Search
  • Follow NativePlanet
Share
» »ನವಕೈಲಾಸ ಕ್ಷೇತ್ರಗಳು ಯಾವುವು ಗೊತ್ತೆ?

ನವಕೈಲಾಸ ಕ್ಷೇತ್ರಗಳು ಯಾವುವು ಗೊತ್ತೆ?

By Vijay

ನವಗೃಹ, ನವತಿರುಪತಿ, ಅಷ್ಟವಿನಾಯಕ ಕ್ಷೇತ್ರಗಳು ಹೇಗಿವೆಯೊ ಅದೆ ರೀತಿಯಾಗಿ ನವಕೈಲಾಸ ಕ್ಷೇತ್ರಗಳು ಇದ್ದು ಇಲ್ಲಿ ಶಿವನು ಕೈಲಾಸನಾಥನಾಗಿ ನೆಲೆಸಿದ್ದಾನೆ. ಪ್ರಮುಖವಾಗಿ ಈ ನವ ಕೈಲಾಸ ಕ್ಷೇತ್ರಗಳ ದರ್ಶನ ಪಡೆದವನು ಆ ಪರಮ ಶಿವನಲ್ಲಿ ಐಕ್ಯನಾಗುತ್ತಾನೆ ಎಂಬ ಬಲವಾದ ನಂಬಿಕೆಯಿದೆ.

ಇದಕ್ಕೆ ಸಂಬಂಧಿಸಿದಂತೆ ಕಥೆಯೊಂದರ ಪ್ರಕಾರ, ಬಹು ಹಿಂದೆ ಅಗಸ್ತ್ಯ ಮುನಿಗಳು ತಮ್ಮೊಬ್ಬ ನೆಚ್ಚಿನ ಶಿಷ್ಯನೊಂದಿಗೆ ಧ್ಯಾನದಲ್ಲಿ ಮುಳುಗಿದ್ದರು. ಆ ಶಿಷ್ಯನಿಗೆ ಮೋಕ್ಷ ಹೊಂದಬೇಕೆಂಬ ತೀವ್ರವಾದ ಬಯಕೆಯಿತ್ತು. ಅದರಂತೆ ಅಗಸ್ತ್ಯರಿಗೂ ಸಹ ತಮ್ಮ ಶಿಷ್ಯನ ಆಸೆಯನ್ನು ಪೂರೈಸುವ ಬಯಕೆಯಿತ್ತು.

ನವಗೃಹಗಳ ಕ್ರಮಬದ್ಧವಾದ ಯಾತ್ರೆ!

ಹೀಗಿರುವಾಗ, ಅಗಸ್ತ್ಯರಿಗೆ ಧ್ಯಾನದಲ್ಲಿ ಏನೊ ಪ್ರೇರಣೆಯಾದಂತಾಗಿ ಥಟ್ಟನೆ ಕಣ್ಣುಗಳನ್ನು ತೆಗೆದು, ಒಂಭತ್ತು ಹೂವುಗಳನ್ನು ತೆಗೆದುಕೊಂಡು ಶಿಷ್ಯನನ್ನು ಕುರಿತು ಆ ಒಂಭತ್ತು ಹೂವುಗಳನ್ನು ನದಿಯ ನೀರಿನಲ್ಲಿ ಬಿಟ್ಟು ಅವುಗಳನ್ನು ಹಿಂಬಾಲಿಸುತ್ತ ಒಂದೊಂದು ಹೂವುಗಳು ಮುಟ್ಟುವ ಆಯಾ ತಟಗಳಲ್ಲಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಿ ಕೊನೆಗೆ ನದಿಯು ಸಮುದ್ರ ಸೇರುವ ಸ್ಥಳದಲ್ಲಿ ಪವಿತ್ರ ಸ್ನಾನ ಮಾಡಲು ಸೂಚಿಸಿದರು.

