Search
  • Follow NativePlanet
Share
» »ಈ ಶ್ರಾವಣ ಮಾಸದಲ್ಲಿ ಮುಂಬೈನಲ್ಲಿ ಭೇಟಿ ನೀಡಬಹುದಾದ ಶಿವ ದೇವಾಲಯಗಳು

ಈ ಶ್ರಾವಣ ಮಾಸದಲ್ಲಿ ಮುಂಬೈನಲ್ಲಿ ಭೇಟಿ ನೀಡಬಹುದಾದ ಶಿವ ದೇವಾಲಯಗಳು

ಕನಸುಗಳ ನಗರವೂ ಹಾಗೂ ಭಾರತದ ವಾಣಿಜ್ಯ ರಾಜಧಾನಿ ಎನಿಸಿರುವ ಮುಂಬೈ ಅನೇಕ ಪ್ರವಾಸಿ ತಾಣಗಳಿಗೂ ನೆಲೆಯಾಗಿದೆ. ಜಗತ್ತಿನಾದ್ಯಂತ ಜನರು ಈ ಸುಂದರವಾದ ನಗರಕ್ಕೆ ಭೇಟಿ ನೀಡಬಯಸುತ್ತಾರೆ. ಇದು ಐತಿಹಾಸಿಕ ಸ್ಮಾರಕಗಳು ಮತ್ತು ಧಾರ್ಮಿಕ ತಾಣಗಳಿಂದ ಬೀಚ್ ಗಳವರೆಗೆ ಇಲ್ಲಿ ನಿಮ್ಮ ಆಸೆಗಳನ್ನು ತೃಪ್ತಿ ಪಡಿಸುವ ಎಲ್ಲಾ ವಿಷಯವನ್ನು ಹೊಂದಿದೆ.

ಆದುದರಿಂದ ಈ ಶ್ರಾವಣ ಮಾಸದಲ್ಲಿ, ನೀವು ಧಾರ್ಮಿಕ ತಾಣಗಳಿಗೆ ಭೇಟಿ ನೀಡಲು ನೋಡುತ್ತಿದ್ದು ಮತ್ತು ಶಿವ ದೇವರನ್ನು ಪೂಜಿಸಲು ಇಚ್ಚಿಸುತ್ತಿದ್ದಲ್ಲಿ ಮುಂಬೈನಲ್ಲಿರುವ ಈ ಕೆಳಗಿನ ದೇವಾಲಯಗಳು ನಿಮಗೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಈ ದೇವಾಲಯಗಳ ಬಗ್ಗೆ ಅವುಗಳ ಸ್ಥಳ ಮತ್ತು ಐತಿಹಾಸಿಕ ಮಹತ್ವದ ಬಗ್ಗೆ ತಿಳಿದುಕೊಳ್ಳಿ.

ಬಾಬುಲ್ ನಾಥ್ ದೇವಾಲಯ

ಬಾಬುಲ್ ನಾಥ್ ದೇವಾಲಯ

Rangakuvara

ಮುಂಬೈನಲ್ಲಿ ಶಿವ ದೇವಾಲಯವಿದ್ದು ಅದಕ್ಕೆ ಯಾವುದೇ ಪರಿಚಯದ ಅವಶ್ಯಕತೆ ಇಲ್ಲದೆ ಮತ್ತು ರಾಜ್ಯದ್ಯಂತ ಜನಪ್ರಿಯವಾದುದೆಂದರೆ ಅದುವೇ ಬಾಬುಲ್ ನಾಥ್ ದೇವಾಲಯ. ಈ ದೇವಾಲಯವು ಕೇವಲ ಧಾರ್ಮಿಕ ಮಹತ್ವಕ್ಕೆ ಮಾತ್ರ ಹೆಸರುವಾಸಿಯಾದುದಲ್ಲದೆ ಇದರ ಐತಿಹಾಸಿಕ ಮಹತ್ವದಿಂದಾಗಿಯೂ ಪ್ರಸಿದ್ದಿ ಪಡೆದಿದೆ. ಆದುದರಿಂದ ಇದು ಇತಿಹಾಸ ಪ್ರಿಯರು ಮತ್ತು ಹಿಂದೂ ಭಕ್ತರಿಂದ ಭೇಟಿ ನೀಡಲ್ಪಡುತ್ತದೆ.

