Search
  • Follow NativePlanet
Share
» »ಹೈದರಾಬಾದ್ ನಿಂದ ಆಂಧ್ರಪ್ರದೇಶದ ಪ್ರಸಿದ್ದ ಯಾತ್ರಾಸ್ಥಳ ಶ್ರೀಶೈಲಂಗೆ ಒಂದು ಭಕ್ತಿಪೂರ್ವಕ ಪ್ರಯಾಣ

ಹೈದರಾಬಾದ್ ನಿಂದ ಆಂಧ್ರಪ್ರದೇಶದ ಪ್ರಸಿದ್ದ ಯಾತ್ರಾಸ್ಥಳ ಶ್ರೀಶೈಲಂಗೆ ಒಂದು ಭಕ್ತಿಪೂರ್ವಕ ಪ್ರಯಾಣ

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನೆಲೆಸಿರುವ ಶ್ರೀಶೈಲಂ ಅತ್ಯಂತ ಹೆಸರುವಾಸಿಯಾಗಿರುವ ಮತ್ತು ಪ್ರಖ್ಯಾತ ಹಿಂದೂ ಯಾತ್ರಾಸ್ಥಳವಾಗಿದೆ. ಆದುದರಿಂದ ಪ್ರತೀವರ್ಷವೂ ದೇಶದಾದ್ಯಂತದ ಅಸಂಖ್ಯಾತ ಜನರಿಂದ ಭೇಟಿ ನೀಡಲ್ಪಡುತ್ತದೆ. ಇದು ಯಾತ್ರಾಸ್ಥಳವಾಗಿ ಪ್ರಖ್ಯಾತಿಯನ್ನು ಪಡೆದಿದ್ದರೂ ಸಹ ಈ ಸ್ಥಳವು ತನ್ನ ಗಡಿಯೊಳಗೆ ಹೇರಳವಾಗಿ ಸುಂದರ ಸ್ಥಳಗಳನ್ನು ಹೊಂದಿದ್ದರಿಂದ ಇದು ಪ್ರಯಾಣಿಕರು ಮತ್ತು ಪ್ರವಾಸಿಗರಿಂದ ನಿರಂತರವಾಗಿ ಭೇಟಿ ಕೊಡಲ್ಪಡುತ್ತದೆ. ಶ್ರೀಶೈಲಂನ ಸುತ್ತಮುತ್ತಲಿನ ಪ್ರದೇಶಗಳು ಕಾಡುಗಳು ಮತ್ತು ಬೆಟ್ಟಗಳಿಂದ ಕೂಡಿದ್ದು, ಇವುಗಳು ಕೂಡಾ ಟ್ರಕ್ಕಿಂಗ್ ಮತ್ತು ಶಿಬಿರಾರ್ಥಿಗಳಿಗೆ ಒಂದು ಉತ್ತಮ ನಿಲುಗಡೆಯ ಸ್ಥಳವೆನಿಸಿದೆ.

ಇವೆಲ್ಲವುಗಳನ್ನೊಳಗೊಂಡಿರುವ ಶ್ರೀಶೈಲಂ ಇಲ್ಲಿಗೆ ಎಲ್ಲಾ ತರಹದ ಪ್ರವಾಸಿಗರಿಗೂ ಬೇಕಾದುದನ್ನು ಒದಗಿಸಿಕೊಡುತ್ತದೆ ಆದುದರಿಂದ ಎಲ್ಲರೂ ಇಲ್ಲಿಗೆ ಹೋಗಬಯಸುತ್ತಾರೆ ಎಂದರೆ ತಪ್ಪಾಗಲಾರದು. ಈ ಸ್ಥಳವು ನಗರಗಳಿಗೆ ಹತ್ತಿರವಿರುವುದರಿಂಡ ಇಲ್ಲಿಗೆ ಭೇಟಿಯು ಅವಿಸ್ಮರಣೀಯ ಅನುಭವವನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ. ಆದುದರಿಂದ ಮುಂದೆ ಸಾಗುತ್ತಾ ಈ ಯಾತ್ರಾಸ್ಥಳ ಮತ್ತು ಇಲ್ಲಿಗೆ ತಲುಪುವ ಬಗೆ ಹೇಗೆ ಎನ್ನುವುದನ್ನು ತಿಳಿಯೋಣ.