ಈ ರೀತಿ ಮಾಡುವುದರಿಂದ ಶಿಷ್ಯನಿಗೆ ಮೋಕ್ಷ ದೊರಕುವ ಸೂಚನೆ ಅಗಸ್ತ್ಯರಿಗೆ ಸಿಕ್ಕಿತ್ತು. ಶಿಷ್ಯನು ಇದೆ ರೀತಿಯಾಗಿ ಅನುಸರಿಸಿ ಒಂಭತ್ತು ಶಿವಲಿಂಗಗಳನ್ನು ಪ್ರತಿಷ್ಠಾಪಿಸಿದ. ಅದರಂತೆ ಆ ಶಿವಲಿಂಗ ಕ್ಷೇತ್ರಗಳೆ ಇಂದು ನವಕೈಲಾಸ ಕ್ಷೇತ್ರಗಳೆಂದು ಪ್ರಸಿದ್ಧಿ ಪಡೆದಿವೆ ಹಾಗೂ ಈ ಕ್ಷೇತ್ರಗಳ ದರ್ಶನದಿಂದ ಮುಕ್ತಿ ಲಭಿಸುತ್ತದೆ ಎಂಬ ಪ್ರಬಲವಾದ ನಂಬಿಕೆಯಿದೆ.

ಹಾಗಾದರೆ ಶಿವನ ಆ ಒಂಭತ್ತು ಪರಮ ಪಾವನ ಕ್ಷೇತ್ರಗಳು ಯಾವುವು? ಅವು ನೆಲೆಸಿರುವುದಾದರೂ ಎಲ್ಲಿ? ಎಂಬುದರ ಕುರಿತು ಮಾಹಿತಿಯನ್ನು ಈ ಲೇಖನದ ಮೂಲಕ ಪಡೆಯಿರಿ.

ಪಾಪನಾಸಂ

ಪಾಪನಾಸಂ

ಈ ದೇವಾಲಯವು ತಮಿಳು ನಾಡಿನ ಪ್ರಖ್ಯಾತ ಧಾರ್ಮಿಕ ಹಾಗೂ ಕೌಟುಂಬಿಕ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಇದನ್ನು ತಮಿಳಿನಲ್ಲಿ ಪಾಪನಾಸಂ ಎಂಬ ಹೆಸರಿನಿಂದಲೆ ಕರೆಯುತ್ತಾರೆ ಹಾಗೂ ಇಲ್ಲಿ ನೆಲೆಸಿರುವ ಶಿವನು ಪಾಪನಾಸನಾಥರ್ ನಾಗಿ ಜನರನ್ನು ಹರಸುತ್ತಿದ್ದಾನೆ.

ಚಿತ್ರಕೃಪೆ: Prakash

ತಿರುನೆಲ್ವೇಲಿ

ತಿರುನೆಲ್ವೇಲಿ

ಪಾಪನಾಶಂ ಒಂದು ಧಾರ್ಮಿಕ ಹಾಗೂ ಕೌಟುಂಬಿಕ ಯಾತ್ರಾ ಕೇಂದ್ರವಾಗಿದ್ದು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಅಂಬಸಮುದ್ರಂ ತಾಲೂಕಿನಲ್ಲಿದೆ. ತಾಮ್ರದ ಅಂಶ ಅಧಿಕವಾಗಿರುವ ತಾಮಿರಭರಣಿ ನದಿಯ ತಟದ ಮೇಲೆ ನೆಲೆಸಿರುವ ಪಾಪನಾಶಂ ಶಿವನ ದೇವಾಲಯಕ್ಕೆ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: MaRISELVAM

ಲೋಕನಾಯಕಿ

ಲೋಕನಾಯಕಿ

ಹಾಗಾಗಿ ಇಲ್ಲಿ ನೆಲೆಸಿರುವ ಶಿವನನ್ನು ಪಾಪನಾಶನಾಥರ್ ಅಂದರೆ ಪಾಪಗಳನ್ನು ನಾಶ ಮಾಡುವ ದೇವರನ್ನಾಗಿ ಆರಾಧಿಸಲಾಗುತ್ತದೆ ಹಾಗೂ ದೇವತೆಯಾಗಿ ಲೋಕನಾಯಕಿ (ಉಳಗಂಬಿಗೈ) ಯನ್ನು ಆರಾಧಿಸಲಾಗುತ್ತದೆ. ಈ ಒಂದು ಸ್ಥಳದಲ್ಲಿ ಅಗಸ್ತ್ಯ ಮುನಿಗೆ ವೃಷಭ ವಾಹನ ಮೇಲೆ ಲೋಕನಾಯಕಿಯೊಡನೆ ದಂಪತಿ ಸಮೇತರಾಗಿ ಕುಳಿತ ಶಿವನ ಕಲ್ಯಾಣ ದರ್ಶನವಾಗಿತ್ತೆನ್ನಲಾಗಿದೆ.

