Search
  • Follow NativePlanet
Share
» »ಸಮುದ್ರಾಳದಲ್ಲಿ ವಿಹರಿಸಬಹುದಾದ ಸ್ಥಳಗಳು

ಸಮುದ್ರಾಳದಲ್ಲಿ ವಿಹರಿಸಬಹುದಾದ ಸ್ಥಳಗಳು

ಭಾರತದ ಕೊಂಕಣ ಪ್ರದೇಶ, ಲಕ್ಷದ್ವೀಪ ಹಾಗು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು ಸಮುದ್ರಾಳದಲ್ಲಿ ವಿಹರಿಸುತ್ತ ಬೆರಗುಗೊಳಿಸುವ ಸಮುದ್ರ ಜೀವಿಗಳ ಲೋಕವನ್ನು ಕಣ್ತುಂಬಿಕೊಳ್ಳಲು ಆದರ್ಶಮಯವಾದ ಸಮುದ್ರ ಭಾಗಗಳನ್ನು ಹೊಂದಿರುವ ಪ್ರವಾಸಿ ತಾಣಗಳಾಗಿವೆ. ಸ್ನೊರ್ಕೆಲಿಂಗ್, ಸ್ಕೂಬಾ ಡೈವಿಂಗ್ ನಂತಹ ಸಾಹಸಮಯ ಜಲ ಚಟುವಟಿಕೆಗಳನ್ನು ಈ ಸ್ಥಳಗಳಲ್ಲಿ ಉತ್ತಮವಾಗಿ ಮಾಡಬಹುದಾಗಿದೆ. ಭಾರತೀಯರಲ್ಲದೆ, ವಿದೇಶಿಯರಿಂದಲೂ ಸಹ ಹೆಚ್ಚಾಗಿ ಈ ಸ್ಥಳಗಳು ಭೇಟಿ ನೀಡಲ್ಪಡುತ್ತವೆ.

ಸ್ಕೂಬಾ ಡೈವಿಂಗ್, ಸ್ನೊರ್ಕೆಲಿಂಗ್ ಮುಂತಾದ ಸಾಹಸಮಯ ಜಲ ಚಟುವಟಿಕೆಗಳು ಹಲವು ಇತರೆ ದೇಶಗಳಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದರೂ ಭಾರತದಲ್ಲಿ ಕ್ರಮೇಣವಾಗಿ ಇದರ ಜನಪ್ರಿಯತೆಯು ಬೆಳೆಯುತ್ತಿದೆ. ಟಿವಿ ಅಥವಾ ಸಿನೆಮಾ ಪರದೆಯ ಮೂಲಕ ಕಡಲಾಳದ ಜೀವನವನ್ನು ಅನೇಕ ಬಾರಿ ನಾವು ವೀಕ್ಷಿಸುತ್ತೇವೆ. ಆದರೆ ನೈಜವಾಗಿ ಈ ಅನುಭವವನ್ನು ಪಡೆದಾಗ ಆಗುವ ರೋಮಾಂಚನ, ಆನಂದ ಹೇಳತೀರದು. ಈ ಲೇಖನದಲ್ಲಿ ಭಾರತದಲ್ಲಿ ಕಡಲಾಳದ ಭವ್ಯ ಲೋಕವನ್ನು ವೀಕ್ಷಿಸಬಹುದಾದ ಅಂತಹ ಕೆಲವು ಸಮುದ್ರ ಭಾಗಗಳ ಪರಿಚಯ ನೀಡಲಾಗಿದೆ. ಈ ರೀತಿಯ ಅನುಭವ ಪಡೆಯಲು ನಿಮಗಿಷ್ಟವಿದ್ದಲ್ಲಿ ಈ ಕೆಳಗೆ ತಿಳಿಸಲಾಗಿರುವ ಸ್ಥಳಗಳಿಗೆ ತೆರಳಿ ಉತ್ತಮವಾದ ಅನುಭವ ಪಡೆಯಬಹುದು.

ಗ್ರ್ಯಾಂಡ್ ಐಲ್ಯಾಂಡ್, ಗೋವಾ

ಗ್ರ್ಯಾಂಡ್ ಐಲ್ಯಾಂಡ್, ಗೋವಾ

ಗೋವಾದಲ್ಲಿರುವ ಗ್ರ್ಯಾಂಡ್ ಐಲ್ಯಾಂಡ್ ಸ್ಕೂಬಾ ಡೈವ್ ಮಾಡಲು ಯೋಗ್ಯವಾದ ಸ್ಥಳವಾಗಿದೆ. ಅಷ್ಟೆ ಅಲ್ಲ, ಗೋವಾದಲ್ಲಿಯೆ ಭಾರತದ ಪ್ರಥಮ ಸೀ ಡೈವಿಂಗ್ ಸ್ಕೂಲ್ ತೆರೆಯಲ್ಪಟ್ಟಿದೆ. ದಕ್ಷಿಣ ಗೋವಾ ಭಾಗದಲ್ಲಿರುವ ಈ ಸ್ಥಳದ ಪ್ರಮುಖ ಆಕರ್ಷಣೆಗಳು ಶ್ರೀಮಂತ ಜಲ ಜೀವ ಸಂಪತ್ತು, ಹಡಗಿನ ಅವಶೇಷ ಹಾಗು ಹವಳದ ದಿಬ್ಬಗಳು. ಸುಮಾರು ಐದು ಮೀ ಸಮುದ್ರದಾಳದವರೆಗೆ ನೀರು ಪಾರದರ್ಶಕವಾಗಿದ್ದು ಸ್ಪಷ್ಟವಾಗಿ ವೀಕ್ಷಿಸಬಹುದಾಗಿದೆ.

