Search
  • Follow NativePlanet
Share
» »ರೌರವ ನರಕದಿಂದ ಮುಕ್ತಿ ಪಡೆಯಬಹುದಾದ ಪವಿತ್ರ ಪುಣ್ಯ ಜಲವಿದು

ರೌರವ ನರಕದಿಂದ ಮುಕ್ತಿ ಪಡೆಯಬಹುದಾದ ಪವಿತ್ರ ಪುಣ್ಯ ಜಲವಿದು

ಕಲಿಯುಗ ವೈಕುಂಟ ತಿರುಪತಿ ದೇವಾಲಯದ ಪುಷ್‍ಕರಣಿಯು ಅತ್ಯಂತ ಪವಿತ್ರವಾದ ಜಲ. ಭಗವಂತನಾದ ಶ್ರೀ ವೆಂಕಟೇಶ್ವರನೇ ಸ್ವತಃ ಈ ಪುಷ್‍ಕರಣಿಯ ಕಲ್ಯಾಣಿಯಲ್ಲಿ ಸ್ನಾನ ಮಾಡುವ ಪುಣ್ಯ ತೀರ್ಥಕ್ಷೇತ್ರ. ಇಲ್ಲಿಗೆ ಬರುವ ಭಕ್ತರು ತಮ್ಮ ಪಾಪಗಳನ್ನು ಪರಿಹರಿಸಿಕೊಳ್ಳಲು ಹಾಗೂ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪವಿತ್ರ ಜಲವಾದ ಪುಷ್‍ಕರಣಿಯ ಸ್ನಾನ ಮಾಡುತ್ತಾರೆ. ಈ ಪುಣ್ಯ ಕ್ಷೇತ್ರಕ್ಕೆ ಬರುವ ಸಾವಿರಾರು ಭಕ್ತರು ಇಲ್ಲಿ ಸ್ನಾನ ಮಾಡಿ ಸ್ವಾಮಿ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಪಡೆದರೆ ಪುಣ್ಯ ಲಭಿಸುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಪ್ರಸ್ತುತ ಲೇಖನದಲ್ಲಿ ಪುಷ್‍ಕರಣಿಯಲ್ಲಿ ಸ್ನಾನ ಮಾಡಿದವರಿಗೆ ರೌರವ ನರಕದಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯ ಬಗ್ಗೆ ತಿಳಿಯೋಣ.

1.ಶ್ರೀ ವೆಂಕಟೇಶ್ವರ ಸ್ವಾಮಿ

1.ಶ್ರೀ ವೆಂಕಟೇಶ್ವರ ಸ್ವಾಮಿ

ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ಹಲವಾರು ಭಕ್ತರನ್ನು ಹೊಂದಿರುವ ಶ್ರೀಮಂತ ದೇವತಾ ಸ್ವರೂಪಿ. ಈ ಸ್ವಾಮಿಯ ದೇವಾಲಯದ ಸಮೀಪದಲ್ಲಿರುವ ಪುಷ್‍ಕರಣಿಯು ಪವಿತ್ರವಾದ ಜಲವೆಂದೇ ಖ್ಯಾತಿ ಪಡೆದಿದೆ. ಸ್ವಯಂ ತಿರುಪತಿಯ ಅಧಿಪತಿಯಾದ ತಿಮ್ಮಪ್ಪನೇ ಇಲ್ಲಿ ಸ್ನಾನ ಮಾಡುವ ಸ್ಥಳವಾಗಿದೆ. ದಿನ ನಿತ್ಯವೂ ವೈಕುಂಠಾಧಿಪದಿ ಈ ಸ್ಥಳದಲ್ಲಿ ಸ್ನಾನ ಮಾಡುತ್ತಾನೆ ಎಂದು ಪುರಾಣಗಳು ತಿಳಿಸುತ್ತವೆ.
PC: Mydhili