ಚಿತ್ರಕೃಪೆ: Muthuraman99

ತಾಮ್ರದ ಅಂಶ

ತಾಮ್ರದ ಅಂಶ

ಅಲ್ಲದೆ ಇಲ್ಲಿನ ನೀರಿನಲ್ಲಿ ತಾಮ್ರದ ಗುಣ ಇರುವುದರಿಂದ ಸಾಕಷ್ಟು ರೋಗಗಳು ಭಕ್ತಿ ಇಟ್ಟು ಬೇಡಿ ಕೊಳ್ಳುವವರಿಗೆ ಕಡಿಮೆಯಾಗುತ್ತದೆ ಎನ್ನಲಾಗಿದೆ. ಪಾಪನಾಶಂ ಸುತ್ತಮುತ್ತ ಸಾಕಷ್ಟು ಆನಂದ ಕರುಣಿಸುವ ಆಕರ್ಷಣೆಗಳಿವೆ. ಅದರಲ್ಲೊಂದಾಗಿದೆ ಅಗಸ್ತಿಯಾರ್/ಅಗಸ್ತ್ಯಾರ್ ಜಲಪಾತ ತಾಣ. ಈ ಜಲಪಾತ ಕೇಂದ್ರವು ನೋಡಲು ನಯನಮನೋಹರವಾಗಿದ್ದು ಉತ್ಸಾಹ ಹೊಂದುವಂತೆ ಮಾಡುತ್ತದೆ.

ಚಿತ್ರಕೃಪೆ: Prakash

ಚರಣ್ಮಾದೇವಿ

ಚರಣ್ಮಾದೇವಿ

ತಿರುನೆಲ್ವೇಲಿ ಪಟ್ಟಣದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಚರಣ್ಮಹಾದೇವಿ ಕೈಲಾಸನಾಥರ್ ದೇವಾಲಯವು ನವಕೈಲಾಸಗಳಲ್ಲೊಂದಾಗಿದೆ. ತಾಮಿರಭರಣಿ ನದಿ ತಟದಲ್ಲಿ ನೆಲೆಸಿರುವ ಈ ದೇವಾಲಯವು ಸಾಕಷ್ಟು ವಿಶೇಷವಾಗಿದ್ದು ಪ್ರತಿನಿತ್ಯ ಭಕ್ತರಿಂದ ತುಂಬಿರುತ್ತದೆ.

ಚಿತ್ರಕೃಪೆ: Booradleyp1

ಶಿವರಾತ್ರಿ

ಶಿವರಾತ್ರಿ

ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಜನಸಾಗರವೆ ಈ ಶಿವಾಲಯಕ್ಕೆ ಹರಿದು ಬರುತ್ತದೆ. ಇಲ್ಲಿರುವ ಸ್ವಯಂಭು ಲಿಂಗವನ್ನು ಅಮ್ಮೈನಾಥರ್ ಅಥವಾ ಕೈಲಾಸನಾಥರ್ ಎಂದು ಪೂಜಿಸುತ್ತಾರೆ. ಜೊತೆಗೆ ಶಿವನ ಮಡದಿಯಾದ ಜಗನ್ಮಾತೆ ಪಾರ್ವತಿದೇವಿಯು ಅವುದೈ ನಾಯಕಿಯಾಗಿ ನೆಲೆಸಿದ್ದಾಳೆ.