ಈ ಬಾಬುಲ್ ನಾಥ್ ದೇವಾಲಯವು 800 ವರ್ಷಗಳಿಗಿಂತಲೂ ಹಳೆಯದಾದುದು ಎಂದು ನಿಮಗೆ ತಿಳಿದಿದೆಯೇ? ಹೌದು, ಇದು ದೀರ್ಘ ಪ್ರಯಾಣವನ್ನು ಒಳಗೊಂಡಿದೆ. ಈ ದೇವಾಲಯವು ಸಣ್ಣ ಗುಡ್ಡದ ಮೇಲೆ ಇದ್ದು ಬಾಬುಲ್ ಮರದ ರೂಪದಲ್ಲಿರುವ ಶಿವ ದೇವರಿಗೆ ಅರ್ಪಿತವಾದುದಾಗಿದೆ. ಇಲ್ಲಿಯ ಸ್ಥಳೀಯ ದಂತ ಕಥೆಗಳ ಪ್ರಕಾರ ಈ ದೇವಾಲಯವು 12ನೇ ಶತಮಾನದಲ್ಲಿ ನಿರ್ಮಿತವಾದುದಾಗಿದೆ ಎಂದು ಹೇಳಲಾಗುತ್ತದೆ.

ಕೆಲವು ಅರಿಯದೇ ಇರುವ ಕಾರಣಗಳಿಂದಾಗಿ ಇದು ಸಮಾಧಿಯಾಯಿತೆನ್ನಲಾಗುತ್ತದೆ ಹೀಗೆ ಇದು ಗತಗಾಲದ ಪುಟಕ್ಕೆ ಸೇರ್ಪಡೆಯಾಯಿತು. ಕೆಲವು ದಶಕಗಳ ನಂತರ ಈ ದೇವಾಲಯದ ಪ್ರತಿಮೆಗಳು ಸ್ಥಳೀಯರಿಂದ ಪುನ: ಪತ್ತೆ ಹಚ್ಚಲ್ಪಟ್ಟಿದ್ದು ಮತ್ತೊಮ್ಮೆ ದೇವಾಲಯವನ್ನು ನಿರ್ಮಿಸಲಾಯಿತು . ಇಂದು ಈ ದೇವಾಲಯವು ಈ ರಾಜ್ಯದ ಅತ್ಯಂತ ಹೆಚು ಜನಪ್ರಿಯ ದೇವಾಲಯಗಳಲ್ಲೊಂದಾಗಿದ್ದು ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತರಿಂದ ಭೇಟಿ ನೀಡಲ್ಪಡುತ್ತದೆ.

ವಾಲ್ಕೇಶ್ವರ ದೇವಾಲಯ

ವಾಲ್ಕೇಶ್ವರ ದೇವಾಲಯ

Drshenoy

ಮುಂಬೈನ ಕರಾವಳಿ ಪ್ರಾಂತ್ಯದಲ್ಲಿ ಹಾಗೂ ಬಾಬುಲ್ ನಾಥ ದೇವಾಲಯದಿಂದ 1.5 ಕಿ.ಮೀ ಅಂತರದಲ್ಲಿದೆ. ವಾಲ್ಕೇಶ್ವರ ದೇವಾಲಯದ ಹತ್ತಿರ ಬಾನ್ ಗಂಗಾ ಟ್ಯಾಂಕ್ ಇರುವುದರಿಂದ ಈ ದೇವಾಲಯವನ್ನು ಬಾನ್ ಗಂಗಾ ದೇವಾಲಯವೆಂದೂ ಕರೆಯಲ್ಪಡುತ್ತದೆ. ಈ ದೇವಾಲಯವು ಶಿವ ದೇವರಿಗೆ ಅರ್ಪಿತವಾದುದಾಗಿದ್ದು ಈ ಪ್ರಾಂತ್ಯದಲ್ಲಿಯ ಹೆಚ್ಚು ಭೇಟಿ ನೀಡಲ್ಪಡುವ ದೇವಾಲಯಗಳಲ್ಲೊಂದಾಗಿದೆ.

ಹಿಂದೂ ಪುರಾಣಗಳ ಪ್ರಕಾರ ಶ್ರೀಲಂಕಾಗೆ ಹೋಗುವ ಸಮಯದಲ್ಲಿ ರಾಮ ದೇವರು ಈ ಸ್ಥಳದಲ್ಲಿ ನೆಲೆಸಿದ್ದರು ಎಂದು ಹೇಳಲಾಗುತ್ತದೆ ಆದುದರಿಂದ ಈ ದೇವಾಲಯವನ್ನು ಹಿಂದೂ ಧರ್ಮದವರಿಗೆ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇದನ್ನು 12ನೇ ಶತಮಾನದಲ್ಲಿ ಸಿಲ್ಹಾರಾ ಸಾಮ್ರಾಜದ ಆಡಳಿತದಲ್ಲಿಯ ಒಬ್ಬ ಬ್ರಾಹ್ಮಣ ವ್ಯಕ್ತಿಯಿಂದ ನಿರ್ಮಿಸಲ್ಪಟ್ಟಿತು.

