Search
  • Follow NativePlanet
Share
» »ಸರ್ಪಸಂಸ್ಕಾರ ಮಾಡುವ ದೇವಾಲಯವಿದು...

ಸರ್ಪಸಂಸ್ಕಾರ ಮಾಡುವ ದೇವಾಲಯವಿದು...

By Sowmyabhai

ಜೀವನದಲ್ಲಿ ಮನುಷ್ಯರು ಮಾಡುವ ಅನೇಕ ತಪ್ಪುಗಳು ಭವಿಷ್ಯದಲ್ಲಿ ತೊಂದರೆಗಳು ಉಂಟಾಗುತ್ತವೆ. ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಜೀವಿ ಹಾಗು ವಸ್ತುವನ್ನು ಕೂಡ ದೈವತ್ವದ ಸಂಕೇತವಾಗಿ ಕಾಣುತ್ತೇವೆ. ಹಾಗೆಯೇ ಹಾವುಗಳನ್ನು ಅತ್ಯಂತ ಶ್ರದ್ಧೆ-ಭಕ್ತಿಯಿಂದ ಪೂಜಿಸುತ್ತೇವೆ. ನಮ್ಮ ದೇಶದಲ್ಲಿ ಹಾವುಗಳಿಗೆ ಎಂದೇ ಪ್ರತ್ಯೇಕವಾದ ಅನೇಕ ಮಹಿಮಾನ್ವಿತವಾದ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ಸರ್ಪ ಸಂಸ್ಕಾರವನ್ನು, ಸರ್ಪ ದೋಷ ಪರಿಹಾರ, ಸರ್ಪ ಶಿಲಾಪ್ರತಿಷ್ಟಾಪನೆಗಳನ್ನು ನಾವು ಕಾಣಬಹುದು.

ಅಂತಹ ಪವಿತ್ರವಾದ ದೇವಾಲಯಗಳಲ್ಲಿ ಶ್ರೀ ಕಾಳಹಸ್ತಿ ಕ್ಷೇತ್ರವು ಒಂದು. ಈ ಪುಣ್ಯಕ್ಷೇತ್ರವು ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿದೆ. ಈ ದೇವಾಲಯವನ್ನು "ದಕ್ಷಿಣ ಕೈಲಾಸ" ಎಂದು ಪ್ರಸಿದ್ಧಿಯನ್ನು ಪಡೆದಿದೆ. ಇದರ ಬಳಿ ಇರುವ ಬೆಟ್ಟಕ್ಕೆ ಕೈಲಾಸಗಿರಿ ಎಂದು ಹೆಸರು ಕೂಡ ಇದೆ.

1.ದೇವಾಲಯದ ಇತಿಹಾಸ

1.ದೇವಾಲಯದ ಇತಿಹಾಸ

PC:Pavanjandhyala

ಈ ದೇವಾಲಯದ ಇತಿಹಾಸದ ಪ್ರಕಾರ ಪಲ್ಲವರು, ಚೋಳರು ಮತ್ತು ವಿಜಯನಗರದ ರಾಜರು ಕೂಡ ಈ ದೇವಾಲಯಕ್ಕೆ ಆನೇಕ ಸವಲತ್ತುಗಳನ್ನು ಒದಗಿಸಿದ್ದಾರೆ. ಕೆಲವು ಪುರಾಣಗಳ ಪ್ರಕಾರ ಶ್ರೀ ಕಾಳಹಸ್ತಿಯಲ್ಲಿರುವ ಶಿವಲಿಂಗವು ಬ್ರಹ್ಮದೇವನಿಂದ ಸ್ಥಾಪಿತವಾದದ್ದು. ಈ ಪುಣ್ಯ ಕ್ಷೇತ್ರದಲ್ಲಿ ಎರಡು ದೀಪಗಳು ಬೆಳಗುತ್ತಿರುತ್ತವೆ.ಒಂದು ದೀಪ ಯಾವಾಗಲೂ ಗಾಳಿಗೆ ಕದುಲುತ್ತಿದ್ದರೆ, ಇನ್ನೊಂದು ದೀಪವು ನಿಶ್ಚಲವಾಗಿರುತ್ತದೆ. ಈ ದೇವಾಲಯದಲ್ಲಿರುವ ಸುಂದರವಾದ 3 ಗೋಪುರಗಳು ಪ್ರಾಚೀನ ಭಾರತೀಯ ವಾಸ್ತು ಕಲೆಗೆ ನಿದರ್ಶನವಾಗಿದೆ.

