Search
  • Follow NativePlanet
Share
» »ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುವ ಸ್ತನುಮಲಯನ್

ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುವ ಸ್ತನುಮಲಯನ್

By Vijay

ಭಾರತದಲ್ಲಿ ಬ್ರಹ್ಮನಿಗೆ ಮುಡಿಪಾದ ದೇವಾಲಯಗಳಿವೆಯಾದರೂ ಬಲು ಕಡಿಮೆ ಸಂಖ್ಯೆಯಲ್ಲಿ. ವಿಷ್ಣು ಹಾಗೂ ಶಿವನಿಗೆ ಮುಡಿಪಾದ ದೇವಾಲಯ ಸಂಖ್ಯೆಗಳಿಗೇನೂ ಕಡಿಮೆಯಿಲ್ಲ. ದೇಶದ ಪ್ರತಿ ರಾಜ್ಯದ ಪ್ರತಿ ಪ್ರಮುಖ ನಗರಗಳಲ್ಲಿ ಶಿವನ ಹಾಗೂ ವಿಷ್ಣುವಿನ ದೇವಾಲಯಗಳನ್ನು ಕಾಣಬಹುದು. ಆದರೆ ಈ ಮೂರೂ ಪ್ರಮುಖ ದೇವತೆಗಳು ಒಟ್ಟಾಗಿ ನೆಲೆಸಿದ್ದರೆ?

ಹೌದು ಅಂತಹ ದೇವಾಲಯ ವಿಶೇಷ. ಸೃಷ್ಟಿಕರ್ತ ಬ್ರಹ್ಮ, ಪಾಲನಕರ್ತ ವಿಷ್ಣು ಹಾಗೂ ಲಯಕರ್ತ ಶಿವ, ಈ ಮೂವರೂ ತ್ರಿಮೂರ್ತಿಗಳು ಒಟ್ಟಾಗಿ ಒಂದೆಡೆ ನೆಲೆಸಿರುವುದು ಬಹು ಅಪರೂಪ. ಆದರೆ ದಕ್ಷಿಣ ದೇವಾಲಯಗಳ ರಾಜ್ಯವೆಂದೆ ಹೇಳಬಹುದಾದ ತಮಿಳುನಾಡು ಇಂತಹ ಒಂದು ವಿಶಿಷ್ಟ ದೇವಾಲಯಕ್ಕೆ ನೆಲೆಯಾಗಿದೆ.

ಪ್ರಸ್ತುತ ಲೇಖನದ ಮೂಲಕ ಆ ಪ್ರಸಿದ್ಧ ದೇವಾಲಯದ ಕುರಿತು ತಿಳಿಯಿರಿ ಹಾಗೂ ನಿಮಗೆ ಅವಕಾಶ ದೊರೆತರೆ ಖಂಡಿತವಾಗಿಯೂ ಆ ದೇವಾಲಯಕ್ಕೆ ಭೇಟಿ ನೀಡಿ.

ತ್ರಿಮೂರ್ತಿಗಳ ದಿವ್ಯ ನೆಲೆ:

ತ್ರಿಮೂರ್ತಿಗಳ ದಿವ್ಯ ನೆಲೆ:

ತನುಮಲಯನ್ ಎಂತಲೂ ಕರೆಯಲ್ಪಡುವ ಈ ದೇವಾಲಯವಿರುವುದು ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಸುಚೀಂದ್ರಂ ಪಟ್ಟಣದಲ್ಲಿ.