2.ಭಕ್ತರು

2.ಭಕ್ತರು

ಸ್ವಾಮಿಯ ದರ್ಶನ ಪಡೆಯಲು ಬರುವ ಭಕ್ತರು ಈ ಪುಷ್‍ಕರಣಿಯಲ್ಲಿ ಸ್ನಾನ ಮಾಡುತ್ತಾರೆ. ಈ ನದಿಗೆ ಹಲವಾರು ಪಾಪಗಳನ್ನು ಪರಿಹರಿಸುವ ಶಕ್ತಿ ಹೊಂದಿದೆ. ಇಲ್ಲಿ ಸ್ನಾನ ಮಾಡಿ ಸ್ವಾಮಿ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಪಡೆದರೆ ಪುಣ್ಯ ಹಾಗೂ ಮೋಕ್ಷ ಲಭಿಸುತ್ತವೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.
PC:Wings and Petals

3.ಗರುಡ ಪುರಾಣ

3.ಗರುಡ ಪುರಾಣ

ಗರುಡ ಪುರಾಣದ ಪ್ರಕಾರ ಮನುಷ್ಯರು ಮರಣ ಹೊಂದಿದರೆ ಅವರವರ ಪಾಪ ಪುಣ್ಯದ ಪ್ರಕಾರ ಸ್ವರ್ಗಕ್ಕೆ ಅಥವಾ ನರಕಕ್ಕೆ ಸೇರುತ್ತಾರೆ. ಮನುಷ್ಯ ಅಂದ ಮೇಲೆ ತಮಗೆ ತಿಳಿಯದೇ ಹಲವಾರು ಪಾಪಗಳನ್ನು ಮಾಡಿರುತ್ತಾರೆ. ಅದ್ದರಿಂದ ನರಕ್ಕೆ ಹೋಗುತ್ತೇವೆ ಎಂದು ಕೆಲವರು ಅಂದು ಕೊಂಡಿರುತ್ತಾರೆ.
PC:Raji.srinivas

4.ರೌರವ ನರಕ

4.ರೌರವ ನರಕ

ರೌರವ ನರಕದಲ್ಲಿ ತಾವು ಮಾಡಿದ ಹಲವು ಪಾಪಗಳಿಗೆ ಕುದಿಯುತ್ತಿರುವ ಎಣ್ಣೆಯಲ್ಲಿ ನೂಕುತ್ತಾರೆ ಎಂದೂ, ಚೂರಿಗಳಿಂದ ಈರಿದು ಹಿಂಸಿಸುತ್ತಾರೆ ಎಂದೆಲ್ಲಾ ಹೇಳುತ್ತಾರೆ. ಹಾಗಾದರೆ ನರಕಕ್ಕೆ ಹೋಗದೇ ಇರುವುದಕ್ಕೆ ಯಾವುದಾದರೂ ಪರಿಹಾರವಿದೆಯೇ ಎಂದರೆ, ಇದೆ ಅದುವೇ ಪುಷ್‍ಕರಣಿಯ ಸ್ನಾನ.

5.ಪುಷ್‍ಕರಣಿ

5.ಪುಷ್‍ಕರಣಿ

ಕಲಿಯುಗ ವೈಕುಂಟ ತಿರುಪತಿಯಲ್ಲಿ ಯಾರು ವೈಕುಂಟದಿಪತಿ ತಿರುಮಲ ಸ್ವಾಮಿಯ ಜೋತೆ ಪುಷ್‍ಕರಣಿಯಲ್ಲಿ ಭಕ್ತಿಯಿಂದ ಸ್ನಾನ ಮಾಡುತ್ತಾರೋ ಅವರಿಗೆ ನರಕ ಭಯವಿರುವುದಿಲ್ಲ ಎಂದು ಪುರಾಣಗಳಲ್ಲಿವೆ.

6.ಸ್ವರ್ಗಕ್ಕೆ ದಾರಿ

6.ಸ್ವರ್ಗಕ್ಕೆ ದಾರಿ

ಗರುಡ ಪುರಾಣದ ಅತ್ಯಂತ ರೌರವ ನರಕದ ಹಿಂಸೆಗಳಾದ ಕುಂಭೀಪಾಕ, ತಾಮಿಶ್ರಂ, ಮಹಾರೌರವಂ, ಕಾಲ ಸೂತ್ರಂ, ಅಸಿಪತ್ರತಾವನಂ ಇಂಥಹ ಸುಮಾರು 28 ರೀತಿ ಭಯಂಕರವಾದ ಪಾಪಗಳಿಂದ ಮುಕ್ತಿ ದೊರೆಯುತ್ತದೆ.

