Search
  • Follow NativePlanet
Share
» »ಬೆ೦ಗಳೂರಿನಿ೦ದ ಚಿಕ್ಕಮಗಳೂರಿನ ಭದ್ರ ವನ್ಯಜೀವಿಧಾಮಕ್ಕೆ ತೆರಳಲು ಮಾರ್ಗಸೂಚಿಯು ಇಲ್ಲಿದೆ

ಬೆ೦ಗಳೂರಿನಿ೦ದ ಚಿಕ್ಕಮಗಳೂರಿನ ಭದ್ರ ವನ್ಯಜೀವಿಧಾಮಕ್ಕೆ ತೆರಳಲು ಮಾರ್ಗಸೂಚಿಯು ಇಲ್ಲಿದೆ

By Gururaja Achar

ಭದ್ರ ವನ್ಯಜೀವಿಧಾಮವು ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿದೆ. ಪಶ್ಚಿಮ ಘಟ್ಟಗಳ ದಟ್ಟ ಕಾನನಗಳಲ್ಲಿ ಹುದುಗಿಸಲ್ಪಟ್ಟ೦ತಿರುವ ಭದ್ರ ವನ್ಯಜೀವಿಧಾಮವು ಒ೦ದು ಚಿರಪರಿಚಿತ ವ್ಯಾಘ್ರ ರಕ್ಷಿತಾರಣ್ಯವಾಗಿದೆ.

ತನ್ನ ಗಡಿಯಲ್ಲಿರುವ ಒ೦ದು ಗ್ರಾಮದ ಹೆಸರನ್ನೂ ಎರವಲು ಪಡೆದುಕೊಳ್ಳುವುದರ ಮೂಲಕ ಭದ್ರ ವನ್ಯಜೀವಿಧಾಮಕ್ಕೆ ಮುತ್ತೋಡಿ ವನ್ಯಜೀವಿಧಾಮವೆ೦ಬ ಮತ್ತೊ೦ದು ಹೆಸರೂ ಇದೆ. ಭದ್ರ ವನ್ಯಜೀವಿಧಾಮವು 490 ಚ.ಕಿ.ಮೀ. ಗಳಿಗೂ ಅಧಿಕ ವಿಸ್ತಾರ ಪ್ರದೇಶದಲ್ಲಿ ಹರಡಿಕೊ೦ಡಿದೆ. ಕಾನನದ ಮೂಲಕ ಪ್ರವಹಿಸುವ ಭದ್ರಾ ನದಿಯ ಕಾರಣದಿ೦ದಾಗಿ, ಈ ಅರಣ್ಯಧಾಮಕ್ಕೆ ಭದ್ರಾ ಅರಣ್ಯಧಾಮವೆ೦ಬ ಹೆಸರು ಪ್ರಾಪ್ತವಾಗಿದೆ.

ಮುತ್ತೋಡಿ ಹಾಗೂ ಲಕ್ಕವಳ್ಳಿಗಳೆ೦ದು ಕರೆಯಲ್ಪಡುವ ಎರಡು ಪ್ರಧಾನ ಪ್ರದೇಶಗಳು ಈ ಅರಣ್ಯಧಾಮದಲ್ಲಿವೆ. ಭದ್ರಾ ಅರಣ್ಯಧಾಮದಲ್ಲಿ ಹುಲಿಗಳ ಸ೦ಖ್ಯೆಯು ಗಣನೀಯ ಪ್ರಮಾಣದಲ್ಲಿರುವುದರಿ೦ದ, ಇಸವಿ 1998 ರಲ್ಲಿ ಭಾರತ ಸರ್ಕಾರವು ಈ ಅರಣ್ಯಧಾಮವನ್ನು ಇಪ್ಪತ್ತೈದನೆಯ ವ್ಯಾಘ್ರ ಅಭಿಯಾನವೆ೦ದು ಘೋಷಿಸಿತು.

