Search
  • Follow NativePlanet
Share
» »ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳ ಕಾಲ ನೀರಿನಲ್ಲಿಯೇ ಇರುವ ದೇವಾಲಯ ಎಲ್ಲಿದೆ ಗೊತ್ತ? ಒಂದು ಕಾಲದಲ್ಲಿ ಮುನಿಗಳಿಗೆ ಆಶ್ರಯ ನೀಡಿದ ಈ ದೇವಾಲಯ ವರ್ಷದಲ್ಲಿ 8 ತಿಂಗಳ ಕಾಲ ನೀರಿನಲ್ಲಿಯೇ ಇದ್ದು, ನಾಲ್ಕು ತಿಂಗಳು ಮಾತ್ರ ಭಕ್ತರಿಗೆ ದರ್ಶನವನ್ನು ನೀಡುತ್ತದೆ. ಹಾಗಾದರೆ ಈ ದೇವಾಲಯ ಎಲ್ಲಿದೆ? ಅಷ್ಟು ತಿಂಗಳ ಕಾಲ ನೀರಿನಲ್ಲಿ ಇರುವುದಾದರೂ ಏಕೆ?.

ಇದು ನಮ್ಮ ಪಕ್ಕದ ರಾಜ್ಯವಾದ ಆಂಧ್ರ ಪ್ರದೇಶದಲ್ಲಿನ ಕರ್ನೂಲ್ ನಗರದಲ್ಲಿದೆ. 1953 ರಿಂದ 1956 ರವರೆಗೆ ಕರ್ನೂಲ್ ಆಂಧ್ರ ಪ್ರದೇಶ ರಾಜ್ಯಕ್ಕೆ ರಾಜಧಾನಿಯಾಗಿತ್ತು. ಕರ್ನೂಲ್ ನಗರ ತುಂಗಭದ್ರಾ ನದಿಯ ತೀರದ ದಕ್ಷಿಣದ ದಿಕ್ಕಿಗೆ ಇದೆ. ಕರ್ನೂಲ್ ಅತಿ ದೊಡ್ಡ ಜಿಲ್ಲೆ. ಇದು ಹೈದ್ರಾಬಾದ್‍ದಿಂದ ಸುಮಾರು 250 ಕಿ.ಮೀ ದೂರದಲ್ಲಿದೆ.

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಚಾರಿತ್ರಿಕ ಸಂಸ್ಕøತಿ, ಸಾಂಪ್ರದಾಯ ಹೊಂದಿರುವ ಈ ಪ್ರದೇಶವು ಒಂದು ಅದ್ಭುತ ಪ್ರವಾಸಿ ಕೇಂದ್ರವಾಗಿದೆ. ಚಾರಿತ್ರಿಕ ವಿವರ ಸಾಹಿತ್ಯ, ಶಾಸನಗಳಲ್ಲಿ ಹೇಳಲಾಗಿದೆ. ಕರ್ನೂಲಿಗೆ ಕೆಲವು ಸಾವಿರ ಚರಿತ್ರೆಯನ್ನು ಹೊಂದಿದೆ. ಕರ್ನೂಲ್‍ನಿಂದ 18 ಕಿ.ಮೀ ದೂರದಲ್ಲಿರುವ ಕೇತವರಂನಲ್ಲಿ ದೊರೆತ ಕಲ್ಲೊಂದು ಪ್ರಾಚೀನ ಕಲ್ಲಿನ ಯುಗದ್ದು ಎಂದು ಗುರುತಿಸಲಾಗಿದೆ.

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

18 ನೇ ಶತಮಾನದಲ್ಲಿ ನವಾಬರು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದರು. ಆ ಕಾಲದಲ್ಲಿ ಪುರಾತನ ಕಟ್ಟಡಗಳು, ದೇವಾಲಯಗಳು, ಚಾರಿತ್ರಿಕ ನಿರ್ಮಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಕರ್ನೂಲ್‍ನಂತಹ ಪ್ರದೇಶವನ್ನು ವಿಸ್ತøತವಾಗಿ ಆನಂದಿಸುತ್ತಾರೆ. ಮಧ್ಯೆ ಯುಗದ ವಿಜಯನಗರ ರಾಜರ ಕಾಲದಲ್ಲಿ ನಿರ್ಮಾಣ ಮಾಡಿದ ಕೋಟೆಗಳೆಲ್ಲಾ ಇಂದು ಶಿಥಿಲಾವಸ್ಥೆಗೆ ಬಂದಿದೆ.