ಚಿತ್ರಕೃಪೆ: Harikrishnan Tulsidas

ತ್ರಿಮೂರ್ತಿಗಳ ದಿವ್ಯ ನೆಲೆ:

ತ್ರಿಮೂರ್ತಿಗಳ ದಿವ್ಯ ನೆಲೆ:

ಸುಚೀಂದ್ರಂ ಒಂದು ದೇವಾಲಯಗಳ ಪಟ್ಟಣವಾಗಿದ್ದು ಇದು ಕನ್ಯಾಕುಮಾರಿ ನಗರದಿಂದ 11 ಕಿ.ಮೀ, ನಾಗರಕೋಯಿಲ್ ನಿಂದ 7 ಕಿ.ಮೀ, ತಿರುನೆಲ್ವೇಲಿಯಿಂದ 70 ಕಿ.ಮೀ ಹಾಗೂ ಕೇರಳದ ತಿರುವನಂತಪುರಂನಿಂದ 85 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Vinayaraj

ತ್ರಿಮೂರ್ತಿಗಳ ದಿವ್ಯ ನೆಲೆ:

ತ್ರಿಮೂರ್ತಿಗಳ ದಿವ್ಯ ನೆಲೆ:

ಸ್ತನುಮಲಯನ್ ದೇವಾಲಯವು ಶೈವ ಹಾಗೂ ವೈಷ್ಣವರಿಬ್ಬರಿಗೂ ಪವಿತ್ರವಾದ ಸ್ಥಳವಾಗಿದೆ. ಸ್ತನು ಎಂದರೆ ಶಿವನು, ಮಲ್ ಎಂದರೆ ವಿಷ್ಣುವೂ ಹಾಗೂ ಅಯ್ಯ ಎಂದರೆ ಬ್ರಹ್ಮನೂ ಎಂಬರ್ಥವಿರುವುದರಿಂದ ಇದಕ್ಕೆ "ಸ್ತನುಮಲಯನ್" ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Sbgoplek

ತ್ರಿಮೂರ್ತಿಗಳ ದಿವ್ಯ ನೆಲೆ:

ತ್ರಿಮೂರ್ತಿಗಳ ದಿವ್ಯ ನೆಲೆ:

17 ನೇಯ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ದೇವಾಲಯವು ಅದ್ಭುತ ಶಿಲ್ಪಕಲೆಯ ಕಲಾಕೃತಿಗಳಿಂದ ಶ್ರೀಮಂತವಾಗಿದ್ದು ಮೂಲ ದೇವತೆಯು ಶಿವಲಿಂಗದ ರೂಪದಲ್ಲಿದ್ದುಅದರಲ್ಲಿ ಶಿವ, ವಿಷ್ಣು ಹಾಗೂ ಬ್ರಹ್ಮ ದೇವರುಗಳ ಸಂಯೋಜನೆಯಿದೆ ಎನ್ನಲಾಗುತ್ತದೆ.

ಚಿತ್ರಕೃಪೆ: Harikrishnan Tulsidas

ತ್ರಿಮೂರ್ತಿಗಳ ದಿವ್ಯ ನೆಲೆ:

ತ್ರಿಮೂರ್ತಿಗಳ ದಿವ್ಯ ನೆಲೆ:

ಇಲ್ಲಿರುವ ಶಿವಲಿಂಗದ ಮುಂದೆ ನಿಂತಾಗ ದೇವತೆಗಳ ರಾಜನಾದ ಇಂದ್ರನು ಶಾಪದಿಂದ ಮುಕ್ತಿ ಹೊಂದಿದನು. ಅರ್ಥಾತ್ ಸಂಸ್ಕೃತದಲ್ಲಿ ಪದ ಬಳಸುವಂತೆ ಶುಚಿಯಾದನು. ಹೀಗೆ ಈ ಶುಚಿ ಶಬ್ದದಿಂದಲೆ ಈ ಸ್ಥಳಕ್ಕೆ ಸುಚೀಂದ್ರಂ ಎಂಬ ಹೆಸರು ಬಂದಿತೆನ್ನಲಾಗಿದೆ. ಅಲ್ಲದೆ ಪ್ರತಿ ದಿನ ಇಂದ್ರನು ಇಲ್ಲಿ ಮಧ್ಯರಾತ್ರಿಯ "ಅರ್ಧಜಾಮ" ಪೂಜೆ ನೆರವೇರಿಸಲು ಬರುತ್ತಾನೆನ್ನಲಾಗಿದೆ.