7.ಪಾಪಗಳು

7.ಪಾಪಗಳು

ನಮಗೆ ಅರಿವಿಲ್ಲದೇ ಅರಿವಿಲ್ಲದಯೇ ಮಾಡಿರುವ ಕಾರ್ಯಗಳೇಲ್ಲವೂ ನರಕಕ್ಕೆ ಆಹ್ವಾನ ಮಾಡಿದಂತೆ. ಈ ಪಾಪಗಳಿಗೆಲ್ಲಾ ಗರುಡ ಪುರಾಣದಲ್ಲಿರುವ ಭಯಂಕರವಾದ 28 ಹಿಂಸೆ ಅನುಭವಿಸಬೇಕಾಗುತ್ತದೆ. ಈ ಪಾಪಗಳೆಲ್ಲಾ ಪರಿಹಾರವಾಗಬೇಕಾದರೆ ಒಮ್ಮೆ ಪುಷ್‍ಕರಣೀಯ ಸ್ನಾನ ಮಾಡಿದರೆ ಪರಿಹಾರವಾಗುತ್ತದೆ ಅಂತೆ.

8.ಶ್ರದ್ಧ, ಭಕ್ತಿ

8.ಶ್ರದ್ಧ, ಭಕ್ತಿ

ಈ ಪುಣ್ಯ ಪುಷ್‍ಕರಣೀಯಲ್ಲಿ ಸ್ನಾನ ಮಾಡುವವರು ಶ್ರದ್ಧ, ಭಕ್ತಿ, ನಂಬಿಕೆಯನ್ನು ಹೊಂದಿರಬೇಕು. ಪುಷ್‍ಕರಣಿಯ ಜಲವನ್ನು ಅವಮಾನ ಅಥವಾ ಹೀಯಾಳಿಸಬಾರದು. ಪುಷ್‍ಕರಣೀಯನ್ನು ಯಾವುದೇ ರೀತಿಯಲ್ಲೂ ತಶ್ಚಾರ ಮಾಡಬಾರದು. ಹೀಗೆ ಅವಮಾನ ಮಾಡಿದವರಿಗೆ ನಿಕೃಷ್ಟವಾದ ಜನ್ಮವನ್ನು ಮುಂದಿನ ಜನ್ಮದಲ್ಲಿ ತಾಳುತ್ತಾರೆ.

9.ಪುಷ್‍ಕರಣಿ

9.ಪುಷ್‍ಕರಣಿ

ಈ ಪುಷ್‍ಕರಣಿಗೆ ಅತ್ಯಂತ ಸುಂದರವಾದ ಪುರಾಣದ ಕಥೆ ಇದೆ. ಚಂದ್ರನು ಪುಷ್‍ಕರಣಿ ಸ್ವಾಮಿಗೆ ಚಿನ್ನದ ಆಭರಣಗಳನ್ನು ಕಾಣಿಕೆಯಾಗಿ ನೀಡಿದ್ದನು ಎಂದು ಹೇಳಲಾಗಿದೆ. ಕಾಮ ದೇವ ಅಥವಾ ಮನ್ಮಥ ಸ್ವಾಮಿಯ ಮಗಳ ವಿವಾಹವನ್ನು ಈ ಪುಷ್‍ಕರಣಿಯಲ್ಲಿ ವಿವಾಹವನ್ನು ಮಾಡಿದ್ದ.

10.ದೇವತೆಗಳು

10.ದೇವತೆಗಳು

ಕುಬೇರ ಕೂಡ ಪುಷ್‍ಕರಣಿಗೆ ಕಾಣಿಕೆಯಾಗಿ ಸಂಪತ್ತನ್ನು ನೀಡಿದ್ದನಂತೆ. ಇಂದ್ರನು ಕೂಡ 16 ವಿವಿಧವಾದ ವಸ್ತುಗಳನ್ನು ಪುಷ್‍ಕರಣಿಗೆ ಕಾಣಿಕೆಯಾಗಿ ನೀಡಿದ್ದನಂತೆ. ಹೀಗೆ ದೇವಾನು ದೇವತೆಗಳು ಈ ಪುಷ್‍ಕರಣಿಯ ಜಲದ ಮಹಿಮೆಗೆ ಸಾಕ್ಷಿಯಾಗಿದ್ದಾರೆ.