ಚಿತ್ರಕೃಪೆ: Booradleyp1

ಕೊಡಗನಲ್ಲೂರು

ಕೊಡಗನಲ್ಲೂರು

ತಿರುನೆಲ್ವೇಲಿಯಿಂದ 15 ಕಿ.ಮೀ ಗಳಷ್ಟು ದೂರದಲ್ಲಿ ತಿರುನೆಲ್ವೇಲಿ-ಚರಣ್ಮಾದೇವಿ ರಾಜ್ಯ ಹೆದ್ದಾರಿಯ ಮೇಲೆ ಸಿಗುವ ಕೊಡಗನಲ್ಲೂರು ಕ್ಷೇತ್ರವು ಶಿವಕಾಮಿಯಮ್ಮ ಸಮೇತನಾಗಿ ನೆಲೆಸಿರುವ ಕೈಲಾಸನಾಥರ್ ಶಿವ ದೇವಾಲಯಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Booradleyp1

ನವಗೃಹಯಾತ್ರೆ

ನವಗೃಹಯಾತ್ರೆ

ಇನ್ನೊಂದು ವಿಶೇಷವೆಂದರೆ ನವಕೈಲಾಸ ದೇವಾಲಯಗಳು ನವಗೃಹಗಳಲ್ಲಿ ಒಂದೊಂದು ಗೃಹವನ್ನು ಪ್ರತಿನಿಧಿಸುತ್ತವೆ. ಹಾಗಾಗಿ ನವಕೈಲಾಸ ತೀರ್ಥಯಾತ್ರೆಯು ನವಗೃಹ ಯಾತ್ರೆಯಾಗಿಯೂ ಆಗಿರುತ್ತದೆ ಹಾಗೂ ಅದರದ್ದೆ ಆದ ವಿಶೇಷ ಪುಣ್ಯವು ನಿಮಗೆ ದೊರಕುತ್ತದೆ. ಕೊಡಗನಲ್ಲೂರು ಕೈಲಾಸನಾಥರ್ ದೇವಾಲಯವು ಮಂಗಳ ಗೃಹವನ್ನು ಪ್ರತಿನಿಧಿಸುತ್ತದೆ.

ಚಿತ್ರಕೃಪೆ: Booradleyp1

ಎರಡೆ ಕಿ.ಮೀ

ಎರಡೆ ಕಿ.ಮೀ

ತಿರುನೆಲ್ವೇಲಿ ರೈಲು ನಿಲ್ದಾಣದಿಂದ ಕೇವಲ ಎರಡು ಕಿ.ಮೀ ಗಳಷ್ಟು ದೂರದಲ್ಲಿರುವ ಕುನ್ನತೂರಿನ ಕೈಲಾಸನಾಥರ್ ದೇವಾಲಯವು ನವಕೈಲಾಸಗಳಲ್ಲಿ ಒಂದಾಗಿದೆ. ಈ ದೇವಾಲಯವು ಮಿಕ್ಕೆಲ್ಲ ದೇವಲಾಯಗಳಿಗಿಂತ ಚಿಕ್ಕದಾಗಿದೆ.

ಚಿತ್ರಕೃಪೆ: Booradleyp1

ರಾಹು

ರಾಹು

ಇಲ್ಲಿ ಶಿವನನ್ನು ಕೋಧ ಪರಮೇಶ್ವರನನ್ನಾಗಿ ಪೂಜಿಸಲಾಗುತ್ತದೆ. ನವಗೃಹಗಳಲ್ಲಿ ಇದು ರಾಹುವನ್ನು ಪ್ರತಿನಿಧಿಸುವ ದೇವಾಲಯವಾಗಿದೆ. ಇಲ್ಲಿ ಶಿವಲಿಂಗವು ಸರ್ಪದ ಹಿನ್ನೆಲೆ ಹೊಂದಿದೆ.

ಚಿತ್ರಕೃಪೆ: Booradleyp1

ಕೈಲಾಸನಾಥರ್

ಕೈಲಾಸನಾಥರ್

ತಿರುನೆಲ್ವೇಲಿಯಿಂದ 17 ಕಿ.ಮೀ ದೂರದಲ್ಲಿರುವ ಮುರಪ್ಪನಾಡು ಎಂಬಲ್ಲಿ ಕೈಲಾಸನಾಥರ ಈ ದೇವಾಲಯವಿದೆ. ಗುರುವನ್ನು ಪ್ರತಿನಿಧಿಸುವ ನವಕೈಲಾಸಗಳಲ್ಲಿ ಒಂದಾಗಿದೆ ಈ ದೇವಾಲಯ. ತಾಮಿರಭರಣಿ ನದಿಯ ತಟದ ಮೇಲೆ ನೆಲೆಸಿದೆ.