xshivadasdsad-16-1487234466-jpg-pagespeed-ic-9gwfurvrgh-1663069518.jpg -Properties

ಶ್ರೀಶೈಲಂಗೆ ಭೇಟಿ ನೀಡಲು ಉತ್ತಮ ಸಮಯ

ಶ್ರೀಶೈಲಂ ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನವಿರುವ ಹವಾಮಾನವನ್ನು ಹೊಂದುವುದರಿಂದ ಇಲ್ಲಿಗೆ ಅಕ್ಟೋಬರ್ ತಿಂಗಳ ಕೊನೆಯಿಂದ ಫ಼ೆಬ್ರವರಿ ತಿಂಗಳ ಕೊನೆಯವರೆಗೆ ಭೇಟಿ ಕೊಡಲು ಉತ್ತಮ ಸಮಯವಾಗಿದ್ದು, ಈ ಸಮಯದಲ್ಲಿ ವಾತಾವರಣವು ಆಹ್ಲಾದಕರವಾಗಿರುವುದರಿಂದ ಇಲ್ಲಿಯ ಸುತ್ತಮುತ್ತಲಿನ ಆಕರ್ಷಕ ಸ್ಥಳಗಳನ್ನು ಆರಾಮದಾಯಕವಾಗಿ ಅನ್ವೇಷಣೆ ಮಾಡಬಹುದಾಗಿದೆ. ಶ್ರೀಶೈಲಂ ಹಿಂದು ಭಕ್ತರುಗಳಿಗೆ ಮತ್ತು ಆಫ್ಬೀಟ್ ಪ್ರಯಾಣಿಕರಿಗೆ ವರ್ಷಪೂರ್ತಿ ಭೇಟಿ ಕೊಡಲು ಯೋಗ್ಯವಾದಂತಹ ತಾಣವಾಗಿದೆ.

ಹೈದರಾಬಾದಿನಿಂದ ಶ್ರೀಶೈಲಂಗೆ ತಲುಪುವುದು ಹೇಗೆ?

ವಿಮಾನ ಮೂಲಕ : ಶ್ರೀಶೈಲಕ್ಕೆ ಹತ್ತಿರದ ವಿಮಾನ ನಿಲ್ದಾಣವು ಹೈದರಾಬಾದ್‌ನಲ್ಲಿ ಇರುವುದರಿಂದ, ಹೈದರಾಬಾದ್‌ನಿಂದ ವಿಮಾನದ ಮೂಲಕ ಶ್ರೀಶೈಲವನ್ನು ತಲುಪಲು ಯಾವುದೇ ಆಯ್ಕೆ ಲಭ್ಯವಿಲ್ಲ.

ರೈಲುಮಾರ್ಗದ ಮೂಲಕ: ಶ್ರೀಶೈಲಂ ತನ್ನದೇ ಆದ ರೈಲು ನಿಲ್ದಾಣವನ್ನು ಹೊಂದಿಲ್ಲ. ಆದ್ದರಿಂದ, ನೀವು ಕಂಬಂ ರೈಲು ನಿಲ್ದಾಣಕ್ಕೆ ರೈಲನ್ನು ಹಿಡಿಯಬೇಕು ಮತ್ತು ಅಲ್ಲಿಂದ ಶ್ರೀಶೈಲಂ ತಲುಪಲು ನೀವು ಕ್ಯಾಬ್ ಅಥವಾ ಬಸ್ ಅನ್ನು ಬಾಡಿಗೆಗೆ ಪಡೆಯಬಹುದು. ಕಂಬಂ ಮತ್ತು ಶ್ರೀಶೈಲಂ ನಡುವಿನ ಅಂತರ 102 ಕಿ.ಮೀ. ಆಗಿರುತ್ತದೆ.