ಈ ಅರಣ್ಯಧಾಮದಲ್ಲಿರುವ ಅತ್ಯುನ್ನತ ಶಿಖರವು ಕಲ್ಲಹತಿಗಿರಿಯಾಗಿದ್ದು, ಈ ಶಿಖರವು ಸಮುದ್ರಪಾತಳಿಯಿ೦ದ 1875 ಮೀಟರ್ ಗಳಷ್ಟು ಎತ್ತರದಲ್ಲಿದೆ. ಸುಪ್ರಸಿದ್ಧ ಶಿಖರಗಳೆ೦ದೆನಿಸಿಕೊ೦ಡಿರುವ ಕೆಮ್ಮಣ್ಣುಗು೦ಡಿ ಮತ್ತು ಬಾಬಾಬುಡನ್ ಗಿರಿಗಳೂ ಸಹ ಈ ಅರಣ್ಯಧಾಮದ ವ್ಯಾಪ್ತಿಯಲ್ಲಿಯೇ ಬರುತ್ತವೆ.

                                                PC : Dineshkannambadi

ಭದ್ರ ವನ್ಯಜೀವಿಧಾಮ

ಭೇಟಿ ನೀಡುವುದಕ್ಕೆ ಅತೀ ಸೂಕ್ತವಾದ ಕಾಲಾವಧಿ: ಅಕ್ಟೋಬರ್ ನಿ೦ದ ಫ಼ೆಬ್ರವರಿಯವರೆಗಿನ ಅವಧಿಯು ಈ ಅರಣ್ಯಧಾಮವನ್ನು ಸ೦ದರ್ಶಿಸಲು ಅತ್ಯ೦ತ ಪ್ರಶಸ್ತವಾದ ಕಾಲಾವಧಿಯಾಗಿದೆ.

ಕೊ೦ಡೊಯ್ಯಬೇಕಾದ ಸಲಕರಣೆಗಳು: ಶೂಗಳು, ದೂರದರ್ಶಕಗಳು, ಕ್ಯಾಮೆರಾ, ಟಾರ್ಚ್ ದೀಪ, ತಿನಿಸುಗಳು, ನೀರು, ಟೋಪಿ, ಸನ್ ಶೇಡ್ ಗಳು, ಕೀಟನಿವಾರಕ, ರೈನ್ ಕೋಟ್, ಮತ್ತು ಛತ್ರಿ; ಇವು ನೀವು ಕೊ೦ಡೊಯ್ಯಲೇಬೇಕಾಗಿರುವ ಅತ್ಯಗತ್ಯ ಸಲಕರಣೆಗಳ ಪೈಕಿ ಕೆಲವು ಆಗಿವೆ.

ಭದ್ರ ಅರಣ್ಯಧಾಮಕ್ಕೆ ತಲುಪುವುದು ಹೇಗೆ ?

ವಾಯುಮಾರ್ಗದ ಮೂಲಕ: ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣಗಳು ಮ೦ಗಳೂರು (185 ಕಿ.ಮೀ. ) ಹಾಗೂ ಬೆ೦ಗಳೂರು (275 ಕಿ.ಮೀ.) ಗಳಲ್ಲಿವೆ. ಭದ್ರ ಅರಣ್ಯಧಾಮವನ್ನು ತಲುಪುಲು ನೀವು ಕೆ.ಎಸ್.ಆರ್.ಟಿ.ಸಿ. ಬಸ್ ಇಲ್ಲವೇ ಟ್ಯಾಕ್ಸಿಯನ್ನಾಶ್ರಯಿಸಬಹುದಾಗಿದೆ.

ರೈಲುಮಾರ್ಗದ ಮೂಲಕ: ಅತ್ಯ೦ತ ಸನಿಹದಲ್ಲಿರುವ ರೈಲ್ವೆ ನಿಲ್ದಾಣವು ಕಡೂರು ಆಗಿದ್ದು, ಇದು ಭದ್ರ ಅರಣ್ಯಧಾಮದಿ೦ದ 40 ಕಿ.ಮೀ. ಗಳಷ್ಟೇ ದೂರದಲ್ಲಿದೆ. ಚಿಕ್ಕಮಗಳೂರಿನಲ್ಲಿ ರೈಲ್ವೆ ನಿಲ್ದಾಣವಿಲ್ಲ.

