Search
  • Follow NativePlanet
Share
» »ಸಹಸ್ರಕುಂಡ ಜಲಪಾತಕ್ಕೆ ಒಮ್ಮೆ ಹೋದ್ರೆ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ

ಸಹಸ್ರಕುಂಡ ಜಲಪಾತಕ್ಕೆ ಒಮ್ಮೆ ಹೋದ್ರೆ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ

ಮಳೆಗಾಲವು ಅತ್ಯುತ್ತಮ ಕಾಲವಾಗಿದ್ದರೂ ಸಹ ಈ ಜಲಪಾತವು ವರ್ಷದುದ್ದಕ್ಕೂ ಭೇಟಿ ನೀಡಬಹುದು. ಜಲಪಾತವು 50 ಅಡಿ ಎತ್ತರದಿಂದ ಈ ನೀರು ಹರಿಯುತ್ತದೆ.

ಸಹಸ್ರಕುಂಡ ಜಲಪಾತವು ಮಹಾರಾಷ್ಟ್ರದಲ್ಲಿರುವ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತವು ಅದ್ಭುತ ತಾಣವಾಗಿದ್ದು, ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಳೆಗಾಲದಲ್ಲಂತೂ ಈ ಜಲಪಾತದ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು. ಈ ಅದ್ಭುತ ಮನೋಹರವಾದ ಜಲಪಾತ ಎಲ್ಲಿದೆ ಅನ್ನೋದರ ಬಗ್ಗೆ ತಿಳಿಯೋಣ.

 ಎಲ್ಲಿದೆ ಈ ಜಲಪಾತ?

ಎಲ್ಲಿದೆ ಈ ಜಲಪಾತ?

ಇಸ್ಲಾಹ್ಪುರ್ ಗ್ರಾಮದಿಂದ 4.5 ಕಿಮೀ ದೂರದಲ್ಲಿ, ನಿರ್ಮಲ್‌ನಿಂದ 60 ಕಿ.ಮೀ, ನಾಂದೇಡ್‌ನಿಂದ 100 ಕಿ.ಮೀ, ಅದಿಲಾಬಾದ್‌ನಿಂದ 116 ಕಿ.ಮಿ ಮತ್ತು ಹೈದರಾಬಾದ್‌ನಿಂದ 282 ಕಿ.ಮೀ. ದೂರದಲ್ಲಿದೆ, ಸಹಸ್ರಕುಂಡ ಜಲಪಾತವು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿರುವ ಒಂದು ಜಲಪಾತವಾಗಿದೆ.

50 ಅಡಿ ಎತ್ತರದಿಂದ ಹರಿಯುತ್ತದೆ

50 ಅಡಿ ಎತ್ತರದಿಂದ ಹರಿಯುತ್ತದೆ

ಸಹಸ್ರಕುಂಡ ಜಲಪಾತವು ಮುಂಗಲಿ ಗ್ರಾಮದಲ್ಲಿ ಗೋದಾವರಿ ನದಿಯ ಉಪನದಿಯಾದ ಪೆಂಗಂಗಾ ನದಿಯ ಮೇಲೆ ಅದ್ಭುತ ಜಲಪಾತವಾಗಿದೆ. ಮಳೆಗಾಲವು ಅತ್ಯುತ್ತಮ ಕಾಲವಾಗಿದ್ದರೂ ಸಹ ಈ ಜಲಪಾತವು ವರ್ಷದುದ್ದಕ್ಕೂ ಭೇಟಿ ನೀಡಬಹುದು. ಜಲಪಾತವು 50 ಅಡಿ ಎತ್ತರದಿಂದ ಈ ನೀರು ಹರಿಯುತ್ತದೆ. ಜಲಪಾತದ ಸುತ್ತಮುತ್ತಲಿನ ರಾಕ್ ಮಾದರಿಯು ಸಹ ಆಸಕ್ತಿದಾಯಕವಾಗಿದೆ, ಏಕೆಂದರೆ ಕಪ್ಪು ಕಲ್ಲು ಲೋಹದಂತೆ ಕಾಣುತ್ತದೆ. ಮಳೆಗಾಲದಲ್ಲಿ ನೀರಿನ ಶಕ್ತಿಯು ತುಂಬಾ ಹೆಚ್ಚಿರುತ್ತದೆ ಮತ್ತು ನೀರಿನಲ್ಲಿ ಪ್ರವೇಶವನ್ನು ನಿರಾಕರಿಸಲಾಗುತ್ತದೆ.

ಎರಡು ದೇವಾಲಯಗಳಿವೆ

ಎರಡು ದೇವಾಲಯಗಳಿವೆ

ನದಿಯ ಎರಡೂ ಬದಿಗಳಲ್ಲಿ ಜಲಪಾತದ ಬಳಿ ಎರಡು ದೇವಾಲಯಗಳಿವೆ. ಜಲಪಾತಗಳ ಉತ್ತಮ ನೋಟವನ್ನು ಹೊಂದಲು ದೀರ್ಘ ರಾಂಪ್ ಅನ್ನು ನಿರ್ಮಿಸಲಾಯಿತು. ಜಲಪಾತದ ಸುಂದರ ನೋಟವನ್ನು ನೀಡುವ ವಾಚ್ ಟವರ್ ಸಮೀಪದಲ್ಲೇ ಇದೆ.
ಈ ಜಲಪಾತದಲ್ಲಿನ ಕಲ್ಲುಗಳು ಒದ್ದೆಯಾಗಿದ್ದಾಗ ಮೆಟಲ್‌ಗಳಂತೆ ಹೊಳೆಯುತ್ತವೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ಆಗಸ್ಟ್ ನಿಂದ ಅಕ್ಟೋಬರ್ ವರೆಗೆ ಅಂದರೆ ಮಳೆಗಾಲದ ಸಮಯದಲ್ಲಿ ಜಲಪಾತಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಜಲಪಾತವು ಮಳೆಗಾಲದ ಸಮಯದಲ್ಲಿ ಅನೇಕ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತವೆ. ಕಲ್ಲುಗಳು, ಬಂಡೆಗಲ್ಲುಗಳು ಮಳೆಗಾಲದಲ್ಲಿ ಹೆಚ್ಚು ಜಾರುವುದರಿಂದ ಪ್ರವಾಸಿಗರು ನೀರಿನಲ್ಲಿ ಪ್ರವೇಶಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು.