ಈ ದೇವಾಲಯವು ಕೆಡವಲ್ಪಟ್ಟು ಮತ್ತು ಪುನ: ನಿರ್ಮಾಣಕ್ಕೆ ಅನೇಕ ಬಾರಿ ಒಳಪಟ್ಟಿದ್ದರೂ ಕೂಡ ಇದರ ಅದರ ಒಟ್ಟಾರೆ ಸೌಂದರ್ಯ ಇನ್ನೂ ಅಸ್ಥಿತ್ವದಲ್ಲಿದೆ. ಇದರ ಗಡಿಯೊಳಗೆ ನೀವು ಒಮ್ಮೆ ಇದ್ದಲ್ಲಿ ನೀವು ಇಲ್ಲಿಯ ಭಕ್ತಿಪರವಶತೆ ಮತ್ತು ಶಾಂತಿಯುತ ವಾತಾವರಣದ ಸಾರವನ್ನು ಅನುಭವಿಸಬಹುದಾಗಿದೆ. ಇಂತಹ ಸೌಂದರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಬಯಸುವುದಿಲ್ಲವೆ?

ಅಂಬರೇಶ್ವರ್ ಶಿವ ದೇವಾಲಯ

ಅಂಬರೇಶ್ವರ್ ಶಿವ ದೇವಾಲಯ

Akshay Vijay Nachankar

ಈ ಪ್ರದೇಶದಲ್ಲಿರುವ ಕೆಲವೇ ಕೆಲವು ಹಳೆಯ ದೇವಾಲಯಗಳಲ್ಲಿ ಒಂದಾಗಿದ್ದು ಇನ್ನೂ ಅಸ್ತಿತ್ವದಲ್ಲಿರುವ ದೇವಾಲಯಗಳಲ್ಲೊಂದಾಗಿರುವ ಅಂಬರೇಶ್ವರ ಶಿವ ದೇವಾಲಯವು 11ನೇ ಶತಮಾನದಲ್ಲಿ ಸಿಲ್ಹಾರಾ ಸಾಮ್ರ್ಯಾಜ್ಯದ ದೊರೆ ಚಿತ್ತರಾಜ ನಿಂದ ನಿರ್ಮಿಸಲ್ಪಟ್ಟಿತು. ಆದರೂ ಇಲ್ಲಿಯ ಸ್ಥಳೀಯ ದಂತಕಥೆಗಳ ಪ್ರಕಾರ ಪಾಂಡವರು ತಮ್ಮ ಗಡಿಪಾರಾದ ಸಂದರ್ಭದಲ್ಲಿ ತಮಗೆ ಆಶ್ರಯಕ್ಕಾಗಿ ರಾತ್ರಿ ಬೆಳಗಾಗುವುದರೊಳಗೆ ಈ ದೇವಾಲಯವನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ.

ಅವರು ಇಲ್ಲಿ ಕೇವಲ ಒಂದೇ ರಾತ್ರಿ ತಂಗಿದ್ದರಿಂದ ಈ ದೇವಾಲಯವನ್ನು ಪೂರ್ಣ ಮಾಡಲು ಸಾಧ್ಯವಾಗಿಲ್ಲ ಮತ್ತು ಇದರ ಛಾವಣಿಯು ಇನ್ನೂ ನಿರ್ಮಿಸಲ್ಪಡದೇ ಅಪೂರ್ಣವಾಗಿರುವುದು ಇಂದಿಗೂ ಕಂಡುಬರುತ್ತದೆ. ಇದರ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ಕಾರಣದಿಂದಾಗಿ ಇದು ಹಿಂದೂ ಭಕ್ತರು ಮತ್ತು ಇತಿಹಾಸ ಪ್ರಿಯರಿಂದಲೂ ಭೇಟಿ ನೀಡಲ್ಪಡುತ್ತದೆ .