ಚಿತ್ರಕೃಪೆ: Senthil.elt

ತ್ರಿಮೂರ್ತಿಗಳ ದಿವ್ಯ ನೆಲೆ:

ತ್ರಿಮೂರ್ತಿಗಳ ದಿವ್ಯ ನೆಲೆ:

ಈ ಅದ್ಭುತ ದೇವಾಲಯವು ತನ್ನ ಶಿಲ್ಪಕಲಾಕೃತಿಗಾಗಿ ಎದ್ದು ನಿಲ್ಲುತ್ತದೆ. ಶ್ರೇಷ್ಠ ಕೆತ್ತನೆಯ ಕೆಲಸಗಳಿಂದಾಗಿ ಗಮನಸೆಳೆಯುತ್ತದೆ. ಹದಿನೆಂಟಿ ಅಡಿಗಳಷ್ಟು ಎತ್ತರದ ನಾಲ್ಕು ಸಂಗೀತ ಹೊರಡಿಸುವ ಅದ್ಭುತ ಖಂಬಗಳನ್ನು ಇಲ್ಲಿ ಕೆತ್ತಲಾಗಿರುವುದನ್ನು ಕಾಣಬಹುದು.

ಚಿತ್ರಕೃಪೆ: Vinayaraj

ತ್ರಿಮೂರ್ತಿಗಳ ದಿವ್ಯ ನೆಲೆ:

ತ್ರಿಮೂರ್ತಿಗಳ ದಿವ್ಯ ನೆಲೆ:

ದೇವಾಲಯದಲ್ಲಿರುವ ಅಲಂಕಾರ ಮಂಟಪದಲ್ಲಿ ಆ ನಾಲ್ಕು ಸಂಗೀತ ಖಂಬಗಳನ್ನು ಕಾಣಬಹುದಾಗಿದ್ದು ಅದರಿಂದ ವಿವಿಧ ಸಂಗೀತಮಯ ಕಮ್ಪನಗಳು ಬರುವುದನ್ನು ಆಸ್ವಾದಿಸಬಹುದು. ಇದಲ್ಲದೆ ನೃತ್ಯ ಮಂಟಪವಿದ್ದು ಅಲ್ಲಿ ಸಾವಿರಕ್ಕೂ ಅಧಿಕ ಕೆತ್ತನೆಯ ಖಂಬಗಳನ್ನು ಕಾಣಬಹುದು.

ಚಿತ್ರಕೃಪೆ: Vinayaraj

ತ್ರಿಮೂರ್ತಿಗಳ ದಿವ್ಯ ನೆಲೆ:

ತ್ರಿಮೂರ್ತಿಗಳ ದಿವ್ಯ ನೆಲೆ:

ಈ ದೇವಾಲಯವು ವಿಶಿಷ್ಟವಾದ ಆಂಜನೇಯನ ಪ್ರತಿಮೆಯೊಂದಕ್ಕೂ ನೆಲೆಯಾಗಿದೆ. ಒಂದೆ ಗ್ರಾನೈಟ್ ಕಲ್ಲಿನಲ್ಲಿ ಅದ್ಭುತವಾಗಿ ಕೆತ್ತಲಾದ ಈ ಆಂಜನೇಯನ ಮೂರ್ತಿಯು 22 ಅಡಿಗಳಷ್ಟು ಎತ್ತರವಿದೆ.