ಸೇತುವೆ ಇದೆ

ಸೇತುವೆ ಇದೆ

ಜಲಪಾತದ ನೋಟವು ನದಿಯ ಮತ್ತೊಂದು ಭಾಗದಿಂದ ಅದ್ಭುತವಾಗಿ ಕಾಣುತ್ತದೆ. ಜಲಪಾತದಿಂದ ಸ್ವಲ್ಪ ದೂರದಲ್ಲಿ ಅಂದರೆ ಸುಮಾರು ಒಂದು ಕಿ.ಮೀ ದೂರದಲ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಇದೆ. ಕೆಲವೊಮ್ಮೆ ಸೇತುವೆಯ ಹಾದಿಯಲ್ಲಿ ನಾಲ್ಕು ಚಕ್ರ ವಾಹನಗಳಿಗೆ ಪ್ರವೇಶವನ್ನು ಒದಗಿಸಲಾಗುವುದಿಲ್ಲ. ಆದರೆ ಸೇತುವೆಯ ಕೆಳಗಿನಿಂದ ಹೋಗಬಹುದು. ಭಾರಿ ಹರಿವು ಮತ್ತು ಚೂಪಾದ ಕಲ್ಲುಗಳು ಇರುವ ಕಾರಣದಿಂದ ನೀರಿನಲ್ಲಿ ಪ್ರವೇಶಿಸಲು ಸಲಹೆ ನೀಡಲಾಗುವುದಿಲ್ಲ.

 ಒಂದು ಬಸ್ ವ್ಯವಸ್ಥೆ ಇದೆ

ಒಂದು ಬಸ್ ವ್ಯವಸ್ಥೆ ಇದೆ

ನಿರ್ಮಲ್ ನಿಂದ, ಜಲಪಾತವನ್ನು ಧನಿ, ಸ್ವರ್ಣ ಮತ್ತು ಇಸ್ಲಾಹ್ಪುರ ಮೂಲಕ ತಲುಪಬಹುದು. ನಿರ್ಮಲ್ ರಸ್ತೆಯು ಅಷ್ಟೊಂದು ಉತ್ತಮವಾಗಿಲ್ಲದಿದ್ದು ಭಾರಿ ಮಳೆ ಸಮಯದಲ್ಲಿ ರಸ್ತೆಯು ಅತ್ಯಂತ ಕೆಟ್ಟದಾಗಿ ಹೋಗುತ್ತದೆ. ಸಾರ್ವಜನಿಕ ಸಾರಿಗೆಯು ಈ ಸ್ಥಳಕ್ಕೆ ನಿರ್ಮಲ್‌ನಿಂದದ ಸೀಮಿತವಾಗಿದೆ. ದಿನಕ್ಕೆ ನಾಲ್ಕು ಬಾರಿ ಓಡಾಡುವ ಒಂದು ಬಸ್ ವ್ಯವಸ್ಥೆ ಇದೆ.

ತಲುಪುವುದು ಹೇಗೆ?

ಇಲ್ಲಾಹ್ಪುರದಿಂದ ಅರ್ಧ ಕಿಲೋಮೀಟರ್ ಮತ್ತು ಜಲಪಾತದಿಂದ 5 ಕಿ.ಮೀ ದೂರದಲ್ಲಿರುವ ರೈಲ್ವೆ ನಿಲ್ದಾಣವು ಸಹಸ್ರಕುಂಡ ರೈಲು ನಿಲ್ದಾಣ ಕೂಡ ಇದೆ. ಈ ನಿಲ್ದಾಣವು ಹೈದರಾಬಾದ್, ನಾಗ್ಪುರ, ನಾಂದೇಡ್ ಮತ್ತು ಅದಿಲಾಬಾದ್‌ಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಸಹಸ್ರಕುಂಡ ಜಲಪಾತವು ನಾಂದೇಡ್‌ನಿಂದ ೧೦೦ ಕಿ.ಮೀ ದೂರದಲ್ಲಿರುವುದರಿಂದ ಖಾಸಗಿ ವಾಹನ ಅಥವಾ ಬಸ್ ಮೂಲಕ ಪ್ರಯಾಣಿಸುವುದು ಸೂಕ್ತ.

 ಇತರ ಪ್ರವಾಸಿ ಆಕರ್ಷಣೆಗಳು

ಇತರ ಪ್ರವಾಸಿ ಆಕರ್ಷಣೆಗಳು

ಸಹಸ್ರಕುಂಡ ಜಲಪಾತದ ಸಮೀಪ ಅನೇಕ ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಪಂಚಮುಖಿ ಮಹಾದೇವ್ ದೇವಸ್ಥಾನ, ರಾಮ ಮಂದಿರ, ಬಂಗಂಗ ಮಹಾದೇವ್ ದೇವಾಲಯವು ಸಹಸ್ರಕುಂಡ ಜಲಪಾತದ ಸಮೀಪದಲ್ಲಿ ಭೇಟಿ ನೀಡಲು ಯೋಗ್ಯವಾದ ತಾಣಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X