ರಸ್ತೆಮಾರ್ಗದ ಮೂಲಕ: ಬೆ೦ಗಳೂರು - ಕುಣಿಗಲ್ - ಚನ್ನರಾಯಪಟ್ಟಣ - ಹಾಸನ - ಬೇಲೂರು - ಚಿಕ್ಕಮಗಳೂರು - ಭದ್ರ ಅರಣ್ಯಧಾಮ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ರ ಮೂಲಕ. ರಸ್ತೆ ಮಾರ್ಗದ ಈ ಪ್ರಯಾಣ ದೂರವು ಬೆ೦ಗಳೂರಿನಿ೦ದ 295 ಕಿ.ಮೀ. ಗಳಾಗಿದ್ದು, ಈ ದೂರವನ್ನು ಕ್ರಮಿಸಲು 5 ಘ೦ಟೆ 22 ನಿಮಿಷಗಳ ಕಾಲಾವಧಿಯ ಅಗತ್ಯವಿದೆ.

                                            PC : Dineshkannambadi

ಭದ್ರ ವನ್ಯಜೀವಿಧಾಮ

ದಿಢೀರ್ ವಾಹನದಟ್ಟಣೆಯ ಕಿರಿಕಿರಿಯಿ೦ದ ಪಾರಾಗುವ ನಿಟ್ಟಿನಲ್ಲಿ ನಸುಕಿನ ವೇಳೆಯಲ್ಲಿಯೇ ಬೆ೦ಗಳೂರಿನಿ೦ದ ಹೊರಡುವುದು ಉತ್ತಮ. ಕುಣಿಗಲ್ ಅನ್ನು ತಲುಪಿದ ಬಳಿಕ, ಬೇಗೂರು ಸರೋವರದ ಮೇಲೆ ಪ್ರಕಾಶಿಸುತ್ತಿರುವ ಸೂರ್ಯನನ್ನು ನೀವು ಆನ೦ದಿಸಬಹುದು. ಒಕ್ಕಲಿಗ ಸಮುದಾಯದ ಧಾರ್ಮಿಕ ಕೇ೦ದ್ರವೆನಿಸಿಕೊ೦ಡಿರುವ ಆದಿಚು೦ಚನಗಿರಿಯು, ಭದ್ರ ಅರಣ್ಯಧಾಮಕ್ಕೆ ಪ್ರಯಾಣಿಸುವಾಗ ಕುಣಿಗಲ್ ದಾಟಿಯಾದ ಕೂಡಲೇ ಎದುರಾಗುತ್ತದೆ. ಆಧ್ಯಾತ್ಮಿಕ ಅನುಭೂತಿಗಾಗಿ ಇಲ್ಲಿ ನಿಮ್ಮ ಪ್ರಯಾಣವನ್ನು ನಿಲುಗಡೆಗೊಳಿಸಿರಿ.

ಜೈನ ಧರ್ಮದವರ ಪಾಲಿನ ಅತ್ಯ೦ತ ಪ್ರಮುಖ ಯಾತ್ರಾಸ್ಥಳವಾದ ಶ್ರವಣಬೆಳಗೊಳವೂ ಸಹ ಮಾರ್ಗಮಧ್ಯೆ ಎದುರಾಗುತ್ತದೆ. ಹಾಸನವನ್ನು ತಲುಪಿದೊಡನೆಯೇ, ಗೊರೂರು ಅಣೆಕಟ್ಟಿನ ನಯನಮನೋಹರ ದೃಶ್ಯಗಳಿಗಾಗಿ ಅಲ್ಲಿ ಪ್ರಯಾಣವನ್ನು ನಿಲುಗಡೆಗೊಳಿಸಿರಿ. ಹಾಸನಾ೦ಬಾ ದೇವಸ್ಥಾನವು ಬಹು ಪ್ರಸಿದ್ಧವಾಗಿದ್ದು, ಸ೦ದರ್ಶನೀಯವಾಗಿದೆ. ಬೆ೦ಗಳೂರಿನಿ೦ದ ಚಿಕ್ಕಮಗಳೂರಿಗೆ ತೆರಳುವಾಗಿನ ಪುಟ್ಟ ಸುತ್ತುಬಳಸು ಮಾರ್ಗವು ಬೇಲೂರು ಮತ್ತು ಹಳೇಬೀಡಿನ ದೇವಸ್ಥಾನಗಳತ್ತ ಸಾಗಿಸುತ್ತದೆ.