2. ಸರ್ಪ ಸಂಸ್ಕಾರ

2. ಸರ್ಪ ಸಂಸ್ಕಾರ

PC:Krishna Kumar Subramanian

ಶ್ರೀ ಕಾಳಹಸ್ತಿಯ ತಾಯಿ ಜ್ಞಾನ ಪ್ರಸಾದವನ್ನು ನೀಡುವ ತಾಯಿಯಾಗಿದ್ದಾಳೆ. ಇಲ್ಲಿನ ಶಿವಲಿಂಗವು ವರ್ತುಲಾಕಾರವೇ ಅಲ್ಲದೇ ಚರ್ತುಸ್ರಮವಾಗಿ ಕೂಡ ಇದೆ. ಸ್ಥಳ ಪುರಾಣಗಳ ಪ್ರಕಾರ ಬ್ರಹ್ಮನಿಗೆ ಜ್ಞಾನವನ್ನು ಪ್ರಸಾಧಿಸಿದ ಪ್ರದೇಶ.ಈ ದೇವಾಲಯದಲ್ಲಿ ಸರ್ಪ ಸಂಸ್ಕಾರವನ್ನು ಮಾಡುತ್ತಾರೆ. ಶ್ರೀ ಕಾಳಹಸ್ತಿ ದೇವಾಲಯವು ರಾಹು ಹಾಗೂ ಕೇತು ದೋಷವನ್ನು ಪರಿಹರಿಸುವಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಪೂಜೆಗಳು ಮಾಡಿದರೆ ಸಕಲ ದೋಷ ನಿವಾರಣೆಯಾಗಿ ಸಂತಾನ ಭಾಗ್ಯ, ವಿವಾಹ, ಉದ್ಯೋಗ, ಮನೆಯಲ್ಲಿ ಶಾಂತಿ ನೆಲೆಸುತ್ತದೆ. ರಾಹು ಹಾಗೂ ಕೇತು ದೋಷ ಪರಿಹಾರ ಮಾಡಿಸಿಕೊಳ್ಳಲು ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.

3.ಶ್ರೀ ಕಾಳಹಸ್ತಿಶ್ವರ

3.ಶ್ರೀ ಕಾಳಹಸ್ತಿಶ್ವರ

PC:YOUTUBE

ಸ್ವರ್ಣಮುಖಿ ನದಿ ತೀರದಲ್ಲಿ ನೆಲೆಸಿರುವ ಸ್ವಾಮಿ ಶ್ರೀ ಕಾಳಹಸ್ತಿಶ್ವರನು. ಸ್ವಯಂ ಭೂ ಲಿಂಗ ಎಂದು ಕೆಲವರು ಇನ್ನೂ ಕೆಲವರು ಬ್ರಹ್ಮ ದೇವನು ಪ್ರತಿಷ್ಟಾಪಿಸಿದ ಲಿಂಗ ಎಂದು ಇನ್ನೂ ಕೆಲವರು ತಿಳಿಸುತ್ತಾರೆ. ಲಿಂಗದ ಮುಂಭಾಗದಲ್ಲಿರುವ ದೀಪವು ಶಿವಲಿಂಗದಿಂದ ಬರುವ ಗಾಳಿಯಿಂದ ಕದಲುತ್ತದೆಯಂತೆ. ಶ್ರೀ ಕಾಳಹಸ್ತಿಯನ್ನು ದಕ್ಷಿಣ ಕಾಶಿ ಎಂದು ಸಹ ಕರೆಯುತ್ತಾರೆ. ವಿಶೇಷವೆನೆಂದರೆ ಈ ದೇವಾಲಯವು ಅತ್ಯಂತ ದೊಡ್ಡದಾದ ದೇವಾಲಯವಾಗಿದೆ.

4.ಕಾರ್ಯವು ಸಿದ್ಧಿ

4.ಕಾರ್ಯವು ಸಿದ್ಧಿ

PC:YOUTUB

ಶ್ರೀ ಕಾಳಹಸ್ತಿ ದೇವಾಲಯದ ನಿರ್ಮಾಣದಲ್ಲಿ ಒಂದು ವಿಶೇಷವಿದೆ. ಇಲ್ಲಿನ ವಿನಾಯಕ, ಶ್ರೀ ಕಾಳಹಸ್ತಿಶ್ವರ, ಜ್ಞಾನ ಪ್ರಸೂನಾಂಬ ದೇವತೆ, ದಕ್ಷಿಣ ಮೂರ್ತಿ ಒಬ್ಬೊಬ್ಬರು ಒಂದೊದು ದಿಕ್ಕಿಗೆ ಅಭಿಮುಖವಾಗಿದ್ದಾರೆ. ಈ ದೇವಾಲಯದ ದರ್ಶನದಿಂದಾಗಿ ಎಲ್ಲಾ ಕಾರ್ಯವು ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಅಭಿಷೇಕ ಸಮಯದಲ್ಲಿ ಸ್ವಾಮಿಯ ನಿಜರೂಪ ದರ್ಶನವನ್ನು ಪಡೆದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಭಕ್ತರು ನಂಬಿದ್ದಾರೆ. ಸ್ವಾಮಿಯ ಲಿಂಗಾಕೃತಿದ ಮಧ್ಯೆ ಭಾಗದಲ್ಲಿ ನವಗ್ರಹ ಕವಚವಿದೆ. ಇದರಲ್ಲಿ ಸೂರ್ಯಚಂದ್ರಾದಿ 9 ಗ್ರಹಗಳು ಇರುತ್ತವೆ.

5.ಪ್ರಯಾಣ ಸೌಕರ್ಯ

5.ಪ್ರಯಾಣ ಸೌಕರ್ಯ

PC:YOUTUBE

ಶ್ರೀ ಕಾಳಹಸ್ತಿಗೆ ತಿರುಪತಿಯಿಂದ 30 ಕಿ,ಮೀ ದೂರದಲ್ಲಿರುವ ಈ ದೇವಾಲಯಕ್ಕೆ 5 ನಿಮಿಷಕ್ಕೆ ಒಮ್ಮೆ ಬಸ್‍ಗಳ ಸೌಕರ್ಯವಿದೆ. ರೈಲ್ವೆ ಮೂಲಕ ಸಾಗುವವರಿಗೆ ಬೆಂಗಳೂರಿನಿಂದ ತಿರುಪತಿಗೆ ನೇರವಾದ ತಿರುಪತಿ ಎಕ್ಸ್‍ಪ್ರೆಸ್ ಇದ್ದು, ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಶ್ರೀ ಕಾಳಹಸ್ತಿ ದೇವಾಲಯಕ್ಕೆ ತೆರಳಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X