆಳಕು

ಬೆಳಕು

ಈ ಕರಾಕೊಂಡ ಕೋಟೆಯಲ್ಲಿ ಯಾವುದೇ ಬೆಳಕು ಕೂಡ ಒಳಗೆ ಸ್ಪರ್ಶ ಮಾಡುವುದಿಲ್ಲವಂತೆ. ಅಷ್ಟು ಕಾರಾಳವಾದ ಭಯಂಕರವಾದ ಕೋಟೆ ಇದಾಗಿದೆ.

PC:YOUTUBE

ನಿಧಿ

ನಿಧಿ

ಈ ಕೋಟೆಯಲ್ಲಿ ನಿಧಿಗಳು ಇರಬಹುದೆಂದು ಒಳ ಪ್ರವೇಶ ಮಾಡಿ ಎಷ್ಟೂ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

PC:YOUTUBE

ಕೋಟೆಯ ಅದ್ಭುತ

ಕೋಟೆಯ ಅದ್ಭುತ

ಈ ಕೋಟೆಯು ದೂರದಿಂದ ನೋಡಿದರೆ ಕೋಟೆಯು ಕಾಣಿಸುತ್ತದೆ. ಆದೆ ಹತ್ತಿರ ಬಂದರೆ ಕೋಟೆಯು ಮಾಯಾವಾಗಿರುತ್ತದೆ. ಅಂದರೆ ಬೇರೆ ಮಾರ್ಗದಲ್ಲಿ ಬಂದಿದ್ದೇವೆ ಎಂಬ ಅನುಭವವಾಗುತ್ತದೆ ಅಂತೆ.

PC:YOUTUBE

ರಾಜ

ರಾಜ

ಅಂದಿನ ರಾಜರು ದಂಡಯಾತ್ರೆಗಳಿಂದ ಕಾಪಾಡಿಕೊಳ್ಳಲು ಎಂಥಹ ಕೋಟೆಯನ್ನು ನಿರ್ಮಿಸಿದ್ದಾರೆ ಎಂಥಹ ವಿಸ್ಮಯ.

PC:YOUTUBE

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