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಕರ್ನೂಲ್ ಜಿಲ್ಲೆಗೆ ಸುಮಾರು 56 ಕಿ.ಮೀ ದೂರದಲ್ಲಿ ಸಂಗಮೇಶ್ವರ ಎಂಬ ಗ್ರಾಮದಲ್ಲಿ ಸಂಗಮೇಶ್ವರಸ್ವಾಮಿಯ ಒಂದು ದೇವಾಲಯವಿದೆ. ಇದು ಅತಿ ಪುರಾತನವಾದ ದೇವಾಲಯವಾಗಿದೆ. ಈ ದೇವಾಲಯವು ಧರ್ಮರಾಜ ಪ್ರತಿಷ್ಟಾಪಿಸಿದನು ಎಂದು ಪುರಾಣವು ಹೇಳುತ್ತದೆ.

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಸಂಗಮೇಶ್ವರ ದೇವಾಲಯವು 7 ನದಿಗಳು ಲೀನವಾಗುವ ಪ್ರದೇಶ. ಹಾಗಾಗಿಯೇ ಈ ಕ್ಷೇತ್ರಕ್ಕೆ ಸಪ್ತನದಿ ಸಂಗಮ ಎಂದು ಕೂಡ ಕರೆಯುತ್ತಾರೆ. ದೇವಾಲಯದ ಪುರಾಣಕ್ಕೆ ಬಂದರೆ ಪೂರ್ವ ಈ ಪ್ರದೇಶದಲ್ಲಿ ದಕ್ಷಯಜ್ಞ ನಡೆಯಿತು ಎಂದು ಆ ಸಮಯದಲ್ಲಿ ದಕ್ಷನು ತನ್ನ ಪತ್ನಿಯನ್ನು ಅವಮಾನ ಮಾಡಿದ್ದರಿಂದ ಆಕೆಯು ಯಜ್ಞದಲ್ಲಿ ಬಿದ್ದು ಮರಣ ಹೊಂದಿದಳು ಎಂಬ ಸ್ಥಳ ಪುರಾಣವು ಹೇಳುತ್ತದೆ.

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಸತಿದೇವಿ ಶರೀರ ಭಸ್ಮವಾದ ಪ್ರದೇಶವಾದ್ದರಿಂದ ಸಂಗಮೇಶ್ವರ ದೇವಾಲಯವು ಪ್ರಸಿದ್ಧಿ ಹೊಂದಿತು. ಆದರೆ ಪಾಂಡವರು ವನವಾಸದ ಸಮಯದಲ್ಲಿ ಧರ್ಮರಾಯನು ಇಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪಿಸಬೇಕು ಎಂದು ನಿರ್ಣಯಿಸಿದನು.

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಆತನ ಆದೇಶದ ಮೇರೆಗೆ ಶಿವಲಿಂಗವನ್ನು ತೆಗೆದುಕೊಂಡು ಬರಲು ಕಾಶಿಗೆ ತೆರಳಿದ ಭೀಮನು ಪ್ರತಿಷ್ಟಾಪನೆ ಮಾಡುವ ಸಮಯಕ್ಕೆ ಶಿವಲಿಂಗವನ್ನು ತೆಗೆದುಕೊಂಡು ಬರಲಾಗಲಿಲ್ಲ. ಹಾಗಾಗಿ ಋಷಿಗಳ ಸೂಚನೆಯ ಮೇರೆಗೆ ದೊಡ್ಡ ಕಲ್ಲನ್ನು ಶಿವಲಿಂಗವಾಗಿ ಮಾರ್ಪಾಟು ಮಾಡಿ ಪ್ರತಿಷ್ಟಾಪನೆಯನ್ನು ಮಾಡಿ ಪೂಜೆಗಳನ್ನು ಮಾಡಿದನು ಧರ್ಮರಾಯ.

