
ರಾಮ, ಲಕ್ಷಣ, ಸೀತೆ ತಮ್ಮ ಹದಿನಾಲ್ಕು ವರ್ಷಗಳ ವನವಾಸದ ಸಮಯದಲ್ಲಿ ಪಂಚವಟಿ ಎನ್ನುವ ಸ್ಥಳದಲ್ಲಿ ನೆಲೆಸಿದ್ದರು. ಈ ಇಡೀ ಪಂಚವಟಿಯ ಕ್ಷೇತ್ರವು 5 ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ, ಪಂಚವಟಿ ಎಂದರೆ 5 ವಿಶಾಲವಾದ ಆಲಯ ಮರವಾಗಿದೆ. ಈ ವಿಶಾಲವಾದ ಐದು ಆಲದ ಮರಗಳು ಇಂದಿಗೂ ಸೀತಾ ಗುಹೆಯ ಸಮೀಪದಲ್ಲೇ ಇದೆ. ಒಂದು ಆಲದ ಮರವು ಸೀತಾ ಗುಹೆಯ ಎದುರಲ್ಲೇ ಇದೆ.

ಸೀತಾ ಗುಹೆ ಅಥವಾ ಸೀತಾ ಮಂದಿರವು ಬಹಳ ಸಣ್ಣದಾಗಿದೆ
PC:youtube
ನೀವು ಬಹಳ ಸುಲಭವಾಗಿ ಈ ಮಂದಿರವನ್ನು ಕಂಡುಹಿಡಿಯಬಹುದು. ಇದು ದೊಡ್ಡದಾಗಿ ಇಲ್ಲ ಆದರೂ ಆಧ್ಯಾತ್ಮಕವಾಗಿ ಪರಿಪೂರ್ಣವಾಗಿದೆ. ಸೀತೆಯು ಇಲ್ಲಿ ವನವಾಸದ ಸಂದರ್ಭದಲ್ಲಿ ತಪಸ್ಸು, ಆರಾಧನೆಯನ್ನು ಮಾಡಿದ್ದಳು ಎನ್ನಲಾಗುತ್ತದೆ. ಹಾಗಾಗಿ ಈ ಸ್ಥಳವು ನಿಮಗೆ ಆಧ್ಯಾತ್ಮಿಕ ಭಾವನೆಯನ್ನು ಮೂಡಿಸುತ್ತದೆ. ಜೊತೆಗೆ ನಿಮ್ಮ ಮನಸ್ಸಿನಲ್ಲಿ ಒಂದು ರೀತಿಯ ಭಕ್ತಿ , ಪ್ರೀತಿಯನ್ನು ತುಂಬುತ್ತದೆ.

ಒಳಗೆ ಹೋಗಲು ಒಂದು ಗಂಟೆ ಬೇಕು
ಈ ಸೀತಾ ಗುಹೆಯು ನಾಸಿಕ್‌ನಲ್ಲಿ ಪಂಚವಟಿ ಕ್ಷೇತ್ರದ ಒಳಗೇ ಬರುತ್ತದೆ. ಈ ಗುಹೆಯೊಳಗೆ ಹೋಗಲು ಸುಮಾರು 20 ನಿಮಿಷದಿಂದ ಒಂದು ಗಂಟೆಗಳೇ ಬೇಕಾಗುತ್ತದೆ. ನೀವು ಈ ಗುಹೆಯೊಳಗೆ ಹೋಗಬೇಕಾದರೆ ಕೆಳಗೆ ಬಗ್ಗಿಕೊಂಡೇ ಹೋಗಬೇಕು, ನಿಮಗೆ ಸರಿಯಾದ ಮೇಲ್ಛಾವಣಿ ಸಿಗುವುದಿಲ್ಲ. ಒಂದು ಮೇಲೆ ಒಂದು ಕೆಳಗೆ ಸಿಗುತ್ತದೆ. ಎಲ್ಲೂ ಸಮತಟ್ಟಾದ ಸ್ಥಳಗಳು ಸಿಗುವುದಿಲ್ಲ.