ರಸ್ತೆಯ ಮೂಲಕ: ಯಾತ್ರಾ ಸ್ಥಳವಾಗಿರುವ ಶ್ರೀಶೈಲಂ ಇತರ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ ಮತ್ತು ಆದ್ದರಿಂದ ರಸ್ತೆಯ ಮೂಲಕ ತಲುಪಬಹುದು.

ಮಾರ್ಗ : ಹೈದರಾಬಾದ್ - ಕಡ್ತಾಲ್ - ಶ್ರೀಶೈಲಂ

ನಿಮ್ಮ ಮಾರ್ಗದಲ್ಲಿ ಕಡ್ತಾಲ್ ನಲ್ಲಿ ಒಂದು ವಿರಾಮ ಪಡೆದು ಅಲ್ಲಿಯ ಸುಂದರ ಆಕರ್ಷಣೆಗಳನ್ನು ಅನ್ವೇಷಿಸಿ

vista-point-view-at-srisailam-dam-02-1539062977-1663069398.jpg -Properties

ಕಡ್ತಾಲ್

ಕಡ್ತಾಲ್ ಹೈದರಾಬಾದಿನಿಂದ ಸುಮಾರು 53 ಕಿಮೀ ದೂರದಲ್ಲಿ ಹಾಗೂ ಶ್ರೀಶೈಲಂ ನಿಂದ ಸುಮಾರು 164 ಕಿ.ಮೀ ದೂರದಲ್ಲಿ ನೆಲೆಸಿದ್ದು, ವಿಶ್ರಾಂತಿ ಪಡೆಯಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಇದರ ಗಡಿಯೊಳಗೆ ಅನ್ವೇಶಿಸಲು ಹೆಚ್ಚೇನೂ ಸ್ಥಳಗಳಿಲ್ಲದಿದ್ದರೂ ಕೂಡ ಇಲ್ಲಿರುವ ಹಲವಾರು ಸುಂದರ ದೇವಾಲಯಗಳಿಂದಾಗಿ ಇದು ಅನ್ವೇಷಣೆಗೆ ಯೋಗ್ವವಾದ ಸ್ಥಳವೆನಿಸಿದೆ.

ಅವುಗಳಲ್ಲಿ ಪ್ರಮುಖವಾದದ್ದು ಮೈಸಿಗಂಡಿ ಮೈಸಮ್ಮ ದೇವಸ್ಥಾನ. ಇದು ಕಡ್ತಲ್ ಪ್ರದೇಶದ ಜನಪ್ರಿಯ ಆಕರ್ಷಣೆಯಾಗಿದೆ ಮತ್ತು ಜಿಲ್ಲೆಯಾದ್ಯಂತ ಹಿಂದೂ ಭಕ್ತರು ಭೇಟಿ ನೀಡುತ್ತಾರೆ. ನೀವು ಸುಂದರವಾದ ಮಹೇಶ್ವರ ಪಿರಮಿಡ್ ಅನ್ನು ಸಹ ಭೇಟಿ ಮಾಡಬಹುದು.
ಅಂತಿಮ ಗಮ್ಯಸ್ಥಾನ - ಶ್ರೀಶೈಲಂ