ಚಿತ್ರಕೃಪೆ: Senthil.elt

ತ್ರಿಮೂರ್ತಿಗಳ ದಿವ್ಯ ನೆಲೆ:

ತ್ರಿಮೂರ್ತಿಗಳ ದಿವ್ಯ ನೆಲೆ:

ಇಲ್ಲಿರುವ ಆಂಜನೇಯನ ವಿಗ್ರಹಕ್ಕೆ ಸಂಬಂಧಿಸಿದಂತೆ ಒಂದು ಆಸಕ್ತಿಕರ ವಿಷಯವಿದೆ. ಅದೇನೆಂದರೆ, 1740 ರ ಸಂದರ್ಭದಲ್ಲಿ ಟಿಪ್ಪುವಿನ ಪ್ರಭಾವವಿದ್ದಾಗ ಎಲ್ಲಿ ಈ ಪ್ರತಿಮೆಗೆ ಹಾನಿಯಾಗುತ್ತದೊ ಎಂಬ ದೃಷ್ಟಿಯಿಂದ ಇದನ್ನು ದೇವಾಲಯದ ಆವರಣದೊಳಗಿನ ಭೂಮಿಯಲ್ಲಿ ಮುಚ್ಚಲಾಗಿತ್ತು. ನಂತರ ಅದನ್ನು ಹೊರತೆಗೆಯುವುದೆ ಮರೆತುಹೋಯಿತು.

ಚಿತ್ರಕೃಪೆ: Infocaster

ತ್ರಿಮೂರ್ತಿಗಳ ದಿವ್ಯ ನೆಲೆ:

ತ್ರಿಮೂರ್ತಿಗಳ ದಿವ್ಯ ನೆಲೆ:

ನಂತರ 1930 ರಲ್ಲಿ ಈ ರೀತಿಯಾಗಿ ಹೂತು ಹೋಗಿದ್ದ ಆಂಜನೇಯನ ಪ್ರತಿಮೆಯನ್ನು ಮತ್ತೆ ಮರು ಶೋಧಿಸಲಾಯಿತು ಹಾಗೂ ಅದನ್ನು ಭಕ್ತರ ಹಿತದೃಷ್ಟಿಯಿಂದ ಮತ್ತೆ ಪ್ರತಿಷ್ಠಾಪಿಸಲಾಯಿತು.

ಚಿತ್ರಕೃಪೆ: Karthikeyan.pandian

ತ್ರಿಮೂರ್ತಿಗಳ ದಿವ್ಯ ನೆಲೆ:

ತ್ರಿಮೂರ್ತಿಗಳ ದಿವ್ಯ ನೆಲೆ:

ಈ ದೇವಾಲಯಕ್ಕೆ ಶೈವರು ಹಾಗೂ ವೈಷ್ಣವರಿಬರೂ ನಡೆದುಕೊಳ್ಳುತ್ತಾರೆ. ದೇವಾಲಯದಲ್ಲಿ ತ್ರಿಮೂರ್ತಿಗಳು ಶಿವಲಿಂಗ ರೂಪದಲ್ಲಿದ್ದರೆ ಸುತ್ತಮುತ್ತಲು ರಾಮನಿಂದ ಹಿಡಿದು ಕೃಷ್ಣನವರೆಗೆ ಹಲವು ದೇವ ದೇವತೆಯರ ವಿಗ್ರಹಗಳನ್ನು ಕಾಣಬಹುದು. ಅಲ್ಲದೆ ಸ್ಥಳೀಯ ಅಮ್ಮ, ಕಂದನ್ ಮುಂತಾದ ದೇವರುಗಳನ್ನೂ ಇಲ್ಲಿ ಕಾಣಬಹುದು.

ತ್ರಿಮೂರ್ತಿಗಳ ದಿವ್ಯ ನೆಲೆ:

ತ್ರಿಮೂರ್ತಿಗಳ ದಿವ್ಯ ನೆಲೆ:

ಪ್ರತಿ ವರ್ಷ ಡಿಸೆಂಬರ್ ಹಾಗೂ ಜನವರಿ ಮಧ್ಯದ ಸಮಯದಲ್ಲಿ ಹತ್ತು ದಿನಗಳ ಕಾಲ ಇಲ್ಲಿ ರಥೋತ್ಸವವನ್ನು ಬಲು ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಚಿತ್ರಕೃಪೆ: Ganesan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X