Search
  • Follow NativePlanet
Share
» »ತತ್ಕಾಲ್ ಟಿಕೆಟ್‌ನಲ್ಲಿ ರೈಲಿನಲ್ಲಿ ಓಡಾಡ್ತೀರಾ ಹಾಗಾದ್ರೆ ಇದನ್ನು ತಿಳ್ಕೋಳ್ಳಿ

ತತ್ಕಾಲ್ ಟಿಕೆಟ್‌ನಲ್ಲಿ ರೈಲಿನಲ್ಲಿ ಓಡಾಡ್ತೀರಾ ಹಾಗಾದ್ರೆ ಇದನ್ನು ತಿಳ್ಕೋಳ್ಳಿ

ತತ್ಕಾಲ್‌ನ ರೂಲ್ಸ್ ಪದೇ ಪದೇ ಬದಲಾಗುತ್ತಾ ಇರುತ್ತದೆ. ಹಾಗಾಗಿ ಪ್ರಯಾಣಿಕರಿಗೆ ಕನ್‌ಫ್ಯೂಸ್ ಆಗಿದೆ. ಹಬ್ಬಗಳು ಸಮೀಪಿಸುತ್ತಿದ್ದಂತೆ ಅನೇಕರು ಕೊನೇ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡುತ್ತಾರೆ. ಅಂತವರಿಗೆ ಸಹಾಯವಾಗಲೆಂದು ರೈಲ್ವೆ ಇಲಾಖೆಯು ತತ್ಕಾಲ್ ಟಿಕೆಟ್ ಬುಕಿಂಗ್‌ನ್ನು ಆನ್‌ಲೈನ್‌ ವ್ಯವಸ್ಥೆಯನ್ನು ಮಾಡಿದೆ. ಪದೇ ಪದೇ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾ ಇರುವವರು ಈ ತತ್ಕಾಲ್ ರೂಲ್ಸ್‌ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.

ನಮ್ಮ ದೇಶದಲ್ಲಿ ಹೆಚ್ಚಿನವರು ದೂರದ ಊರುಗಳಿಗೆ, ದೂರದ ರಾಜ್ಯಗಳಿಗೆ ರೈಲಿನಲ್ಲೇ ಪ್ರಯಾಣಿಸುತ್ತಾರೆ. ಇದು ಕಂಫರ್ಟೇಬಲ್ ಕೂಡಾ ಆಗಿರುತ್ತದೆ. ಹಾಗೆಯೇ ಚೀಪ್ ಆಂಡ್ ಬೆಸ್ಟ್ ಕೂಡಾ. ಕೊನೆ ಗಳಿಗೆಯಲ್ಲಿ ರೈಲಿನಲ್ಲಿ ಟಿಕೆಟ್ ಬುಕ್ ಮಾಡುವವರೆಲ್ಲಾ ಹೆಚ್ಚಾಗಿ ಬುಕ್ ಮಾಡೋದು ತತ್ಕಾಲ್‌ನಲ್ಲೇ. ತತ್ಕಾಲ್ ಟಿಕೆಟ್ ಅಂದ್ರೆ ಏನು ಅನ್ನೋದು ರೈಲಿನಲ್ಲಿ ಓಡಾಡೋರಿಗೆ ಗೊತ್ತೇ ಇರುತ್ತದೆ. ಈ ತತ್ಕಾಲ್ ನಲ್ಲೂ ರೂಲ್ಸ್‌ಗಳು ಪದೇ ಪದೇ ಬದಲಾಗುತ್ತಿರುತ್ತದೆ. ಪ್ರಸ್ತುತ ಇರುವ ರೂಲ್ಸ್‌ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹಾಗಾದ್ರೆ ತತ್ಕಾಲ್ ಟಿಕೆಟ್‌ನ ಕೆಲವು ರೂಲ್ಸ್‌ಗಳ ಬಗ್ಗೆ ತಿಳಿಯೋಣ.