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಇದರಿಂದಾಗಿ ಆಗ್ರಹಗೊಂಡ ಭೀಮನು ತಾನು ತಂದ ಶಿವಲಿಂಗವನ್ನು ನದಿಯಲ್ಲಿ ಎಸೆದನು. ಭೀಮನನ್ನು ಶಾಂತಿಗೊಳಿಸುವ ಸಲುವಾಗಿ ಆತನು ತಂದಿದ್ದ ಶಿವಲಿಂಗವನ್ನು ನದಿ ತೀರದಲ್ಲಿ ಪ್ರತಿಷ್ಟಾಪಿಸಿ ಭೀಮಲಿಂಗವಾಗಿ ಅದಕ್ಕೆ ಹೆಸರನ್ನು ಇಟ್ಟನು.

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಭಕ್ತರು ಭೀಮೇಶ್ವರನನ್ನು ದರ್ಶನ ಮಾಡಿಕೊಂಡ ನಂತರವೇ ಸಂಗಮೇಶ್ವರನನ್ನು ದರ್ಶನ ಮಾಡಿಕೊಳ್ಳಬೇಕು ಎಂದು ಸೂಚಿಸಿದ ಹಾಗೆ ಸ್ಥಳ ಪುರಾಣವಿದೆ. ಪ್ರಪಂಚದಲ್ಲಿ 7 ನದಿಗಳು ಒಂದೇ ಸ್ಥಳದಲ್ಲಿ ಸೇರುವ ಏಕೈಕ ಪ್ರದೇಶವೇ ಸಂಗಮೇಶ್ವರ.

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಕರ್ನೂಲ್ ಜಿಲ್ಲೆ ಕೊತ್ತಪಲ್ಲಿ ಮಂಡಲದಲ್ಲಿ ತುಂಗ, ಭದ್ರ, ಕೃಷ್ಣ, ಭೀಮ, ಮಲಪಹಾರಿಣಿ, ಭವನಾಸಿ, ವೇಣಿ ನದಿಗಳು ಸೇರುವ ಪ್ರದೇಶವನ್ನು ಸಂಗಮೇಶ್ವರ ಎಂದು ಕರೆಯುತ್ತಾರೆ. ಈ ನದಿಗಳಲ್ಲಿ ಭವನಾಸಿ ನದಿ ಮಾತ್ರವೇ ಪುರುಷನ ಹೆಸರನ್ನು ಹೊಂದಿರುವ ನದಿಯಾಗಿದೆ. ಉಳಿದ ಎಲ್ಲಾ ನದಿಗಳು ಸ್ತ್ರೀಯರ ಹೆಸರುಗಳಾಗಿವೆ.

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಭವನಾಸಿ ಪೂರ್ವದಿಂದ ಪಶ್ಚಿಮಕ್ಕೆ ಪ್ರವಹಿಸುತ್ತದೆ. ಉಳಿದ ನದಿಗಳೆಲ್ಲಾ ಪಶ್ಚಿಮದಿಂದ ಪೂರ್ವದಿಕ್ಕಿಗೆ ಪ್ರವಹಿಸುತ್ತದೆ. ಈ ನದಿಗಳೆಲ್ಲಾ ಜ್ಯೋತಿರ್‍ಲಿಂಗ, ಅಷ್ಟಾದಶ ಶಕ್ತಿಪೀಠ, ಶ್ರೀಶೈಲ ಪುಣ್ಯಕ್ಷೇತ್ರಗಳನ್ನು ಮುಟ್ಟುತ್ತಾ ಪ್ರವಹಿಸಿ ಕೊನೆಗೆ ಸಮುದ್ರದಲ್ಲಿ ಲೀನವಾಗುತ್ತವೆ.