11.ಪುಷ್‍ಕರಣಿಯ ನೆಲೆ

11.ಪುಷ್‍ಕರಣಿಯ ನೆಲೆ

ಪುಷ್‍ಕರಣಿಯು ತಿರುಮಲದ ಶ್ರೀವಾರಿ ದೇವಾಲಯದ ಉತ್ತರ ದಿಕ್ಕಿನಲ್ಲಿ ಇದೆ. ಇದು ತಿರುಪತಿ ದೇವಾಲಯದ ಪ್ರಮುಖವಾದ ಆಕರ್ಷಣೆಯಾಗಿದೆ. ಈ ಪುಷ್‍ಕರಣಿಯನ್ನು ಅರ್ಧ ಎಕ್ಕರೆಗಳಲ್ಲಿ ನಿರ್ಮಿಸಲಾಗಿದೆ.

12.ಮಂಟಪ

12.ಮಂಟಪ

ಈ ಪುಷ್‍ಕರಣಿಯ ಮಧ್ಯೆಯಲ್ಲಿ ಸುಂದರವಾದ ಮಂಟಪವಿದ್ದು ಆತ್ಯಂತ ಆಕರ್ಷಣಿಯವಾಗಿದೆ. ಮಂಟಪವನ್ನು ನೀರತ ಮಂಟಪಂ ಎಂದು ಕರೆಯಲಾಗುತ್ತದೆ. ಇದನ್ನು 1468 ರಲ್ಲಿ ಸಲುವ ಅರಸ ನರಸಿಂಹ ರಾಯ ನಿರ್ಮಿಸಿದ್ದಾಗಿದೆ. ನಂತರ ಪ್ರಖ್ಯಾತ ಕವಿ ಅನ್ನಮಯ್ಯ ಪುಷ್‍ಕರಣಿ ಮಂಟಪಕ್ಕೆ ಮೆಟ್ಟಿಲನ್ನು ನಿರ್ಮಿಸಿದ ಎನ್ನಲಾಗಿದೆ.

14ಪುಷ್‍ಕರಣೀಯ ಪೌರಾಣೀಕ

14ಪುಷ್‍ಕರಣೀಯ ಪೌರಾಣೀಕ

ಪುಷ್‍ಕರಣೀ ಸ್ವಾಮಿಯ ವಾಸಸ್ಥಾನ ವೈಕುಂಟ. ವಿಷ್ಣುವಿನ ಅವತಾರದಲ್ಲಿ ವೈಕುಂಟವಾಸಿಯಾಗಿದ್ದ ಸ್ವಾಮಿಯನ್ನು ಗರುಡ ಸ್ವಾಮಿಯು ಭೂಮಿಯಲ್ಲಿ ತನ್ನ ಪತ್ನಿ ಮಾಹಾಲಕ್ಷ್ಮಿಯೊಂದಿಗೆ ನೆಲೆಸಲು ಸ್ಥಳವನ್ನು ಅನ್ವೇಷಿಸಿದನು.

15.ಪೂಜ ಕೈಂಕರ್ಯಗಳು

15.ಪೂಜ ಕೈಂಕರ್ಯಗಳು

ಈ ಪುಷ್‍ಕರಣಿಯಲ್ಲಿ ದಿನವೂ ಪೂಜೆಗಳು, ಆರಾತಿಗಳು ಸುಮಾರು 12 ನೇ ಶತಮಾನದಿಂದ ನಡೆದು ಬಂದಿದೆ. ಮುಖ್ಯವಾಗಿ ಶ್ರೀ ಕೃಷ್ಣ ದೇವರಾಯ ಹಾಗೂ ವಿಜಯ ನಗರ ಸಾಮ್ರಾಜ್ಯದವರು ಕೂಡ ಇಲ್ಲಿ ಪೂಜೆಯನ್ನು ಸಲ್ಲಿಸಿ ವೈಕುಂಠದಿಪತಿಯ ದರ್ಶನವನ್ನು ಪಡೆಯುತ್ತಿದ್ದರಂತೆ.


ದೇವಾಲಯ,ತೀರ್ಥಕ್ಷೇತ್ರ,ತಿರುಪತಿ,ಆಂಧ್ರ ಪ್ರದೇಶ,ಪ್ರವಾಸ,ಭಾರತ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X