ಈ ದೇವಾಲಯವು ವಾಸ್ತು ಶಿಲ್ಪ ಉತ್ಸಾಹಿಗಳಲ್ಲಿಯೂ ಪ್ರಸಿದ್ದಿಯನ್ನು ಪಡೆದಿದೆ. ನೀವು ಶಿವ ಭಕ್ತರ ಜನಸಂದಣಿಯನ್ನು ಮತ್ತು ಶಿವದೇವರ ಅನುಯಾಯಿಗಳನ್ನು ನೋಡಲು ಬಯಸುವುದಾದರೆ ಈ ಶತಮಾನಗಳಷ್ಟು ಹಳೆಯ ದೇವಾಲಯವನ್ನು ಈ ಶ್ರಾವಣ ಮಾಸದಲ್ಲಿ ಭೇಟಿ ಕೊಡಲೇ ಬೇಕು. ಇಲ್ಲಿ ಆಚರಿಸಲಾಗುವ ಹಬ್ಬಗಳಲ್ಲಿ ಶಿವರಾತ್ರಿ ಹಬ್ಬವೂ ಸೇರಿದೆ. ಆದುದರಿಂದ ನೀವು ಈ ಅನನ್ಯ ಸೌಂದರ್ಯತೆಯನ್ನು ಭೇಟಿ ನೀಡುವುದರ ಬಗ್ಗೆ ಇನ್ನೂ ಯೋಚಿಸುತ್ತಿರುವಿರಾ?

ಎಲಿಫೆಂಟಾ ಕೇವ್ಸ್(ಗುಹೆಗಳು)

ಎಲಿಫೆಂಟಾ ಕೇವ್ಸ್(ಗುಹೆಗಳು)

Philip Larson

ಎಲಿಫೆಂಟಾ ದ್ವೀಪದಲ್ಲಿ ನೆಲೆಸಿರುವ ಎಲೆಫೆಂಟಾ ಕೇವ್ಸ್ ಶಿವದೇವರಿಗೆ ಅರ್ಪಿತವಾದ ಒಂದು ಗುಹಾಂತರ ದೇವಾಲಯಗಳ ಸಂಕೀರ್ಣವಾಗಿದೆ. ಆದುದರಿಂದ ಇದು ಶೈವ ಪಂಥದವರಲ್ಲಿ ಪವಿತ್ರವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇತಿಹಾಸದ ದಾಖಲೆಗಳ ಪ್ರಕಾರ ಈ ದೇವಾಲಯಗಳು ಸಾಮಾನ್ಯ ಯುಗಗಳಿಗೂ ಮುಂಚಿತವಾಗಿ ನಿರ್ಮಿತವಾದುದಾಗಿವೆ. ಇಂದು ಇದು ಐತಿಹಾಸಿಕ, ವಾಸ್ತುಶಿಲ್ಪ ಮತ್ತು ಧಾರ್ಮಿಕ ಮಹತ್ವಕ್ಕಾಗಿ ಪ್ರಸಿದ್ದಿಯನ್ನು ಪಡೆದಿದೆ.

ಆದುದರಿಂದಾಗಿ ಇದನ್ನು ಯುನೆಸ್ಕೊದ ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. ನೀವು ಹಳೆಯ ಕಾಲದ ಸುಂದರವಾಗಿ ಕೆತ್ತಲಾದ ಸ್ಮಾರಕಗಳು ಮತ್ತು ಪ್ರತಿಮೆಗಳ ಮಧ್ಯೆ ಕಳೆದು ಹೋಗ ಬಯಸಿದಲ್ಲಿ ಈ ಮುಂಬೈನಲ್ಲಿರುವ ಎಲಿಫೆಂಟಾ ಗುಹೆ ನಿಮಗೆ ಭೇಟಿ ಕೊಡಲು ಸೂಕ್ತವಾದ ಸ್ಥಳ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಲ್ಲದೆ ನೀವು ಇಂತಹ ಸುಂದರವಾದ ಸ್ಮಾರಕಗಳನ್ನು ಮುಂಬೈನಲ್ಲಿ ಎಲ್ಲಿಯೂ ನೋಡಲು ಸಾಧ್ಯವೇ ಇಲ್ಲ. ಇಲ್ಲಿ ನೀವು ಶಿವ ದೇವರಿಗೆ ಮತ್ತು ಹಿಂದೂ ಪುರಾಣಗಳಿಗೆ ಸಂಬಂಧಿಸಿದ ಅನೇಕ ಶಿಲ್ಪಗಳನ್ನು ನೋಡಬಹುದಾಗಿದೆ. ಇವುಗಳ ಭವ್ಯ ಸೌಂದರ್ಯತೆ ಮತ್ತು ಅವುಗಳ ವೈಭವನ್ನು ಪರಿಶೀಲಿಸಲು ನೀವು ಇಷ್ಟ ಪಡುವುದಿಲ್ಲವೆ? ಹೌದು ಎಂದಾದಲ್ಲಿ ಎಲಿಫೆಂಟಾ ಕೇವ್ಸ ಈ ವಾರಾಂತ್ಯದಲ್ಲಿ ನಿಮ್ಮ ಭೇಟಿ ಕೊಡುವ ತಾಣವಾಗಿರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more