ಶ್ರೀಶೈಲಂ ಹೈದರಾಬಾದಿನಿಂದ ಸುಮಾರು 213ಕಿ.ಮೀ ದೂರದಲ್ಲಿ ನೆಲೆಸಿದ್ದು, ಆಂಧ್ರಪ್ರದೇಶದ ಸಂಸ್ಕೃತಿ ಮತ್ತು ಸೌಂದರ್ಯತೆಯನ್ನು ಅನ್ವೇಷಣೆ ಮಾಡಬಯಸುವ ಪ್ರತಿಯೊಬ್ಬ ಪ್ರಯಾಣಿಕರು ಅಥವಾ ಪ್ರವಾಸಿಗರು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ದೇವಾಲಯಗಳ ಹೊರತಾಗಿಯೂ, ಶ್ರೀಶೈಲಂನಲ್ಲಿ ಮತ್ತು ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ನೋಡಬೇಕಾದ ಹಲವಾರು ಸ್ಥಳಗಳಿವೆ. ಆದ್ದರಿಂದ ಶ್ರೀಶೈಲಂಗೆ ಪ್ರವಾಸ ಕೈಗೊಳ್ಳುವುದನ್ನು ನಿಮ್ಮ ಪ್ರವಾಸ ಪಟ್ಟಿಯಲ್ಲಿ ಸೇರಿಸಲೇಬೇಕಾದುದಾಗಿದೆ. ನೀವು ಶ್ರೀಶೈಲಂ ಅಥವಾ ಅದರ ಸುತ್ತಮುತ್ತಲಲ್ಲಿ ಇರುವಾಗ ಈ ಕೆಳಗಿನ ಪ್ರಮುಖ ಸ್ಥಳಗಳಿಗೆ ಭೇಟಿ ಕೊಟ್ಟು ಆನಂದಿಸಲೇ ಬೇಕಾದಂತವುಗಳು.

coverphoto800px-shrisailam-temple--hyderabad-1663069408.jpg -Properties

ಮಲ್ಲಿಕಾರ್ಜುನ ಜ್ಯೋತಿರ್ಲಿಂಗ

ಶ್ರೀಶೈಲಂಗೆ ಭೇಟಿ ನೀಡಿ ಇಲ್ಲಿಯ ಕೆಲವು ಅತ್ಯಂತ ಹೆಚ್ಚಿಗೆ ಭೇಟಿ ಕೊಡಲ್ಪಡುವ ಕೆಲವು ತಾಣಗಳಿಗೆ ಭೇಟಿ ನೀಡದಿದ್ದಲ್ಲಿ, ನಿಮ್ಮ ಶ್ರೀಶೈಲಂ ಪ್ರವಾಸ ಪರಿಪೂರ್ಣವಾಗಲು ಸಾಧ್ಯವೆ? ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದೇವಾಲಯವು ಭಗವಾನ್ ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾಗಿರುವ ಈ ಸುಂದರವಾದ ದೇವಾಲಯವಾಗಿದ್ದು, ಜ್ಯೋತಿರ್ಲಿಂಗ ಮತ್ತು ಶಕ್ತಿ ಪೀಠ ಎಂದು ಕರೆಯಲ್ಪಡುವ ವಿಶ್ವದ ಏಕೈಕ ಧಾರ್ಮಿಕ ಸ್ಥಳವಾಗಿದೆ.

ಆದುದರಿಂದ ಈ ದೇವಾಲಯವು ಹಬ್ಬಗಳ ಸಮಯದಲ್ಲಿ ಪ್ರವಾಸಿಗರು ಮತ್ತು ಭಕ್ತರುಗಳಿಂದ ತುಂಬಿ ತುಳುಕುತ್ತಿರುತ್ತದೆ. ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಶಾಂತಿಯುತ ವಾತಾವರಣವಿರುವುದರಿಂದ, ಇದು ನಿಮ್ಮ ಮನಸ್ಸು, ದೇಹ ಮತ್ತು ಆತ್ಮವನ್ನು ಶಾಂತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾದರೆ, ಈ ವಾರಾಂತ್ಯದಲ್ಲಿ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದರ್ಶನ ಮಾಡೋಣವೆ?