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಅಷ್ಟು ದೇವಾಲಯದ ಹಾಗೆ ಈ ಕ್ಷೇತ್ರದಲ್ಲಿಯೂ ನಿತ್ಯ ಪೂಜೆಗಳು ನಡೆಯುತ್ತವೆ. ಏಕೆಂದರೆ ಈ ದೇವಾಲಯ ಹೆಚ್ಚುದಿನಗಳ ಕಾಲ ಶ್ರೀ ಶೈಲ ಪ್ರಾಜೆಕ್ಟ್ ನೀರಿನಲ್ಲಿ ಮುಳುಗಿ ಹೋಗುವುದೇ ಪ್ರಧಾನವಾದ ಕಾರಣ. ಮತ್ತೊಂದು ವಿಶೇಷವೆನೆಂದರೆ ಸಾವಿರಾರು ವರ್ಷಗಳ ಹಿಂದೆ ಸಂಗಮೇಶ್ವರ ದೇವಾಲಯವನ್ನು ಪ್ರತಿಷ್ಟಾಪಿಸಿದ ಶಿವಲಿಂಗ ಇಂದಿಗೂ ಭಕ್ತರಿಗೆ ದರ್ಶನವನ್ನು ನೀಡುವುದು ಆಶ್ಚರ್ಯ ಚಕಿತರನ್ನಾಗಿಸುತ್ತದೆ.

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಎಂಟು ತಿಂಗಳು ನೀರಿನಲ್ಲಿಯೇ ಇರುವ ದೇವಾಲಯವಿದು.....

ಒಂದು ಕಾಲದಲ್ಲಿ ಈ ದೇವಾಲಯವು ಕ್ರಮವಾಗಿ ಶಿಥಿಲಾವಸ್ಥೆಗೆ ಬಂದಿತ್ತು. ಪ್ರಸ್ತುತ ಕಾಣಿಸುತ್ತಿರುವ ದೇವಾಲಯವು ಸುಮಾರು 200 ವರ್ಷಗಳ ಹಳೆಯದು. ಇದನ್ನು ಸ್ಥಳೀಯ ಪ್ರಜೆಗಳು ನಿರ್ಮಾಣ ಮಾಡಿದರು. ಸುಮಾರು ಲಕ್ಷ 20.000 ಅಡಿ ವಿಸ್ತೀರ್ಣದಲ್ಲಿ ದೇವಾಲಯದ ಜೊತೆಗೆ ಸುತ್ತ ನಿರ್ಮಾಣ ಮಾಡಿದ ಹಾಗೆ ಅಲ್ಲಿನ ಶಿಥಿಲವನ್ನು ಕಂಡರೆ ಅರ್ಥವಾಗುತ್ತದೆ. ಕೇವಲ 4 ತಿಂಗಳು ಮಾತ್ರವೇ ದರ್ಶನವನ್ನು ನೀಡುವ ಈ ದೇವಾಲಯವನ್ನು ದರ್ಶನ ಮಾಡಲು ಅನೇಕ ಮಂದಿ ಆಸಕ್ತಿ ತೋರಿಸುತ್ತಾರೆ.

ನಲ್ಲಮಲ ಅಡವಿ

ನಲ್ಲಮಲ ಅಡವಿ

ದಕ್ಷಿಣ ಭಾರತದೇಶದಲ್ಲಿನ ಅತಿ ದೊಡ್ಡ ನಿರಂತರ ಅರಣ್ಯ ಪ್ರದೇಶದಲ್ಲಿ ನಲ್ಲಮಲ ಅರಣ್ಯವು ಒಂದು. ಇದು ಪೂರ್ವ ಭಾಗದಲ್ಲಿರುವ ನಲ್ಲಮಲ ಬೆಟ್ಟದ ಮೇಲೆ ಇದೆ. ಇದು ಕರ್ನೂಲ್, ಗುಂಟೂರು, ಕಡಪ, ಮೆಹೆಬೂಬ್ ನಗರ, ಪ್ರಕಾಶ ಈ 5 ಜಿಲ್ಲೆಯಲ್ಲಿ ವಿಸ್ತರಿಸಿದೆ. ಕೆಲವು ವರ್ಷಗಳ ಹಿಂದೆ ಈ ಅರಣ್ಯ ಕ್ರೀಡೆಗಳಿಗೆ ಹೆಸರುವಾಸಿಯಾಯಿತು.