ಚಿತ್ರಕೃಪೆ: Andre Engels

ಹ್ಯಾವ್ಲಾಕ್ ದ್ವೀಪ, ಅಂಡಮಾನ್

ಹ್ಯಾವ್ಲಾಕ್ ದ್ವೀಪ, ಅಂಡಮಾನ್

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ, ಅಂಡಮಾನ್ ಪ್ರದೇಶದಲ್ಲಿರುವ ಹ್ಯಾವ್ಲಾಕ್ ದ್ವೀಪವು ಸ್ಕೂಬಾ ಡೈವಿಂಗ್ ಗೆ ಅತ್ಯಂತ ಹೆಸರುವಾಸಿಯಾಗಿದೆ. ಹವಳದ ದಿಬ್ಬಗಳು, ವಿವಿಧ ಸಮುದ್ರ ಜೀವ ಜಂತುಗಳು, ಬಣ್ಣ ಬಣ್ಣದ ಮೀನುಗಳ ನೈಜ ಕ್ರಿಯಾಶೀಲತೆಯನ್ನು ಇಲ್ಲಿ ವೀಕ್ಷಿಸಬಹುದಾಗಿದೆ.

ಚಿತ್ರಕೃಪೆ: Ritiks

ಪಿಜನ್ ದ್ವೀಪ, ಕರ್ನಾಟಕ

ಪಿಜನ್ ದ್ವೀಪ, ಕರ್ನಾಟಕ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ದೇವಾಲಯ ಪಟ್ಟಣ ಮುರುಡೇಶ್ವರದಿಂದ 19 ಕಿ.ಮೀ ದೂರದಲ್ಲಿ ಸ್ಥಿತವಿದೆ ನೇತ್ರಾಣಿ ದ್ವೀಪ. ಇದನ್ನು ಪಿಜನ್ ಐಲ್ಯಾಂಡ್ ಎಂತಲೂ ಕರೆಯಲಾಗುತ್ತದೆ. ಈ ದ್ವೀಪವು ಸ್ಕೂಬಾ ಡೈವಿಂಗ್ ಮಾಡಲು ಕೆಲವು ಉತ್ಕೃಷ್ಟ ಸಮುದ್ರ ಭಾಗವನ್ನು ಹೊಂದಿದೆ. ಇಲ್ಲಿಂದ ಅರೇಬಿಯನ್ ಸಮುದ್ರದಾಳದಲ್ಲಿ ವಿಹರಿಸುತ್ತ ಹವಳದ ದಿಬ್ಬ, ವಿವಿಧ ಚಿತ್ತಾರಗಳ ಮೀನುಗಳು ಹಾಗು ಇತರೆ ಸಮುದ್ರಜೀವಿಗಳ ವಿಹಂಗಮ ನೋಟವನ್ನು ಸವಿಯಬಹುದು. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: John Brooks

ಬಂಗಾರಂ ದ್ವೀಪ, ಲಕ್ಷದ್ವೀಪ

ಬಂಗಾರಂ ದ್ವೀಪ, ಲಕ್ಷದ್ವೀಪ

ಲಕ್ಷದ್ವೀಪದಲ್ಲಿರುವ ಬಂಗಾರಂ ದ್ವೀಪವು ಸ್ಕೂಬಾ ಡೈವಿಂಗ್‍ಗೆ ಒಂದು ಉತ್ತಮವಾದ ಸ್ಥಳವಾಗಿದೆ. ಅಗತ್ತಿ ದ್ವೀಪದ ಈಶಾನ್ಯ ಭಾಗದಿಂದ ಏಳು ಕಿ.ಮೀ ದೂರದಲ್ಲಿರುವ ಈ ದ್ವೀಪವು ಕೇರಳದ ಕೊಚ್ಚಿಯಿಂದ ಸುಮಾರು 400 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Thejas

ಮಾಲ್ವಾನ್, ಮಹಾರಾಷ್ಟ್ರ

ಮಾಲ್ವಾನ್, ಮಹಾರಾಷ್ಟ್ರ

ಐತಿಹಾಸಿಕವಾಗಿಯೂ ಮಹತ್ವವಾಗಿರುವ ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆಯ ಮಾಲ್ವಾನ್ ಪಟ್ಟಣವು ಒಂದು ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಇಲ್ಲಿನ ತರ್ಕರ್ಲಿ ಕಡಲ ತೀರವು ಸಮುದ್ರದಾಳದ ಲೋಕದ ವಿಹಂಗಮ ನೋಟವನ್ನು ವೀಕ್ಷಿಸಲು ಮಹಾರಾಷ್ಟ್ರದ ಏಕೈಕ ಪ್ರದೇಶವಾಗಿದೆ.

ಚಿತ್ರಕೃಪೆ: maharashtratourism

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X