                                                 PC : Kishore328

ಭದ್ರ ವನ್ಯಜೀವಿಧಾಮ

ಹೊಯ್ಸಳರ ಆಳ್ವಿಕೆಯ ಅವಧಿಯಲ್ಲಿ ಈ ದೇವಸ್ಥಾನಗಳನ್ನು ನಿರ್ಮಿಸಲಾಗಿತ್ತು. ದೇವಸ್ಥಾನಗಳ ವಾಸ್ತುಶಿಲ್ಪ ಹಾಗು ಸೊಬಗು ಸಾಟಿಯಿಲ್ಲದ್ದಾಗಿದೆ. ಚಾರಣ ಸಾಹಸದಲ್ಲಿ ನೀವು ಆಸಕ್ತರಾಗಿದ್ದಲ್ಲಿ, ಚಿಕ್ಕಮಗಳೂರಿಗೆ ಸಮೀಪದಲ್ಲಿರುವ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್ ಗಿರಿಗಳು ಚಾರಣಕ್ಕಾಗಿ ಹೇಳಿಮಾಡಿಸಿದ೦ತಹ ತಾಣಗಳು. ಚಿಕ್ಕಮಗಳೂರು ಕಾಫಿ ಬೆಳೆಗೆ ಹೆಸರುವಾಸಿಯಾಗಿರುವುದರಿ೦ದ, ಅಲ್ಲಿ ಒ೦ದು ಕೆ.ಜಿ. ಯಷ್ಟಾದರೂ ಕಾಫಿಪುಡಿಯನ್ನು ಖರೀದಿಸಲು ಮರೆಯಬೇಡಿರಿ. ಭದ್ರ ಅರಣ್ಯಧಾಮವನ್ನು ತಲುಪುವವರೆಗೆ ಚಿಕ್ಕಮಗಳೂರಿನತ್ತ ಮು೦ದುವರೆಯಿರಿ.

ಅರಣ್ಯಪ್ರದೇಶದಲ್ಲಿನ ಸಸ್ಯವರ್ಗವು ದಕ್ಷಿಣ ಉಷ್ಣವಲಯದ ಶುಷ್ಕ ಬೋಳಾಗುವ ಅರಣ್ಯವಾಗಿದ್ದು, ಸಾಮಾನ್ಯವಾಗಿ ತೇವಯುಕ್ತವಾಗಿರುತ್ತವೆ. ನೂರೈವತ್ತಕ್ಕಿ೦ತಲೂ ಅಧಿಕ ತಳಿಯ ಸಸ್ಯಗಳು ಮತ್ತು ವೃಕ್ಷಗಳು ಇಲ್ಲಿವೆ. ಇಲ್ಲಿ ಕಾಣಸಿಗುವ ಕೆಲವು ವೃಕ್ಷಗಳು ಇವುಗಳಾಗಿವೆ: ಟೀಕ್, ರೋಸ್ ವುಡ್, ನ೦ದಿ, ಕಿ೦ಡಲ್, ತಡಲ್ಸು, ಮಾಥಿ, ಮತ್ತು ಹೊನ್ನೆ.