cumbum-lake-23-1474639146-1663069417.jpg -Properties

ನಲ್ಲಮಾಲ ಬೆಟ್ಟಗಳು

ನೀವು ಭೂದೃಶ್ಯಗಳನ್ನು ಸೆರೆಹಿಡಿಯಲು ಇಷ್ಟ ಪಡುವ ಛಾಯಾಗ್ರಾಹಕರಾಗಿದ್ದಲ್ಲಿ, ಶ್ರೀಶೈಲಂ ನ ಹೊರವಲಯದಲ್ಲಿರುವ ನಲ್ಲಮಾಲ ಬೆಟ್ಟಗಳು ನಿಮನ್ನು ಆಹ್ವಾನಿಸುತ್ತವೆ. ನಿಮಗೆ ಈ ಸುಂದರ ಗಿರಿ ಪ್ರದೇಶಗಳುನಿಮಗೆ ಕ್ಯಾಂಪಿಂಗ್, ಟ್ರೆಕ್ಕಿಂಗ್ ಮತ್ತು ಹೈಕಿಂಗ್ ನ ಅನುಭವ ಪಡೆಯಲು ಸೂಕ್ತವಾದುದಾಗಿದೆ.ಅಷ್ಟೇ ಅಲ್ಲದೆ ಇಲ್ಲಿ ಆಹ್ಲಾದಕರವಾದ ವಾತಾವರಣವಿರುವುದರಿಂದ ವಿಶ್ರಾಂತಿದಾಯಕ ವಾರಾಂತ್ಯವನ್ನು ಕಳೆಯಲು ಕೂಡಾ ಈ ಸ್ಥಳವು ಅತ್ಯಂತ ಸೂಕ್ತವಾಗಿದ್ದು, ನಿಮ್ಮನ್ನು ಮೋಡಿಮಾಡುತ್ತದೆ. ಪೂರ್ವಘಟ್ಟಗಳ ಒಂದು ಭಾಗವಾದ ನಲ್ಲಮಾಲ ಬೆಟ್ಟಗಳು ದಟ್ಟವಾದ ಹಸಿರಿನಿಂದ ಆಶೀರ್ವದಿಸಲ್ಪಟ್ಟಿದೆ.

cov-min7-1614769137-1663069427.jpg -Properties

ನಾಗಾರ್ಜುನ ಸಾಗರ್ - ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶ

ನೀವು ವನ್ಯಜೀವಿ ಪ್ರಿಯರೆ? ಹೌದು ಎಂದಾದಲ್ಲಿ, ನಾಗಾರ್ಜುನಸಾಗರ-ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ಕೊಡಿ. ಇದು 1983 ರಲ್ಲಿ ಸ್ಥಾಪಿತವಾಗಿದ್ದು, ಇದು ದೇಶದ ಅತ್ಯಂತ ದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾಗಿದೆ ಮತ್ತು ಇದು 3728 ಚದರ ಕಿ.ಮೀ ವಿಸ್ತಾರ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ ಹುಲಿಗಳ ಹೊರತಾಗಿಯೂ ಇಲ್ಲಿ ಕಾಣಸಿಗುವ ಪ್ರಮುಖ ಜಾತಿಗಳೆಂದರೆ ಭಾರತದ ಚಿರತೆ, ಚಿಂಕಾರ, ಸೋಮಾರಿ ಕರಡಿ ಮತ್ತು ಸಾಂಬಾರ್. ನೀವು ಅದರ ಪ್ರದೇಶದಲ್ಲಿ ನೆಲೆಗೊಂಡಿರುವ ಭವ್ಯವಾದ ನಾಗಾರ್ಜುನಸಾಗರ್ ಅಣೆಕಟ್ಟಿಗೆ ಸಹ ಭೇಟಿ ನೀಡಬಹುದಾಗಿದೆ.

ಇಲ್ಲಿಯ ಇನ್ನಿತರ ಪ್ರವಾಸಿ ಆಕರ್ಷಣೆಗಳು

ಅಕ್ಕ ಮಹಾದೇವಿ ಗುಹೆಗಳು, ಶಿಕರೇಶ್ವರ ದೇವಸ್ಥಾನ, ಶ್ರೀಶೈಲಂ ಅಣೆಕಟ್ಟು ಮತ್ತು ಪಾತಾಳಗಂಗಾ ಇವು ಶ್ರೀಶೈಲಂ ಮತ್ತು ಸುತ್ತಮುತ್ತಲಿನ ಇತರ ಪ್ರೇಕ್ಷಣೀಯ ಸ್ಥಳಗಳು. ಹಾಗಾದರೆ, ಈ ವಾರಾಂತ್ಯದಲ್ಲಿ ಶ್ರೀಶೈಲಕ್ಕೆ ಭೇಟಿ ನೀಡಲು ಸಿದ್ದರಾಗಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X