ಚಿತ್ರಕೃಪೆ: commons.wikimedia

ತೂತುಕುಡಿ

ತೂತುಕುಡಿ

ತೂತುಕುಡಿಯಿಂದ 20 ಕಿ.ಮೀ ದೂರವಿರುವ ಕೀಲಾತೂರು ಎಂಬಲ್ಲಿ ಸೇರಿಂದಪೂಮಂಗಲಂ ಎಂಬ ಗ್ರಾಮವಿದ್ದು ಅಲ್ಲಿ ಕೈಲಾಸನಾಥರ ಈ ದೇವಾಲಯವಿದೆ. ನವಕೈಲಾಸಗಳಲ್ಲಿ ಇದು ಕೊನೆಯ ಸ್ಥಳ ಎಂದು ಹೇಳಲಾಗುತ್ತದೆ. ಇದು ಶುಕ್ರನನ್ನು ಪ್ರತಿನಿಧಿಸುತ್ತದೆ.

ಚಿತ್ರಕೃಪೆ: commons.wikimedia

ತೂತುಕುಡಿ

ತೂತುಕುಡಿ

ತಿರುನೆಲ್ವೇಲಿಯಿಂದ ಸುಮಾರು 38 ಕಿ.ಮೀ ಗಳಷ್ಟು ದೂರದಲ್ಲಿರುವ ರಾಜಾಪತಿ ಎಂಬಲ್ಲಿರುವ ಕೈಲಾಸನಾಥರ್ ದೇವಾಲಯ ಇದಾಗಿದೆ. ಕೇತುವನ್ನು ಪ್ರತಿನಿಧಿಸುತ್ತದೆ.

ಚಿತ್ರಕೃಪೆ: Booradleyp1

ಬುಧ

ಬುಧ

ತಿರುನೆಲ್ವೇಲಿಯಿಂದ ತಿರುಚೆಂಡೂರಿಗೆ ಹೋಗುವ ಮಾರ್ಗದಲ್ಲಿ ತಿರುನೆಲ್ವೇಲಿಯಿಂದ ಸುಮಾರು 38 ಕಿ.ಮೀ ದೂರದಲ್ಲಿರುವ ತೆಂತಿರುಪ್ಪೆರೈ ಎಂಬಲ್ಲಿರುವ ಕೈಲಾಸನಾಥರ್ ದೇವಾಲಯ ಇದಾಗಿದೆ. ಬುಧನನ್ನು ಪ್ರತಿನಿಧಿಸುತ್ತದೆ ಈ ಶಿವಲಿಂಗ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Yosarian

ಶನಿ

ಶನಿ

ತಿರುನೆಲ್ವೇಲಿಯಿಂದ 30 ಕಿ.ಮೀ ಹಾಗೂ ತೂತುಕುಡಿಯಿಂದ 40 ಕಿ.ಮೀ ಗಳಷ್ಟು ದೂರದಲ್ಲಿರುವ ತಿರುವೈಕುಂಠಂ ಕ್ಷೇತ್ರದಲ್ಲಿರುವ ಕೈಲಾಸನಾಥರ್ ದೇವಾಲಯ ಇದಾಗಿದೆ. ಈ ಒಂದು ಸ್ಥಳದಲ್ಲಿಯೆ ನವತಿರುಪತಿ ಕ್ಷೇತ್ರಗಳ ಮೊದಲನೇಯ ತಿರುಪತಿ ಸ್ಥಿತವಿದೆ. ಇದು ಶನಿಗೃಹವನ್ನು ಪ್ರತಿನಿಧಿಸುತ್ತದೆ.

ಚಿತ್ರಕೃಪೆ: Ssriram mt

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more