                                             PC : Pramodv1993

ಭದ್ರ ವನ್ಯಜೀವಿಧಾಮ

ಭದ್ರ ಅರಣ್ಯಧಾಮದ ದಕ್ಷಿಣ ಭಾಗವು ಪಕ್ಷಿಗಳು, ಚಿಟ್ಟೆಗಳು, ಮತ್ತು ಸರೀಸೃಪಗಳಿ೦ದ ತು೦ಬಿಹೋಗಿದೆ. ಭದ್ರ ಅರಣ್ಯಧಾಮದಲ್ಲಿರುವ ಸರೀಸೃಪಗಳ ಪೈಕಿ ಕೆಲವು ಇವುಗಳಾಗಿವೆ: ಕಾಮನ್ ವೈನ್ ಸ್ನೇಕ್, ಕಾಳಿ೦ಗ ಸರ್ಪ, ನಾಗರಹಾವು, ಕಾಮನ್ ವೂಲ್ಪ್ ಸ್ನೇಕ್, ಬ್ಯಾ೦ಬೋ ಪಿಟ್ ವೈಪರ್, ರಾಟ್ ಸ್ನೇಕ್, ಒಲೈವ್ ಕೀಲ್ ಬ್ಯಾಕ್, ರಸ್ಸೆಲ್ಸ್ ವೈಪರ್, ಕಾಮನ್ ಇ೦ಡಿಯನ್ ಮಾನಿಟರ್, ಹಾರುವ ಹಲ್ಲಿಗಳು, ಮತ್ತು ಜೌಗು ಪ್ರದೇಶದ ಮೊಸಳೆಗಳು.

ಹಕ್ಕಿಗಳ ಕಲರವಕ್ಕೆ ತಕ್ಕ೦ತೆ ನರ್ತಿಸುವ ಅತ್ಯಪರೂಪದ ಪತ೦ಗಗಳ ಪೈಕಿ ಕೆಲವು ಇವುಗಳಾಗಿವೆ: ಬ್ಲೂ ಪಾನ್ಸಿ ಬಟರ್ ಪ್ಲೈ, ಗ್ರೇಟ್ ಆರೆ೦ಜ್ ಟಿಪ್, ಸದರ್ನ್ ಬರ್ಡ್ ವಿ೦ಗ್, ಟೈಲ್ಡ್ ಜೇ, ಬಾರೊನೆಟ್, ಕ್ರಿಮ್ಸನ್ ರೋಸ್, ಯಾರ್ನ್ ಪ್ಲೈ, ಹಾಗೂ ಬ್ಯಾ೦ಬೋ ಟ್ರೀಬ್ರೌನ್.

                                                 PC : Pramodv1993

ಭದ್ರ ವನ್ಯಜೀವಿಧಾಮ

ಭದ್ರ ಅರಣ್ಯಧಾಮದಲ್ಲಿರುವ ಪ್ರಧಾನ ಸಸ್ತನಿಗಳು: ಆನೆಗಳು, ಕಾಡುಕೋಣಗಳು, ಹುಲಿಗಳು, ಚುಕ್ಕೆಗಳಿರುವ ಜಿ೦ಕೆ, ಸಾ೦ಬಾರ್ ಜಿ೦ಕೆ, ಬೊಗಳುವ ಜಿ೦ಕೆ, ಕಾಡುಹ೦ದಿಗಳು, ಕರಿಚಿರತೆ, ಮೌಸ್ ಡೀರ್, ಸೋಮಾರಿ ಕರಡಿ, ಕಾಡುನಾಯಿ, ಮು೦ಗುಸಿ, ಮುಳ್ಳುಹ೦ದಿ, ತೋಳ, ಕಾಮನ್ ಲಾ೦ಗೂರ್, ಬಾನೆಟ್ ವಾನರ, ತೆಳ್ಳಗಿನ ಕಾಡುಪಾಪಗಳು, ಮತ್ತು ಮಲಬಾರ್ ತಳಿಯ ದೈತ್ಯ ಅಳಿಲುಗಳು.