ಮೂರು ಗಂಟೆಗೂ ಹೆಚ್ಚು ಕಾಲ ತಡವಾದರೆ

ಮೂರು ಗಂಟೆಗೂ ಹೆಚ್ಚು ಕಾಲ ತಡವಾದರೆ

PC:wonker

ಒಂದು ವೇಳೆ ನೀವು ಬುಕ್ ಮಾಡಿರುವ ತತ್ಕಾಲ್ ರೈಲು ಮೂರು ಗಂಟೆಗೂ ಹೆಚ್ಚು ಕಾಲ ತಡವಾಗಿದ್ದರೆ ಪ್ರಯಾಣಿಕರು ಪೂರ್ಣ ಹಣ ವಾಪಾಸಾತಿಗೆ ಅರ್ಜಿ ಸಲ್ಲಿಸಬಹುದು. (ಪ್ರಯಾಣಿಕನ ಒರಿಜಿನೇಟಿಂಗ್ ಸ್ಥಳ ಹಾಗೂ ರೈಲು ಹತ್ತು ಸ್ಥಳ ಎರಡೂ ಬೇರೆ ಬೇರೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

ಮಾರ್ಗ ಬದಲಾಯಿಸಿದ್ದರೆ

ಮಾರ್ಗ ಬದಲಾಯಿಸಿದ್ದರೆ

PC: Angelo DeSantis

ಒಂದು ವೇಳೆ ರೈಲು ತನ್ನ ರೂಟ್‌ನ್ನು ಬದಲಾಯಿಸಿದ್ದು ನಿಮಗೆ ಆ ಟ್ರೈನ್‌ನಲ್ಲಿ ಪ್ರಯಾಣಿಸಲು ಇಷ್ಟವಿಲ್ಲದಿದ್ದರೆ ನೀವು ಸಂಪೂರ್ಣ ಟಿಕೆಟ್ ಹಣ ವಾಪಾಸು ಪಡೆಯಬಹುದು.

ಬೋರ್ಡಿಂಗ್ ನಿಲ್ದಾಣ ಬೇರೆಡೆಗಿದ್ದರೆ

ಬೋರ್ಡಿಂಗ್ ನಿಲ್ದಾಣ ಬೇರೆಡೆಗಿದ್ದರೆ

PC: Marc Shandro

ರೈಲು ತನ್ನ ಮಾರ್ಗವನ್ನು ಬೇರೆಡೆಗೆ ತಿರುಗಿಸಿದ್ದು, ಬೋರ್ಡಿಂಗ್ ನಿಲ್ದಾಣ ಅಥವಾ ತಲುಪುವ ನಿಲ್ದಾಣ ಎರಡೂ ಮಾರ್ಗಗಳು ಬೇರೆಡೆಗಿದ್ದರೆ ಪ್ರಯಾಣಿಕರು ತತ್ಕಾಲ್ ಟಿಕೆಟ್‌ನ ಹಣವನ್ನು ಸಂಪೂರ್ಣವಾಗಿ ಹಿಂಪಡೆಯಬಹುದು.

ಬುಕ್ ಮಾಡಿದ ಭೋಗಿಯಲ್ಲಿ ಸಿಗದಿದ್ದರೆ

ಬುಕ್ ಮಾಡಿದ ಭೋಗಿಯಲ್ಲಿ ಸಿಗದಿದ್ದರೆ

PC: Sharonpaul

ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ ಭೋಗಿಯಲ್ಲೇ ಟಿಕೆಟ್‌ನ್ನು ಒದಗಿಸದೆ ಬೇರೆ ಯಾವುದಾದರೂ ಭೋಗಿಯಲ್ಲಿ ಸೀಟ್ ವ್ಯವಸ್ಥೆ ನೀಡಿದರೆ ಅಂತಹ ಸಂದರ್ಭದಲ್ಲಿ ಪ್ರಯಾಣಿಕರು ಹಣ ಮರುಪಾವತಿ ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X