Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಂದೇಡ್ » ಹವಾಮಾನ

ನಾಂದೇಡ್ ಹವಾಮಾನ

ಬೇಸಿಗೆಗಾಲ

ನಾಂದೇಡ್ ನಗರದಲ್ಲಿ ಬೇಸಿಗೆ ತಕ್ಕಮಟ್ಟಿಗೆ ಚುರುಕಾಗಿಯೆ ಇರುತ್ತದೆ. ಬೆಳಗ್ಗೆಗಿಂತಲೂ ರಾತ್ರಿಯಲ್ಲಿ ತಾಪಮಾನ ಸ್ವಲ್ಪ ಮಟ್ಟಿಗೆ ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡುವುದಾದರೆ ತೆಳು ಬಣ್ಣದ ಅಥವಾ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ಬೆಳಗ್ಗಿನ ಸಮಯದಲ್ಲಿ ತಾಪಮಾನ ಕೆಲವೊಮ್ಮೆ 35 ಡಿಗ್ರಿ ಸೆಲ್ಶಿಯಸ್ ತಲುಪುತ್ತದೆ.

ಮಳೆಗಾಲ

ನಾಂದೇಡ್ ನಗರದಲ್ಲಿ ಮಳೆಯೂ ತಕ್ಕಮಟ್ಟಿಗೆ ಇರುತ್ತದೆ. ಕೆಲವೊಮ್ಮೆ ರಾತ್ರಿಯೆಲ್ಲಾ ಇದ್ದರೆ, ಕೆಲ ದಿನ ಬೆಳಗ್ಗೆಯಲ್ಲಿ ಸೋನೆ ಮಳೆ ಬರುತ್ತಿರುತ್ತದೆ. ತಂಪಾದ ವಾತಾವರಣವಿದ್ದರೂ ಕೆಲವೊಮ್ಮೆ ತಾಪಮಾನ 25 ಡಿಗ್ರಿ ಸೆಲ್ಶಿಯಸ್ ಗೆ ಏರುತ್ತದೆ.

ಚಳಿಗಾಲ

ನಾಂದೇಡ್ ನಗರದಲ್ಲಿ ಚಳಿಗಾಲ ಅತ್ಯಂತ ಮೋಹಕವಾಗಿರುತ್ತದೆ. ಬೆಳಗ್ಗೆಯಲ್ಲೆ ಟೆಂಪರೇಚರ್ 9 ಡಿಗ್ರಿ ಸೆಲ್ಸಿಯಸ್ ಇರುತ್ತದೆ!