ಮೂರು ಫೀಟ್ ಎತ್ತರದ ಗುಹೆ
ಒಳಕ್ಕೆ ಹೋಗುತ್ತಿದ್ದಂತೆ ಗುಹೆ ಇನ್ನಷ್ಟು ಸಣ್ಣದಾಗುತ್ತಾ ಹೋಗುತ್ತದೆ. ಒಳಕ್ಕೆ ಹೋಗುತ್ತಿದ್ದಂತೆ ಉಸಿರಾಡಲು ಸ್ವಲ್ಪ ಕಷ್ಟವಾಗುತ್ತದೆ. ದಪ್ಪಗಿರುವವರು ಈ ಗುಹೆಯೊಳಗೆ ಹೋಗಲು ಸಾಧ್ಯವಾಗೋದಿಲ್ಲ. ಹೆಚ್ಚಾಗಿ ಜನರು ಈ ಗುಹೆಯೊಳಗೆ ಕುಳಿತುಕೊಂಡು ಹೋಗುತ್ತಾರೆ. 2.5 ರಿಂದ ಮೂರು ಫೀಟ್ ಎತ್ತರದಲ್ಲಿದೆ ಈ ಗುಹೆ. ರಾವಣನು ಸೀತೆಯನ್ನು ಅಪಹರಿಸಿದ್ದು ಇಲ್ಲಿಂದಲೇ ಎನ್ನಲಾಗುತ್ತದೆ.

ರಾಮ, ಲಕ್ಷಣ, ಸೀತೆಯ ವಿಗ್ರಹವಿದೆ
ಈ ಗುಹೆಯೊಳಗೆ ನೋಡಲು ಬರೀ ಒಂದೆರಡು ನಿಮಿಷಗಳೇ ಸಾಕು. ಗುಹೆಯೊಳಗೆ ಎರಡು ಸಣ್ಣ ಸ್ಥಳಗಳಿವೆ, ಒಂದು ಕೋಣೆಯಲ್ಲಿ ರಾಮ, ಲಕ್ಷಣ ಹಾಗೂ ಸೀತಾ ದೇವಿಯ ಮೂರ್ತಿಗಳಿವೆ, ಇನ್ನೊಂದು ಕೋಣೆಯಲ್ಲಿ ಶಿವಲಿಂಗವಿದೆ. ಅವುಗಳನ್ನು ನೋಡಿದ ನಂತರ ನೀವು ಗುಹೆಯೊಳಗಿನಿಂದ ಹೊರಗೆ ಬರಬೇಕು. ಈ ಪರಿಸರದಲ್ಲಿ ಫೋಟೋಗ್ರಾಫಿಯನ್ನು ನಿಷೇಧಿಸಲಾಗಿದೆ. ಹಾಗಾಗಿ ನೀವು ಕ್ಯಾಮೆರಾವನ್ನೂ ಮುಟ್ಟುವಂತಿಲ್ಲ.

ಅರವತ್ತು ರೂ.ಗೆ ಊಟದ ವ್ಯವಸ್ಥೆ
ಈ ಸ್ಥಳಕ್ಕೆ ಇನ್ನಷ್ಟು ಸುರಕ್ಷತೆಯ ಅವಶ್ಯಕತೆ ಇದೆ. ಇಲ್ಲಿ ಗುಹೆಯೊಳಗೆ ಹೋಗುವಾಗ ನಿಮ್ಮ ಪಾದರಕ್ಷೆಯನ್ನು ಹೊರಗೆ ಬಿಟ್ಟು ಹೋಗಲು ಯಾವುದೇ ವ್ಯವಸ್ಥಿತ ಸ್ಥಳಗಳಿಲ್ಲ. ಹಾಗಾಗಿ ನೀವು ಚಪ್ಪಲಿಯನ್ನು ಹೊರಗೆ ಬಿಟ್ಟು ಹೋಗಬೇಕು. ಇನ್ನು ಈ ಗುಹೆಯ ಹಿಂಬದಿಯಲ್ಲಿ 60ರೂ.ಗೆ ಊಟದ ವ್ಯವಸ್ಥೆ ಇದೆ.

ಪಂಚವಟಿ ಗುಹೆ
ಲಕ್ಷಣನು ಶೂರ್ಪನಕಳ ಮೂಗನ್ನು ಮುರಿದಾಗ ಹತ್ತು ಸಾವಿರ ರಾಕ್ಷಸರು ರಾಮ ಹಾಗೂ ಲಕ್ಷಣರಲ್ಲಿ ಯುದ್ಧಕ್ಕೆ ಬಂದರು. ಆ ಸಮಯದಲ್ಲಿ ಪಂಚವಟಿ ಒಂದು ಕಾಡಾಗಿತ್ತು. ಅದಕ್ಕಾಗಿ ಸೀತೆ, ರಾಮ, ಲಕ್ಷಣರು ತಾವು ಅಡಗಿಕೊಳ್ಳಲು ಈ ಗುಹೆಯನ್ನು ಮಾಡಿದರು. ಈ ಸ್ಥಳವನ್ನು ಕಂಡು ಹಿಡಿಯುವ ಸಲುವಾಗಿ ಸುತ್ತಲೂ ಐದು ಆಲದ ಮರವನ್ನು ನೆಟ್ಟರು.