ಭೇಟಿ ನೀಡಲು ಉತ್ತಮ ಸಮಯ

ಭೇಟಿ ನೀಡಲು ಉತ್ತಮ ಸಮಯ

ಮಳೆಗಾಲದ ನಂತರ ಬರುವ ಚಳಿಗಾಲವು ಕರ್ನೂಲ್‍ಗೆ ಭೇಟಿ ನೀಡಲು ಉತ್ತಮವಾದ ಸಮಯವಾಗಿದೆ. ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಇಲ್ಲಿ ವಾತಾವರಣ ಅಹ್ಲಾದಕವಾಗಿ ಇರುತ್ತದೆ. ಈ ಸಮಯದಲ್ಲಿ ಪ್ರವಾಸಿ ಕಾರ್ಯಕ್ರಮಗಳು ಆನಂದಕರವಾಗಿರುತ್ತದೆ.

ಹೇಗೆ ತೆರಳಬೇಕು?

ಹೇಗೆ ತೆರಳಬೇಕು?

ರಸ್ತೆ ಮಾರ್ಗವಾಗಿ
ಬೆಂಗಳುರು, ಚೆನ್ನೈ ನಗರಗಳಿಂದ ಅನೇಕ ಬಸ್ಸುಗಳು ಇರುತ್ತವೆ. ಹೈದ್ರಾಬಾದ್‍ದಿಂದ ಸರ್ಕಾರಿ ಹಾಗು ಖಾಸಗಿ ಬಸ್ಸುಗಳು ಕೂಡ ದೊರೆಯುತ್ತವೆ. ಹೈದ್ರಾಬಾದ್‍ನಿಂದ ಕರ್ನೂಲಿಗೆ ಸೂಕ್ತವಾದ ಬೆಲೆಗೆ ಕ್ಯಾಬ್ ಕೂಡ ಲಭ್ಯವಿದೆ.

ಹೇಗೆ ತೆರಳಬೇಕು?

ಹೇಗೆ ತೆರಳಬೇಕು?

ರೈಲು ಮಾರ್ಗದ ಮೂಲಕ
ಕರ್ನೂಲ್ ಪಟ್ಟಣ, ಆಧೋನಿ, ನಂದ್ಯಾಲ, ಧೋನ್ ಜಂಕ್ಷನ್ ಎಂಬ 4 ರೈಲ್ವೆ ನಿಲ್ದಾಣಗಳು ಇವೆ. ಇವು ಭಾರತ ದೇಶದಲ್ಲಿಯೇ ಎಲ್ಲಾ ಪ್ರಧಾನವಾದ ನಗರಗಳಿಂದ ಸಂಪರ್ಕವನ್ನು ಹೊಂದಿದೆ. ಕರ್ನೂಲಿಗೆ ಸ್ಥಳೀಯ ರೈಲುಗಳು ಕೂಡ ಇವೆ.

ಹೇಗೆ ತೆರಳಬೇಕು?

ಹೇಗೆ ತೆರಳಬೇಕು?

ವಾಯು ಮಾರ್ಗದ ಮೂಲಕ
ಹೈದ್ರಾಬಾದ್‍ನಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಕರ್ನೂಲ್‍ನ ಸಮೀಪದಲ್ಲಿನ ವಿಮಾನ ನಿಲ್ದಾಣವಾಗಿದೆ. ಕರ್ನೂಲ್ ನಗರದಿಂದ ಹೈದ್ರಾಬಾದ್ ವಿಮಾನ ನಿಲ್ದಾಣಕ್ಕೆ ಸುಮಾರು 3 ವರೆ ಅಥವಾ 4 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ವಿಮಾನ ನಿಲ್ದಾಣದಿಂದ ಕರ್ನೂಲ್ ನಗರಕ್ಕೆ ಕ್ಯಾಬ್‍ನ ವ್ಯವಸ್ಥೆ ಕೂಡ ಇದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more