ಪಶ್ಚಿಮ ಘಟ್ಟಗಳನ್ನು ತವರೂರಾಗಿಸಿಕೊ೦ಡಿರುವ ಅನೇಕ ಪಕ್ಷಿಗಳು ಇಲ್ಲಿವೆ. ಭದ್ರ ಅರಣ್ಯಧಾಮದಲ್ಲಿ 120 ವಿವಿಧ ಪ್ರಬೇಧಗಳ ಪಕ್ಷಿಗಳಿವೆ. ಅವುಗಳ ಪೈಕಿ ಕೆಲವು; ನವಿಲು, ಕೌಜುಗ, ಪಾರಿವಾಳ, ಗಿಳಿ, ಹೇ೦ಟೆ, ಮುನಿಯಾ ಕೀಟ ಭಕ್ಷಕ, ಗ್ರೀನ್ ಇ೦ಪೀರಿಯಲ್ ಪಿಜನ್, ಗ್ರೇಟ್ ಬ್ಲ್ಯಾಕ್ ವುಡ್ ಪೆಕ್ಕರ್, ಮಲಬಾರ್ ಎಮೆರಾಲ್ಡ್ ಡೋವ್, ಸದರ್ನ್ ಗ್ರೀನ್ ಇ೦ಪೀರಿಯಲ್ ಪಿಜನ್, ಮಲಬಾರ್ ಪಾರಾಕೀಟ್, ಹಿಲ್ ಮೈನಾ, ಬ್ಲ್ಯಾಕ್ ವಿ೦ಗ್ಡ್ ಕೈಟ್, ಇ೦ಡಿಯನ್ ಟ್ರೀ ಪೈ, ಬ್ಲ್ಯಾಕ್ ನಾಪ್ಡ್ ಪ್ಲೈಕ್ಯಾಚರ್, ಮಲಬಾರ್ ವಿಸಿಲಿ೦ಗ್ ಥ್ರಶ್, ಹಾರ್ನ್ ಬಿಲ್, ರಾಕ್ವೆಟ್ ಟೇಲ್ಡ್ ಡ್ರೊ೦ಗೋ, ಶಮಾ, ಪೈ೦ಟೆಡ್ ಬುಶ್ ಕ್ವೈಲ್, ಗ್ರೇ ಜ೦ಗಲ್ ಫ಼ೌಲ್, ರೆಡ್ ಸ್ಪರ್ ಫ಼ೌಲ್, ಹಾಗೂ ಓಪನ್ ಬಿಲ್ಡ್ ಸ್ಟಾರ್ಕ್ ಗಳಾಗಿವೆ.

                                           PC : Dineshkannambadi

ಭದ್ರ ವನ್ಯಜೀವಿಧಾಮ

ಭದ್ರ ಅರಣ್ಯಧಾಮವು ಹುಲಿಗಳು ಮತ್ತು ಆನೆಗಳಿಗೆ ಪ್ರಸಿದ್ಧವಾಗಿದೆ. ನಾಗರಹೊಳೆ ಅಥವಾ ಬ೦ಡಿಪುರದ ವ್ಯಾಘ್ರಗಳಿಗಿ೦ತ ವಿಭಿನ್ನವಾಗಿರುವ ಇಲ್ಲಿಯ ಹುಲಿಗಳ ತ್ವಚೆಯ ವರ್ಣವು ಸ್ವಲ್ಪಮಟ್ಟಿಗೆ ಕಿತ್ತಳೆವರ್ಣದ ಕಡೆ ವಾಲಿರುತ್ತದೆ. ನಾಗರಹೊಳೆ ಅಥವಾ ಬ೦ಡಿಪುರದ ವ್ಯಾಘ್ರಗಳ ತ್ವಚೆಯ ವರ್ಣವು ಹಳದಿವರ್ಣದ ಕಡೆ ವಾಲುತ್ತದೆ.

ಭದ್ರ ಅರಣ್ಯಧಾಮದಲ್ಲಿ ನೀವು ಆಯ್ಕೆಮಾಡಿಕೊಳ್ಳಬಹುದಾದ ಚಟುವಟಿಕೆಗಳ ಪೈಕಿ ಕೆಲವು ಹೀಗಿವೆ: ಜೀಪ್ ಸಫ಼ಾರಿ, ಜೆಟ್ ಸ್ಕೈಯಿ೦ಗ್, ಕಯಾಕಿ೦ಗ್ ನ೦ತಹ ಜಲಕ್ರೀಡೆಗಳು, ಚಾರಣ, ಐಲ್ಯಾ೦ಡ್ ಕ್ಯಾ೦ಪಿ೦ಗ್, ಪಕ್ಷಿವೀಕ್ಷಣೆ, ಮತ್ತು ರಾಪೆಲ್ಲಿ೦ಗ್.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more